ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಿಜೆಪಿ ತಲೆಮೇಲೆ 10 ಆರೋಪದ ಹೊರೆಹೊರಿಸಿದ ಕಾಂಗ್ರೆಸ್

|
Google Oneindia Kannada News

Recommended Video

ಬಿಜೆಪಿ ತಲೆಮೇಲೆ 10 ಆರೋಪದ ಹೊರೆಹೊರಿಸಿದ ಕಾಂಗ್ರೆಸ್ | Oneindia Kannada

ಬೆಂಗಳೂರು, ಮಾರ್ಚ್ 13: ಕರ್ನಾಟಕ ವಿಧಾನಸಭೆ ಚುನಾವಣೆಗೆ ಒಂದೆರಡು ತಿಂಗಳು ಬಾಕಿ ಇದೆ. ಈ ಸಮಯದಲ್ಲಿ ರಾಜಕೀಯ ಪಕ್ಷಗಳು ಪರಸ್ಪರ ಕಾಲೆಳೆದುಕೊಳ್ಳೋದು ಮಅಮೂಲು. ಆದರೆ ಸಾಮಾಜಿಕ ಜಾಲತಾಣಗಳು ಜೋರು ಸದ್ದು ಮಾಡುತ್ತಿರುವ ಕಾರಣ ಪರಸ್ಪರ ಕೆಸರೆರಚಾಟ ಕೊಂಚ ಜಾಸ್ತಿಯೇ ಆಯ್ತೇನೋ ಅನ್ನಿಸಲಿಕ್ಕೆ ಸಾಕು.

'ನಮೋ' ಎಂದರೆ ನರೇಂದ್ರ ಮೋದಿ ಅಂತಲ್ಲ, 'ನಮಗೆ ಮೋಸ' ಅಂತ ಎಂದಿದ್ದ ಕಾಂಗ್ರೆಸ್, ಈಗ ಅದೇ ಪದವನ್ನಿಟ್ಟುಕೊಂಡು ಬಿಜೆಪಿ ವಿರುದ್ಧ ಟ್ವಿಟ್ಟರ್ ನಲ್ಲಿ ಯುದ್ಧ ಆರಂಭಿಸಿದೆ. ಚಾರ್ಜ್ ಶೀಟ್ ಎಂಬ ಹೆಸರಿನಲ್ಲಿ ಬಿಜೆಪಿ ಮೇಲೆ ಆರೋಪದ ಸುರಿಮಳೆ ಸುರಿಸುತ್ತಿದೆ.

ಮುಯ್ಯಿಗೆ ಮುಯ್ಯಿ... ಕಾಂಗ್ರೆಸ್ ಸೇರಿಗೆ ಬಿಜೆಪಿ ಸವ್ವಾಸೇರು!ಮುಯ್ಯಿಗೆ ಮುಯ್ಯಿ... ಕಾಂಗ್ರೆಸ್ ಸೇರಿಗೆ ಬಿಜೆಪಿ ಸವ್ವಾಸೇರು!

#KarnatakaVirodhiBJP ಎಂಬ ಹ್ಯಾಶ್ ಟ್ಯಾಗ್ ಮೂಲಕ ಬಿಜೆಪಿಯನ್ನು ತರಾಟೆಗೆ ತೆಗೆದುಕೊಂಡಿರುವ ಕಾಂಗ್ರೆಸ್, ಬಿಜೆಪಿಯ 10 ವೈಫಲ್ಯಗಳನ್ನು ಹೀಗೆ ಉಲ್ಲೇಖಿಸಿದೆ...

ಯಾವ ಪಕ್ಷಕ್ಕೆಷ್ಟು ಸೀಟು? ನೀವೇ ಊಹಿಸಿ

Array

ಕನ್ನಡೇತರ ಅಭ್ಯರ್ಥಿಗಳಿಗೆ ಅವಕಾಶ

"ಬಿಜೆಪಿ ನಿರಂತರವಾಗಿ ಕನ್ನಡೇತರ ಅಭ್ಯರ್ಥಿಗಳನ್ನು ರಾಜ್ಯಸಭಾ ಸದಸ್ಯರನ್ನಾಗಿ ಮಾಡುತ್ತಿದೆ ಅದಕ್ಕೆ ಸೂಕ್ತ ಉದಾಹರಣೆ ರಾಜ್ಯಸಭಾ ಸದಸ್ಯ ರಾಜೀವ್ ಚಂದ್ರಶೇಖರ್. ಇಂಥ ಕನ್ನಡೇತರ ನಾಯಕರು ಸಂಸತ್ತಿನಲ್ಲಿ ಕರ್ನಾಟಕದ ಹಿತಾಸಕ್ತಿಗೆ ನ್ಯಾಯ ಒದಗಿಸಿಕೊಡುವರೇ?" ಎಂದು ಕಾಂಗ್ರೆಸ್ ಪ್ರಶ್ನಿಸಿದೆ. ಮಾ.23 ರಂದು ನಡೆಯಲಿರುವ ರಾಜ್ಯಸಭಾ ಚುನಾವಣೆಗೆ ಕರ್ನಾಟಕದಿಂದ ಉದ್ಯಮಿ ರಾಜೀವ್ ಚಂದ್ರಶೇಖರ್ ಅವರನ್ನು ಬಿಜೆಪಿ ಅಭ್ಯರ್ಥಿಯನ್ನಾಗಿ ಘೋಷಿಸಲಾಗಿದ್ದು, ಅವರು ಕರ್ನಾಟಕ ಮೂಲದವರಲ್ಲ ಎಂಬುದು ಕಾಂಗ್ರೆಸ್ ನ ಆರೋಪವಾಗಿದೆ. ಕನ್ನಡಿಗರಲ್ಲದವರು ಕನ್ನಡಿಗರ ಹಿತ ಕಾಪಾಡುತ್ತಾರೆಯೇ ಎಂಬುದು ಕಾಂಗ್ರೆಸ್ಸಿನ ಪ್ರಶ್ನೆ!

ಮಹದಾಯಿ ಇತ್ಯರ್ಥದಲ್ಲೂ ಮೋಸ!

"ರಾಜ್ಯ ಸರ್ಕಾರವು ಮಹದಾಯಿ ಜಲವಿವಾದ ಬಗೆಹರಿಸುವಂತೆ ಮೋದಿ ಬಳಿ ಹಲವಾರು ಬಾರಿ ಮನವಿ ಮಾಡಿಕೊಂಡಿದೆ. ಸಿಎಂ ಸಿದ್ದರಾಮಯ್ಯನವರು ಮೂರು ರಾಜ್ಯ ಸರ್ಕಾರಗಳ ಜಂಟಿ ಸಭೆ ನಡೆಸಿ ಸಮಸ್ಯೆ ಇತ್ಯರ್ಥಪಡಿಸಲಿಕೊಡಲು ಮೋದಿಯವರಿಗೆ ಮನವಿ ಕೊಟ್ಟಿದ್ದೂ ಆಗಿದೆ. ಆದರೆ ಮೋದಿ ಸರ್ಕಾರ ಈ ಕುರಿತು ಕಿಂಚಿತ್ತೂ ಮಾತನಾಡದೆ ಕೀಳು ಮಟ್ಟದ ರಾಜಕಾರಣ ಮಾಡುತ್ತಿದ್ದು ಕರ್ನಾಟಕಕ್ಕೆ ಮೋಸ ಮಾಡುತ್ತಿದೆ." ಎಂಬುದು ಎರಡನೆಯ ಆರೋಪ. ಉತ್ತರ ಕರ್ನಾಟಕ ಭಾಗಕ್ಕೆ ಕುಡಿಯುವ ನೀರು ಒದಗಿಸುವ ಮಹದಾಯಿ ನದಿನೀರು ಹಂಚಿಕೆ ವಿಚಾರವಾಗಿ ರಾಜ್ಯ ಬಿಜೆಪಿ ನಾಯಕರು ಗೋವಾ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್ ಅವರೊಂದಿಗೆ ಮಾತುಕತೆ ನಡೆಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲದಿರುವುದನ್ನು ಇಲ್ಲಿ ಉಲ್ಲೇಖಿಸಬಹುದು.

ಕನ್ನಡದಲ್ಲಿಲ್ಲ ಬ್ಯಾಂಕಿಂಗ್ ಪರೀಕ್ಷೆ!

"ಭಾರತದಲ್ಲಿ ಪ್ರಾದೇಶಿಕ ಗ್ರಾಮೀಣ ಬ್ಯಾಂಕಿಂಗ್ ಪರೀಕ್ಷಾ ಪದ್ಧತಿಯಲ್ಲಿ ಬದಲಾವಣೆಯನ್ನು ತಂದಿದ್ದು, ಪರೀಕ್ಷೆಗಳನ್ನು ಕೇವಲ ಇಂಗ್ಲಿಷ್/ಹಿಂದಿಯಲ್ಲಿ ಬರೆಯುವ ಅವಕಾಶ ನೀಡಿ ಕನ್ನಡ ಮಾಧ್ಯಮವನ್ನು ನಿರ್ಬಂಧಿಸಿದೆ. ಇದರಿಂದ ಸಾವಿರಾರು ಕನ್ನಡಿಗರು ಉದ್ಯೋಗವಂಚಿತರಾಗಿದ್ದಾರೆ. ಈ ಕುರಿತು ಮುಖ್ಯಮಂತ್ರಿಗಳು ಪರೀಕ್ಷಾ ಪದ್ಧತಿಯನ್ನು ಬದಲಾಯಿಸಿ ಐಬಿಪಿಎಸ್ ಪರೀಕ್ಷೆಗಳನ್ನು ಕನ್ನಡದಲ್ಲಿ ಬರೆಯಲು ಅವಕಾಶ ನೀಡುವಂತೆ ಅರುಣ್ ಜೇಟ್ಲಿಯವರಿಗೆ ಪತ್ರ ಬರೆದರೂ ಯಾವುದೇ ಪ್ರತಿಕ್ರಿಯೆ ಬಂದಿಲ್ಲ" ಎಂದೂ ಕಾಂಗ್ರೆಸ್ ಆರೋಪಿಸಿದೆ.

ಬರ ಪರಿಹಾರದಲ್ಲಿ ಮಲತಾಯಿ ಧೋರಣೆ

"ಕೊಟ್ಟ ಬರ ಪರಿಹಾರ ಕೇವಲ ರೂ.1435.95 ಕೋಟಿ. ಆದರೆ ಬಿಜೆಪಿ ಆಳ್ವಿಕೆಯ ರಾಜ್ಯಗಳು ಮೋದಿ ಕೃಪಾಕಟಾಕ್ಷದಿಂದ ಅತ್ಯಧಿಕ ಬರ ಪರಿಹಾರ ಪಡೆದಿದ್ದು ವಿವರಗಳು ಈ ಕೆಳಕಂಡಂತಿವೆ- ಮಹಾರಾಷ್ಟ್ರ- 8,195 ಕೋಟಿ ರೂ., ಗುಜರಾತ್- 3894 ಕೋಟಿ ರೂ., ರಾಜಸ್ಥಾನ 2,153 ಕೋಟಿ ರೂ." ಎಂದು ಮೋದಿ ಸರ್ಕಾರವನ್ನು ಕಾಂಗ್ರೆಸ್ ತರಾಟೆಗೆ ತೆಗೆದುಕೊಂದಿದೆ. ಕೇಮದ್ರ ಸರ್ಕಾರ, ಬಿಜೆಪಿ ಆಡಳಿತದಲ್ಲಿರುವ ರಅಜ್ಯಗಳಿಗೆ ಮಾತ್ರ ಹೆಚ್ಚಿನ ಬರ ಪರಿಹಾರ ನೀಡಿದೆ ಎಂದು ಕಾಂಗ್ರೆಸ್ ಆರೋಪ.

Array

ಸಿಆರ್ ಪಿಎಫ್ ಕಚೇರಿ ಸ್ಥಳಾಂತರಿಸಿದ್ದೇಕೆ?

"ಮೋದಿ ಸರ್ಕಾರವು ನಗರದ ಹೊರವಲಯದ ತರಳು ಗ್ರಾಮದಲ್ಲಿದ್ದ ಸಿಆರ್ ಪಿಎಫ್ ಕಚೇರಿಯನ್ನು ಉತ್ತರಪ್ರದೇಶದಲ್ಲಿರುವ ರಾಜನಾಥ್ ಸಿಂಗ್ ತವರು ಪ್ರದೇಶ ಚಾಂದೌಲಿಗೆ ಎತ್ತಂಗಡಿ ಮಾಡಿದೆ. ಇದು ಮೋದಿ ಸರ್ಕಾರದ ನಿಷ್ಠುರತೆಗೆ ಉತ್ತಮ ನಿದರ್ಶನ. ಏಕೆಂದರೆ ಈಗಾಗಲೇ ಉತ್ತರ ಪ್ರದೇಶ 5 ಸಿಆರ್ ಪಿಎಫ್ ಕಚೇರಿಗಳನ್ನು ಹೊಂದಿಗೆ. ಸಿಆರ್ ಪಿಎಫ್ ಉತ್ತಮ ಕಾರ್ಯಾಚರಣೆಗಾಗಿ ರಾಜ್ಯ ಸರ್ಕಾರ 220 ಎಕರೆ ಭೂಮಿಯನ್ನೂ ನೀಡಿತ್ತು. ಆದರೆ ವರ್ಗಾವಣೆಗೊಂಡ ಸಿಆಅರ್ ಪಿಎಫ್ ಕಚೇರಿಗೆ ಉತ್ತರ ಪ್ರದೇಶದಲ್ಲಿ ಇನ್ನೂ ಸ್ಥಳಾವಕಾಶವೇ ದೊರೆತಿಲ್ಲ" ಎಂದೂ ಕಾಂಗ್ರೆಸ್ ದೂರಿದೆ.

ಕರ್ನಾಟಕ ಬಾವುಟಕ್ಕೂ ವಿರೋಧ

'ರಾಜ್ಯ ಸರ್ಕಾರವು ಕನ್ನಡದ ಕಂಪನ್ನು ಪಸರಿಸುವ ನಾಡಧ್ವಜಕ್ಕೆ ಹೊಸ ರೂಪು ನೀಡಿ ಮೆರುಗನ್ನು ಹೆಚ್ಚಿಸಿದೆ. ಪ್ರತ್ಯೇಕ ಕರ್ನಾಟಕ ಬಾವುಟಕ್ಕೆ ಬಿಜೆಪಿ ನಾಯಕರು ವಿರೋಧ ವ್ಯಕ್ತಪಡಿಸುತ್ತಿದ್ದು, ಕನ್ನಡ ವಿರೋಧಿ ಧೋರಣೆ ತಾಳಿದ್ದಾರೆ' ಎಂದು ಕಾಂಗ್ರೆಸ್ ಹೇಳಿದೆ. ಪ್ರತ್ಯೇಕ ಧ್ವಜ ಸಮಿತಿಯ ಶಿಫಾರಿಸಿನಂತೆ ವಿನ್ಯಾಸ ಮಾಡಲಾಗಿರುವ ನೂತನ ನಾಡ ಧ್ವಜವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಇತ್ತೀಚೆಗೆ ಅನಾವರಣಗೊಳಿಸಿದರು. ಧ್ವಜದಲ್ಲಿ ಈಗ ಕೆಂಪು, ಹಳದಿಯೊಂದಿಗೆ ಶಾಂತಿ ಸೂಸುವ ಬಿಳಿ ಬಣ್ಣವೂ ಸೇರಿಕೊಂಡಿದೆ. ಧ್ವಜದ ಮಧ್ಯದಲ್ಲಿ ಸರ್ಕಾರದ ಲಾಂಛನವೂ ಇದೆ.

ಎಚ್ ಎ ಎಲ್ ಕಡೆಗಣಿಸಿ ಅಂಬಾನಿಗೆ ಮಣೆ

"ಭಾರತದ ವೈಮಾನಿಕ ಕ್ಷೇತ್ರಕ್ಕೆ ಬೆಂಗಳೂರಿನ ಎಚ್ ಎಎಲ್ ಸಂಸ್ಥೆ ಕಳೆದ 70 ವರ್ಷಗಳಿಂದ ನಿರಂತರವಾಗಿ ಕೊಡುಗೆಗಳನ್ನು ನೀಡುತ್ತಾಬಂದಿದೆ. ಕೇಂದ್ರ ಬಿಜೆಪಿ ಸರ್ಕಾರ ಹೊಸ ವಿಮಾನ ಗುತ್ತಿಗೆಯನ್ನು ದೇಶದ ಹೆಮ್ಮೆಯ ಸಂಸ್ಥೆ ಎಚ್ ಎಎಲ್ ಗೆ ನೀಡದೆ ಮೋದಿ ಮಿತ್ರ ಅನಿಲ್ ಅಂಬಾನಿ ಸಂಸ್ಥೆಗೆ ನೀಡಿ ನಾಡಿನ ಯುವಜನತೆಯ ಉದ್ಯೋಗಗಳಿಗೆ ಕಲ್ಲುಹಾಕಿದೆ" ಎನ್ನುವ ಮೂಲಕ ಮೋದಿ ಸರ್ಕಾರ ಉದ್ಯಮಿಗಳ ಪರವಾಗಿದೆ ಎಂದು ಕಾಂಗ್ರೆಸ್ ದೂರಿದೆ.

ಸಾಲಮನ್ನಾ ವಿರೋಧಿ ಮೋದಿ ಸರ್ಕಾರ.

"ರಾಜ್ಯ ಸರ್ಕಾರವು 2017 ರಲ್ಲಿ ಒಟ್ಟು 8,165ಕೋಟಿ ರೂ. ಸಾಲಮನ್ನಾ ಮಾಡಿದೆ. ಕೋ ಆಪರೇಟಿವ್ ಬ್ಯಾಂಕ್ ಗಳಲ್ಲಿದ್ದ ರಾಜ್ಯದ ಒಟ್ಟು 22,27,506 ರೈತರ 50,000 ರೂ. ವರೆಗಿನ ಸಾಲಮನ್ನಾ ಆಗಿದೆ. ಇದದೇ ನಿಟ್ಟಿನಲ್ಲಿ ರಾಷ್ಟ್ರೀಕೃತ ಹಾಗೂ ವಾಣಿಜ್ಯ ಬ್ಯಾಂಕ್ ಗಳಲ್ಲಿರುವ ರೈತರ ಸಾಲಮನ್ನಾ ಮಾಡಲು ಕೇಂದ್ರ ಸರ್ಕಾರವನ್ನು ಕೇಳಿಕೊಂಡಾಗ ಯಾವುದೇ ಸಹಕಾರ ನೀಡದೆ ಮೋದಿ ಸರ್ಕಾರವು ಕರ್ನಾಟಕಕ್ಕೆ ಮಲತಾಯಿ ಧೋರಣೆ ತೋರಿದೆ" ಎಂಬುದು 8 ನೇ ಆರೋಪ.

ಬಲವಂತವಾಗಿ ಹಿಂದಿ ಹೇರಿಕೆ

"ಕೇಂದ್ರ ಸರ್ಕಾರವು ಕರ್ನಾಟಕದಲ್ಲಿ ಬಲವಂತವಾಗಿ ಹಿಂದಿಯನ್ನು ಹೇರುತ್ತಿದೆ (ಉದಾಹರಣೆ ನಮ್ಮ ಮೆಟ್ರೊ ಪ್ರದರ್ಶನ ಫಲಕಗಳಲ್ಲಿ ಹಿಂದಿ ಭಾಷೆ). ಈ ನಿಲುವು ಕೆಚ್ಚೆದೆಯ ಕನ್ನಡಿಗರನ್ನು ಕೆರಳಿಸಿದ್ದು ರಾಜ್ಯ ಸರ್ಕಾರವು ಕನ್ನಡ ಭಾಷೆಯ ಬೆಳವಣಿಗೆ ಹಾಗೂ ಸಂರಕ್ಷಣೆಗೆ ಬದ್ಧವಾಗಿದೆ" ಎಂದು ಸರ್ಕಾರ ಹೇಳಿದೆ.

ಕಾವೇರಿ ವಿವಾದಕ್ಕೂ ಸ್ಪಂದಿಸಲಿಲ್ಲ.

"2016 ನೇ ಸಾಲಿನಲ್ಲಿ ಕಾವೇರಿ ನೀರಿನ ಸಮಸ್ಯೆ ರಾಜ್ಯದಲ್ಲಿ ಸ್ಫೋಟಗೊಂಡಿತು. ಆಗಲೇ ಸಿಎಂ ಕಾವೇರಿ ನೀರು ಹಂಚಿಕೆ ವಿವಾದವನ್ನು ಬಗೆಹರಿಸಿಕೊಡುವಂತೆ ಪ್ರಧಾನಿ ಮೋದಿಗೆ ಪತ್ರ ಬರೆದರು. ಆದರೆ ಸಿಎಂ ಪತ್ರಕ್ಕೆ ಮೋದಿ ಯಾವುದೇ ಉತ್ತರ ನೀಡಲಿಲ್ಲ. ಈ ವಿಚಾರ ಬಗೆಹರಿಸುವ ಕುರಿತು ಸರ್ವಜ್ಞ ಸಭೆ ಕರೆದರೂ ಬಿಜೆಪಿ ಸಂಸದರು ಹಾಗೂ ಕೇಂದ್ರ ಸಚಿವರು ಬರಲಿಲ್ಲ. ಕನ್ನಡ ನಾಡು, ನುಡಿ ಹಾಗೂ ನೀರಿನ ವಿವಾದಗಳಲ್ಲಿ ಕೊಂಚವೂ ಚಕಾರವೆತ್ತದ ಕರ್ನಾಟಕ ಬಿಜೆಪಿ ಮುಖಂಡರು ಕರ್ನಾಟಕಕ್ಕೆ ಮೋಸ ಮಾಡುತ್ತಲೇ ಇದ್ದಾರೆ!" ಎಂದಿದೆ.

224 ಕ್ಷೇತ್ರಕ್ಕೆ 1450 ಅಭ್ಯರ್ಥಿಗಳಿಂದ ಟಿಕೆಟ್ ಬಯಸಿ ಅರ್ಜಿ224 ಕ್ಷೇತ್ರಕ್ಕೆ 1450 ಅಭ್ಯರ್ಥಿಗಳಿಂದ ಟಿಕೆಟ್ ಬಯಸಿ ಅರ್ಜಿ

English summary
'BJP cheats Karnataka' this is the new tagline of Congress in it's chargesheet against BJP on twitter. Here congress explains 10 major points in which BJP cheats people of Karnataka.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X