ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಿಎಂ ಬೊಮ್ಮಾಯಿ ಸಂಪುಟ ವಿಸ್ತರಣೆಗೆ ಮುಹೂರ್ತ ನಿಗದಿ; ಈ ಮೂವರಿಗೆ ಮಂತ್ರಿಸ್ಥಾನ ಖಚಿತ?

|
Google Oneindia Kannada News

ಬೆಂಗಳೂರು, ಆ. 24: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಚಿವ ಸಂಪುಟ ವಿಸ್ತರಣೆಗೆ ಮುಹೂರ್ತ ಫಿಕ್ಸ್ ಆಗಿದೆಯಾ? ಅಂಥದ್ದೊಂದು ಬೆಳವಣಿಗೆ ನಡೆದಿದೆ ಎಂಬ ಮಾಹಿತಿ ಬರುತ್ತಿದೆ. ಮೊದಲ ಹಂತದಲ್ಲಿಯೇ ಬಹುತೇಕ ಮಂತ್ರಿಸ್ಥಾನಗಳನ್ನು ಹೈಕಮಾಂಡ್ ಭರ್ತಿ ಮಾಡಿದೆ. ಆದರೂ ಯಾವುದಕ್ಕೂ ಇರಲಿ ಅಂತಾ ನಾಲ್ಕು ಮಂತ್ರಿ ಪದವಿಗಳನ್ನು ಖಾಲಿ ಬಿಡಲಾಗಿತ್ತು. ಇದೀಗ ಅವುಗಳನ್ನೂ ಕೂಡ ಭರ್ತಿ ಮಾಡಲು ಹೈಕಮಾಂಡ್ ತೀರ್ಮಾನ ಮಾಡಿದೆ. ಬಿಜೆಪಿಯಲ್ಲಿನ ಅಸಮಾಧಾನ ತಣಿದಿರುವುದು ಅದಕ್ಕೆ ಕಾರಣ ಎಂಬ ಮಾಹಿತಿ ಬಂದಿದೆ.

ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬೆಂಗಳೂರಿನಲ್ಲಿ ಮಾತನಾಡಿದ್ದಾರೆ. ಮುಖ್ಯಮಂತ್ರಿ ಬದಲಾವಣೆ ಸಂದರ್ಭದಲ್ಲಿ ಇನ್ನೇನು ಮುಖ್ಯಮಂತ್ರಿಯಾದರು ಎಂಬುದವರಿಗೆ ಮಂತ್ರಿಸ್ಥಾನವನ್ನೂ ಹೈಕಮಾಂಡ್ ನಿರಾಕರಿಸಿತ್ತು. ಅದಕ್ಕೆ ಮಾಜಿ ಸಿಎಂ ಯಡಿಯೂರಪ್ಪ ಅವರ ಒತ್ತಡ ಕಾರಣ ಎನ್ನಲಾಗಿತ್ತು.

ಇಬ್ಬರು ಮಾಜಿ, ಒಬ್ಬರು ಹಾಲೀ ಸಚಿವರ ನಡೆ ನಿಗೂಢ: ಬೊಮ್ಮಾಯಿಗೆ ಹೈಕಮಾಂಡ್ ರಕ್ಷೆಯೇ ಆನೆಬಲಇಬ್ಬರು ಮಾಜಿ, ಒಬ್ಬರು ಹಾಲೀ ಸಚಿವರ ನಡೆ ನಿಗೂಢ: ಬೊಮ್ಮಾಯಿಗೆ ಹೈಕಮಾಂಡ್ ರಕ್ಷೆಯೇ ಆನೆಬಲ

ಇದೀಗ ಉಳಿದಿರುವ ನಾಲ್ಕು ಸಚಿವ ಸ್ಥಾನಗಳ ಭರ್ತಿಗೆ ಹೈಕಮಾಂಡ್ ತೀರ್ಮಾನ ಮಾಡಿದೆ ಎಂಬ ಮಾಹಿತಿ ಬಂದಿದೆ. ಯಾವಾಗ ಸಿಎಂ ಬೊಮ್ಮಾಯಿ ಅವರ ಸಚಿವ ಸಂಪುಟ ವಿಸ್ತರಣೆ ಆಗಲಿದೆ? ಯಾರು ಹೊಸದಾಗಿ ಸಂಪುಟ ಸೇರಿಕೊಳ್ಳಲಿದ್ದಾರೆ? ಮುಂದಿದೆ ಮಾಹಿತಿ!

ಮಾಜಿ ಸಿಎಂ ಯಡಿಯೂರಪ್ಪ ವಿರೋಧಿ ಬಣಕ್ಕೆ ಅವಕಾಶ?

ಮಾಜಿ ಸಿಎಂ ಯಡಿಯೂರಪ್ಪ ವಿರೋಧಿ ಬಣಕ್ಕೆ ಅವಕಾಶ?

ರಾಜ್ಯ ಬಿಜೆಪಿ ನಾಯಕತ್ವ ಬದಲಾವಣೆ ಸಂದರ್ಭದಲ್ಲಿ ಮಾಜಿ ಸಿಎಂ ಯಡಿಯೂರಪ್ಪ ಬಣದಲ್ಲಿದ್ದವರಿಗೆ ಮಂತ್ರಿ ಸ್ಥಾನ ಸಿಕ್ಕಿರಲಿಲ್ಲ. ಅವರಲ್ಲಿಯೂ ಪ್ರಮುಖವಾಗಿ ಮಾಜಿ ಸಚಿವ ಸಿ.ಪಿ. ಯೋಗೇಶ್ವರ್, ಸಿಎಂ ಹುದ್ದೆ ರೇಸ್‌ನಲ್ಲಿದ್ದ ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಹುಬ್ಬಳ್ಳಿ-ಧಾರವಾಡ ಪಶ್ಚಿಮ ವಿಧಾನಸಭಾ ಕ್ಷೇತ್ರದ ಶಾಸಕ ಅರವಿಂದ ಬೆಲ್ಲದ್ ಅವರು ಕನಿಷ್ಠ ಮಂತ್ರಿಯೂ ಆಗಿರಲಿಲ್ಲ. ಅದಕ್ಕೆ ಯಡಿಯೂರಪ್ಪ ಅವರೇ ಕಾರಣ ಎಂಬ ಮಾತುಗಳು ಬಿಜೆಪಿ ವಲಯದಿಂದಲೇ ಕೇಳಿ ಬಂದಿದ್ದವು. ಜೊತೆಗೆ ಹೈಕಮಾಂಡ್ ಕೂಡ ನಾಯಕತ್ವ ಬದಲಾವಣೆ ಸಂದರ್ಭದಲ್ಲಿ ಯಡಿಯೂರಪ್ಪ ವಿರೋಧ ಕಟ್ಟಿಕೊಳ್ಳಲು ಬಯಲಿಸಿರಲಿಲ್ಲ. ಹೀಗಾಗಿ ನಾಲ್ಕು ಸ್ಥಾನಗಳನ್ನು ಕಾಯ್ದರಿಸಿ ಸಂಪುಟ ವಿಸ್ತರಣೆಗೆ ಹೈಕಮಾಂಡ್ ಒಪ್ಪಿಗೆ ಕೊಟ್ಟಿತ್ತು.

ಸುಳಿವು ಕೊಟ್ಟ ಸಿಎಂ ಬಸವರಾಜ ಬೊಮ್ಮಾಯಿ!

ಸುಳಿವು ಕೊಟ್ಟ ಸಿಎಂ ಬಸವರಾಜ ಬೊಮ್ಮಾಯಿ!

ಮಂಗಳವಾರ ಬೆಂಗಳೂರಿನಲ್ಲಿ ಮಾತನಾಡಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಂಪುಟ ವಿಸ್ತರಣೆ ಸುಳಿವು ಕೊಟ್ಟಿದ್ದಾರೆ. ಹಲವು ವಿಚಾರಗಳನ್ನು ಇಟ್ಟುಕೊಂಡು ಕೇಂದ್ರದ ವರಿಷ್ಠರನ್ನು, ಸಚಿವರನ್ನು ಭೇಟಿ ಮಾಡಲು ನಾಳೆ ಅಂದರೆ ಬುಧವಾರ ಸಂಜೆ ದೆಹಲಿಗೆ ತೆರಳುತ್ತಿದ್ದೇನೆ. ಗುರುವಾರ ವರಿಷ್ಠರ ಭೇಟಿ ಸಂದರ್ಭದಲ್ಲಿ ಉಳಿದ ನಾಲ್ಕು ಮಂತ್ರಿ ಸ್ಥಾನಗಳನ್ನು ಭರ್ತಿ ಬಗ್ಗೆಯೂ ಚರ್ಚೆ ಮಾಡುತ್ತೇನೆ ಎಂದು ಹೇಳಿದ್ದಾರೆ. ಹೀಗಾಗಿ ಸೆಪ್ಟಂಬರ್ ತಿಂಗಳಿನಲ್ಲಿ ಸಿಎಂ ಬೊಮ್ಮಾಯಿ ಸಂಪುಟಕ್ಕೆ ಉಳಿದ ನಾಲ್ಕು ಸಚಿವರು ಸೇರುವುದು ಖಚಿವಾಗಿದೆ. ಜೊತೆಗೆ ಮಾಜಿ ಸಚಿವ ಸಿ.ಪಿ. ಯೋಗೇಶ್ವರ್ ನಡೆಯೂ ಸಂಪುಟ ವಿಸ್ತರಣೆ ಮುನ್ಸೂಚನೆ ಕೊಟ್ಟಿದೆ. ರಾಜ್ಯ ಬಿಜೆಪಿ ಅಧ್ಯಕ್ಷ ನಳೀನ್ ಕುಮಾರ್ ಕಟೀಲ್ ಕೂಡ ಕಲಬುರಗಿಯಲ್ಲಿ ಸಂಪುಟ ವಿಸ್ತರಣೆ ಕುರಿತು ಮಾತನಾಡಿದ್ದಾರೆ.

ಕಲಬುರಗಿಯಲ್ಲಿ ಕಟೀಲ್ ಕೊಟ್ಟ ಸುಳಿವು!

ಕಲಬುರಗಿಯಲ್ಲಿ ಮಾತನಾಡಿರುವ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, "ಸಂಪುಟ ವಿಸ್ತರಣೆ ಸಂದರ್ಭದಲ್ಲಿ ಕಲಬುರಗಿ ಜಿಲ್ಲೆಗೆ ಮಂತ್ರಿಸ್ಥಾನ ಕೊಡಲಾಗುತ್ತದೆ. ಇನ್ನೂ ನಾಲ್ಕು ಸಚಿವ ಸ್ಥಾನಗಳು ಖಾಲಿ ಇವೆ. ಆ ನಾಲ್ಕು ಸ್ಥಾನಗಳಲ್ಲಿ ಕಲಬುರಗಿ ಜಿಲ್ಲೆಗೆ ಸಚಿವ ಸ್ಥಾನ ನೀಡಲಾಗುವುದು. ಶೀಘ್ರ ರಾಜ್ಯ ಸಚಿವ ಸಂಪುಟ ವಿಸ್ತರಣೆ ಆಗಲಿದೆ. ಅದನ್ನು ಸಿಎಂ ಬೊಮ್ಮಾಯಿ ಮಾಡಲಿದ್ದಾರೆ" ಎಂದಿದ್ದಾರೆ. ಹೀಗಾಗಿ ಈ ಸಲ ಸಚಿವ ಸ್ಥಾನ ವಂಚಿತಗೊಂಡಿದ್ದ ಯಡಿಯೂರಪ್ಪ ವಿರೋಧಿ ಬಣದವರಿಗೆ ಮಂತ್ರಿಸ್ಥಾನ ಸಿಗುವ ಸಾಧ್ಯತೆಗಳು ಹೆಚ್ಚಾಗಿವೆ.

Recommended Video

ಇವತ್ತಿಗೂ ನನಗೆ ನೆಹರೂ,ಇಂದಿರಾ ಗಾಂಧಿ ಅಂದ್ರೆ ಇಷ್ಟ | Prathap Simha Part 2 | Oneindia Kannada
ಈ ಮೂವರು ಸಂಪುಟ ಸೇರುವುದು ಪಕ್ಕಾ!

ಈ ಮೂವರು ಸಂಪುಟ ಸೇರುವುದು ಪಕ್ಕಾ!

ಮಾಜಿ ಸಚಿವ ಸಿ.ಪಿ. ಯೋಗೇಶ್ವರ್, ಅರವಿಂದ ಬೆಲ್ಲದ್, ಬಸನಗೌಡ ಪಾಟೀಲ್ ಯತ್ನಾಳ್ ಸೇರಿದಂತೆ ನಾಲ್ವರು ಸಿಎಂ ಬೊಮ್ಮಾಯಿ ಸಂಪುಟ ಸೇರುವುದು ಖಚಿತವಾಗಿದೆ. ಈ ಮೂವರು ಸಂಪುಟ ಸೇರಲು ಮಾಜಿ ಸಿಎಂ ಯಡಿಯೂರಪ್ಪ ಅವರ ತೀವ್ರ ವಿರೋಧವಿದೆ ಎಂಬ ಮಾತುಗಳೂ ಕೇಳಿಬರುತ್ತಿವೆ. ಹೈಕಮಾಂಡ್ ನಿರ್ಧಾರದ ಮೇಲೆ ರಾಜ್ಯ ಬಿಜೆಪಿ ಸರ್ಕಾರದ ಸಚಿವ ಸಂಪುಟ ವಿಸ್ತರಣೆ ನಿರ್ಧಾರವಾಗಲಿದೆ. ಯಡಿಯೂರಪ್ಪ ಶಾಡೊ ಸಿಎಂ ಎಂಬ ಆರೋಪದಿಂದ ಹೊರ ಬರಲು ಈ ಸಂಪುಟ ವಿಸ್ತರಣೆ ಬಸವರಾಜ ಬೊಮ್ಮಾಯಿ ಅವರಿಗೆ ಸಹಾಯಕವಾಗಲಿದೆ ಎನ್ನಲಾಗುತ್ತಿದೆ.

English summary
Karnataka CM Basavaraj Bommai cabinet expansion could likely happen next week for the remaining minister posts. Know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X