ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಧಾನಸೌಧದ ಆವರಣದಲ್ಲಿ ಬಸವಣ್ಣನ ಮೂರ್ತಿ ಸ್ಥಾಪನೆಗೆ ಸಂಪುಟದ ತೀರ್ಮಾನ: ಬಸವರಾಜ್ ಬೊಮ್ಮಾಯಿ

|
Google Oneindia Kannada News

ಬೆಂಗಳೂರು, ಜು. 15: "ವಿಧಾನಸೌಧದ ಆವರಣದಲ್ಲಿ ಬಸವೇಶ್ವರ ಪ್ರತಿಮೆ ನಿರ್ಮಿಸಲು ಸಂಪುಟ ಒಪ್ಪಿಗೆ ಕೊಟ್ಟಿದ್ದು, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಕಾಮಗಾರಿ ವೆಚ್ಚವನ್ನು ನಿರ್ಧಾರ ಮಾಡಲಿದೆ" ಎಂದು ಕಾನೂನು ಸಚಿವ ಬಸವರಾಜ್ ಬೊಮ್ಮಾಯಿ ಹೇಳಿದ್ದಾರೆ. ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನೇತೃತ್ವದಲ್ಲಿ ವಿಧಾನಸೌಧದಲ್ಲಿ ನಡೆದ ರಾಜ್ಯ ಸಚಿವ ಸಂಪುಟ ಸಭೆಯ ಬಳಿಕ ಅವರು ಮಾತನಾಡಿದರು. "ಬಸವಣ್ಣನವರು ವಚನ ಬರೆಯುವ ಮಾದರಿಯಲ್ಲಿ ಪ್ರತಿಮೆ ನಿರ್ಮಿಸಲು ಚಿಂತನೆ ಮಾಡಲಾಗಿದೆ' ಎಂದು ಇದೇ ಸಂದರ್ಭದಲ್ಲಿ ಬೊಮ್ಮಾಯಿ ವಿವರಿಸಿದರು.

ಇದರೊಂದಿಗೆ ಇನ್ನು ಹಲವು ಆಡಳಿತಾತ್ಮಕ ನಿರ್ಣಯಗಳನ್ನು ಇಂದು ನಡೆದ ರಾಜ್ಯ ಸಂಪುಟ ಸಭೆಯಲ್ಲಿ ತೆಗೆದುಕೊಳ್ಳಲಾಗಿದೆ. ಅವುಗಳು ಹೀಗಿವೆ....

Karnataka Cabinet Meeting Today (15 July 2021) Highlights and Key Decisions Taken

* ಗದಗ ಪಶುಸಂಗೋಪನಾ ಕಾಲೇಜ್ ಎರಡನೇ ಹಂತ ಕಾಮಗಾರಿಗೆ ಒಪ್ಪಿಗೆ

* ಪ್ರತಿ ಜಿಲ್ಲೆಗೆ ಗೋಶಾಲೆ ತೆರೆಯಲು ತೀರ್ಮಾನ, ಮೊದಲ ಹಂತದಲ್ಲಿ 15 ಕೋಟಿ ರೂ. ಬಿಡುಗಡೆ

* ಕೃಷಿ ಇಲಾಖೆಯಿಂದ ಬೆಳೆ ಸಮೀಕ್ಷೆ ಮೊಬೈಲ್ ಆ್ಯಪ್ ಮೂಲಕ ಸಮೀಕ್ಷೆ ನಡೆಸಲು ತೀರ್ಮಾನ, ರೈತರು ಸ್ವಯಂ ಸಮೀಕ್ಷೆ ಮಾಡಿಕೊಳ್ಳಲು ಅನುಕೂಲ

* ವಿಶ್ವ ಬಂಡವಾಳ ಹೂಡಿಕೆದಾರರ ಸಮಾವೇಶ, ಇನ್ವೆಸ್ಟ್ ಕರ್ನಾಟಕ 2022 ಫೆ. 9,10,11 ರಂದು ಅರಮನೆ ಮೈದಾನದಲ್ಲಿ ಮಾಡಲು ತೀರ್ಮಾನ

* ರಾಜ್ಯದಲ್ಲಿ 9 ಆಕ್ಷಿಜನ್ ಘಟಕಗಳಿವೆ, 815 ಮೆ.ಟ. ಉತ್ಪಾದನಾ ಸಾಮಮರ್ಥ್ಯ ಇದೆ, 5000 ಮೆಟ್ರಿಕ್ ಟನ್ ಸಂಗ್ರಹ ಸಾಮರ್ಥ್ಯ ಇದೆ. ಉತ್ಪಾದನಾ ಸಾಮರ್ಥ್ಯ ಹೆಚ್ಚಳಕ್ಕೆ ಖಾಸಗಿ ಬಂಡವಾಳದಾರರು ಬಂದರೆ ಸಬ್ಸಿಡಿ ನೀಡಲು ತೀರ್ಮಾನ. ಕನಿಷ್ಠ 10 ಕೋಟಿ ರೂ ಬಂಡವಾಳ ಹೂಡಬೇಕು.

* ದಾಸನಪುರ ಎಪಿಎಂಸಿಯಲ್ಲಿ 93 ಮಳಿಗೆಗಳಿವೆ. ಅವುಗಳನ್ನು ಲಿಸ್ ಕಂ ಸೇಲ್ 24 ಲಕ್ಷ ರೂ.ಗಳಿಂದ 20 ಲಕ್ಷ ರೂ.ಗಳಿಗೆ ಕಡಿಮೆ ಮಾಡಲಾಗಿದೆ. ಬಾಡಿಗೆಯನ್ನು 20 ಸಾವಿರ ರೂ.ಗಳಿಂದ 15 ಸಾವಿರ ರೂಪಾಯಿಗಳಿಗೆ ಇಳಿಸಲು ಸಂಪುಟ ತೀರ್ಮಾನ

* ಜೆಒಸಿ ಕೋರ್ಸ್‌ನ್ನು ಪಿಯುಸಿಗೆ ತತ್ಸಮಾನವಾದ ಶಿಕ್ಷಣ ಎಂದು ಪರಿಗಣಿಸಲು ಮಹತ್ವದ ತೀರ್ಮಾನ

* ದೇವದುರ್ಗ ಎಂಜನೀಯರಿಂಗ್ ಕಾಲೇಜಿಗೆ 58 ಕೋಟಿ ರೂ. ಹಣ ಬಿಡುಗಡೆಗೆ ತೀರ್ಮಾನ

* ಕಾರಾಗೃಹ ಅಭಿವೃದ್ಧಿ ಮಂಡಳಿ ಅಧಿವೇಶನದಲ್ಲಿ ತರಲು ತೀರ್ಮಾನ

* 139 ಖೈದಿಗಳನ್ನು ಸನ್ನಡತೆ ಮೇಲೆ ಬಿಡುಗಡೆಗೆ ಮಾಡಲು ರಾಜ್ಯಪಾಲರಿಗೆ ಶಿಫಾರಸು ಮಾಡಲು ಸಂಪುಟದಲ್ಲಿ ತೀರ್ಮಾನ

* ಪ್ರವಾಹ ಸಂದರ್ಭದಲ್ಲಿ ಮನೆ ಕಳೆದುಕೊಂಡವರಿಗೆ ಪರಿಹಾರ ನೀಡಲು ಅನುಮೋದನೆ

* ಕಂದಾಯ ಇಲಾಖೆಯಲ್ಲಿ ಸಾಮಾನ್ಯ ಹಿರಿತನ ಆಧಾರದಲ್ಲಿ ಬಡ್ತಿ ನೀಡಲು ಸಂಪುಟದ ಒಪ್ಪಿಗೆ

* ಜರ್ಮನ್ ಟೆಕ್ನಾಲಜಿ ಇನ್ ಸ್ಟಿಟ್ಯೂಷನ್ ಕಟ್ಟಡ ನಿರ್ಮಾಣಕ್ಕೆ ಮಂಗಳೂರು ಮತ್ತು ಬೆಳಗಾವಿಯಲ್ಲಿ ಕಟ್ಟಡ ನಿರ್ಮಾಣಕ್ಕೆ ಒಪ್ಪಿಗೆ

* ಶಿರಗುಪ್ಪಿ ಪಟ್ಟಣಕ್ಕೆ ಕುಡಿಯುವ ನೀರು ಒದಗಿಸಲು 45 ಕೋಟಿ ರೂ. ಬಿಡುಗಡೆಗೆ ಒಪ್ಪಿಗೆ

* ರಾಣೆಬೆನ್ನೂರು ತಾಲೂಕಿನಲ್ಲಿ 18 ಕೆರೆ ತುಂಬಿಸಲು 206 ಕೋಟಿ ರೂ. ಯೋಜನೆಗೆ ಸಂಪುಟದ ಅನುಮೋದನೆ

* ಕೊಪ್ಪಳ ಜಿಲ್ಲೆ ಗಂಗಾವತಿ 5 ಕೆರೆ ತುಂಬಿಸಲು 93 ಕೋಟಿ ರೂ. ಗಳ ಯೋಜನೆಗೆ ಅನುಮೋದನೆ

* ನೇತ್ರಾವತಿ ನದಿಗೆ ಅಡ್ಡಲಾಗಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬ್ರಿಡ್ಜ್ ಕಂ ಬ್ಯಾರೇಜ್ ನಿರ್ಮಾಣಕ್ಕೆ 66 ಕೊಟಿ ರೂ. ಅನುಮೋದನೆ

* ವಿಧಾನಸೌಧದ ಆವರಣದಲ್ಲಿ ಬಸವಣ್ಣನ ಮೂರ್ತಿ ಸ್ಥಾಪಿಸಲು ಸಂಪುಟದ ಒಪ್ಪಿಗೆ. ಅಶ್ವಾರೂಢ ಬಸವಣ್ಣ ಬದಲು ವಚನ ಬರೆಯುವ ಬಸವಣ್ಣನ ಮೂರ್ತಿ ಸ್ಥಾಪಿಸುವ ಅಭಿಪ್ರಾಯಕ್ಕೆ ಮನ್ನಣೆ

* ವಿಶ್ವ ಬಂಡವಾಳ ಹೂಡಿಕೆ ಸಮಾವೇಶಕ್ಕೆ ಕೈಗಾರಿಕಾ ನೀತಿ 2025 ಮೂಲಕ ಕೆಲವು ರಿಯಾಯ್ತಿ ನೀಡಲು ಕ್ರಮ ಕೈಗೊಳ್ಳಲಾಗುವುದು. ಕೈಗಾರಿಕೆ ಇಲಾಖೆ ಎಲ್ಲ ರೀತಿಯ ಸಿದ್ಧತೆ ಮಾಡಿಕೊಳ್ಳಲಿದೆ.

* ಸಹಕಾರ ಸಂಘಗಳ ಚುನಾವಣೆ ಮಾಡಲು ಅವಕಾಶ ಕಲ್ಪಿಸಲು ಸಂಪುಟದ ತೀರ್ಮಾನ

* ಬರುವ ಡಿಸೆಂಬರ್ ತಿಂಗಳವರೆಗೆ ಜಿಲ್ಲಾ ಪಂಚಾಯಿತಿ ಚುನಾವಣೆ ಮಾಡದಿರಲು ಸಂಪುಟದಲ್ಲಿ ತೀರ್ಮಾನ

Recommended Video

ಪ್ರತಿಯೊಬ್ಬರಿಗೂ ಕೈಲಾದ ಸಹಾಯ ಮಾಡುತ್ತಿರುವ ಬಿಜೆಪಿ ಶಾಸಕ | Renukacharya | Oneindia Kannada

* ಮುಂಗಾರು ಅಧಿವೇಶನ ಬಗ್ಗೆ ಮುಂದಿನ‌ ದಿನಗಳಲ್ಲಿ ನಿರ್ಧಾರ, ಸಂಪುಟ ಸಭೆಯಲ್ಲಿ ಅಧಿವೇಶನ ಬಗ್ಗೆ ಚರ್ಚೆ ಆಗಿಲ್ಲ ಎಂದು ಮಾಹಿತಿ ಕೊಟ್ಟ ಸಚಿವ ಬೊಮ್ಮಾಯಿ

English summary
Karnataka Cabinet Meeting Today (15 July 2021) Highlights and Key Decisions Taken. Know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X