ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕರ್ನಾಟಕ ಸಿಇಟಿ 2020 ಫಲಿತಾಂಶ ದಿನಾಂಕ ಪ್ರಕಟಿಸಿದ ಡಿಸಿಎಂ

|
Google Oneindia Kannada News

ಬೆಂಗಳೂರು, ಆ. 17: ಕೊರೊನಾವೈರಸ್ ಸೋಂಕು ಭೀತಿ ನಡುವೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ವಿವಿಧ ವೃತ್ತಿಪರ ಕೋರ್ಸ್ ಗಳ ಪ್ರವೇಶಕ್ಕಾಗಿ ಕಾಮನ್ ಎಂಟರೆನ್ಸ್ ಟೆಸ್ಟ್(ಸಿಇಟಿ) 2020 ನಡೆಸಿ ಸೈ ಎನಿಸಿಕೊಂಡಿದೆ. ಜುಲೈ 30 ಮತ್ತು ಜುಲೈ 31 ವಿವಿಧ ಕೇಂದ್ರ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, ಇದೀಗ ಫಲಿತಾಂಶದ ಸಮಯ. ಉನ್ನತ ಶಿಕ್ಷಣ ಸಚಿವ ಡಾ. ಅಶ್ವಥ್ ನಾರಾಯಣ ಅವರು ಆಗಸ್ಟ್ 20ರಂದು ಫಲಿತಾಂಶ ಪ್ರಕಟವಾಗಲಿದೆ ಎಂದು ಘೋಷಿಸಿದ್ದಾರೆ.

Recommended Video

Lakshmi Hebbalkar ಪುತ್ರನ ನಿಶ್ಚಿತಾರ್ಥಕ್ಕೆ ಎಲ್ಲಾ ಪಕ್ಷದವರಿಗೂ ಆಮಂತ್ರಣ | Oneindia Kannada

ಏಪ್ರಿಲ್ 23-24ಕ್ಕೆ ಸಿಇಟಿ ಪರೀಕ್ಷೆ ನಿಗದಿಯಾಗಿತ್ತು. ಕೊರೊನಾವೈರಸ್ ಸೋಂಕು ಹರಡದಂತೆ ವಿಧಿಸಲಾದ ಲಾಕ್ ಡೌನ್ ನಿಂದಾಗಿ ಮುಂದೂಡಲ್ಪಟ್ಟ ಸಿಇಟಿ ನಂತರ ಬದಲಿ ದಿನಾಂಕದಂದು ಆಯೋಜಿಸಲಾಗಿತ್ತು. ಮೊದಲ ವರ್ಷ/ಸೆಮಿಸ್ಟರ್ ಇಂಜಿನಿಯರ್, ತಂತ್ರಜ್ಞಾನ, ಯೋಗ ಮತ್ತು ನ್ಯಾಚುರೋಪತಿ, ಕೃಷಿ ವಿಜ್ಞಾನ ಕೋರ್ಸ್, ಬಿ ಫಾರ್ಮಾ, ಫಾರ್ಮಾ ಡಿ ಕೋರ್ಸುಗಳ ಪ್ರವೇಶಕ್ಕಾಗಿ ಸಿಇಟಿ ನಡೆಸಲಾಗುತ್ತದೆ.

ಚಿತ್ರ ವರದಿ: ಜಿಲ್ಲಾವಾರು ಪಿಯು ರಿಸಲ್ಟ್- ಉಡುಪಿ ನಂ.1, ವಿಜಯಪುರ ಕೊನೆ ಸ್ಥಾನಚಿತ್ರ ವರದಿ: ಜಿಲ್ಲಾವಾರು ಪಿಯು ರಿಸಲ್ಟ್- ಉಡುಪಿ ನಂ.1, ವಿಜಯಪುರ ಕೊನೆ ಸ್ಥಾನ

ಕೋವಿಡ್ ಮುನ್ನೆಚ್ಚರಿಕೆ ವಹಿಸುವುದರ ಜತೆಗೆ, ವಿದ್ಯಾರ್ಥಿಗಳಿಗೆ ಸಾರಿಗೆ, ವೈದ್ಯಕೀಯ, ರಕ್ಷಣೆ ಸೇರಿದಂತೆ ಎಲ್ಲ ವ್ಯವಸ್ಥೆಗಳನ್ನು ಮಾಡಲಾಗಿತ್ತು. ಕೋವಿಡ್ ಪಾಸಿಟೀವ್ ಬಂದಿರುವ ವಿದ್ಯಾರ್ಥಿಗಳಿಗೂ ಪರೀಕ್ಷೆ ಬರೆಯುವ ಅವಕಾಶ ಕಲ್ಪಿಸಲಾಗಿತ್ತು.

Karnataka CET results will be declared by Aug 20: DCM Ashwath Narayan

ಸಿಇಟಿ ಪರೀಕ್ಷೆ ಸಂಬಂಧ ಏನೇ ಅನುಮಾನಗಳು, ತೊಂದರೆ ಇದ್ದರೂ ಪರಿಹರಿಸಿಕೊಳ್ಳಲು ಸಹಾಯವಾಣಿ ಸಂಖ್ಯೆ: 080 23460460 ಅಥವಾ 080 23564583 ನೀಡಲಾಗಿತ್ತು. ಫಲಿತಾಂಶಗಳನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಅಧಿಕೃತ ವೆಬ್ ತಾಣ(kea.kar.nic.in)ದಲ್ಲಿ ನೋಡಬಹುದು.

English summary
Karnataka CET 2020 results will be declared by Aug 20 said Higher education minister, DCM Ashwath Narayan today(Aug 17).
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X