ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತಮ್ಮನ್ನು ಕಾಂಗ್ರೆಸ್ ಕ್ಲರ್ಕ್ ಎಂದ ಮೋದಿಗೆ ಕುಮಾರಸ್ವಾಮಿ ಹೇಳಿದ್ದೇನು?

|
Google Oneindia Kannada News

ಬೆಂಗಳೂರು, ಜನವರಿ 12: ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರನ್ನು ಕಾಂಗ್ರೆಸ್ ತನ್ನ ಕ್ಲರ್ಕ್‌ನಂತೆ ಮಾಡಿಕೊಂಡಿದೆ ಎಂಬ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕುಮಾರಸ್ವಾಮಿ ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದಾರೆ.

ಮೋದಿ ಹೇಳಿಕೆ: ಅನುಕೂಲಕ್ಕೆ ತಕ್ಕಂತೆ ವ್ಯಾಖ್ಯಾನ ಎಂದ ದೇವೇಗೌಡ ಮೋದಿ ಹೇಳಿಕೆ: ಅನುಕೂಲಕ್ಕೆ ತಕ್ಕಂತೆ ವ್ಯಾಖ್ಯಾನ ಎಂದ ದೇವೇಗೌಡ

ನಾನು ಎಂದಿಗೂ ನೀಡದ ಹೇಳಿಕೆ ಬಗ್ಗೆ ಮಾನ್ಯ ಪ್ರಧಾನಿ ನರೇಂದ್ರ ಮೋದಿ ಅವರ ಪ್ರತಿಕ್ರಿಯೆ ನನಗೆ ತಮಾಷೆ ಎನಿಸಿದೆ. ರೈತರ ಸಾಲದ ಕುರಿತಾದ ಬಳಿಕ ಅವರು ಈ ರೀತಿ ಸುಳ್ಳು ಮಾಹಿತಿ/ಹೇಳಿಕೆಗೆ ಪ್ರತಿಕ್ರಿಯಿಸುತ್ತಿರುವುದು ಇದು ಎರಡನೆಯ ಬಾರಿ ಎಂದು ಕುಮಾರಸ್ವಾಮಿ ಹೇಳಿದ್ದಾರೆ.

ಸಿಎಂ ಕುಮಾರಸ್ವಾಮಿಯನ್ನು ಕ್ಲರ್ಕ್‌ ಮಾಡಿಕೊಂಡಿದೆ ಕಾಂಗ್ರೆಸ್: ಮೋದಿಸಿಎಂ ಕುಮಾರಸ್ವಾಮಿಯನ್ನು ಕ್ಲರ್ಕ್‌ ಮಾಡಿಕೊಂಡಿದೆ ಕಾಂಗ್ರೆಸ್: ಮೋದಿ

ಈ ಸಂಬಂಧ ಟ್ವೀಟ್ ಮಾಡಿರುವ ಅವರು, ಇಂತಹ ಹೇಳಿಕೆಗಳು ಸಮ್ಮಿಶ್ರ ಸರ್ಕಾರದ ಅಭಿವೃದ್ಧಿ ಗುರಿಯನ್ನು ಹಾಳು ಮಾಡಲಾರವು ಎಂದು ಮೋದಿ ಅವರೆಡೆಗೆ ಬಾಣ ತೂರಿಸಿದ್ದಾರೆ.

ಇದೇ ಹೇಳಿಕೆ ವಿಚಾರವಾಗಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡ ವಾಗ್ದಾಳಿ ನಡೆಸಿದ್ದಾರೆ.

Karnataka cm clerk modi statement hd kumaraswamy siddaramaiah reactions

ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ಸಮ್ಮಿಶ್ರ ಸರ್ಕಾರವು ಕಾಂಗ್ರೆಸ್ ಮತ್ತು ಜೆಡಿಎಸ್‌ಗೆ ಸಂಬಂಧಿಸಿದ ವಿಚಾರ. ಪ್ರಧಾನಿ ಮೋದಿ ಅವರಿಗೆ ಇದಕ್ಕೆ ಸಂಬಂಧವಿಲ್ಲ. ಅವರು ಯಾರು ನಮಗೆ ಹೇಳುವುದಕ್ಕೆ? ನಮ್ಮ ವಿರುದ್ಧ ಜೆಡಿಎಸ್‌ಅನ್ನು ಎತ್ತಿಕಟ್ಟುವ ಕೆಲಸ ಮಾಡುತ್ಇದ್ದಾರೆ

ಆಡಳಿತ ನನ್ನ ಕೈಯಲಿಲ್ಲ, ಕಾಂಗ್ರೆಸ್‌ ಕೈಯಲ್ಲಿದೆ: ಕುಮಾರಸ್ವಾಮಿ ಅಸಮಾಧಾನಆಡಳಿತ ನನ್ನ ಕೈಯಲಿಲ್ಲ, ಕಾಂಗ್ರೆಸ್‌ ಕೈಯಲ್ಲಿದೆ: ಕುಮಾರಸ್ವಾಮಿ ಅಸಮಾಧಾನ

ಹುಬ್ಬಳ್ಳಿಯಲ್ಲಿ ಕಜಾಂಗ್ರೆಸವ ಜೆಡಿಎಸ್ ಸಂಬಧಿಸದಿ ವಿಚಾರ, ಮೋದುಎಗ ಸಂಬಂಧವಿಲ್ಲ. ಅವರು ಯಾರು ಬಮಗೆ ಹೇಳೋದಕ್ಕೆ. ನಮ್ಮ ವಿರುದ್ಧ ಜೆಡಿಎಸ್ ಎತ್ತಿಕಟ್ಟುವ ಕೆಲಸ ಮಾಡ್ತಿದ್ದಾರೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

ರಾಜ್ಯದಲ್ಲಿ ಮೈತ್ರಿ ಸರ್ಕಾರ ಸರಿಯಾಗಿಯೇ ನಡೆಯುತ್ತಿದೆ. ಅವರು ನಮ್ಮ ಜೊತೆ ಮೈತ್ರಿ ಮಾಡಿಕೊಂಡಿದ್ದಾರಾ? ಅವರಿಗೆ ಸರ್ಕಾರದ ಬಗ್ಗೆ ಏನೇನೂ ಗೊತ್ತಿಲ್ಲ. ರಾಜಕೀಯಕ್ಕಾಗಿ ಹೀಗೆ ಹೇಳುತ್ತಿದ್ದಾರೆ ಎಂದು ಹರಿಹಾಯ್ದರು.

English summary
Karnataka Cheif Minister HD Kumaraswamy and Ex Chief Minister Siddaramaiah reacted for Prime Minister Narendra Modi's statement of clerk cm of congress. Such statements won't deter our coalition government from the development agenda kumaraswamy said.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X