ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸುಮಲತಾ ಭೇಟಿ: ಸಿಎಂ ಯಡಿಯೂರಪ್ಪಗೂ ಕೊರೊನಾ ಸೋಂಕಿನ ಭೀತಿ?

|
Google Oneindia Kannada News

ಬೆಂಗಳೂರು, ಜುಲೈ 7: ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ಅವರಿಗೆ ಕೊರೊನಾ ಸೋಂಕು ದೃಢಪಡುವ ಮುನ್ನ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರನ್ನು ಭೇಟಿಯಾಗಿದ್ದು, ಇದೀಗ ಸಿಎಂಗೂ ಕೊರೊನಾ ಭೀತಿ ಎದುರಾಗಿದೆ.

Recommended Video

ಕಪ್ಪು ಪಟ್ಟಿ ಕಟ್ಟಿಕೊಂಡು ಬೀದಿಗೆ ಬಂದ ಡಾಕ್ಟರ್ ಮತ್ತು ನರ್ಸ್ ಗಳು | Oneindia Kannada

ನಾಲ್ಕೈದು ದಿನಗಳ ಹಿಂದಷ್ಟೇ ಅಂಬರೀಶ್ ಅವರ ಸ್ಮಾರಕ ವಿಷಯವಾಗಿ ಸುಮಲತಾ ಅವರು ಯಡಿಯೂರಪ್ಪ ಅವರನ್ನು ಭೇಟಿಯಾಗಿದ್ದರು.ಸುಮಲತಾ ಅವರಿಗೆ ಸೋಮವಾರ ಕೊರೊನಾ ಸೋಂಕು ದೃಢಪಟ್ಟಿತ್ತು, ಈ ಕುರಿತು ಅವರೇ ತಮ್ಮ ಫೇಸ್‌ಬುಕ್‌ ಪೇಜ್‌ನಲ್ಲಿ ಬರೆದುಕೊಂಡಿದ್ದರು.

ಶನಿವಾರ, ಜುಲೈ 4ರಂದು, ನನಗೆ ಸ್ವಲ್ಪ ತಲೆನೋವು ಮತ್ತು ಗಂಟಲು ನೋವು ಕಾಣಿಸಿಕೊಂಡಿತ್ತು. ನಿರಂತರವಾಗಿ ನನ್ನ ಕ್ಷೇತ್ರದ ಕಾರ್ಯಗಳಲ್ಲಿ ತೊಡಗಿದ್ದರಿಂದ ಮತ್ತು ಕೊರೊನಾ ಪೀಡಿತ ಪ್ರದೇಶಗಳಿಗೂ ಭೇಟಿ ಕೊಟ್ಟಿದ್ದರಿಂದ, ಕೊವಿಡ್ 19 ಪರೀಕ್ಷೆಗೆ ಒಳಗಾದೆ.

ಮಂಡ್ಯ ಸಂಸದೆ ಸುಮಲತಾಗೆ ಕೊರೊನಾ ವೈರಸ್ ಸೋಂಕುಮಂಡ್ಯ ಸಂಸದೆ ಸುಮಲತಾಗೆ ಕೊರೊನಾ ವೈರಸ್ ಸೋಂಕು

ಇವತ್ತು ಪಾಸಿಟಿವ್ ಎಂದು ಫಲಿತಾಂಶ ಬಂದಿದೆ. ಹಾಗಾಗಿ ವೈದ್ಯರ ಸಲಹೆ ಪಡೆದುಕೊಂಡು ಅಗತ್ಯ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದೇನೆ. ಮನೆಯಲ್ಲಿಯೇ ಕ್ವಾರಂಟೈನ್ ಗೆ ಒಳಪಟ್ಟಿದ್ದೀನಿ ಎಂದು ಮಾಹಿತಿ ನೀಡಿದ್ದರು.

ರೋಗ ನಿರೋಧಕ ಶಕ್ತಿ ಹೆಚ್ಚಿದೆ

ರೋಗ ನಿರೋಧಕ ಶಕ್ತಿ ಹೆಚ್ಚಿದೆ

ರೋಗನಿರೋಧಕ ಶಕ್ತಿಯು ನನ್ನಲ್ಲಿ ಪ್ರಬಲವಾಗಿದೆ ಮತ್ತು ನಿಮ್ಮ ಆಶೀರ್ವಾದ ನನ್ನ ಮೇಲೆ ಇರುವುದರಿಂದ ಬೇಗ ಗುಣಮುಖ ಆಗುತ್ತೇನೆ. ಈಗಾಗಲೇ ನನ್ನನ್ನು ಭೇಟಿಯಾದ ವ್ಯಕ್ತಿಗಳ ವಿವರವನ್ನು ಸರಕಾರಿ ಅಧಿಕಾರಿಗಳಿಗೆ ಕೊಟ್ಟಿರುವೆ. ಆದರೂ ನನ್ನನ್ನು ಭೇಟಿಯಾದವರಲ್ಲಿ ಯಾರಿಗಾದರೂ ಕೋವಿದ್ ಲಕ್ಷಣಗಳು ಕಂಡುಬಂದಲ್ಲಿ ಕೂಡಲೇ ಪರೀಕ್ಷೆ ಮಾಡಿಸಲು ವಿನಂತಿಸುತ್ತೇನೆ. ನಿಮ್ಮ ಹಾರೈಕೆ ಇರಲಿ ಎಂದು ಹೇಳಿದ್ದರು.

ಜೂನ್ 29ರಂದು ಯಡಿಯೂರಪ್ಪ ಭೇಟಿ

ಜೂನ್ 29ರಂದು ಯಡಿಯೂರಪ್ಪ ಭೇಟಿ

ಜೂನ್ 29 ರಂದು ಸುಮಲತಾ ಅವರು ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಭೇಟಿಯಾಗಿದ್ದರು. ಹೀಗಾಗಿ ಸಿಎಂ ಸೇರಿ ಇಡೀ ಬಿಜೆಪಿ ಪಾಳಯದಲ್ಲಿಯೇ ಕೊರೊನಾ ಭೀತಿ ಎದುರಾಗಿದೆ.

ಅಂಬರೀಶ್ ಸ್ಮಾರಕ ವಿಚಾರ

ಅಂಬರೀಶ್ ಸ್ಮಾರಕ ವಿಚಾರ

ಅಂಬರೀಶ್ ಸ್ಮಾರಕ ನಿರ್ಮಿಸುವ ಕುರಿತಾಗಿ ಸುಮಲತಾ ಅವರು ಯಡಿಯೂರಪ್ಪ ಅವರನ್ನು ಭೇಟಿಯಾಗಿದ್ದರು. ಸ್ಮಾರಕಕ್ಕೆ ಸರ್ಕಾರ 5 ಕೋಟಿ ರೂ ಬಿಡುಗಡೆ ಮಾಡಿತ್ತು.

ಅಂಬರೀಶ್ ಸ್ಮಾರಕವನ್ನು ನಿರ್ಮಿಸುವ ಕುರಿತಾಗಿಯೇ ಅಂಬರೀಶ್ ಫೌಂಡೇಷನ್ ಕಮಿಟಿ ಹುಟ್ಟುಕೊಂಡಿತ್ತು. ಅಂದು ಹಿರಿಯ ನಟ ದೊಡ್ಡಣ್ಣ, ರಾಕ್‌ಲೈನ್ ವೆಂಕಟೇಶ್, ಸುಮಲತಾ ಪುತ್ರ ಅಭಿಷೇಕ್ ಕೂಡ ಭಾಗವಹಿಸಿದ್ದರು.
ಕೊರೊನಾ ಜೊತೆ ಬದುಕುವುದು ಕಲೀಬೇಕು

ಕೊರೊನಾ ಜೊತೆ ಬದುಕುವುದು ಕಲೀಬೇಕು

ಸೋಮವಾರ ಮುಖ್ಯಮಂತ್ರಿ ಯಡಿಯೂರಪ್ಪ ಮಾತನಾಡಿ, ಕೊರೊನಾಗೆ ಹೆದರಬಾರದು, ಅದರ ಜೊತೆಗೆ ಬದುಕುವುದನ್ನು ಕಲಿಯಬೇಕು, ಬೇರೆ ದಾರಿ ಇಲ್ಲ ಎಂದು ಹೇಳಿದ್ದರು.

ಕೊರೊನಾ ದೃಢಪಡುವ ನಾಲ್ಕೈದು ದಿನಗಳ ಹಿಂದಷ್ಟೇ ಸುಮಲತಾ ಅಂಬರೀಶ್ ಸಿಎಂ ಬಿಎಸ್‌ ಯಡೊಯೂರಪ್ಪ ಅವರನ್ನು ಭೇಟಿ ಮಾಡಿದ್ದರಿಂದ ಅವರಿಗೂ ಕೊರೊನಾ ಹರಡುವ ಭೀತಿ ಎದುರಾಗಿದೆ.

English summary
MP Sumalatha Ambareesh tested positive for Coronavirus, this report has caused concern in BJP circles as she had recently met Karnataka Chief Minister BS Yediyurappa on June 29th.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X