ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಡವರಿಗೆ 'ವಸ್ತ್ರಭಾಗ್ಯ' ಇಲ್ಲ ಎಂದ ಸಿಎಂ ಸಿದ್ದರಾಮಯ್ಯ

|
Google Oneindia Kannada News

ಮೈಸೂರು, ಜೂ. 13: ಕಾಂಗ್ರೆಸ್ ಸರ್ಕಾರದ ಇನ್ನೊಂದು ಭಾಗ್ಯ ಯೋಜನೆಗೆ ಬ್ರೇಕ್ ಬಿದ್ದಿದೆ. ಬಡವರಿಗೆ "ವಸ್ತ್ರಭಾಗ್ಯ' ನೀಡುವಂಥ ಯಾವ ಕಾರ್ಯಕ್ರಮವನ್ನು ರಾಜ್ಯ ಸರ್ಕಾರ ರೂಪಿಸಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ ನೀಡಿದ್ದಾರೆ.

ಮೈಸೂರಿನಲ್ಲಿ ಮಾತನಾಡಿದ ಅವರು, ಪ್ರಮುಖ ಹಬ್ಬಗಳ ವೇಳೆ ಬಿಪಿಎಲ್‌ ಕುಟುಂಬದ ಹೆಣ್ಣು ಮಕ್ಕಳಿಗೆ ಸೀರೆ, ಕುಪ್ಪಸ ಹಾಗೂ ಪುರುಷರಿಗೆ ಪಂಚೆ, ಶಲ್ಯ ಹಾಗೂ ಅಂಗಿ ವಿತರಿಸುವ "ವಸ್ತ್ರಭಾಗ್ಯ' ಯೋಜನೆಯನ್ನು ಜಾರಿಗೆ ತರಲಾಗುವುದು ಎಂಬ ಜವಳಿ ಸಚಿವ ಬಾಬುರಾವ್‌ ಚಿಂಚನಸೂರ್‌ ಹೇಳಿಕೆ ನೀಡಿದ್ದರು. ಆದರೆ ಅಂಥ ಯಾವ ಚಿಂತನೆ ಸರ್ಕಾರದ ಮುಂದೆ ಇಲ್ಲ ಎಂದು ಹೇಳಿದರು.[ಬಡವರಿಗೆ ಬಟ್ಟೆ ನೀಡಲು ಬಂತು 'ವಸ್ತ್ರ ಭಾಗ್ಯ' ಯೋಜನೆ]

siddaramaiah

ಗುರುವಾರ ಬೆಂಗಳೂರಿನಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಜವಳಿ ಸಚಿವ ಬಾಬೂರಾವ್ ಚಿಂಚನಸೂರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸೂಚನೆ ಅನ್ವಯ ಈ ಯೋಜನೆಯನ್ನು ರೂಪಿಸಲಾಗುತ್ತಿದೆ ಎಂದು ಹೇಳಿದ್ದರು. ಆದರೆ ಇದಕ್ಕೆ ಪ್ರತಿಕ್ರಿಯಿನೆ ನೀಡಿರುವ ಸಿದ್ದರಾಮಯ್ಯ ಸಚಿವರಿ ಯಾವ ಅರ್ಥದಲ್ಲಿ ಈ ರೀತಿ ಹೇಳಿಕೆ ನೀಡಿದ್ದಾರೆ ಎಂದು ತಿಳಿದಿಲ್ಲ. ಸಚಿವ ಸಂಪುಟ ಸಭೆಯಲ್ಲೂ ಈ ಬಗ್ಗೆ ಚರ್ಚೆ ನಡೆದಿಲ್ಲ ಎಂದು ಸ್ಪಷ್ಟ ಪಡಿಸಿದ್ದಾರೆ.

ತಮಿಳುನಾಡು ರಾಜ್ಯದಲ್ಲಿ ಉಚಿತವಾಗಿ ಬಟ್ಟೆ ನೀಡುವ ಇಂತಹ ಯೋಜನೆ ಜಾರಿಯಲ್ಲಿದೆ. ಆದರೆ, ರಾಜ್ಯದಲ್ಲಿ ಬಟ್ಟೆಯನ್ನು ಬಡವರಿಗೆ ರಿಯಾಯಿತಿ ದರದಲ್ಲಿ ನೀಡಬೇಕೋ? ಅಥವಾ ಸಂಪೂರ್ಣ ಉಚಿತವಾಗಿ ನೀಡಬೇಕೋ? ಎಂಬ ನಿರ್ಧಾರ ಮಾಡಲಾಗಿಲ್ಲ. ಯೋಜನೆಗೆ ಅಂದಾಜು 100 ಕೋಟಿ ಬೇಕಾಗಬಹುದು ಎಂದು ಸಚಿವ ಬಾಬುರಾವ್‌ ಚಿಂಚನಸೂರ್‌ ಬೆಂಗಳೂರಿನಲ್ಲಿ ಹೇಳಿಕೆ ನೀಡಿದ್ದರು.

English summary
Is the State government re-thinking on its proposed ‘Vastra Bhagya' scheme to provide free clothes to below poverty line (BPL) families from next year? Speaking to reporters on his arrival in Mysuru, Chief Minister Siddaramaiah said the government has "not taken any decision" on such a scheme. When he was apprised on Textiles Minister Baburao Chinchansur's announcement in Bengaluru on Thursday, the CM said he was "not aware" of the matter.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X