ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸೋಮವಾರದ ಸಚಿವ ಸಂಪುಟ ಸಭೆ ತೀರ್ಮಾನಗಳು

|
Google Oneindia Kannada News

ಬೆಂಗಳೂರು, ಜೂ. 02 : ಘರ್ಷಣೆಗೆ ಸಂಬಂಧಿಸಿದಂತೆ ದಾಖಲಾದ 175 ಮೊಕದ್ದಮೆ ವಾಪಸ್, ಗ್ರಾಮೀಣಾ ಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ವಿಶ್ವವಿದ್ಯಾಲಯವನ್ನು ಗದಗದಲ್ಲಿ ಸ್ಥಾಪಿಸಲು ಒಪ್ಪಿಗೆ, ಜಯಲಲಿತಾ ಪ್ರಕರಣದಲ್ಲಿ ಮೇಲ್ಮನವಿ ಸಲ್ಲಿಕೆ ಮಾಡಲು ನಿರ್ಧಾರ ಸೇರಿದಂತೆ ಹಲವು ತೀರ್ಮಾನಗಳನ್ನು ಸಚಿವ ಸಂಪುಟ ಸಭೆಯಲ್ಲಿ ತೆಗೆದುಕೊಳ್ಳಲಾಗಿದೆ.

ಸೋಮವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ವಿಧಾನಸೌಧದಲ್ಲಿ ಸಚಿವ ಸಂಪುಟ ಸಭೆ ನಡೆಯಿತು. ಸಭೆಯ ಬಳಿಕ ಪತ್ರಿಕಾಗೋಷ್ಠಿ ನಡೆಸಿದ ಕಾನೂನು ಮತ್ತು ಸಂಸದೀಯ ವ್ಯವಹಾರ ಸಚಿವ ಟಿ.ಬಿ.ಜಯಚಂದ್ರ ಸಭೆಯ ವಿವರಗಳನ್ನು ಮಾಧ್ಯಮಗಳಿಗೆ ನೀಡಿದರು. [ಜಯಾ ವಿರುದ್ಧ ಮೇಲ್ಮನವಿ ಸಲ್ಲಿಸಲು ಒಪ್ಪಿಗೆ]

cabinet meeting

ಮೊಕದ್ದಮೆ ವಾಪಸ್ : ಕೋಮುಗಲಭೆ, ಅನುಮತಿ ಪಡೆಯದೇ ಪ್ರತಿಭಟನೆ, ಘರ್ಷಣೆಯಲ್ಲಿ ಭಾಗಿಯಾಗಿದ್ದ 1,614 ಮಂದಿ ಆಪಾದಿತರ ವಿರುದ್ಧದ 175 ಮೊಕದ್ದಮೆಗಳನ್ನು ವಾಪಸ್ ಪಡೆಯಲು ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿದೆ.[ಬೆಂಗಳೂರು ವಿವಿ ವಿಭಜನೆಗೆ ಸಂಪುಟ ಒಪ್ಪಿಗೆ]

2010ರಲ್ಲಿ ಪತ್ರಿಕೆಯಲ್ಲಿ ಪ್ರಕಟವಾದ ತಸ್ಲೀಮಾ ನಸ್ರೀನ್ ಅವರ ಅನುವಾದಿತ ಲೇಖನ ಅವಹೇಳನಕಾರಿಯಾಗಿದೆ ಶಿವಮೊಗ್ಗ, ಹಾಸನದಲ್ಲಿ ಪ್ರತಿಭಟನೆ ನಡೆದಿತ್ತು. ಪ್ರತಿಭಟನೆ ಘರ್ಷಣೆಗೆ ತಿರುಗಿ ಶಿವಮೊಗ್ಗ ವಿವಿಧ ಪೊಲೀಸ್ ಠಾಣೆಗಳಲ್ಲಿ 114 ಮೊಕದ್ದಮೆ, ಹಾಸನದಲ್ಲಿ 21 ಮೊಕದ್ದಮೆ ದಾಖಲಾಗಿತ್ತು.

2009ರಲ್ಲಿ ಮೈಸೂರಿನ ಕೆ.ಎಂ. ಹಳ್ಳಿಯಲ್ಲಿ ಪ್ರಾರ್ಥನಾ ಮಂದಿರದ ವಿಷಯಕ್ಕೆ ಸಂಬಂಧಿಸಿದಂತೆ ಗಲಭೆಯಾಗಿತ್ತು. ಉದಯರವಿ, ನರಸಿಂಹರಾಜ ಠಾಣೆಯಲ್ಲಿ 40 ಮೊಕದ್ದಮೆ ದಾಖಲಾಗಿದ್ದು, 214 ಮಂದಿ ಆಪಾದಿತರು ಎಂದು ಹೇಳಲಾಗಿತ್ತು. ಈ ಮೊಕದ್ದಮೆಗಳನ್ನು ವಾಪಸ್ ಪಡೆಯಲು ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿದೆ.

ಗದಗದಲ್ಲಿ ವಿಶ್ವವಿದ್ಯಾಲಯ ನಿರ್ಮಾಣ : ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ವಿಶ್ವವಿದ್ಯಾಲಯವನ್ನು ಗದಗ ನಗರದ ಹೊರವಲಯದಲ್ಲಿ ಸ್ಥಾಪಿಸಲು ಒಪ್ಪಿಗೆ ನೀಡಲಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 2015-16ನೇ ಸಾಲಿನ ಬಜೆಟ್‌ನಲ್ಲಿ ವಿವಿ ಸ್ಥಾಪನೆ ಕುರಿತು ಪ್ರಸ್ತಾಪಿಸಿದ್ದರು. ಗದಗ ನಗರದ ಹೊರವಲಯದಲ್ಲಿ ಸುಮಾರು 200 ಎಕರೆ ಪ್ರದೇಶದಲ್ಲಿ ವಿವಿ ಸ್ಥಾಪಿಸಲಾಗುತ್ತದೆ.

English summary
The State cabinet on Monday gave the nod to withdraw 40 criminal cases registered against activists of Popular Front of India (PFI) and Karnataka Forum for Dignity (KFD).
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X