2019ರ ಸಿಇಟಿ ಪರೀಕ್ಷೆ ವೇಳಾಪಟ್ಟಿ ಪ್ರಕಟಿಸಿದ ಕೆಇಎ
ಬೆಂಗಳೂರು, ಜನವರಿ 11 : 2019ನೇ ಸಾಲಿನ ಸಿಇಟಿ ಪರೀಕ್ಷೆ ದಿನಾಂಕ ಘೋಷಣೆಯಾಗಿದೆ. ಏಪ್ರಿಲ್ ತಿಂಗಳಿನಲ್ಲಿ ಈ ಬಾರಿಯ ಸಿಇಟಿ ಪರೀಕ್ಷೆಗಳು ನಡೆಯಲಿವೆ.
ಶುಕ್ರವಾರ ಕರ್ನಾಟಕ ಪರೀಕ್ಷಾ ಪ್ರಾಧಿಕಾರ 2019ರ ಸಿಇಟಿ ಪರೀಕ್ಷೆ ವೇಳಾಪಟ್ಟಿಯನ್ನು ಪ್ರಕಟಸಿದೆ. ಏಪ್ರಿಲ್ 23, 24 ಮತ್ತು 25ರಂದು ಪರೀಕ್ಷೆಗಳು ನಡೆಯಲಿದೆ.
ಶೀಘ್ರದಲ್ಲೇ ಸಿಇಟಿ ಆಗಲಿದೆ ಆನ್ಲೈನ್, ಪೆನ್-ಪೇಪರ್ ವ್ಯವಸ್ಥೆಗೆ ತಿಲಾಂಜಲಿ
ಈ ವರ್ಷದಿಂದ ಆನ್ಲೈನ್ ಮೂಲಕ ಸಿಇಟಿ ಪರೀಕ್ಷೆ ನಡೆಸಲಾಗುತ್ತದೆ ಎಂದು ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡ ಹೇಳಿದ್ದರು. ಆದರೆ, ಈ ಬಾರಿ ಆನ್ಲೈನ್ ಮೂಲಕ ಪರೀಕ್ಷೆಗಳನ್ನು ನಡೆಸಲು ಅಗತ್ಯ ಸೌಲಭ್ಯಗಳು ಇಲ್ಲದ ಹಿನ್ನಲೆಯಲ್ಲಿ ಈಗ ಪರೀಕ್ಷಾ ದಿನಾಂಕ ಘೋಷಣೆ ಮಾಡಲಾಗಿದೆ.
ಕರ್ನಾಟಕ ಸಿಇಟಿ 2018ರ ಫಲಿತಾಂಶ:ಶ್ರೀಧರ್ ದೊಡ್ಮನಿ ಪ್ರಥಮ ರ್ಯಾಂಕ್
ಗುರುವಾರ ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡ ಅವರು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಅಧಿಕಾರಿಗಳ ಜೊತೆ ಸಭೆ ನಡೆಸಿದರು. ಸಭೆಯಲ್ಲಿ ಆನ್ಲೈನ್ ಮೂಲಕ ಪರೀಕ್ಷೆ ನಡೆಸುವ ಕುರಿತು ಚರ್ಚೆಗಳು ನಡೆದವು. ಪರೀಕ್ಷೆಗೆ ಕೇವಲ 2 ತಿಂಗಳು ಇದೆ ಎಂದು ಸಭೆಯಲ್ಲಿ ಅಧಿಕಾರಿಗಳು ಹೇಳಿದರು.
ಈಗ ತರಾತುರಿಯಲ್ಲಿ ಆನ್ಲೈನ್ ಮೂಲಕ ಪರೀಕ್ಷೆ ನಡೆಸಲು ಸಿದ್ಧತೆ ಮಾಡಿಕೊಳ್ಳುವುದು ಕಷ್ಟ. ಪರೀಕ್ಷೆಗಾಗಿ ತಂತ್ರಾಂಶ ಸಿದ್ಧಪಡಿಸಲಾಗುತ್ತಿದೆ. 2020ರ ವೇಳೆಗೆ ಪರೀಕ್ಷೆಗಳನ್ನು ನಡೆಸಬಹುದು ಎಂದು ಅಧಿಕಾರಿಗಳು ಹೇಳಿದರು.
ಈ ಹಿನ್ನಲೆಯಲ್ಲಿ ಸಭೆಯ ಬಳಿಕ ಜಿ.ಟಿ.ದೇವೇಗೌಡ ಅವರು, 'ಈ ವರ್ಷ ಆನ್ಲೈನ್ ಮೂಲಕ ಪರೀಕ್ಷೆ ನಡೆಸಲು ಸಾಧ್ಯವಿಲ್ಲ' ಎಂದು ಘೋಷಣೆ ಮಾಡಿದರು.