ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇಂದಿನಿಂದ ಪದವಿ,ಸ್ನಾತಕೋತ್ತರ ಕಾಲೇಜುಗಳು ಪೂರ್ಣ ಪ್ರಮಾಣದಲ್ಲಿ ಆರಂಭ

|
Google Oneindia Kannada News

ಬೆಂಗಳೂರು, ಜನವರಿ 15: ಸತತ ಹತ್ತು ತಿಂಗಳ ಬಳಿಕ ರಾಜ್ಯದಲ್ಲಿ ಪದವಿ, ಸ್ನಾತಕೋತ್ತರ ಪದವಿ ಕಾಲೇಜುಗಳು ಪೂರ್ಣವಾಗಿ ಆರಂಭವಾಗಿದೆ.

ರಾಜ್ಯದಲ್ಲಿ ಈಗಾಗಲೇ ಎಸ್ಎಸ್ಎಸಲ್ ಸಿ ಮತ್ತು ಪಿಯುಸಿ ತರಗತಿಗಳು ಆರಂಭವಾಗಿದ್ದು, ಇಂದಿನಿಂದ (ಜನವರಿ 15) ಎಲ್ಲಾ ಪದವಿ, ಸ್ನಾತಕೋತ್ತರ, ಪಾಲಿಟೆಕ್ನಿಕ್ಎಂಜಿನಿಯರಿಂಗ್ ಕಾಲೇಜುಗಳು ಕೂಡಾ ಪೂರ್ಣ ಪ್ರಮಾಣದಲ್ಲಿ ಆರಂಭವಾಗಲಿವೆ.

ಬ್ರಿಟನ್ ರೂಪಾಂತರ ಕೊರೊನಾ ಸೋಂಕು: ರಾಜ್ಯದಲ್ಲಿ ಶಾಲಾ, ಕಾಲೇಜು ಆರಂಭ ಮುಂದಕ್ಕೆ?ಬ್ರಿಟನ್ ರೂಪಾಂತರ ಕೊರೊನಾ ಸೋಂಕು: ರಾಜ್ಯದಲ್ಲಿ ಶಾಲಾ, ಕಾಲೇಜು ಆರಂಭ ಮುಂದಕ್ಕೆ?

ಬೆಳಿಗ್ಗೆ 9ರಿಂದ ಸಂಜೆ 3ಗಂಟೆವರೆಗೆ ಅಥವಾ ಬೆಳಿಗ್ಗೆ 10 ಗಂಟೆಯಿಂದ ಸಂಜೆ 4ರವರೆಗೆ ತರಗತಿಗಳು ನಡೆಯಲಿವೆ.

ಇಂದಿನಿಂದ ಎಲ್ಲಾ ತರಗತಿಗಳು ಆರಂಭ

ಇಂದಿನಿಂದ ಎಲ್ಲಾ ತರಗತಿಗಳು ಆರಂಭ

ಕೊರೊನಾ ಹಿನ್ನೆಲೆಯಲ್ಲಿ ಆನ್ ಲೈನ್ ತರಗತಿಗಳು ಆರಂಭವಾದ ಮೇಲೆ ನವೆಂಬರ್ 17ರಿಂದ ಅಂತಿಮ ವರ್ಷದ ಪದವಿ, ಪಾಲಿಟೆಕ್ನಿಕ್, ಸ್ನಾತಕೋತ್ತರ ಮತ್ತು ಎಂಜಿನಿಯರಿಂಗ್ ತರಗತಿಗಳು ನಡೆಯುತ್ತಿವೆ. ಇದೀಗ ಆರೋಗ್ಯ ಇಲಾಖೆ ಹೊರಡಿಸಿರುವ ಮಾರ್ಗಸೂಚಿಯಂತೆ, ಉಳಿದ ತರಗತಿಗಳು ಕೂಡಾ ತೆರೆದುಕೊಳ್ಳಲಿದೆ. ತರಗತಿಗೆ ಹಾಜರಾಗುವ ವಿದ್ಯಾರ್ಥಿಗಳು ಪೋಷಕರಿಂದ ಒಪ್ಪಿಗೆ ಪತ್ರನ್ನು ತರುವುದನ್ನು ಕಡ್ಡಾಯಗೊಳಿಸಲಾಗಿದೆ. ಒಪ್ಪಿಗೆ ಪತ್ರ ಇಲ್ಲದ ವಿದ್ಯಾರ್ಥಿಗಳು ನೇರ ತರಗತಿಗೆ ಹಾಜರಾಗುವಂತಿಲ್ಲ.

ನವೆಂಬರ್ 17 ರಂದು ಕೆಲವು ತರಗತಿಗಳು ಆರಂಭವಾಗಿತ್ತು

ನವೆಂಬರ್ 17 ರಂದು ಕೆಲವು ತರಗತಿಗಳು ಆರಂಭವಾಗಿತ್ತು

ಕಳೆದ ನ.17ರಂದು ರಾಜ್ಯದಲ್ಲಿ ಪದವಿ, ಸ್ನಾತಕೋತ್ತರ ಪದವಿ, ಡಿಪ್ಲೊಮಾ ಹಾಗೂ ಎಂಜಿನಿಯರಿಂಗ್ ಕಾಲೇಜುಗಳಲ್ಲಿ ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಮಾತ್ರ ತರಗತಿ ಚಟುವಟಿಕೆಗಳನ್ನು ಸರ್ಕಾರ ಆರಂಭಿಸಿತ್ತು. ಉಳಿದವರಿಗೆ ಆನ್'ಲೈನ್ ಶಿಕ್ಷಣ ಮುಂದುವರೆಸಿತ್ತು. ಇದಾದ ಎರಡು ತಿಂಗಳ ಬಳಿಕ ಪ್ರಥಮ ಹಾಗೂ ದ್ವಿತೀಯ ವರ್ಷದ ವಿದ್ಯಾರ್ಥಿಗಳಿಗೂ ಭೌತಿಕ ತರಗತಿಗಳು ಪುನರಾರಂಭಗೊಳ್ಳುತ್ತಿವೆ.

ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಕಡ್ಡಾಯ

ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಕಡ್ಡಾಯ

ಇನ್ನು ಮಾಸ್ಕ್, ಸಾಮಾಜಿಕ ಅಂತರ ಪಾಲಿಸುವುದು ಕಡ್ಡಾಯವಾಗಿದೆ. ಅಲ್ಲದೆ ಥರ್ಮಲ್ ಸ್ಕ್ರೀನಿಂಗ್ ಅಳವಡಿಕೆ ಕೂಡಾ ಇರಲೇ ಬೇಕು. ಆನ್ಲೈನ್ ಆಫ್ ಲೈನ್ ಎರಡೂ ತರಗತಿಗಳು ನಡೆಯುತ್ತವೆ. ವಿದ್ಯಾರ್ಥಿಗಳು ಯಾವುದಾದರೂ ಒಂದು ತರಗತಿಗೆ ಕಡ್ಡಾಯವಾಗಿ ಹಾಜರಾಗಬೇಕು. ಎಲ್ಲರೂ ಕೋವಿಡ್ ಟೆಸ್ಟ್ ಮಾಡಿಸಬೇಕಿಲ್ಲ. ರೋಗ ಲಕ್ಷಣ ಕಂಡುಬಂದವರು ಮಾತ್ರ ಕೊರೊನಾ ಪರೀಕ್ಷೆಗೆ ಒಳಗಾಗಬೇಕು.

Recommended Video

BJP ಸರ್ಕಾರದ ಬಗ್ಗೆ Munirathna ಗೆ ನಂಬಿಕೆ ಇಲ್ವಾ ?? | Oneindia Kannada
ಆರೋಗ್ಯ ಕೇಂದ್ರದಲ್ಲಿ ಮ್ಯಾಪಿಂಗ್ ಮಾಡಿಸಿಕೊಳ್ಳಬೇಕು

ಆರೋಗ್ಯ ಕೇಂದ್ರದಲ್ಲಿ ಮ್ಯಾಪಿಂಗ್ ಮಾಡಿಸಿಕೊಳ್ಳಬೇಕು

ಸಮೀಪದ ಪ್ರಾಥಮಿಕ ಆರೋಗ್ಯ ಕೇಂದ್ರಗಳೊಂದಿಗೆ ಕಾಲೇಜುಗಳು ಮ್ಯಾಪಿಂಗ್ ಮಾಡಿಕೊಳ್ಳಬೇಕು. ತರಗತಿಗೆ ಹಾಜರಾಗುವ ವಿದ್ಯಾರ್ಥಿಗಳು ತಮಗೆ ಬೇಕಾದ ಆಹಾರ ಮತ್ತು ನೀರನ್ನು ಮನೆಯಿಂದಲೇ ತರಬೇಕು. ಇದೀಗ ಶಿಕ್ಷಣ ಸಂಸ್ಥೆಗಳು ಕಾಲೇಜಿನ ಕಟ್ಟಡ, ಶೌಚಾಲಯ, ಕೊಠಡಿ, ಗ್ರಂಥಾಲಯ, ಪೀಠೋಪಕರಣಗಳಿಗೆ ಸ್ಯಾನಿಟೈಸ್‌ ಮಾಡಿಸಿ, ವಿದ್ಯಾರ್ಥಿಗಳ ಸ್ವಾಗತಕ್ಕೆ ಸಜ್ಜಾಗಿವೆ. ಕೆಲವು ವಿವಿಗಳು ಫೆಬ್ರವರಿ 2ನೇ ವಾರದಿಂದ ಸೆಮಿಸ್ಟರ್‌ ಪರೀಕ್ಷೆ ನಡೆಸಲು ತಯಾರಿ ನಡೆಸಿವೆ. ಎಲ್ಲವೂ ಅಂದುಕೊಂಡಂತೆ ನಡೆದರೆ ಮಾರ್ಚ್ ಮತ್ತು ಏಪ್ರಿಲ್‌ ತಿಂಗಳಲ್ಲಿ ಪದವಿ ಪರೀಕ್ಷೆಗಳು ನಡೆಯಬಹುದು. ಈಗಾಗಲೇ ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ತರಗತಿಯಲ್ಲಿ ಬೋಧನೆ ನಡೆಯುತ್ತಿದ್ದು, ಶುಕ್ರವಾರದಿಂದ ಪ್ರಥಮ, ದ್ವಿತೀಯ ವರ್ಷದ ಪದವಿ, ಡಿಪ್ಲೋಮಾ, ಎಂಜಿನಿಯರಿಂಗ್ ವಿದ್ಯಾರ್ಥಿಗಳಿಗೂ ಕಾಲೇಜು ತರಗತಿಗಳು ಪುರನಾರಂಭವಾಗಲಿವೆ.

English summary
According to the decision taken by the government of Karnataka, the colleges in the state are resumed normal functioning from January 15. The colleges will be reopened for all students and regular offline classes will be conducted.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X