ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಾಲ್ಕನೇ ಬಾರಿ ಸಚಿವರಾದ ಅರವಿಂದ್ ಲಿಂಬಾವಳಿ ವ್ಯಕ್ತಿಚಿತ್ರಣ!

|
Google Oneindia Kannada News

ಬೆಂಗಳೂರು, ಜ. 13: ಹಿಂದುಳಿದ ಭೋವಿ ಸಮುದಾಯಕ್ಕೆ ಸೇರಿರುವ ಬಾಗಲಕೋಟೆ ಮೂಲದ ಅರವಿಂದ್ ಲಿಂಬಾವಳಿ ಅವರು ನಾಲ್ಕನೇ ಬಾರಿ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ಆರ್‌ಎಸ್‌ಎಸ್‌, ಎಬಿವಿಪಿ ಮೂಲಕ ಸಂಘಟನೆಯೊಂದಿಗೆ ಬೆಳೆದವರು ಅರವಿಂದ್ ಲಿಂಬಾವಳಿ. ಹಾಲಿ ಮಹದೇವಪುರ ವಿಧಾನಸಭಾ ಕ್ಷೇತ್ರದ ಶಾಸಕ. ಉನ್ನತ ಶಿಕ್ಷಣ ಸಚಿವರಾಗಿ, ಆರೋಗ್ಯ ಸಚಿವರಾಗಿ ಕೆಲಸ ನಿರ್ವಹಿಸಿದ ಅನುಭವ ಅವರಿಗಿದೆ.

ನಾಲ್ಕನೇ ಬಾರಿ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿರುವ ಅರವಿಂದ್ ಲಿಂಬಾವಳಿ ಅವರು, ಯಾವಾಗಲೂ ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಂಡವರು. ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿಯಾಗಿಯೂ ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಯಡಿಯೂರಪ್ಪ ಅವರು ನಾಲ್ಕನೇ ಬಾರಿ ಮುಖ್ಯಮಂತ್ರಿಗಳಾಗಿ ಪ್ರಮಾಣ ವಚನ ಸ್ವೀಕರಿಸಿದಾಗಲೇ ಅರವಿಂದ್ ಲಿಂಬಾವಳಿ ಕೂಡ ಸಚಿವರಾಗಬೇಕಿತ್ತು. ಆದರೆ ಆಗ ಸ್ವಲ್ಪದರಲ್ಲಿ ತಪ್ಪಿದ್ದ ಮಂತ್ರಿ ಪದವಿ ಇದೀಗ ಮತ್ತೆ ಅವರನ್ನು ಹುಡುಕಿಕೊಂಡು ಬಂದಿದೆ.

ಅರವಿಂದ್ ಲಿಂಬಾವಳಿ ವ್ಯಕ್ತಿಚಿತ್ರಣ

* ಅರವಿಂದ ಲಿಂಬಾವಳಿ ಅವರು ಮೂಲತಃ ಆರ್‌ಎಸ್‌ಎಸ್ ಕಾರ್ಯಕರ್ತ

Karnataka Cabinet Expansion: Aravind Limbavali Biography

* ವಿದ್ಯಾರ್ಥಿ ಜೀವನದಲ್ಲೇ ಎಬಿವಿಪಿಯಲ್ಲಿ ಸಕ್ರೀಯರಾಗಿ ಇದ್ದವರು

* 1992-1995 ಬಿವಿಪಿ ರಾಷ್ಟ್ರೀಯ ಕಾರ್ಯದರ್ಶಿಯಾಗಿ ಕೆಲಸ

* 35 ವರ್ಷ ಆರ್‌ಎಸ್‌ಎಸ್‌ನಲ್ಲಿ ಕಾರ್ಯಕರ್ತನಾಗಿ ಕೆಲಸ ಮಾಡಿ ರಾಜಕೀಯ ಪ್ರವೇಶ

* 2013 ರಲ್ಲಿ ಮಹದೇವಪುರದಿಂದ ಬಿಜೆಪಿ ಪಕ್ಷದಿಂದ ಶಾಸಕರಾಗಿ ಪ್ರಥಮ ಬಾರಿ ಆಯ್ಕೆ

* 2013ರಲ್ಲಿ ಕಾಂಗ್ರೆಸ್ ಅಭ್ಯರ್ಥಿ ಶ್ರೀನಿವಾಸ ಎಸಿ ಅವರ ವಿರುದ್ಧ 6149 ಮತಗಳ ಅಂತದಲ್ಲಿ ಗೆಲುವು

* 2018 ರಲ್ಲಿ ಮತ್ತೆ ಮಹದೇವಪುರ ಕ್ಷೇತ್ರದ ಶಾಸಕನಾಗಿ ಆಯ್ಕೆ

* ಬಿಜೆಪಿ ಸರ್ಕಾರದಲ್ಲಿ ಆರೋಗ್ಯ ಹಾಗೂ ಉನ್ನತ ಶಿಕ್ಷಣ ಸಚಿವರಾಗಿ ಕಾರ್ಯನಿರ್ವಹಿಸಿದ ಅನುಭವ

* ಹಿಂದುಳಿದ ಭೋವಿ ಸಮುದಾಯಕ್ಕೆ ಸೇರಿರುವ ಅರವಿಂದ್ ಲಿಂಬಾವಳಿ

English summary
Karnataka Cabinet Expansion: Mahadevapur MLA Aravind Limbavali Biography. Know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X