ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಿಇಟಿ ಫಲಿತಾಂಶ ಪ್ರಕಟ: ಜಫಿನ್ ಬಿಜುಗೆ ಪ್ರಥಮ ಸ್ಥಾನ

|
Google Oneindia Kannada News

ಬೆಂಗಳೂರು, ಮೇ 25: 2019-20ನೇ ಸಾಲಿನ ಸಿಇಟಿ(ಸಾಮಾನ್ಯ ಪ್ರವೇಶ ಪರೀಕ್ಷೆ) ಫಲಿತಾಂಶ ಪ್ರಕಟವಾಗಿದ್ದು, ಇಂಜಿನಿಯರಿಂಗ್ ವಿಭಾಗದಲ್ಲಿ ಜಫಿನ್ ಬಿಜು ಪ್ರಥಮ ಸ್ಥಾನ ಗಳಿಸಿದ್ದಾರೆ. ಪ್ರೌಢ ಶಿಕ್ಷಣ ಸಚಿವ ಜಿಟಿ ದೇವೇಗೌಡ ಅವರು ಇಂದು(ಮೇ 25) ಫಲಿತಾಂಶವನ್ನು ಪ್ರಕಟಿಸಿದರು.

ಇಂದಿನಿಂದ ಸಿಇಟಿ ಪರೀಕ್ಷೆ ಆರಂಭ, ವಿದ್ಯಾರ್ಥಿಗಳೇ ಆಲ್‌ ದಿ ಬೆಸ್ಟ್ ಇಂದಿನಿಂದ ಸಿಇಟಿ ಪರೀಕ್ಷೆ ಆರಂಭ, ವಿದ್ಯಾರ್ಥಿಗಳೇ ಆಲ್‌ ದಿ ಬೆಸ್ಟ್

ದ್ವಿತೀಯ ಪಿಯುಸಿ ಪರೀಕ್ಷೆಯ ನಂತರ ವೃತ್ತಿಪರ ಕೋರ್ಸುಗಳ ಆಯ್ಕೆಗಾಗಿ ನಡೆಯುವ ಸಿಇ ಟಿ ಪರೀಕ್ಷೆ ಈ ಬಾರಿ 29 ಹಾಗೂ 30ರಂದು ನಡೆದಿತ್ತು. ಒಟ್ಟು 1,94,311 ಮಂದಿ ಪರೀಕ್ಷೆ ಬರೆದಿದ್ದರು.

Karnataka CET results 2018-19 announces today

ರಾಜ್ಯಾದ್ಯಂತ 431 ಕೇಂದ್ರಗಳಲ್ಲಿ ಪರೀಕ್ಷೆ ನಡೆದಿತ್ತು, ಬೆಂಗಳೂರಿನ 84 ಕೇಂದ್ರಗಳಲ್ಲಿ ಪರೀಕ್ಷೆ ನಡೆದಿತ್ತು.

ಬೆಂಗಳೂರಿನ ಮಾರತ್ತ ಹಳ್ಳಿಯ ಶ್ರೀ ಚೈತನ್ಯ ಟೆಕ್ನೋ ಪಿಯು ಕಾಲೇಜಿನ ವಿದ್ಯಾರ್ಥಿಗಳಾದ ಜಫಿನ್ ಬಿಜು(ಇಂಜಿನಿಯರಿಂಗ್), ಪಿ ಮಹೇಶ ಆನಂದ್(ನ್ಯಾಚುರೋಪತಿ ಮತ್ತು ಯೋಗ ವಿಜ್ಞಾನ ವಿಭಾಗ) , ಪಿ ಮಹೇಶ ಆನಂದ್ (ವೈದ್ಯಕೀಯ ಶಿಕ್ಷಣ), ಕು. ಸಾಯಿ ಸಾಕೇತಿಕ ಚಕುರಿ(ಬಿ ಫಾರ್ಮಾ ಮತ್ತು ಫಾರ್ಮಾ ಡಿ ವಿಭಾಗ) ಮೊದಲ ಸ್ಥಾನ ಗಳಿಸಿದ್ದು, ಕಾಲೇಜಿಗೆ ಕೀರ್ತಿ ತಂದಿದ್ದಾರೆ.

ಮೇ 25ರ ಮಧ್ಯಾಹ್ನ 1 ಗಂಟೆ ವೇಳೆಗೆ ಸಂಬಂಧಪಟ್ಟ ವೆಬ್‌ಸೈಟ್‌ಗಳಲ್ಲಿ ಫಲಿತಾಂಶ ಬಿಡುಗಡೆಯಾಗಲಿದೆ.KEA Karnataka Examinations Authority, CET 2019 ಹಾಗೂ http://kar.results.nic.in ಅಧಿಕೃತ ವೆಬ್‌ಸೈಟ್‌ಗಳಲ್ಲಿ ಸಿಇಟಿ ಫಲಿತಾಂಶ ಪ್ರಕಟಗೊಳ್ಳಲಿದೆ.

ಟಾಪರ್ ಗಳ ಪಟ್ಟಿ

ಇಂಜಿನಿಯರಿಂಗ್ ವಿಭಾಗ

* ಜೆಫಿನ್ ಬಿಜು - ಬೆಂಗಳೂರು - ಶ್ರೀ ಚೈತನ್ಯ ಟೆಕ್ನೋ ಕಾಲೇಜ್

* ಆರ್.ಚಿನ್ಮಯ್ - ಮಂಗಳೂರು - ಎಕ್ಸ್ ಪರ್ಟ್ ಪಿಯು ಕಾಲೇಜ್

* ಸಾಯಿ ಸಾಕೇತಿಕ ಚೆಕುರಿ - ಬೆಂಗಳೂರು - ಶ್ರೀ ಚೈತನ್ಯ ಟೆಕ್ನೋ ಕಾಲೇಜ್
* ನಾಕುಲು ನೀರಾಜೆ - ಬೆಂಗಳೂರು - ನೆಹರು ಸ್ಮಾರಕ ವಿದ್ಯಾಲಯ, ಹೊಸಕೆರೆಹಳ್ಳಿ
* ಸಮರ್ಥ್ ಮಯ್ಯ - ಮಂಗಳೂರು - ಎಕ್ಸ್ ಪರ್ಟ್ ಪಿಯು ಕಾಲೇಜ್

ನ್ಯಾಚುರೋಪತಿ ಮತ್ತು ಯೋಗಿಗ್ ಸೈನ್ಸ್ ವಿಭಾಗ

* ಪಿ ಮಹೇಶ್ ಆನಂದ್-ಬೆಂಗಳೂರು-ಶ್ರೀ ಚೈತನ್ಯ ಟೆಕ್ನೋ ಕಾಲೇಜ್
* ವಿ ವಾಸುದೇವ-ಮೈಸೂರು-ಬೇಸ್ ಪಿಯು ಕಾಲೇಜ್
* ಉದಿತ್ ಮೋಹನ್-ಬೆಂಗಳೂರು-ನಾರಾಯಣ ಇ ಟೆಕ್ನೋ ಸ್ಕೂಲ್
* ವರುಣ್ ರಾಘವೇಂದ್ರ ಐತಾಳ್-ಬೆಂಗಳೂರು-ಶ್ರೀ ಚೈತನ್ಯ ಟೆಕ್ನೋ ಕಾಲೇಜ್

ಬಿ ಎಸ್ಸಿ ಅಗ್ರಿಕಲ್ಚರ್

* ಕೀರ್ತನಾ ಎಂ ಅರುಣ್- ಬೆಂಗಳೂರು- ನ್ಯಾಶ್ನಲ್ ಪಬ್ಲಿಕ್ ಸ್ಕೂಲ್
* ಭುವನ್ ವಿಬಿ - ಮಂಗಳೂರು - ಎಕ್ಸ್ ಪರ್ಟ್ ಪಿಯು ಕಾಲೇಜ್
* ಶ್ರೀಕಾಂತ ಎಂ ಎಲ್ - ಹಾಸನ - ಮಾಸ್ಟರ್ ಪಿಯು ಕಾಲೇಜ್
* ಆರ್ ಶರತ್ ಚಂದ್ರ - ಶಿವಮೊಗ್ಗ - ಶ್ರೀ ಅರಬಿಂದೋ ಪಿಯು ಇಂಡ್ ಕಾಲೇಜ್
* ಶ್ರೀಧರ್ ಎನ್- ಬೆಂಗಳೂರು-ಸೌಂದರ್ಯ comp ಪಿಯು ಕಾಲೇಜ್

ಪಶುವೈದ್ಯ ವಿಭಾಗ

* ಪಿ ಮಹೇಶ್ ಆನಂದ್-ಬೆಗಳೂರು-ಶ್ರೀ ಚೈತನ್ಯ ಟೆಕ್ನೋ
* ಉದಿತ್ ಮೋಹನ್-ಬೆಂಗಳೂರು-ನಾರಾಯಣ ಇ ಟೆಕ್ನೋ ಸ್ಕೂಲ್
* ಬಿವಿಎಸ್ ಎನ್ ಸಾಯಿರಾಮ್-ಬೆಂಗಳೂರು-ಶ್ರೀ ಚೈತನ್ಯ ಟೆಕ್ನೋ
* ವಿ ವಾಸುದೇವ್-ಮೈಸೂರು-ಬೇಸ್ ಪಿಯು ಕಾಲೇಜ್
* ಲಿಖಿತಾ ಎಸ್ ಬೆಂಗಳೂರು-ನಾರಾಯಣ ಪಿಯು ಕಾಲೇಜ್

ಫಾರ್ಮಸಿ

* ಸಾಯಿ ಸಾಕೇತಿಕ ಚೆಕುರಿ -ಬೆಂಗಳೂರು-ಶ್ರೀ ಚೈತನ್ಯ ಟೆಕ್ನೋ ಕಾಲೇಜ್
* ಜೆಫಿನ್ ಬಿಜು-ಬೆಂಗಳೂರು-ಶ್ರೀ ಚೈತನ್ಯ ಟೆಕ್ನೋ ಕಾಲೇಜ್
* ಆರ್ ಚಿನ್ಮಯ್-ಮಂಗಳೂರು-ಎಕ್ಸ್ ಪೃ್ಟ್ ಪಿಯು ಕಾಲೇಜ್
* ನಕುಲು ನೀರಾಜೆ-ಬೆಂಗಳೂರು-ನೆಹರು ಸ್ಮಾರಕ್ ವಿದ್ಯಾಲಯ
* ಪಿ ಮಹೇಶ್ ಆನಂದ್-ಬೆಂಗಳೂರು-ಶ್ರೀ ಚೈತನ್ಯ ಟೆಕ್ನೋ ಕಾಲೇಜ್

English summary
Karnataka CET or common entrance test results for 2019-20 year has anunced today.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X