ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕರ್ನಾಟಕ ಸಚಿವ ಸಂಪುಟ ಸಭೆಯ ಪ್ರಮುಖ ನಿರ್ಧಾರಗಳು

|
Google Oneindia Kannada News

ಬೆಂಗಳೂರು, ಜುಲೈ 22: ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆ ಮುಕ್ತಾಯಗೊಂಡಿದ್ದು, ಸಂಪುಟ ಸಭೆಯಲ್ಲಿ ತೆಗೆದುಕೊಂಡಿರುವ ನಿರ್ಧಾರಗಳ ಬಗ್ಗೆ ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಮಾಹಿತಿ ನೀಡಿದ್ದಾರೆ.

ಒಂದೆಡೆ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುವ ಸುಳಿವನ್ನು ಯಡಿಯೂರಪ್ಪ ನೀಡಿದ್ದಾರೆ. ಇದೇ ಸಂದರ್ಭದಲ್ಲಿ ಸಂಪುಟ ಸಭೆ ನಡೆಸಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿತ್ತು. ಈ ಕುರಿತು ಸಚಿವ ಬಸವರಾಜ್ ಬೊಮ್ಮಾಯಿ, ಸದ್ಯ ಮುಖ್ಯಮಂತ್ರಿ ಹುದ್ದೆ ಖಾಲಿ ಇಲ್ಲ. ಸಿಎಂ ಬಿ ಎಸ್ ಯಡಿಯೂರಪ್ಪ ಅವರು ಹೈಕಮಾಂಡ್ ನಿರ್ಧಾರದಂತೆ ನಡೆಯಲಿದ್ದಾರೆ ಎಂದರು.

Karnataka Cabinet Meeting on July 22 : Highlights And Key Decisions Taken By Yediyurappa Govt

ಸಚಿವ ಸಂಪುಟ ಸಭೆಯ ಪ್ರಮುಖ ನಿರ್ಧಾರಗಳು

*ಗ್ರಾಮೀಣ ಮತ್ತು ನಗರ ಪ್ರದೇಶಗಳಿಗೆ ಮನೆ ಮಂಜೂರು ಗ್ರಾಮೀಣ ಪ್ರದೇಶಕ್ಕೆ 4 ಲಕ್ಷ ನಗರ ಪ್ರದೇಶಕ್ಕೆ 1ಲಕ್ಷ ಮನೆ ನಿರ್ಮಾಣಕ್ಕೆ ಒಪ್ಪಿಗೆ.

*ವಾಜಪೇಯಿ, ಬಿ.ಆರ್. ಅಂಬೇಡ್ಕರ್ ವಸತಿ ಯೋಜನೆ ಸುಮಾರು 8000 ಕೋಟಿ ವೆಚ್ಚ.

*ಪ್ರತಿ ಗ್ರಾಮ ಪಂಚಾಯತಿ ಮೂಲಕ ಫಲಾನುಭವಿಗಳ ಆಯ್ಕೆ ಎರಡು ವರ್ಷದಲ್ಲಿ 5 ಲಕ್ಷ ಮನೆ ನಿರ್ಮಾಣ ಮಾಡಲಾಗುವುದು. ಹಣಕಾಸು ಇಲಾಖೆ ಒಪ್ಪಿಗೆ ಪಡೆದು ಅನುಮತಿ.

*ಬೆಂಗಳೂರು ಒಂದು ಲಕ್ಷ ಬಹುಮಹಡಿ ಕಟ್ಟಡ ವಸತಿ.ಯೋಜನೆ ಮೂಲ ಸೌಕರ್ಯಕ್ಕೆ 500 ಕೊಟಿ ರೂ. ಒಪ್ಪಿಗೆ.

*ಕೃಷಿ ವಿವಿಗಳಲ್ಲಿ ಸೆಂಟರ್ ಫಾರ್ ಇನೊವೆಷನ್ ಸ್ಮಾರ್ಟ್ ಅಗ್ರಿಕಲ್ಚರಲ್ ಸಾಫ್ಟವೇರ್ ಎಕ್ಸಾಗಾನ್ ಮ್ಯಾನಿಫ್ಯಾಕ್ಚರಿಂದ ಕಂಪನಿ. ಪ್ರತಿ ಯುನಿವರ್ಸಿಟಿಗೆ 8. ಕೋಟಿ ವೆಚ್ಚವಾಗಲಿದೆ. 7 ವಿಶ್ವ ವಿದ್ಯಾಲಯಗಳಲ್ಲಿ ಅಳವಡಿಸಲು ಕ್ರಮ.

ಆರ್ಗ್ಯಾನಿಕ್ ಫಾರ್ಮ ಮಾಡಲು ವಿಜ್ಞಾನಿಗಳು ಸಲಹೆ ನೀಡಿದ್ದಾರೆ. 5 ವರ್ಷಕ್ಕೆ 75 ಕೋಟಿ ವೆಚ್ಚ ಪ್ರತಿ ರೈತನಿಗೆ ಒಂದು ಹೆಕ್ಟೇರ್ ಗೆ 3000 ರೂ ನೀಡಲು ತೀರ್ಮಾನ

*ಆರ್ಥಿಕವಾಗಿ ಹಿಂದುಳಿದಿರುವ ಸಮುದಾಯಗಳಿಗೆ 8 ಲಕ್ಷಕ್ಕಿಂತ ಆದಾಯಕ್ಕಿಂತ ಕಡಿಮೆ ಆದಾಯ ಇರುವ ಎಲ್ಲ ಕುಟುಂಬಗಳು ಇದರ ವ್ಯಾಪ್ತಿಗೆ ಬರುತ್ತವೆ. ಕೆಂದ್ರದ ಸಿವಿಲ್ ಸರ್ವೀಸ್ ಮತ್ತು ಶಿಕ್ಷಣಕ್ಕೆ ಅನ್ವಯವಾಗಲಿದೆ.
*ತಹಸೀಲ್ದಾರ್ ಗಳನ್ನು ಬೇರೆ ಇಲಾಖೆಯಿಂದ ತಹಸೀಲ್ದಾರಗಳಾಗಿರುವವರನ್ನು ನೇಮಿಸದಂತೆ ತೀರ್ಮಾನ. 43 ಜನ ತಹಸೀಲ್ದಾರ್ ಆಗಿರೊರು ವಾಪಸ್ ಮಾತೃ ಇಲಾಖೆಗೆ ಕಳಿಸಲು ತೀರ್ಮಾನ
*ಸರ್ಕಾರಿ ನೌಕರರಿಗೆ ಕುಟುಂಬದವರಿಗೆ ಆರೋಗ್ಯ ಸಂಜೀವಿನಿ ಯೋಜನೆ ಅನ್ವಯ.

*ಹಣಕಾಸು ಇಲಾಖೆಯವರು ಆರ್ ಡಿ ಪಿಆರ್.ಮತ್ತು ಯುಡಿ ಡಿಪಾರ್ಟ್ ಮೆಂಟ್ ಆಡಿಟ್ ಮಾತ್ರ ಮಾಡಲು ತೀರ್ಮಾನ.

*ಧರ್ಮಪುರ ಹಿರಿಯೂರು ತಾಲುಕಿನ ವೇದಾವತಿ ಕುಡಿಯುವ ನೀರಿನ ಯೋಜನೆ 7 ಕೆರೆ ತುಂಬಿಸಲು 90 ಕೋಟಿ ಯೋಜನೆ

*ಹುಬ್ಬಳಿಯಲ್ಲಿ 2 ಎಕರೆ ಜಾಗದಲ್ಲಿ ಎನ್ ಟಿಪಿಸಿ ಯವರು ವೇಸ್ಟ್ ಟು ಎನರ್ಜಿ ಮಾಡಲು ಅನುಮತಿ

*ಕೆಸಿ ವ್ಯಾಲಿ 245 ಎಂ ಎಲ್ ಡಿ ವಾಟರ್ ಟ್ರೀಟ್‌ಮೆಂಟ್ ಪ್ಲಾಂಟ್‌ ಅಪ್ ಗ್ರೇಡ್ ಮಾಡಲು 715 ಕೋಟಿ ಯೋಜನೆ

*ಹೊರಡಿಸಿದೆ ಹಳ್ಳ 513 ಕೋಟಿ ಯೋಜನೆಗೆ ಒಪ್ಪಿಗೆ

*ರಾಮದುರ್ಗ ತಾಲೂಕು ಹಂಪಿಹೊಳಿ ಹಳ್ಳಿಗೆ 120 ಕೋಟಿ ವೆಚ್ಚದಲ್ಲಿ ತಡೆಗೋಡೆ ನಿರ್ಮಾಣಕ್ಕೆ ಒಪ್ಪಿಗೆ

*ಶಿವಮೊಗ್ಗ ಜಿಲ್ಲೆಯ ಮಂಡಿಕಪ್ಪದಲ್ಲಿ ಬಿ ಕರಾಬ್ ಗೋರಕ್ಷೆಣೆಗೆ 9.3. ಎಕರೆ ಆರೋಗ್ಯ ಕುಟುಂಬ ಕಲ್ಯಾಣ ಇಲಾಖೆ 250 ಹಾಸಿಗೆಗಳನ್ನು ಆಸ್ಪತ್ರೆ

*ಆಯುಷ ವಿಶ್ವ ವಿದ್ಯಾಲಯ ಶಿವಮೊಗ್ಗ. ಪೆರಿಪೆರಲ್ ಕ್ಯಾನ್ಸರ್ ಕೇಂದ್ರ. 50 ಕೋಟಿ ನಿರ್ಮಾಣಕ್ಕೆ ಒಪ್ಪಿಗೆ ಶಿವಮೊಗ್ಗ ಅಟಲ್ ಬಿಹಾರಿ ಅಕ್ರಮ ಬಡಾವಣೆ ಸಕ್ರಮಕ್ಕೆ ಒಪ್ಪಿಗೆ

Recommended Video

BS ಯಡಿಯೂರಪ್ಪಗೆ JDS ನಿಂದ ಪರೋಕ್ಷ ಆಹ್ವಾನ | Oneindia Kannada

*ರಟ್ಟಿಹಳ್ಳಿ 7 ಕೆರೆ ತುಂಬಿಸಲು ಒಪ್ಪಿಗೆ

English summary
Highlights And Key Decisions Taken By Yediyurappa Govt in Karnataka Cabinet Meeting On July 22.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X