ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ಗೌರವ ಯೋಜನೆ' ಜಾರಿಗೆ ತರಲು ಸಂಪುಟದ ಒಪ್ಪಿಗೆ

|
Google Oneindia Kannada News

ಬೆಂಗಳೂರು, ಜ.22 : ಬಚ್ಚಲು ಮನೆ ನಿರ್ಮಾಣ ಮಾಡಲು 'ಗೌರವ ಯೋಜನೆ' ಜಾರಿ, ಮೂಡಾದಿಂದ 484.28 ಎಕರೆಯಲ್ಲಿ ಹೊಸ ಲೇ ಔಟ್‌ ನಿರ್ಮಾಣ, ಹೇಮಾವತಿ ನಾಲೆ ಆಧುನೀ ಕರಣಕ್ಕೆ 562 ಕೋಟಿ ಬಿಡುಗಡೆ ಮುಂತಾದ ನಿರ್ಧಾರಗಳನ್ನು ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ತೆಗೆದುಕೊಳ್ಳಲಾಗಿದೆ.

ಬುಧವಾರ ಸಂಜೆ ವಿಧಾನಸೌಧದಲ್ಲಿ ಸಿಎಂ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ರಾಜ್ಯ ಸಚಿವ ಸಂಪುಟ ಸಭೆ ನಡೆಯಿತು. ಸಭೆಯ ಬಳಿಕ ಪತ್ರಿಕಾಗೋಷ್ಠಿ ನಡೆಸಿದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಟಿ.ಬಿ.ಜಯಚಂದ್ರ ಸಭೆಯ ವಿವರಗಳನ್ನು ನೀಡಿದರು. [ಮತ್ತೆ ಬರಲಿದೆ 1 ರೂ. ಮುಖಬೆಲೆಯ ರೆವಿನ್ಯೂ ಸ್ಟಾಂಪ್]

ರಾಜ್ಯ ಸರ್ಕಾರ ಒಂದೂವರೆ ಲಕ್ಷ ಕುಟುಂಬಗಳಿಗೆ ತಲಾ 20 ಸಾವಿರ ರೂ. ವೆಚ್ಚದಲ್ಲಿ ಬಚ್ಚಲು ಮನೆ ನಿರ್ಮಾಣ ಮಾಡಿ ಕೊಡುವ ಪ್ರಸ್ತಾವನೆಗೆ ಒಪ್ಪಿಗೆ ನೀಡಿದೆ ಎಂದು ಹೇಳಿದರು. ಈ ಯೋಜನೆಗೆ 'ಗೌರವ ಯೋಜನೆ' ಎಂದು ನಾಮಕರಣ ಮಾಡಲಾಗಿದೆ ಎಂದರು.

vidhana soudha

ಈ ಯೋಜನೆ ಅನ್ವಯ 37 ಸಾವಿರ ಎಸ್‌ಸಿ, 15 ಸಾವಿರ ಎಸ್‌ಟಿ ಹಾಗೂ 97,500 ಸಾವಿರ ಇತರ ಕುಟುಂಬಗಳಿಗೆ ಬಚ್ಚಲು ಮನೆ ನಿರ್ಮಿಸಿಕೊಡುಲಾಗುತ್ತದೆ ಎಂದರು. ಯೋಜನೆಗೆ 6 ಸಾವಿರ ರೂ. ಶಾಸಕರ ನಿಧಿಯಿಂದ, 12 ಸಾವಿರ ರೂ. ರಾಜ್ಯ ಸರ್ಕಾರ ಹಾಗೂ 2 ಸಾವಿರ ರೂ. ಫ‌ಲಾನುಭವಿ ಭರಿಸಬೇಕು ಎಂದು ಮಾಹಿತಿ ನೀಡಿದರು.

ಸ್ಥಳೀಯ ಶಾಸಕರು ತಮ್ಮ ನಿಧಿಯಿಂದ ತಲಾ 6 ಸಾವಿರ ರೂ. ಕೊಟ್ಟು ಶಿಫಾರಸು ಮಾಡಿದ ಪಟ್ಟಿಗೆ ರಾಜ್ಯ ಸರ್ಕಾರ ತನ್ನ ಪಾಲಿನ ಹಣ ಭರಿಸಿ ಅನುಮತಿ ನೀಡುತ್ತದೆ ಎಂದು ಸಚಿವರು ವಿವರಣೆ ನೀಡಿದರು. ತಲಾ 20 ಸಾವಿರ ರೂ. ವೆಚ್ಚದಲ್ಲಿ ಬಚ್ಚಲು ಮನೆ ನಿರ್ಮಿಸಿ ಕೊಡಲಾಗುತ್ತದೆ.

ಹೆಚ್ಚುವರಿ ಕೇಂದ್ರಗಳ ಸ್ಥಾಪನೆ : ಎಲ್ಲಾ ತಾಲೂಕು ಹಾಗೂ ಹೋಬಳಿ ಕೇಂದ್ರಗಳಲ್ಲಿ ಅಟಲ್‌ ಜೀ ಜನಸ್ನೇಹಿ ಕೇಂದ್ರಗಳಲ್ಲಿ ಕಂದಾಯ ಇಲಾಖೆಗೆ ಸಂಬಂಧಿಸಿದ ಪಹಣಿ, ಹಕ್ಕುಪತ್ರ, ಹಕ್ಕು ಬದಲಾವಣೆ ಪ್ರಮಾಣ ಪತ್ರಗಳನ್ನು ಕೋರಿ ಸಲ್ಲಿಸುವ ಅರ್ಜಿಗಳ ತ್ವರಿತ ವಿಲೇವಾರಿಗೆ ಪಡಸಾಲೆ ಕೇಂದ್ರ ಸ್ಥಾಪಿಸಲಾಗುತ್ತದೆ. ರೈತರು ದಿನಗಟ್ಟಲೆ ಸಾಲು ನಿಲ್ಲುವುದನ್ನು ತಪ್ಪಿಸಲು ಈ ಕ್ರಮ ಕೈಗೊಳ್ಳಾಗುತ್ತಿದೆ.

ವಿದ್ಯುತ್ ಬಿಲ್ ಪಾವತಿ : ರಾಜ್ಯದ ಗ್ರಾಮ ಪಂಚಾಯತಿಗಳು ಎಸ್ಕಾಂಗಳಿಗೆ 3236.16 ಕೋಟಿ ರೂ. ವಿದ್ಯುತ್‌ ಬಿಲ್‌ ಪಾವತಿ ಮಾಡಬೇಕಿದೆ. ಈ ಬಗ್ಗೆ ವರದಿ ನೀಡಲು ಸಚಿವ ಸಂಪುಟ ಒಪ್ಪಿಗೆ ನೀಡಿದೆ. ಇನ್ನು ಮುಂದೆ ಗ್ರಾಮ ಪಂಚಾಯಿತಿಗಳ ವಿದ್ಯುತ್‌ ಬಿಲ್‌ಅನ್ನು ಕೇಂದ್ರ ಹಣಕಾಸು ಆಯೋಗದಿಂದ ಬಿಡುಗಡೆಯಾಗಿರುವ 600 ಕೋಟಿ ರೂ.ಅನುದಾನದಲ್ಲಿ ಪಾವತಿಸಲು ಅನುಮೋದನೆ ನೀಡಲಾಗಿದೆ.

ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮ : ಚಿಕ್ಕಮಗಳೂರಿನ ಭದ್ರಾ ವನ್ಯ ಜೀವಿ ವಿಭಾಗದಲ್ಲಿ 1996-2000 ಅವಧಿಯಲ್ಲಿ ನಡೆದಿದ್ದ ಅವ್ಯವಹಾರಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತ ತನಿಖೆ ಆಧಾರದ ಮೇಲೆ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲು ಸಂಪುಟ ಒಪ್ಪಿಗೆ ಸೂಚಿಸಿದೆ.

ಮೈಸೂರಿನಲ್ಲಿ ಹೊಸ ಲೇಔಟ್ ನಿರ್ಮಾಣ : ಮೂಡಾದ ವತಿಯಿಂದ ಮೈಸೂರಿನ ಜಯಪುರದ ಮಲ್ಲಹಳ್ಳಿಯ 484.28 ಎಕರೆಯಲ್ಲಿ ಹೊಸ ಲೇ ಔಟ್‌ ನಿರ್ಮಾಣ ಮಾಡಲು ಒಪ್ಪಿಗೆ ದೊರಕಿದೆ.

ಜಮೀನು ಮಂಜೂರು : ಶಿಡ್ಲಘಟ್ಟದ ಸುಂಡ್ರಹಳ್ಳಿಯಲ್ಲಿ ಇಂಡೋ ಟಿಬೇಟಿಯನ್‌ ಬಾರ್ಡರ್‌ ಪೊಲೀಸ್‌ ಪೋರ್ಸ್‌ಗೆ 24 ಎಕರೆ, ಶಿವಮೊಗ್ಗದ ಸಾಗರ ತಾಲೂಕಿನ ಲಿಂಗದಹಳ್ಳಿಯಲ್ಲಿ ಸಂಜಯ ವಿದ್ಯಾಕೇಂದ್ರಕ್ಕೆ ಐಟಿಐ ಪ್ರಾರಂಭಿಸಲು 1.30 ಎಕರೆ, ರಾಯಚೂರು ವಿವೇಕಾನಂದ ಆಶ್ರಮಕ್ಕೆ 36.30 ಎಕರೆ ಜಮೀನು ನೀಡಲು ಒಪ್ಪಿಗೆ ನೀಡಲಾಗಿದೆ.

English summary
The Karnataka government on Wednesday decided to launch 'Gowrava yojane'. The decision was taken at a Cabinet meeting chaired by Chief Minister Siddaramaiah at Vidhana Soudha, Bengaluru.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X