ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮುಂದಿನ ವಾರ ಸಂಪುಟ ವಿಸ್ತರಣೆ: ಸ್ಥಾನ ಕಳೆದುಕೊಳ್ಲಲಿರುವ 6 ಸಚಿವರ ಪಟ್ಟಿ?

|
Google Oneindia Kannada News

ಧನುರ್ಮಾಸ ಕೊನೆಗೊಳ್ಳಲಿರುವ ಮಕರ ಸಂಕ್ರಾಂತಿಯ ಪರ್ವಕಾಲ ಸಮೀಪಿಸುತ್ತಿದೆ. ಇದರ ಜೊತೆಗೆ, ಬಿಜೆಪಿ ಶಾಸಕರು ಕಾತುರದಿಂದ ಕಾಯುತ್ತಿರುವ ಸಚಿವ ಸಂಪುಟ ವಿಸ್ತರಣೆಗೂ ಬಹುತೇಕ ಮಹೂರ್ತ ಫಿಕ್ಸ್ ಆಗಿದೆ.

ಇದೇ ಬರುವ ಶುಕ್ರವಾರ, ಜನವರಿ ಹದಿನೇಳರಂದು ಸಂಪುಟ ವಿಸ್ತರಣೆ ನಡೆಯಲಿದ್ದು, ಇನ್ನೊಂದೆರಡು ದಿನಗಳಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ದೆಹಲಿಗೆ ತೆರಳಿ, ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರಿಂದ ಸಂಪುಟ ವಿಸ್ತರಣೆಗೆ ಗ್ರೀನ್ ಸಿಗ್ನಲ್ ಪಡೆದುಕೊಳ್ಳಲಿದ್ದಾರೆ ಎಂದು ಹೇಳಲಾಗುತ್ತಿದೆ.

ನೂತನವಾಗಿ ಆಯ್ಕೆಯಾಗಿರುವ ಶಾಸಕರಿಗೆ ಸಚಿವ ಸ್ಥಾನ ಕಲ್ಪಿಸಲೇ ಬೇಕಾಗಿರುವುದರಿಂದ (ಎಲ್ಲರಿಗೂ ಅಲ್ಲದಿದ್ದರೂ), ಜೊತೆಗೆ, ಉಪಚುನಾವಣೆಯಲ್ಲಿ ಸೋತ ಇಬ್ಬರಿಗೂ ಸಂಪುಟದಲ್ಲಿ ಸೇರಿಸಿಕೊಳ್ಳಬೇಕಾದ ಅನಿವಾರ್ಯತೆಯಲ್ಲಿ ಮುಖ್ಯಮಂತ್ರಿಗಳಿದ್ದಾರೆ.

ಸಿಎಂ ಯಡಿಯೂರಪ್ಪ ವಿದೇಶ ಪ್ರವಾಸ ರದ್ದುಗೊಳಿಸಿದ್ದು ಈ ಕಾರಣಕ್ಕಾ? ಸಿಎಂ ಯಡಿಯೂರಪ್ಪ ವಿದೇಶ ಪ್ರವಾಸ ರದ್ದುಗೊಳಿಸಿದ್ದು ಈ ಕಾರಣಕ್ಕಾ?

ಹೀಗಾಗಿ, ಹಾಲೀ ಆರು ಸಚಿವರಿಗೆ ಸಂಪುಟ ವಿಸ್ತರಣೆಯಲ್ಲಿ ಕೊಕ್ ನೀಡುವುದು ಬಹುತೇಕ ಖಚಿತ ಎಂದು ಹೇಳಲಾಗುತ್ತಿದೆ. ಒತ್ತಡ/ಲಾಬಿ, ಕೊನೆ ಕ್ಷಣದ ಬದಲಾವಣೆ ಆಗದೇ ಇದ್ದಲ್ಲಿ, ಈ ಆರು ಸಚಿವರು, ತ್ಯಾಗ ಮಾಡಬೇಕಾಗಿ ಬರಬಹುದು ಎನ್ನುವ ಸುದ್ದಿಯಿದೆ:

ಸಚಿವೆ ಶಶಿಕಲಾ ಜೊಲ್ಲೆ

ಸಚಿವೆ ಶಶಿಕಲಾ ಜೊಲ್ಲೆ

ಸಚಿವರ ಹೆಸರು: ಶಶಿಕಲಾ ಜೊಲ್ಲೆ
ನಿಭಾಯಿಸುತ್ತಿರುವ ಖಾತೆ: ಮಹಿಳಾ ಮತ್ತು ಮಕ್ಕಳ ಕಲ್ಯಾಣಾಭಿವೃದ್ಧಿ
ಪ್ರತಿನಿಧಿಸುತ್ತಿರುವ ಕ್ಷೇತ್ರ: ನಿಪ್ಪಾಣಿ

ಸಚಿವ ಎಚ್ ನಾಗೇಶ್

ಸಚಿವ ಎಚ್ ನಾಗೇಶ್

ಸಚಿವರ ಹೆಸರು: ಎಚ್. ನಾಗೇಶ್
ನಿಭಾಯಿಸುತ್ತಿರುವ ಖಾತೆ: : ಅಬಕಾರಿ
ಪ್ರತಿನಿಧಿಸುತ್ತಿರುವ ಕ್ಷೇತ್ರ: ಮುಳಬಾಗಿಲು

ಯಡಿಯೂರಪ್ಪ ಅವರ ನಂಬಿದ್ದ 'ಮಾಜಿ ಅನರ್ಹ'ರಿಗೆ ಆಘಾತ: ಕೆಲವರಿಗಷ್ಟೆ ಸಚಿವ ಸ್ಥಾನ?ಯಡಿಯೂರಪ್ಪ ಅವರ ನಂಬಿದ್ದ 'ಮಾಜಿ ಅನರ್ಹ'ರಿಗೆ ಆಘಾತ: ಕೆಲವರಿಗಷ್ಟೆ ಸಚಿವ ಸ್ಥಾನ?

ಸಚಿವ ಪ್ರಭು ಚವ್ಹಾಣ್

ಸಚಿವ ಪ್ರಭು ಚವ್ಹಾಣ್

ಸಚಿವರ ಹೆಸರು: ಪ್ರಭು ಚವ್ಹಾಣ್
ನಿಭಾಯಿಸುತ್ತಿರುವ ಖಾತೆ: ಪಶು ವೈದ್ಯಕೀಯ
ಪ್ರತಿನಿಧಿಸುತ್ತಿರುವ ಕ್ಷೇತ್ರ: ಔರಾದ್

ಸಚಿವ ಆರ್ ಅಶೋಕ್

ಸಚಿವ ಆರ್ ಅಶೋಕ್

ಸಚಿವರ ಹೆಸರು: ಆರ್. ಅಶೋಕ್
ನಿಭಾಯಿಸುತ್ತಿರುವ ಖಾತೆ: ಕಂದಾಯ
ಪ್ರತಿನಿಧಿಸುತ್ತಿರುವ ಕ್ಷೇತ್ರ: ಪದ್ಮನಾಭ ನಗರ (ಬೆಂಗಳೂರು)

ಸಚಿವ ಕೆ.ಎಸ್.ಈಶ್ವರಪ್ಪ

ಸಚಿವ ಕೆ.ಎಸ್.ಈಶ್ವರಪ್ಪ

ಸಚಿವರ ಹೆಸರು: ಕೆ.ಎಸ್.ಈಶ್ವರಪ್ಪ
ನಿಭಾಯಿಸುತ್ತಿರುವ ಖಾತೆ: ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್
ಪ್ರತಿನಿಧಿಸುತ್ತಿರುವ ಕ್ಷೇತ್ರ: ಶಿವಮೊಗ್ಗ ಸಿಟಿ

ಸಚಿವ ಜಗದೀಶ್ ಶೆಟ್ಟರ್

ಸಚಿವ ಜಗದೀಶ್ ಶೆಟ್ಟರ್

ಸಚಿವರ ಹೆಸರು: ಜಗದೀಶ್ ಶೆಟ್ಟರ್
ನಿಭಾಯಿಸುತ್ತಿರುವ ಖಾತೆ: ಬೃಹತ್ ಮತ್ತು ಮಧ್ಯಮ ಕೈಗಾರಿಕೆ
ಪ್ರತಿನಿಧಿಸುತ್ತಿರುವ ಕ್ಷೇತ್ರ: ಹುಬ್ಬಳ್ಳಿ-ಧಾರವಾಡ (ಸೆಂಟ್ರಲ್)

English summary
Karnataka Cabinet Expansion: Six Existing Ministers May Have To Step Down?
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X