ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವೈದ್ಯಕೀಯ ಸ್ನಾತಕೋತ್ತರ ವ್ಯಾಸಂಗ ಮಾಡುವ ವಿದ್ಯಾರ್ಥಿಗಳಿಗೆ ಸಿಹಿಸುದ್ದಿ

|
Google Oneindia Kannada News

ಬೆಂಗಳೂರು, ಜೂನ್ 1: ವೈದ್ಯ ಸ್ನಾತಕೋತ್ತರ ವ್ಯಾಸಂಗ ಮಾಡಬಯಸುವ ವಿದ್ಯಾರ್ಥಿಗಳಿಗೆ ಸಿಹಿಸುದ್ದಿ ಇದೆ.

ಕರ್ನಾಟಕಕ್ಕೆ ಹೆಚ್ಚುವರಿ 400 ವೈದ್ಯ ಸ್ನಾತಕೋತ್ತರ ಸೀಟುಗಳು ಲಭ್ಯವಾಗಲಿದೆ. 2020-21ನೇ ಸಾಲಿನಲ್ಲಿ ಈ ಸೀಟು ಲಭ್ಯವಾಗಲಿದೆ.ಸಾಕಷ್ಟು ಮಂದಿ ವಿದ್ಯಾರ್ಥಿಗಳು ಮೆಡಿಕಲ್ ವಿದ್ಯಾಭ್ಯಾಸ ಮಾಡಬಯಸುತ್ತಾರೆ ಆದರೆ ಸೀಟಿಲ್ಲದೆ ನಿರಾಶೆಯನ್ನು ಅನುಭವಿಸುತ್ತಾರೆ. ಹಾಗಾಗಿ ಮೆಡಿಕಲ್ ಕೌನ್ಸಿಲ್ ಆಫ್ ಇಂಡಿಯಾ ಶುಕ್ರವಾರ ಈ ಆದೇಶ ಹೊರಡಿಸಿದೆ.

ವೈದ್ಯಕೀಯ ಶಿಕ್ಷಣ ಕೋರ್ಸ್ ಪ್ರವೇಶಕ್ಕೆ ವಿದ್ಯಾರ್ಥಿಗಳ ಹಿಂಜರಿಕೆ:ಕಾರಣ ವೈದ್ಯಕೀಯ ಶಿಕ್ಷಣ ಕೋರ್ಸ್ ಪ್ರವೇಶಕ್ಕೆ ವಿದ್ಯಾರ್ಥಿಗಳ ಹಿಂಜರಿಕೆ:ಕಾರಣ

ಈ ಪರಿಷ್ಕೃತ ಪಿಜಿ ಟೀಚರ್ -ವಿದ್ಯಾರ್ಥಿಗಳ ರೇಷಿಯೋದಲ್ಲಿ ಹೆಚ್ಚು ವಿದ್ಯಾರ್ಥಿಗಳಿಗೆ ವೈದ್ಯಕೀಯ ಸ್ನಾತಕೋತ್ತರ ವಿದ್ಯಾಭ್ಯಾಸ ಮಾಡಲು ಅವಕಾಶ ದೊರೆಯಲಿದೆ. 1:1 ಇದ್ದಿದ್ದ ರೇಷಿಯೋ ಇದೀಗ 1:3 ಆಗಿದೆ. 30 ಬೆಡ್‌ಗಳಿರುವ ಆಸ್ಪತ್ರೆಯಲ್ಲಿ ಕಲಿಕೆಗೆ ಅವಕಾಶ ಕಲ್ಪಿಸಿಕೊಡಲಾಗುತ್ತಿದೆ.

Karnataka colleges to get 400 more PG medical seats

ದೇಶದಲ್ಲಿ ಮೆಡಿಕಲ್ ಪಿಜಿ ವ್ಯಾಸಂಗ ಮಾಡಲು ಉತ್ಸುಕರಾಗಿರುವ ಸಂಖ್ಯೆ 70 ಸಾವಿರದಷ್ಟಿದ್ದರೆ ಕೇವಲ 35 ಸಾವಿರ ಸೀಟುಗಳು ಮಾತ್ರ ಲಭ್ಯವಿದೆ ಎಂದು ರಾಜೀವ್ ಗಾಂಧಿ ವಿಶ್ವವಿದ್ಯಾಲಯದ ಡಾ. ಸಚ್ಚಿದಾನಂದ ಅವರು ತಿಳಿಸಿದ್ದಾರೆ.

ಕರ್ನಾಟಕದಲ್ಲಿ ಇದೀಗ 3 ಸಾವಿರ ಪಿಜಿ ಮೆಡಿಕಲ್ ಸೀಟುಗಳು ಲಭ್ಯವಿದೆ ಅದರಲ್ಲಿ ಮುಂದಿನ ಶೈಕ್ಷಣಿಕ ವರ್ಷದಿಂದ 400 ಸೀಟುಗಳು ಹೆಚ್ಚುವರಿಯಾಗಿ ಲಭ್ಯವಾಗಲಿವೆ.

English summary
Karnataka colleges are likely to get 400 more PG medical seats for 2020-21, with the Medical Council of India (MCI) revising the teacher-to-student ratio.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X