• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಜೀವನದಲ್ಲಿ ಗಳಿಸಿದ ಬಹು ದೊಡ್ಡ ಆಸ್ತಿ – ಸ್ನೇಹ : ಸಿದ್ದರಾಮಯ್ಯ

By Mahesh
|

ಬೆಂಗಳೂರು, ಆಗಸ್ಟ್ 02: ಸ್ನೇಹಿತರ ದಿನಾಚರಣೆ ಅಂಗವಾಗಿ ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಾಡಿನ ತಮ್ಮೆಲ್ಲ ಸ್ನೇಹಿತರಿಗೆ ಶುಭಹಾರೈಕೆ ಸಲ್ಲಿಸಿ, ತಮ್ಮ ಗೆಳೆತನದ ಸವಿ ಬುತ್ತಿಯನ್ನು ಬಿಚ್ಚಿಟ್ಟಿದ್ದಾರೆ. ಸಿಎಂ ಸಚಿವಾಲಯದಿಂದ ಬಂದ ಸ್ನೇಹ ಸಂದೇಶ ಮುಂದಿದೆ ಓದಿ...

ಸ್ನೇಹ ಎಂದೊಡನೆಯೇ ಬಾಲ್ಯದ ದಿನಗಳು ನನ್ನ ನೆನಪಿಗೆ ಬರುತ್ತದೆ. ನಾನು ಅಕ್ಷರಾಭ್ಯಾಸ ಮಾಡಿದ್ದು ಎಲ್ಲಾ ಮಕ್ಕಳಂತೆ ಸ್ಲೇಟು ಬಳಪದಲ್ಲಲ್ಲ ! ಲೇಖನಿ ಪುಸ್ತಕದಲ್ಲೂ ಅಲ್ಲ !! ಮರಳಲ್ಲಿ ಮತ್ತು ಅದೂ ನನ್ನ ಬೆರಳಲ್ಲಿ !!!

ಬೆರಳಿನ ಮೂಲಕ ಮರಳಿನ ಮೇಲೆ ಬರೆಯುತ್ತಿದ್ದ ಓರ್ವ ವ್ಯಕ್ತಿ ಒಂದು ರಾಜ್ಯಕ್ಕೇ ಮುಖ್ಯಮಂತ್ರಿಯಾಗಿರುವುದು ನಮ್ಮ ಪ್ರಜಾಪ್ರಭುತ್ವದ ವಿಸ್ಮಯವೇ ಸರಿ !

ಮೊದಲ ಹತ್ತು ವರ್ಷಗಳು ದನ ಕಾಯುತ್ತಾ ಬಾಲ್ಯವನ್ನು ಕಳೆದ ನಾನು, ಕುಪ್ಪೇಗಾಲದ ಸರ್ಕಾರಿ ಶಾಲೆಗೆ ನೇರವಾಗಿ ಐದನೇ ತರಗತಿ ಪ್ರವೇಶ ಪಡೆದ ಸಂದರ್ಭದಲ್ಲಿ ನನಗೆ ದೊರಕಿದ ಕೆಲವು ಸಹಪಾಠಿಗಳ ಜೊತೆಗಿನ ಒಡನಾಟವನ್ನು ಇಂದೂ ಮೆಲುಕು ಹಾಕುತ್ತಿರುತ್ತೇನೆ. ಮನೆಯಿಂದ ಶಾಲೆಗೆ ಹಾಗೂ ಶಾಲೆಯಿಂದ ಮನೆಗೆ ಹೊಲ-ಗದ್ದೆಗಳ ನಡುವೆ ತೆರಳುವಾಗ ನನ್ನೊಡನೆ ಕುಣಿದು ಕುಪ್ಪಳಿಸಿದ ಕೆಲವು ಸಂಗಾತಿಗಳನ್ನು ಇಂದಿಗೂ ನಾನು ಸ್ಮರಿಸುತ್ತಿರುತ್ತೇನೆ.

ನಾನು ಚುನಾವಣೆಯಲ್ಲಿ ಸೋತಾಗ ನನಗಿಂತಲೂ ಹೆಚ್ಚು ದುಃಖಪಟ್ಟವರು ನನ್ನ ಆತ್ಮೀಯ ಗೆಳೆಯರು. ನಾನು ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡಾಗಲೂ ನನಗಿಂತಲೂ ಹೆಚ್ಚು ಸಂಭ್ರಮಿಸಿದವರೂ ನನ್ನ ಅಕ್ಕರೆಯ ಮಿತ್ರರು.

ಸ್ನೇಹ ಎಂಬ ಎರಡಕ್ಷರದ ಪದದಲ್ಲಿ ಅಡಗಿರುವ ಶಕ್ತಿಯನ್ನು ಯಾರಿಂದಲೂ ಅಳೆಯಲು ಸಾಧ್ಯವಿಲ್ಲ. ಸ್ನೇಹಕ್ಕೆ ಬೆಲೆ ಕಟ್ಟಲಾಗದು.

ಭಾವನೆ ಹಾಗೂ ಬಾಂಧವ್ಯಗಳ ಬೆಸುಗೆ ಎನಿಸಿರುವ ಸ್ನೇಹ ಎಂಬುದು ಕೇವಲ ಮಾನವನಿಗೆ ಸೀಮಿತವಲ್ಲ. ಎಲ್ಲಾ ಜೀವಿಗಳಲ್ಲೂ ಕಾಣಬಹುದು. ಕೇವಲ ವ್ಯಕ್ತಿ-ವ್ಯಕ್ತಿಗಳ ನಡುವೆ ಮಾತ್ರವಲ್ಲ, ರಾಜ್ಯ-ರಾಜ್ಯಗಳ ನಡುವೆ, ಅಷ್ಟೇ ಏಕೆ ? ರಾಷ್ಟ್ರ-ರಾಷ್ಟ್ರಗಳ ನಡುವೆಯೂ ಸ್ನೇಹ ಮುಖ್ಯ.

ನಾವು ಜೀವನದಲ್ಲಿ ಗಳಿಸಬಹುದಾದ ಬಹು ದೊಡ್ಡ ಆಸ್ತಿ - ಸ್ನೇಹ !

English summary
Karnataka CM Siddaramaiah wishes Happy Friendship Day to one and all. He said biggest asset one can earn in his or her lifetime is Friendship.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X