• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

LIVE: ಸ್ಥಳೀಯ ಸಂಸ್ಥೆ ಫಲಿತಾಂಶ: ಪಕ್ಷಗಳ ಬಲಾಬಲ: ಕಾಂಗ್ರೆಸ್ 982 , ಬಿಜೆಪಿ 927, ಜೆಡಿಎಸ್ 375

|

ಬೆಂಗಳೂರು, ಸೆಪ್ಟೆಂಬರ್ 03: ಕುತೂಹಲ ಕೆರಳಿಸಿರುವ ಸ್ಥಳೀಯ ಸಂಸ್ಥೆಗಳ ಚುನಾವಣಾ ಫಲಿತಾಂಶ ಇಂದು(ಸೆ.03) ಹೊರಬಿದ್ದಿದೆ.

ಆಗಸ್ಟ್ 31 ರಂದು 105 ಸ್ಥಳೀಯ ಸಂಸ್ಥೆಗಳಲ್ಲಿ ಶೇ.67 ರಷ್ಟು ಮತದಾನ ದಾಖಲಾಗಿತ್ತು.

ಇಂದು ಬೆಳಿಗ್ಗೆ 8 ಗಂಟೆಯಿಂದ ಮತಎಣಿಕೆ ಆರಂಭವಾಗಿದ್ದು, ಮಧ್ಯಾಹ್ನ 2 ಗಂಟೆಯ ಹೊತ್ತಿಗೆ ಸಂಪೂರ್ಣ ಫಲಿತಾಂಶದ ಚಿತ್ರಣ ಸಿಗಲಿದೆ.

Karnataka Civic Polls results: LIVE Updates

ರಾಜ್ಯದಲ್ಲಿ ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರ್ಕಾರ ಅಸ್ತಿತ್ವಕ್ಕೆ ಬಂದ ನಂತರ ನಡೆಯುತ್ತಿರುವ ಮೊದಲ ಚುನಾವಣೆ ಇದಾಗಿರುವುದರಿಂದ ಮತ್ತಷ್ಟು ಕುತೂಹಲ ಹೆಚ್ಚಿದೆ.

ಸ್ಥಳೀಯ ಸಂಸ್ಥೆ ಚುನಾವಣೆ ಮತಎಣಿಕೆಗೆ ಸಂಬಂಧಿಸಿದಂತೆ ಕ್ಷಣಕ್ಷಣದ ಮಾಹಿತಿಯನ್ನು ಒನ್ ಇಂಡಿಯಾ ಕನ್ನಡ ನೀಡಲಿದೆ.

Newest First Oldest First
3:46 PM, 3 Sep
ಮೂರು ಮಹಾನಗರ ಪಾಲಿಕೆಗಳಲ್ಲಿ ಶಿವಮೊಗ್ಗ ಬಿಜೆಪಿ ತೆಕ್ಕೆಗೆ ಒಲಿದಿದ್ದರೆ, ಮೈಸೂರು ಮತ್ತು ತುಮಕೂರುಗಳಲ್ಲಿ ಅತಂತ್ರ ಪರಿಸ್ಥಿತಿ ತಲೆದೂರಿದೆ.
2:58 PM, 3 Sep
ಪಕ್ಷಗಳ ಬಲಾಬಲ: ಕಾಂಗ್ರೆಸ್ 982 , ಬಿಜೆಪಿ 927, ಜೆಡಿಎಸ್ 375 , ಬಿಎಸ್ಪಿ 13, ಇತರರು 363
2:52 PM, 3 Sep
ತುಮಕೂರಿನಲ್ಲಿ ಕಾಂಗ್ರೆಸ್ ಅಭ್ಯರ್ಥಿ ಇನಾಯತುಲ್ಲಾಹ್ ಖಾನ್ ಅವರ ಗೆಲುವಿನ ಸಂಭ್ರಮಾಚರಣೆ ವೇಳೆ acid ದಾಳಿ. 8 ಜನರಿಗೆ ಗಾಯ
1:59 PM, 3 Sep
ಕೊಪ್ಪಳ ನಗರದ 19 ನೇ ವಾರ್ಡ್ ನಲ್ಲಿ ಜೆಡಿಎಸ್ ಕಾರ್ಯಕರ್ತನ ತಾಯಿಗೆ ಚೂರಿಯಿಂದ ಇರಿದ ಘಟನೆ ವರದಿಯಾಗಿದೆ.
1:56 PM, 3 Sep
ಜನ‌ ಅವರ ತೀರ್ಪು ನೀಡಿದ್ದಾರೆ. ಉಳ್ಳಾಲದಲ್ಲಿ ನಿರೀಕ್ಷಿಸಿದಷ್ಟು ಸ್ಥಾನ ಬಂದಿಲ್ಲ. ಹಿನ್ನಡೆಯ ಬಗ್ಗೆ ಪಕ್ಷದಲ್ಲಿ ಚರ್ಚೆ ಮಾಡ್ತೇವೆ. ಹಿನ್ನಡೆಯನ್ನು ಗಂಭೀರವಾಗಿ ಪರಿಗಣಿಸುತ್ತೇವೆ. ಅಧಿಕಾರ ಇಲ್ಲದಿದ್ರೂ ಚಿಂತೆ ಇಲ್ಲ. SDPI ಜೊತೆ ಮೈತ್ರಿ ಮಾಡಿಕೊಳ್ಳೋದಿಲ್ಲ. ಕಾಂಗ್ರೆಸ್ ಸಿದ್ಧಾಂತ ಒಪ್ಪುವವರ ಜೊತೆ ಮೈತ್ರಿ ಮಾಡ್ತೇವೆ: ಯು ಟಿ ಖಾದರ್, ಕಾಂಗ್ರೆಸ್ ಮುಖಂಡ
1:54 PM, 3 Sep
ಮಹಾನಗರ ಪಾಲಿಕೆ ಫಲಿತಾಂಶ: ತುಮಕೂರಿನಲ್ಲಿ ಬಿಜೆಪಿ 12 ಕಾಂಗ್ರೆಸ್ 10 ಜೆಡಿಎಸ್ 10 ಇತರರು 3
1:53 PM, 3 Sep
ಮಹಾನಗರ ಪಾಲಿಕೆ ಫಲಿತಾಂಶ: ಮೈಸೂರಿನಲ್ಲಿ ಬಿಜೆಪಿ 22, ಕಾಂಗ್ರೆಸ್ 19 ಜೆಡಿಎಸ್ 18 ಇತರರು 6
1:51 PM, 3 Sep
ಮಹಾನಗರ ಪಾಲಿಕೆ ಫಲಿತಾಂಶ: ಶಿವಮೊಗ್ಗದಲ್ಲಿ ಬಿಜೆಪಿ 21, ಕಾಂಗ್ರೆಸ್ 7 ಜೆಡಿಎಸ್ 1 ಇತರರು 6
1:40 PM, 3 Sep
ಜಮಖಂಡಿ ನಗರಸಭೆಯಲ್ಲಿ 20 ಸ್ಥಾನಗಳಲ್ಲಿ ಕಾಂಗ್ರೆಸ್ ಗೆ ಭರ್ಜರಿ ಜಯ
1:39 PM, 3 Sep
ಮುಗಿಲುಮುಟ್ಟಿದ ಬೆಂಬಲಿಗರ ಸಂಭ್ರಮ. ಆಯಾ ಪಕ್ಷ ಗೆದ್ದ ಕಡೆಗಳಲ್ಲಿ ಆಯಾ ಪಕ್ಷದ ಬೆಂಬಲಿಗರು ಸಂಭ್ರಮ ಆಚರಿಸುತ್ತಿದ್ದಾರೆ.
1:07 PM, 3 Sep
ಹಾಸನ ನಗರಸಭೆಯ 35 ಸ್ಥಾನಗಳಲ್ಲಿ ಜೆಡಿಎಸ್ 17 ಸ್ಥಾನ ಗೆದ್ದರೆ ಬಿಜೆಪಿ 13 ಸ್ಥಾನ ಗೆದ್ದು ದಾಖಲೆ ಬರೆಸಿದೆ. ಈ ಮೊದಲು ಒಂದೇ ಒಂದು ಸ್ಥಾನ ಗೆದ್ದಿದ್ದ ಬಿಜೆಪಿ 13 ಸ್ಥಾನಗಳಿಗೆ ಜಿಗಿದಿದೆ.
1:01 PM, 3 Sep
ಮೈಸೂರು ಮಹಾನಗರ ಪಾಲಿಕೆ ಅತಂತ್ರ: ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸಾಧ್ಯತೆ
12:58 PM, 3 Sep
ಗೋಕಾಕ ನಗರಸಭೆಯ 31 ವಾರ್ಡ್ ಗಳಲ್ಲಿ ಪಕ್ಷೇತರ ಅಭ್ಯರ್ಥಿಗಳಿಗೆ ಜಯ. ರಾಷ್ಟ್ರೀಯ ಪಕ್ಷಗಳ ಶೂನ್ಯ ಸಾಧನೆ!
12:41 PM, 3 Sep
ಕಾಂಗ್ರೆಸ್ ಕಳೆದ ಸಲಕ್ಕಿಂತ ಕಡಿಮೆ ಸ್ಥಾನಗಳಲ್ಲಿ ಗೆಲುವು ಸಾಧಿಸಿದೆ. ಜೆಡಿಎಸ್ ಹೀನಾಯ ಸ್ಥಿತಿಗೆ ತಲುಪಿದೆ. ಆಡಳಿತ ಪಕ್ಷಕ್ಕೆ ಇದು ಜನರ ಎಚ್ಚರಿಕೆ: ಆರ್ ಅಶೋಕ್, ಬಿಜೆಪಿ ಮುಖಂಡ
12:19 PM, 3 Sep
ಇದುವರೆಗೆ 2664 ಸ್ಥಾನಗಳಲ್ಲಿ 2267 ಸ್ಥಾನಗಳ ಫಲಿತಾಂಶ ಪ್ರಕಟ: ಪಕ್ಷಗಳ ಬಲಾಬಲ: ಕಾಂಗ್ರೆಸ್ 846, ಬಿಜೆಪಿ 788 ಜೆಡಿಎಸ್ 307, ಇತರರು 277
12:09 PM, 3 Sep
ಮೈತ್ರಿ ಸರ್ಕಾರವಿದ್ದಿದ್ದರಿಂದ ನಿರೀಕ್ಷಿತ ಗೆಲುವು ಸಾಧ್ಯವಾಗಲಿಲ್ಲ- ಬಿ ಎಸ್ ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ
12:08 PM, 3 Sep
ರಾಜ್ಯದಲ್ಲಿ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರ ಅಸ್ತಿತ್ವದಲ್ಲಿದ್ದರೂ ಮೈಸೂರು ಮಹಾನಗರ ಪಾಲಿಕೆಯಲ್ಲಿ ಬಿಜೆಪಿ ಹಿಂದೆಂದಿಗಿಂತಲೂ ಹೆಚ್ಚು ಸ್ಥಾನ ಗೆದ್ದಿರುವುದು (22) ಸಾಧನೆಯೇ ಸರಿ. ನಮ್ಮನ್ನು ಗೆಲ್ಲಿಸಿದ ಮೈಸೂರಿನ ಸಮಸ್ತ ಜನತೆಗೆ ಧನ್ಯವಾದಗಳು- ಪ್ರತಾಪ್ ಸಿಂಹ, ಕೊಡಗು-ಮೈಸೂರು ಸಂಸದ
11:25 AM, 3 Sep
ಇದುವರೆಗೆ 2664 ಸ್ಥಾನಗಳಲ್ಲಿ 1412 ಸ್ಥಾನಗಳ ಫಲಿತಾಂಶ ಪ್ರಕಟ: ಪಕ್ಷಗಳ ಬಲಾಬಲ: ಕಾಂಗ್ರೆಸ್ 560, ಬಿಜೆಪಿ 499, ಜೆಡಿಎಸ್ 178, ಇತರರು 150
11:22 AM, 3 Sep
ಆಳಂದ ಪುರಸಭೆ: ಬಿಜೆಪಿ 13 ಕಾಂಗ್ರೆಸ್ 13 ಜೆಡಿಎಸ್ 01
11:20 AM, 3 Sep
ಸಿಂಧನೂರು ನಗರಸಭೆ ಫಲಿತಾಂಶ, ಕಾಂಗ್ರೆಸ್ಸಿಗೆ 20, ಜೆಡಿಎಸ್ ಗೆ 11 ವಾರ್ಡ್ ಗಳಲ್ಲಿ ಜಯ
11:14 AM, 3 Sep
ಮೈಸೂರು ಮಹಾನಗರ ಪಾಲಿಕೆಯಲ್ಲಿ ಅತಂತ್ರ ಫಲಿತಾಂಶ ಮೈಸೂರು ಪಾಲಿಕೆ, ಬಿಜೆಪಿ-22, ಕಾಂಗ್ರೆಸ್-19, ಜೆಡಿಎಸ್-18
11:13 AM, 3 Sep
ಕೊಪ್ಪಳ ನಗರಸಭೆಯಲ್ಲಿ 15 ಸ್ಥಾನ ಗೆದ್ದು ಮುನ್ನಡೆದ ಕಾಂಗ್ರೆಸ್.
11:11 AM, 3 Sep
ಚಿಕ್ಕೋಡಿ ಪುರಸಭೆ ಬಿಜೆಪಿ ಪಾಲು, 13 ಬಿಜೆಪಿ ಬೆಂಬಲಿತ ಪಕ್ಷೇತರರು ಗೆಲುವು.
11:09 AM, 3 Sep
ಮಹಾಲಿಂಗಪುರ ಪುರಸಭೆ ಬಿಜೆಪಿ ಪಾಲು
11:06 AM, 3 Sep
ಹಾಸನ ನಗರಸಭೆ 17 ವಾರ್ಡ್ ಗಳಲ್ಲಿ ಜೆಡಿಎಸ್ ಗೆಲುವು.
11:05 AM, 3 Sep
ಇಳಕಲ್ ನಗರಸಭೆಯಲ್ಲಿ ಬಿಜೆಪಿ ಭರ್ಜರಿ ಜಯ
11:03 AM, 3 Sep
ಚಾಮರಾಜನಗರ ನಗರಸಭೆಯಲ್ಲಿ ಬಿಜೆಪಿಗೆ 15 ವಾರ್ಡ್ ಗಳಲ್ಲಿ ಜಯ
11:02 AM, 3 Sep
ನಿಪ್ಪಾಣಿ ನಗರಸಭೆ ಕ್ಲೀನ್ ಸ್ವೀಪ್ ಮಾಡಿದ ಪಕ್ಷೇತರರು: ಎಲ್ಲಾ 31 ವಾರ್ಡ್ ಗಳಲ್ಲಿ ಪಕ್ಷೇತರರ ಗೆಲುವು
11:00 AM, 3 Sep
ಮೈಸೂರು ಮಹಾನಗರ ಪಾಲಿಕೆ ಅತಂತ್ರ: ಬಿಜೆಪಿ 18, ಜೆಡಿಎಸ್ 22. ಜೆಡಿಎಸ್ 19
10:49 AM, 3 Sep
ತುಮಕೂರು ಮಹಾನಗರ ಪಾಲಿಕೆ ಅತಂತ್ರ
READ MORE

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Results for Karnataka Civic Polls will be out today(September 2). Counting of Votes will start from 8am to 2 pm. Polling at 105 urban local bodies including 29 city municipal council in the state held on August 31.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more