• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

14 ಶಾಸಕರ ರಾಜೀನಾಮೆ, ದೋಸ್ತಿ ಸರ್ಕಾರ ಗಡಗಡ : ಕ್ಷಣ ಕ್ಷಣದ ಮಾಹಿತಿ

|

ಬೆಂಗಳೂರು, ಜುಲೈ 6: ರಾಜ್ಯ ರಾಜಕಾರಣದಲ್ಲಿ ಭಾರಿ ಸಂಚಲನ ಉಂಟಾಗುವ ಸೂಚನೆ ದೊರಕಿದೆ. ಕಾಂಗ್ರೆಸ್ ಮತ್ತು ಜೆಡಿಎಸ್‌ನ ಅತೃಪ್ತ ಶಾಸಕರು ರಾಜೀನಾಮೆ ನೀಡಲು ಮುಂದಾಗಿದ್ದಾರೆ. ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರು ಅಮೆರಿಕ ಪ್ರವಾಸದಲ್ಲಿ ಇರುವಾಗಲೇ ರಾಜ್ಯದಲ್ಲಿ ಭಾರಿ ರಾಜಕೀಯ ಸ್ಥಿತ್ಯಂತರಗಳು ನಡೆಯುತ್ತಿವೆ.

ಕಾಂಗ್ರೆಸ್‌ ಮತ್ತು ಜೆಡಿಎಸ್‌ನ 13 ಶಾಸಕರು ರಾಜೀನಾಮೆ ನೀಡುವ ಸುದ್ದಿ ಆರಂಭದಲ್ಲಿ ಹರಡಿತ್ತು. ಈಗ ಅವರ ಸಂಖ್ಯೆ ಹೆಚ್ಚಾಗುತ್ತಿದೆ. ಅಲ್ಲದೆ, ಅವರ ಮನವೊಲಿಕೆಗೆ ಕಾಂಗ್ರೆಸ್ ನಾಯಕರು ಪ್ರಯತ್ನಿಸುತ್ತಿಲ್ಲ ಎಂದು ಹೇಳಲಾಗುತ್ತಿದೆ. ಇದರಿಂದ ರಾಜ್ಯದ ಸಮ್ಮಿಶ್ರ ಸರ್ಕಾರದ ಅಳಿವು ಉಳಿವಿನ ಬಗ್ಗೆ ಕುತೂಹಲ ಮೂಡಿದೆ.

Karnataka congress jds mla resignation live updates

ಶಾಸಕರ ರಾಜೀನಾಮೆ ವದಂತಿ ಮಾಧ್ಯಮಗಳು ಹರಡಿಸುತ್ತಿರುವ ಸುಳ್ಳು ಸುದ್ದಿ ಎಂದು ಕೆಲವು ನಾಯಕರು ತಳ್ಳಿಹಾಕಿದ್ದರು. ಆದರೆ, ಈ ವದಂತಿ ನಿಜವಾಗುವಂತೆ ಬಂಡಾಯ ಶಾಸಕರು ವಿಧಾನಸೌಧಕ್ಕೆ ತೆರಳಿದ್ದಾರೆ.

Newest First Oldest First
6:33 PM, 6 Jul
ಆನಂದ್ ಸಿಂಗ್ ಬರುವವರೆಗೂ ಕಾಯುತ್ತಿದ್ದ ಅತೃಪ್ತ ಶಾಸಕರು.
6:32 PM, 6 Jul
ಎಚ್‌ಎಎಲ್ ವಿಮಾನ ನಿಲ್ದಾಣದಿಂದ ಹಾರಾಟ ಅರಂಭಿಸಿದ ವಿಶೇಷ ವಿಮಾನ
6:30 PM, 6 Jul
ಅತೃಪ್ತ ಶಾಸಕರೊಂದಿಗೆ ಎಚ್‌ಎಎಲ್‌ನಲ್ಲಿ ವಿಶೇಷ ವಿಮಾನ ಏರಿದ ಆನಂದ್ ಸಿಂಗ್.
6:21 PM, 6 Jul
ಎಚ್‌ಎಎಲ್‌ನಲ್ಲಿ ತುಂತುರು ಮಳೆಯಾಗುತ್ತಿರುವುದರಿಂದ ವಿಮಾನದ ಹಾರಾಟಕ್ಕೆ ತೊಂದರೆಯಾಗಿದೆ.
6:21 PM, 6 Jul
ಅತೃಪ್ತ ಶಾಸಕರನ್ನು ಮುಂಬೈನ ರೆಸಾರ್ಟ್‌ಗೆ ಕರೆದೊಯ್ಯುವ ಜವಾಬ್ದಾರಿಯನ್ನು ಬಿಜೆಪಿ ಶಾಸಕ ಅಶ್ವತ್ಥ್ ನಾರಾಯನ್ ಅವರಿಗೆ ನೀಡಲಾಗಿದೆ.
6:09 PM, 6 Jul
ಶಾಸಕರ ರಾಜೀನಾಮೆಯಲ್ಲಿ ನಮ್ಮ ಕೈವಾಡವಿಲ್ಲ. ರಾಜ್ಯದ ರಾಜಕೀಯ ಬೆಳವಣಿಗೆಯನ್ನು ಕಾದು ನೋಡುತ್ತಿದ್ದೇವೆ. ರಾಜೀನಾಮೆ ಅಂಗೀಕಾರದ ಬಳಿಕ ಮುಂದಿನ ನಡೆ ಬಗ್ಗೆ ತೀರ್ಮಾನಿಸಲಾಗುವುದು- ಯಡಿಯೂರಪ್ಪ
6:09 PM, 6 Jul
ಸಾಮಾನ್ಯವಾಗಿ ಸಂಜೆ ಐದು ಗಂಟೆಗೆ ಮುಚ್ಚುವ ಸ್ಪೀಕರ್ ಕಚೇರಿ ಆರು ಗಂಟೆಯಾದರೂ ತೆರೆದಿತ್ತು ಎನ್ನಲಾಗಿದೆ.
6:09 PM, 6 Jul
ಎಚ್‌ಎಎಲ್ ವಿಮಾನ ನಿಲ್ದಾಣದಿಂದ ಅತೃಪ್ತ ಶಾಸಕರಿಗೆ ಪ್ರತ್ಯೇಕ ವಿಮಾನ ಆಯೋಜನೆ ಮಾಡಲಾಗಿದೆ.
5:35 PM, 6 Jul
ನಮಗೆ ಗೊತ್ತಿದೆ ಯಾವ ಯಾವ ಬಿಲ್ಡರ್‌ಗಳಿಗೆ ಫೋನ್ ಮಾಡಿ ಎಷ್ಟೆಷ್ಟು ಕಲೆಕ್ಟ್ ಮಾಡುತ್ತಾರೆ ಎನ್ನುವುದು ನಮಗೆ ಗೊತ್ತು. ನಮಗೆ ಗೊತ್ತಿಲ್ಲ ಎಂದುಕೊಂಡಿದ್ದಾರೆ. ಅದನ್ನು ಶಾಸಕರಿಗೆ ಹಂಚುತ್ತಿದ್ದಾರೆ ಎಂದು ಬಿಜೆಪಿ ವಿರುದ್ಧ ಪರೋಕ್ಷವಾಗಿ ಡಿಕೆಶಿ ಕಿಡಿಕಾರಿದರು.
5:35 PM, 6 Jul
ಅವರ ಮನವೊಲಿಸಿದ್ದೇವೆ. ತಪ್ಪಾಗಿದ್ದಲ್ಲಿ ಸರಿಪಡಿಸುತ್ತೇವೆ. ಎಲ್ಲ ತ್ಯಾಗಕ್ಕೂ ಸಿದ್ಧರಿದ್ದೇವೆ, ಹೋಗುವವರನ್ನು ಹಿಡಿದಿಟ್ಟುಕೊಳ್ಳಲು ಆಗೊಲ್ಲ. ಹಿಂದೆಯೂ ಹೋಗಿದ್ದಾರೆ-ಬಂದಿದ್ದಾರೆ. ಭಿನ್ನಾಭಿಪ್ರಾಯ ಇರಬಹುದು. ನೋಡೋಣ. ಅದಕ್ಕೆ ಪ್ರೋಸೆಸ್ ಇದೆ- ಡಿಕೆ ಶಿವಕುಮಾರ್
5:28 PM, 6 Jul
ಬೆಂಗಾವಲು ಪಡೆಯೊಂದಿಗೆ ರೆಬೆಲ್ ಶಾಸಕರು ಎಚ್ಎಎಲ್ ಕಡೆಗೆ ಹೊರಟಿದ್ದಾರೆ ಎನ್ನಲಾಗಿದೆ.
5:28 PM, 6 Jul
ರಾಜಭವನದಿಂದ ಟಿಟಿ ವಾಹನದಲ್ಲಿ ತೆರಳಿದ ಶಾಸಕರು.
5:11 PM, 6 Jul
ನಮ್ಮ ಅಸಮಾಧಾನ, ರಾಜೀನಾಮೆಗೆ ಸರ್ಕಾರ ನಡೆಸುವವರು ಕಾರಣ. ನಾನು ಸರ್ಕಾರ ರಚನೆಯಾದಾಗಿಂದಲೂ ಹೇಳುತ್ತಲೇ ಇದ್ದೇನೆ ಬಹಳಷ್ಟು ವಿಚಾರ ಬಹಿರಂಗವಾಗಿ ಹೇಳಿದ್ದೇನೆ - ಎಚ್ ವಿಶ್ವನಾಥ್
5:10 PM, 6 Jul
ಬಿಜೆಪಿ ಆಪರೇಷನ್ ಕಮಲ ಎಲ್ಲ ನಿಮ್ಮ ಕಥೆ. ನೀವು ಕಟ್ಟುತ್ತಿರುವ ಕಥೆ. ಆಮ್ ವೆರಿ ಸಾರಿ. ಬಿಜೆಪಿ ಪಾಜೆಪಿ ಗೊತ್ತಿಲ್ಲ. ಯಾವ ಆಪರೇಷನ್ ಇಲ್ಲ. ನಾವೆಲ್ಲ ಹಿರಿಯರು ಇದ್ದೇವೆ. ಯಾವ ಆಪರೇಷನ್ ಮಾಡಲು ಆಗೊಲ್ಲ - ಎಚ್ ವಿಶ್ವನಾಥ್
5:10 PM, 6 Jul
ಹೀಗಾಗಿ ನಾವು ಸರ್ಕಾರದ ನಡೆ, ಸರ್ಕಾರದ ಧೋರಣೆ, ಸರ್ಕಾರದ ನಿರ್ಲಕ್ಷ್ಯದ ವಿರುದ್ಧ ರಾಜೀನಾಮೆಯನ್ನು ಸ್ವ ಇಚ್ಛೆಯಿಂದ ಸಲ್ಲಿಸಿದ್ದೇವೆ. ಸ್ಪೀಕರ್ ಅದಷ್ಟು ಬೇಗ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂಬ ಭರವಸೆ ಇದೆ- - ಎಚ್ ವಿಶ್ವನಾಥ್
5:10 PM, 6 Jul
ಬಹಳ ಪ್ರಮುಖವಾಗಿ ಹೇಳುತ್ತಲೇ ಬಂದಿದ್ದೇವೆ. ಸಮ್ಮಿಶ್ರ ಸರ್ಕಾರದಲ್ಲಿ ಶಿಕ್ಷಣ ಸತ್ತುಹೋಯ್ತು. ಹಾಗಾಗಿ ರಾಜ್ಯದ ಶಿಕ್ಷಣ ವ್ಯವಸ್ಥೆಯನ್ನೇ ಬುಡಮೇಲು ಮಾಡುವ ತೀರ್ಮಾನಗಳು ನಡೆದಿವೆ. ಅದನ್ನು ನಡೆಸುವ ಮಂತ್ರಿಗಳ ಆಯ್ಕೆಯಲ್ಲಿಯೂ ಎಡವಿರುವ ಉದಾಹರಣೆ ಇದೆ. ಇದು ಸಣ್ಣ ವಿಚಾರವಲ್ಲ- ಎಚ್ ವಿಶ್ವನಾಥ್
5:10 PM, 6 Jul
ಕ್ಷಿಪ್ರ ಪ್ರಗತಿಯಲ್ಲಿ ಸಮ್ಮಿಶ್ರ ಸರ್ಕಾರದ ವಿರುದ್ಧ ಎರಡೂ ಪಕ್ಷಗಳ ಶಾಸಕರು ತೀರ್ಮಾನ ತೆಗೆದುಕೊಂಡಿದೆ ಎಂದರೆ ಸಮ್ಮಿಶ್ರ ಸರ್ಕಾರ ಜನರ ಆಶಯಗಳಿಗೆ ಸ್ಪಂದಿಸುವಲ್ಲಿ ವಿಫಲವಾಗಿದೆ, ಎರಡೂ ಪಕ್ಷಗಳನ್ನು ಒಟ್ಟಿಗೆ ಕೊಂಡೊಯ್ದು ಸಮನ್ವಯ ಸಾಧಿಸುವ ವಿಚಾರದಲ್ಲಿ ವಿಫಲವಾಗಿದೆ ಎಂದರ್ಥ. ಜನರ ನಿರೀಕ್ಷೆಗಳು ಬಹಳಷ್ಟಿವೆ. ಅದನ್ನು ತಲುಪುವಲ್ಲಿ ಸರ್ಕಾರ ಎಡವಿದೆ. ಎರಡೂ ಪಕ್ಷಗಳ ಶಾಸಕರನ್ನು ವಿಶ್ವಾಸಕ್ಕೆ ತೆಗದುಕೊಳ್ಳುವುದರಲ್ಲಿ, ಸರ್ಕಾರದ ಜವಾಬ್ದಾರಿಗಳನ್ನು ನಿಭಾಯಿಸುವಲ್ಲಿ ವಿಫಲವಾಗಿದೆ- ವಿಶ್ವನಾಥ್.
5:03 PM, 6 Jul
ಬಹಳ ಪ್ರಮುಖವಾಗಿ ಹೇಳುತ್ತಲೇ ಬಂದಿದ್ದೇವೆ. ಸಮ್ಮಿಶ್ರ ಸರ್ಕಾರದಲ್ಲಿ ಶಿಕ್ಷಣ ಸತ್ತುಹೋಯ್ತು. ಹಾಗಾಗಿ ರಾಜ್ಯದ ಶಿಕ್ಷಣ ವ್ಯವಸ್ಥೆಯನ್ನೇ ಬುಡಮೇಲು ಮಾಡುವ ತೀರ್ಮಾನಗಳು ನಡೆದಿವೆ. ಅದನ್ನು ನಡೆಸುವ ಮಂತ್ರಿಗಳ ಆಯ್ಕೆಯಲ್ಲಿಯೂ ಎಡವಿರುವ ಉದಾಹರಣೆ ಇದೆ. ಇದು ಸಣ್ಣ ವಿಚಾರವಲ್ಲ- ಎಚ್ ವಿಶ್ವನಾಥ್
5:03 PM, 6 Jul
ಕ್ಷಿಪ್ರ ಪ್ರಗತಿಯಲ್ಲಿ ಸಮ್ಮಿಶ್ರ ಸರ್ಕಾರದ ವಿರುದ್ಧ ಎರಡೂ ಪಕ್ಷಗಳ ಶಾಸಕರು ತೀರ್ಮಾನ ತೆಗೆದುಕೊಂಡಿದೆ ಎಂದರೆ ಸಮ್ಮಿಶ್ರ ಸರ್ಕಾರ ಜನರ ಆಶಯಗಳಿಗೆ ಸ್ಪಂದಿಸುವಲ್ಲಿ ವಿಫಲವಾಗಿದೆ, ಎರಡೂ ಪಕ್ಷಗಳನ್ನು ಒಟ್ಟಿಗೆ ಕೊಂಡೊಯ್ದು ಸಮನ್ವಯ ಸಾಧಿಸುವ ವಿಚಾರದಲ್ಲಿ ವಿಫಲವಾಗಿದೆ ಎಂದರ್ಥ. ಜನರ ನಿರೀಕ್ಷೆಗಳು ಬಹಳಷ್ಟಿವೆ. ಅದನ್ನು ತಲುಪುವಲ್ಲಿ ಸರ್ಕಾರ ಎಡವಿದೆ. ಎರಡೂ ಪಕ್ಷಗಳ ಶಾಸಕರನ್ನು ವಿಶ್ವಾಸಕ್ಕೆ ತೆಗದುಕೊಳ್ಳುವುದರಲ್ಲಿ, ಸರ್ಕಾರದ ಜವಾಬ್ದಾರಿಗಳನ್ನು ನಿಭಾಯಿಸುವಲ್ಲಿ ವಿಫಲವಾಗಿದೆ- ವಿಶ್ವನಾಥ್.
5:03 PM, 6 Jul
ಇಂದು ನಮ್ಮ ರಾಜೀನಾಮೆ ಅಂಗೀಕಾರ ಮಾಡಬೇಕೆಂದು ಪ್ರತ್ಯೇಕ ಪತ್ರ ಬರೆದು ಸ್ಪೀಕರ್ ಅವರಿಗೆ ವಿನಂತಿಸಿದ್ದೇವೆ. ಕಾನೂನು ಪ್ರಕಾರ ಪರಿಶೀಲಿಸಿ ಮಂಗಳವಾರ ತೀರ್ಮಾನ ತೆಗೆದುಕೊಳ್ಳುವುದಾಗಿ ಹೇಳಿದ್ದಾರೆ- ವಿಶ್ವನಾಥ್.
5:03 PM, 6 Jul
ಇಂದು ಸಮ್ಮಿಶ್ರ ಸರ್ಕಾರದಲ್ಲಿ ಪಾಲುದಾರ ಪಕ್ಷಗಳಾದ ಕಾಂಗ್ರೆಸ್ ಮತ್ತು ಜೆಡಿಎಸ್ ಎರಡೂ ಪಕ್ಷಗಳ ಒಟ್ಟು 14 ಜನ ಶಾಸಕರು ಸ್ಪೀಕರ್‌ಗೆ ರಾಜೀನಾಮೆ ಸಲ್ಲಿಸಿದ್ದೇವೆ. ಆನಂತರದಲ್ಲಿ ರಾಜ್ಯಪಾಲರನ್ನು ಭೇಟಿ ಮಾಡಿ ಅವರ ಗಮನಕ್ಕೂ ತಂದಿದ್ದೇವೆ- ಎಚ್ ವಿಶ್ವನಾಥ್.
4:55 PM, 6 Jul
ರಾಜ್ಯಪಾಲರನ್ನು ಭೇಟಿ ಮಾಡಿ ರಾಜಭವನದಿಂದ ಹೊರಬಂದ ಅತೃಪ್ತ ಶಾಸಕರು.
4:55 PM, 6 Jul
ಸಿದ್ದರಾಮಯ್ಯ ಅವರಿಗೆ ದೇವೇಗೌಡರ ಕುಟುಂಬ ಅಧಿಕಾರದಲ್ಲಿ ಮುಂದುವರಿಯುವುದು ಇಷ್ಟವಿಲ್ಲ. ಹಿಂದಿ ಸೂತ್ರದಾರರು ಅವರೇ. ಪರಮೇಶ್ವರ್ ಅವರಿಗೂ ಆದ್ಯತೆ ದೊರೆತರೆ ಬೆಳೆಯುತ್ತಾರೆ ಎನ್ನುವುದು ಅವರ ಕಳವಳ- ಪ್ರಹ್ಲಾದ್ ಜೋಷಿ.
4:55 PM, 6 Jul
ಚಿಕ್ಕೋಡಿಯ ಶಾಸಕ ಗಣೇಶ್ ಹುಕ್ಕೇರಿ, ಎಚ್ ಡಿ ಕೋಟೆ ಶಾಸಕ, ಅನಿಲ್ ಚಿಕ್ಕಮಾದು, ಖಾನಾಪುರ ಶಾಸಕಿ ಅಂಜಲಿ ನಿಂಬಾಳ್ಕರ್, ಜಯನಗರ ಶಾಸಕಿ ಸೌಮ್ಯಾ ರೆಡ್ಡಿ ಮತ್ತು ಕಾಗವಾಡ ಶಾಸಕ ಶ್ರೀಮಂತ್ ಪಾಟೀಲ್ ರಾಜೀನಾಮೆ ಸಲ್ಲಿಸಲಿದ್ದಾರೆ ಎನ್ನಲಾಗಿದೆ.
4:55 PM, 6 Jul
ಸಿದ್ದರಾಮಯ್ಯ ಅವರ ಆಪ್ತರೇ ರಾಜೀನಾಮೆ ನೀಡುತ್ತಿದ್ದಾರೆ ಎಂದು ರಾಹುಲ್ ಗಾಂಧಿ ಅವರ ಬಳಿ ಎಚ್ ಡಿ ದೇವೇಗೌಡ ಅವರು ಅಸಮಾಧಾನ ಹೊರಹಾಕಿದ್ದಾರೆ ಎಂದು ವರದಿಯಾಗಿದೆ.
4:55 PM, 6 Jul
ರಾಜೀನಾಮೆ ಪತ್ರವನ್ನು ಯಾರೂ ಹರಿದುಹಾಕಿಲ್ಲ- ಮುನಿರತ್ನ
4:45 PM, 6 Jul
ರಾಜೀನಾಮೆ ಬಗ್ಗೆ ಸಿದ್ದರಾಮಯ್ಯ ಸೇರಿದಂತೆ ಕಾಂಗ್ರೆಸ್ ನಾಯಕರಿಗೆ ಸ್ಪಷ್ಟ ಮಾಹಿತಿ ದೊರಕಿತ್ತು. ಆದರೆ, ಅವರಿಂದ ಯಾವ ಪ್ರಯತ್ನವೂ ಸಫಲವಾಗಲಿಲ್ಲ. ಬೀದರ್‌ಗೆ ತೆರಳಬೇಕಿದ್ದ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಅವರು ಸಿದ್ದರಾಮಯ್ಯ ಅವರ ಸೂಚನೆಯಂತೆ ಬೆಂಗಳೂರಿನಲ್ಲಿಯೇ ಉಳಿದುಕೊಂಡು ರಾಮಲಿಂಗಾರೆಡ್ಡಿ ಅವರನ್ನು ಭೇಟಿ ಮಾಡಿ ಮನವೊಲಿಸುವ ಪ್ರಯತ್ನ ಮಾಡಿದರು.
4:45 PM, 6 Jul
ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿಎಸ್ ಯಡಿಯೂರಪ್ಪ ಅವರ ಆಪ್ತ ಸಂತೋಷ್ ಅವರೇ ರಾಜ್ಯಪಾಲರ ಭೇಟಿಗೆ ಎಲ್ಲ ವ್ಯವಸ್ಥೆಗಳನ್ನು ನಿರ್ವಹಿಸಿದ್ದಾರೆ ಎನ್ನಲಾಗಿದೆ.
4:31 PM, 6 Jul
ಸಂಜೆವರೆಗೂ ಕಾಯಿರಿ. ವೇಣುಗೋಪಾಲ್ ಅವರು ಸಂಜೆ ನಡೆಸುವ ಸಭೆಯಲ್ಲಿ ಪಾಲ್ಗೊಳ್ಳಿ ಎಂದು ಡಿಕೆ ಶಿವಕುಮಾರ್ ಅವರು ಅತೃಪ್ತ ಶಾಸಕರಿಗೆ ಮನವಿ ಮಾಡಿದ್ದಾರೆ ಎಂದು ತಿಳಿದುಬಂದಿದೆ.
4:31 PM, 6 Jul
ವಿಶ್ವನಾಥ್ ಅವರ ನೇತೃತ್ವದಲ್ಲಿ ರಾಜ್ಯಪಾಲ ವಜೂಭಾಯಿ ವಾಲಾ ಅವರಿಗೆ ಅತೃಪ್ತ ಶಾಸಕರು ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ.
READ MORE

English summary
Resignation drama Live Updates Congress and JDS MLAs decided to resign. Here is the live coverage of Karnataka state political development.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more