ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೆಳಗಾವಿಯಲ್ಲಿ ಅಧಿವೇಶನ, ಕಲಬುರಗಿಲಿ ಸಂಪುಟ ಸಭೆ

|
Google Oneindia Kannada News

ಬೆಂಗಳೂರು, ನ.13 : ತುಂಬಾಕು ನಿಷೇಧದ ಬಗ್ಗೆ ಕಾದು ನೋಡುವ ತಂತ್ರ, ಈರುಳ್ಳಿ ಬೆಳೆಗಾರರಿಗೆ ಪರಿಹಾರ, ಬೆಳಗಾವಿಯಲ್ಲಿ 10 ದಿನದ ಅಧಿವೇಶನ, ಕಲಬುರಗಿಯಲ್ಲಿ ಸಚಿವ ಸಂಪುಟ ಸಭೆ ಮುಂತಾದ ನಿರ್ಣಯಗಳನ್ನು ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ತೆಗೆದುಕೊಳ್ಳಲಾಗಿದೆ.

ಬುಧವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ವಿಧಾನಸೌಧದಲ್ಲಿ ಸಚಿವ ಸಂಪುಟ ಸಭೆ ನಡೆಯಿತು. ಸಭೆಯ ಬಳಿಕ ಪತ್ರಿಕಾಗೋಷ್ಠಿ ನಡೆಸಿದ ಕಾನೂನು ಮತ್ತು ಸಂಸದೀಯ ವ್ಯವಹಾರ ಸಚಿವ ಟಿ.ಬಿ.ಜಯಚಂದ್ರ ಅವರು ಸಭೆಯ ವಿವರಗಳನ್ನು ಮಾಧ್ಯಮಗಳಿಗೆ ನೀಡಿದರು.

ಉತ್ತರ ಕರ್ನಾಟಕದಲ್ಲಿ ಮಳೆಯಿಂದ ಹಾನಿಗೊಳಗಾದ ಪ್ರದೇಶದಲ್ಲಿ ನಷ್ಟ ಅನುಭವಿಸಿರುವ ಈರುಳ್ಳಿ ಬೆಳೆಗಾರರಿಗೆ ಪರಿಹಾರ ನೀಡಲು ಸಚಿವ ಸಂಪುಟ ಸಭೆಯಲ್ಲಿ ಒಪ್ಪಿಗೆ ದೊರೆತಿದೆ ಎಂದು ಜಯಚಂದ್ರ ಅವರು ಹೇಳಿದರು. ಪ್ರತಿ ಹೆಕ್ಟೇರ್‌ಗೆ 9 ಸಾವಿರ ರೂ. ಪರಿಹಾರ ನೀಡಲು ಅನುಮೋದನೆ ದೊರೆತಿದೆ ಎಂದರು.

Karnataka

ಕಾದು ನೋಡುವ ತಂತ್ರ : ಅಗಿಯುವ ತಂಬಾಕು ಮತ್ತು ಬಿಡಿ ಸಿಗರೇಟು ನಿಷೇಧದ ಬಗ್ಗೆ ಸಚಿವ ಸಂಪುಟ ಸಭೆಯಲ್ಲಿ ಚರ್ಚೆನಡೆದರೂ ಸುಪ್ರೀಂಕೋರ್ಟ್ ತೀರ್ಪಿಗಾಗಿ ಕಾದು ನೋಡಲು ನಿರ್ಧಾರ ಕೈಗೊಳ್ಳಲಾಗಿದೆ.[ಜಗಿಯುವ ತಂಬಾಕು ನಿಷೇಧ]

ಸಚಿವ ಸಂಪುಟ ಸಭೆಯ ತೀರ್ಮಾನಗಳು

* ಡಿ. 9 ರಿಂದ 20 ರವೆರೆಗೆ ಬೆಳಗಾವಿಯಲ್ಲಿ 10 ದಿನಗಳ ಕಾಲ ಚಳಿಗಾಲದ ಅಧಿವೇಶನ ನಡೆಸುವುದು.
* ನವೆಂಬರ್ 27 ರಂದು ಕಲುಬುರಗಿಯಲ್ಲಿ ಸಚಿವ ಸಂಪುಟ ನಡೆಸುವುದು.
* ಮಲೆ ಮಹದೇಶ್ವರ ಕ್ಷೇತ್ರದ ಅಭಿವೃದ್ಧಿಗೆ 37 ಕೋಟಿ ರೂ. ಯೋಜನೆ
* ಧಾರವಾಡ ಜಿಲ್ಲಾ ಆಸ್ಪತ್ರೆ ನವೀಕರಣಕ್ಕೆ 9 ಕೋಟಿ ರೂ. ಅನುದಾನ
* 18 ಪ್ರವಾಸಿ ತಾಣಗಳಲ್ಲಿ ಖಾಸಗಿ ಸಹಭಾಗಿತ್ವದಲ್ಲಿ ಅತಿಥಿ ಗೃಹ ನಿರ್ಮಾಣ
* 27 ಕಿ.ಮೀ.ಗಳ ಸಂಡೂರು-ಹೊಸಪೇಟೆ ರಸ್ತೆಯಲ್ಲಿ ಟೋಲ್ ಶುಲ್ಕ ಸಂಗ್ರಹಿಸಲು ಒಪ್ಪಿಗೆ
* ರಾಜ್ಯ ಕರಕುಶಲ ಕಾರ್ಮಿಕರ ಅಭಿವೃದ್ಧಿಗಾಗಿ 15 ಕೋಟಿ. ರೂ. ಪ್ಯಾಕೇಜ್
* ರಾಜ್ಯದ 189 ಗ್ರಾಮೀಣ ವಿಧಾನಸಭಾ ಕ್ಷೇತ್ರಗಳಲ್ಲಿ 'ನಮ್ಮ ಗ್ರಾಮ ನಮ್ಮ ರಸ್ತೆ' ಯೋಜನೆಯಲ್ಲಿ 2079 ಕೋಟಿ ರೂ.ಗಳಲ್ಲಿ ರಸ್ತೆ ಕಾಮಗಾರಿ.
* ರಾಜ್ಯದ ಸಿ ಕ್ಯಾಟಗರಿಯ 9 ಗಣಿಗಳನ್ನು ಕೇಂದ್ರ ಸರ್ಕಾರದ ಎಂಇಸಿಎಲ್ ಸಂಸ್ಥೆಗೆ ನೀಡಲು ಒಪ್ಪಿಗೆ
* ಚೆಕ್‍ಬೌನ್ಸ್ ಪ್ರಕರಣ ಆರೋಪಿಯಾಗಿದ್ದ ಬಾಗಲಕೋಟೆಯ ಜೆಎಂಎಫ್‍ಸಿ ಸಹಾಯಕ ಅಭಿಯೋಜಕ ಎಂ.ಎಂ.ಸತ್ತಿಗೇರಿ ಸೇವೆಯಿಂದ ವಜಾಕ್ಕೆ ಶಿಫಾರಸ್ಸು
* ಬಿಬಿಎಂಪಿ ವ್ಯಾಪ್ತಿಯಲ್ಲಿ ನಗರೋತ್ಥಾನ ಯೋಜನೆಯಡಿ 1 ಸಾವಿರ ಕೋಟಿ ರೂ ವೆಚ್ಚದಲ್ಲಿ 465 ರಸ್ತೆ ಕಾಮಗಾರಿ

English summary
The Karnataka State legislature session will be held at Suvarna Soudha in Belagavi from December 9 to 20 said, Law Minister T.B.Jayachandra after cabinet meeting on November 12.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X