ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಿಎಂ ಕುಮಾರಸ್ವಾಮಿ ಹಾಕಿದ ಕಣ್ಣೀರಿಗೆ ಟ್ವಿಟ್ಟಿಗರ ಪ್ರತಿಕ್ರಿಯೆ ನೋಡಿ..

|
Google Oneindia Kannada News

Recommended Video

ಎಚ್ ಡಿ ಕುಮಾರಸ್ವಾಮಿ ಸಭೆಯಲ್ಲಿ ಕಣ್ಣೀರು ಹಾಕಿದ್ದಕ್ಕೆ ಟ್ವಿಟ್ಟರ್ ಪ್ರತಿಕ್ರಿಯೆ ನೋಡಿ | Oneindia Kannada

ಪಕ್ಷದ ಕಚೇರಿಯಲ್ಲಿ ಶನಿವಾರ (ಜುಲೈ 14) ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ, ನಾನು ವಿಷಕಂಠ ಎಂದು ಕಣ್ಣೀರು ಹಾಕಿರುವ ವಿದ್ಯಮಾನವನ್ನು ಇಟ್ಟುಕೊಂಡು ಟ್ವಿಟ್ಟರ್ ನಲ್ಲಿ ವ್ಯಾಪಕ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಬೆಂಗಳೂರು ವಲಯದಲ್ಲಿ ಕುಮಾರಸ್ವಾಮಿ ಹ್ಯಾಷ್ ಟ್ಯಾಗ್ ಟ್ರೆಂಡಿಂಗ್ ನಲ್ಲಿತ್ತು.

ಕಳೆದ ಚುನಾವಣೆಯಲ್ಲೂ ಮತದಾರ ನಮ್ಮ ಮೇಲೆ ವಿಶ್ವಾಸವನ್ನು ಇಡಲಿಲ್ಲ. ನನ್ನ ಸಭೆಗೆ ಜನ ಸೇರುತ್ತಾರೆ, ಆದರೆ ಮತದಾನದ ದಿನ ಬೇರೆ ಪಕ್ಷಕ್ಕೆ ಮತ ಚಲಾಯಿಸುತ್ತಾರೆಂದು ಕುಮಾರಸ್ವಾಮಿ, ಪಕ್ಷದ ಕೇಂದ್ರ ಕಚೇರಿ ಜೆ ಪಿ ಭವನದಲ್ಲಿ ಅಕ್ಷರಸಃ ಕಣ್ಣೀರಿಟ್ಟಿದ್ದರು.

ಕುಮಾರಸ್ವಾಮಿ ಕಣ್ಣೀರು ಸುರಿಸಿದ್ದನ್ನು ನಟನೆ ಎಂದ ಬಿಜೆಪಿ ಕುಮಾರಸ್ವಾಮಿ ಕಣ್ಣೀರು ಸುರಿಸಿದ್ದನ್ನು ನಟನೆ ಎಂದ ಬಿಜೆಪಿ

ಕುಮಾರಸ್ವಾಮಿ ಭಾವೋದ್ವೇಗಕ್ಕೊಳಗಾಗಿ ಕಣ್ಣೀರು ಹಾಕಿದ ಭಾಷಣದ ತುಣುಕು ಸಾಕಷ್ಟು ವೈರಲ್ ಆಗಿ ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗಿದೆ. ಕುಮಾರಸ್ವಾಮಿ ಪರ, ವಿರೋಧ ಹೇಳಿಕೆಗಳು ಸಾಕಷ್ಟು ಹರಿದುಬರುತ್ತಿದೆ. ಟ್ವಿಟ್ಟರ್ ನಲ್ಲೂ, ಕುಮಾರಸ್ವಾಮಿಯವರೇ ಇದೆಲ್ಲಾ ಸಹಿಸಿಕೊಳ್ಳಬೇಕು, ಸಮಾಧಾನ ಮಾಡಿಕೊಳ್ಳಿ ಎಂದು ಒಂದಷ್ಟು ಜನ ಪರವಾಗಿ ಟ್ವೀಟ್ ಮಾಡಿದ್ದಾರೆ.

ಕುಮಾರಸ್ವಾಮಿ ಕಣ್ಣೀರು ಸುರಿಸಿದ್ದನ್ನು ನಟನೆ ಎಂದ ಬಿಜೆಪಿ ಕುಮಾರಸ್ವಾಮಿ ಕಣ್ಣೀರು ಸುರಿಸಿದ್ದನ್ನು ನಟನೆ ಎಂದ ಬಿಜೆಪಿ

ಕುಮಾರಸ್ವಾಮಿ ಅಳೋದು ಹೊಸದೇನಲ್ಲ, ಇದೆಲ್ಲಾ ಬರೀ ನಾಟಕ ಎಂದು ಬಿಜೆಪಿ ಈಗಾಗಲೇ ವ್ಯಂಗ್ಯವಾಡಿದೆ. ಮುಖ್ಯಮಂತ್ರಿಯಾಗಿ ಕಣ್ಣೀರು ಹಾಕುವುದು ಸರಿಯಲ್ಲ ಎನ್ನುವ ಸಣ್ಣನೆಯ ಹತಾಶೆಯೂ ವ್ಯಕ್ತವಾಗಿದೆ. ಕಾಂಗ್ರೆಸ್-ಬಿಜೆಪಿ ನಡುವೆ ಸಮ್ಮಿಶ್ರ ಸರಕಾರದಲ್ಲಿ ಬಿರುಕು ಬಿಟ್ಟಿದೆ ಎಂದು ಕೆಲವು ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ.

ಜನರು ವಿಶ್ವಾಸ ತೋರಲಿಲ್ಲವೆಂದು ನೊಂದು ಕುಮಾರಸ್ವಾಮಿ ಕಣ್ಣೀರುಜನರು ವಿಶ್ವಾಸ ತೋರಲಿಲ್ಲವೆಂದು ನೊಂದು ಕುಮಾರಸ್ವಾಮಿ ಕಣ್ಣೀರು

ಪ್ರಧಾನಮಂತ್ರಿ ಪದವಿ ಬೇಡ ಎಂದು ತೊರೆದು ಬಂದ ದೇವೇಗೌಡರ ಮಗ ನಾನು, ಮನಸ್ಸು ಮಾಡಿದರೆ ಎರಡೇ ನಿಮಿಷದಲ್ಲಿ ಸಿಎಂ ಹುದ್ದೆಗೆ ರಾಜೀನಾಮೆ ನೀಡಬಲ್ಲೆ. ನಾನು ಪಡುತ್ತಿರುವ ನೋವು, ವಿರೋಧಿಗಳಿಗೂ ಬೇಡ ಎಂದು ಜೆಡಿಎಸ್ ಸಭೆಯಲ್ಲಿ ಕುಮಾರಸ್ವಾಮಿ ಕಣ್ಣೀರಿಟ್ಟಿದ್ದರು. ಕೆಲವೊಂದು ಆಯ್ದ ಟ್ವೀಟುಗಳು, ಮುಂದಕ್ಕೆ..

ಲೋಕಸಭೆಯಲ್ಲಿ ವಿರೋಧಪಕ್ಷ ನಾಯಕ ಖರ್ಗೆ ಅಭಿಪ್ರಾಯ

ಲೋಕಸಭೆಯಲ್ಲಿ ವಿರೋಧಪಕ್ಷ ನಾಯಕ ಖರ್ಗೆ ಅಭಿಪ್ರಾಯ

ಸಮಸ್ಯೆಯನ್ನು ಎದುರಿಸಲೇ ಬೇಕಾಗುತ್ತದೆ. ಭಾವೋದ್ವೇಗಕ್ಕೆ ಒಳಗಾಗಿ ಹೇಳಿಕೆ ನೀಡಿದರೆ, ಜಾತ್ಯಾತೀತ ನಂಬಿಕೆಯನ್ನಿಟ್ಟು ಬೆಂಬಲ ಕೊಟ್ಟ ನಂತರ ಜನತೆಗೆ ತಪ್ಪು ಸಂದೇಶ ರವಾನಿಸಿದಂತಾಗುತ್ತದೆ. ಕುಮಾರಸ್ವಾಮಿ ಧೈರ್ಯದಿಂದ ಇಂತಹ ಸನ್ನಿವೇಶವನ್ನು ಎದುರಿಸಬೇಕು ಎಂದು ಲೋಕಸಭೆಯಲ್ಲಿ ವಿರೋಧಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಮೊದಲ ಟ್ರೈಲರ್ ಬಿಡುಗಡೆಯಾಗಿದೆ

ಮೊದಲ ಟ್ರೈಲರ್ ಬಿಡುಗಡೆಯಾಗಿದೆ

ಮಹಾಮೈತ್ರಿಕೂಟದ ಮೊದಲ ಟ್ರೈಲರ್ ಬಿಡುಗಡೆಯಾಗಿದೆ, ಸಮ್ಮಿಶ್ರ ಸರಕಾರದ ಬಗ್ಗೆ ಕುಮಾರಸ್ವಾಮಿ ಅಪಸ್ವರ ಎತ್ತಿದ್ದಾರೆ, ಜೊತೆಗೆ ಸಿಎಂ ಆಗಿರುವುದಕ್ಕೆ ವಿಷಾದ ವ್ಯಕ್ತಪಡಿಸಿದ್ದಾರೆ. ಸಿನಿಮಾ ಇನ್ನೂ ರಿಲೀಸ್ ಆಗಬೇಕಿದೆ, 2019ರಲ್ಲಿ ಬಿಡುಗಡೆಯಾಗಲಿದೆ.

ನಮ್ಮ ದೇಶ ಪ್ರತಿಭಾನ್ವಿತ ನಟರನ್ನು ಪರಿಚಯಿಸಿದೆ

ನಮ್ಮ ದೇಶ ಪ್ರತಿಭಾನ್ವಿತ ನಟರನ್ನು ಪರಿಚಯಿಸಿದೆ

ಕುಮಾರಸ್ವಾಮಿಯವರಿಗೆ ದಕ್ಕಿದ್ದು 38 ಸೀಟು ಅದರಲ್ಲಿ 28 ಕ್ಷೇತ್ರ ಹಳೇ ಮೈಸೂರು ಭಾಗದಿಂದ, ಕರ್ನಾಟಕದ ಇತರ ಭಾಗದಿಂದ ಹತ್ತೇ ಸೀಟು. ಕರ್ನಾಟಕದ ಜನರಿಗಾಗಿ ಮೈತ್ರಿ ಮುರಿಯಿರಿ. ನಮ್ಮ ದೇಶ ಪ್ರತಿಭಾನ್ವಿತ ನಟರನ್ನು ಪರಿಚಯಿಸಿದೆ, ಅಂತದಕ್ಕೆ ಕುಮಾರಸ್ವಾಮಿ ಕೂಡಾ ಸೇರ್ಪಡೆ.

ಕರ್ನಾಟಕದ ಮಳೆ ಮತ್ತು ನಿಮ್ಮ ಕಣ್ಣೀರು ನಗು ತರಿಸುತ್ತದೆ

ಕರ್ನಾಟಕದ ಮಳೆ ಮತ್ತು ನಿಮ್ಮ ಕಣ್ಣೀರು ನಗು ತರಿಸುತ್ತದೆ

ಮುಖ್ಯಮಂತ್ರಿ ಆಗದಿದ್ದರೂ ಕಣ್ಣೀರು ಹಾಕುತ್ತಾರೆ, ಆದರೂ ಕಣ್ಣೀರು ಹಾಕುತ್ತಾರೆ, ತುಂಬಾ ಗೊಂದಲದ ಮನುಷ್ಯ. ಕರ್ನಾಟಕದ ಮಳೆ ಮತ್ತು ನಿಮ್ಮ ಕಣ್ಣೀರು ನಗು ತರಿಸುತ್ತದೆ. ಕುಮಾರಸ್ವಾಮಿ ಜನರನ್ನು ಮೋಸ ಮಾಡಲು ನೋಡುತ್ತಿದ್ದಾರೆ, ಸಿಎಂ ಕುರ್ಚಿಯಿಂದ ಕೆಳಗಿಳಿಯಿರಿ.

2019ರ ಚುನಾವಣೆಗೆ ಇದೊಂದು ಪಾಠ

2019ರ ಚುನಾವಣೆಗೆ ಇದೊಂದು ಪಾಠ

ವಿರೋಧ ಪಕ್ಷದ ಒಗ್ಗಟ್ಟು ಅಂದರೆ ಇದೇನಾ, ಒಂದು ರಾಜ್ಯವನ್ನು ಮುನ್ನಡೆಸಲಾಗದ ಇವರು, ಇಪ್ಪತ್ತು ಪಕ್ಷದೊಂದಿಗೆ ಲೋಕಸಭಾ ಚುನಾವಣೆ ಎದುರಿಸುತ್ತಾರಂತೆ, 2019ರ ಚುನಾವಣೆಗೆ ಇದೊಂದು ಪಾಠ. ಕಳೆದ ಚುನಾವಣೆಯಲ್ಲಿ ಬಹುಮತ ಇಲ್ಲದಿದ್ದರೂ, ಯಾಕೆ ಸಿಎಂ ಆಗಬೇಕಿತ್ತು. ಕಾಂಗ್ರೆಸ್ಸಿಗೆ ಶರಣಾಗಿದ್ದು ತಪ್ಪಲ್ಲವೇ..

English summary
Less than 2 months after taking charge of government in Karnataka, CM HD Kumaraswamy broke down at party meeting. Trailer is out, cinema will release on 2018, CM has to face all these issues - Twitter reaction.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X