ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಂಗವಿಕಲರಿಗೆ ಸಿಹಿ ಸುದ್ದಿ ಜೊತೆಗೆ ಸಂಪುಟ ಸಭೆಯ ಹಲವು ನಿರ್ಣಯಗಳು

|
Google Oneindia Kannada News

ಬೆಂಗಳೂರು, ಫೆಬ್ರವರಿ 15: ಈಗಷ್ಟೆ ಬಜೆಟ್‌ ಮಂಡಿಸಿರುವ ಕುಮಾರಸ್ವಾಮಿ ಅವರು ನಿನ್ನೆ ಸಚಿವ ಸಂಪುಟ ಸಭೆ ಕರೆದು ಹಲವು ಮಹತ್ವದ ಯೋಜನೆಗೆ ಹಾಗೂ ಮೀಸಲಾತಿಗಳಿಗೆ ಸಚಿವ ಸಂಪುಟದ ಒಪ್ಪಿಗೆ ಪಡೆದುಕೊಂಡಿದ್ದಾರೆ.

ಬ್ರಾಹ್ಮಣ ಮಂಡಳಿ ಸ್ಥಾಪನೆಗೆ ಅಸ್ತು, ಅಂಗವಿಕರಿಗೆ ಮೀಸಲಾತಿ ಹೆಚ್ಚಳ, ಪೊಲೀಸ್ ನೇಮಕಾತಿಯಲ್ಲಿ ಮಹಿಳಾ ಮೀಸಲಾತಿ ಹೆಚ್ಚಳ ಹೀಗೆ ಕೆಲವು ಪ್ರಮುಖ ನಿರ್ಣಯಗಳ ಜೊತೆಗೆ ಇನ್ನೂ ಹಲವು ನಿರ್ಣಯಗಳನ್ನು ನಿನ್ನೆಯ ಸಚಿವ ಸಂಪುಟ ಸಭೆ ತೆಗೆದುಕೊಂಡಿದೆ.

ಕರ್ನಾಟಕ ಪೊಲೀಸ್ ಇಲಾಖೆಯಲ್ಲಿ ಮಹಿಳೆರಿಗೆ ಶೇ 25ರಷ್ಟು ಮೀಸಲಾತಿ ಕರ್ನಾಟಕ ಪೊಲೀಸ್ ಇಲಾಖೆಯಲ್ಲಿ ಮಹಿಳೆರಿಗೆ ಶೇ 25ರಷ್ಟು ಮೀಸಲಾತಿ

* ಬ್ರಾಹ್ಮಣ ಮಂಡಳಿ ಸ್ಥಾಪಿನೆಗೆ ಅಸ್ತು ಮತ್ತು ಅದಕ್ಕಾಗಿ 25 ಕೋಟಿ ನೀಡಲು ಸಚಿವ ಸಂಪುಟ ಒಪ್ಪಿಗೆ ನೀಡಿದೆ.

* 2019-20ನೇ ಸಾಲಿಗೆ ಉಚಿತ ಬೈಸಿಕಲ್ ವಿತರಣೆಗೆ 189 ಕೋಟಿ ಬಿಡುಗಡೆಗೆ ಒಪ್ಪಿಗೆ ದೊರೆತಿದೆ.

ಎಪಿಎಂಸಿ ಅಭಿವೃದ್ಧಿಗೆ 300 ಕೋಟಿ

ಎಪಿಎಂಸಿ ಅಭಿವೃದ್ಧಿಗೆ 300 ಕೋಟಿ

* ಕೊಪ್ಪಳ, ರಾಣೆಬೆನ್ನೂರು, ಹುಬ್ಬಳ್ಳಿ, ಬೆಳಗಾವಿ, ಯಶವಂತಪುರಗಳ ಎಪಿಎಂಸಿಯಲ್ಲಿ ಮೂಲಸೌಕರ್ಯ ಹೆಚ್ಚಿಸಲು 300 ಕೋಟಿ ಬಿಡುಗಡೆಗೆ ಸಂಪುಟ ಒಪ್ಪಿಗೆ ನೀಡಿದೆ.

* ಬಳ್ಳಾರಿ ಸೇರಿದಂತೆ ರಾಜ್ಯದ ಹಲವೆಡೆ ನಡೆಯುತ್ತಿರುವ ಗಣಿಗಾರಿಕೆ ಅಕ್ರಮವನ್ನು ತನಿಖೆ ಮಾಡುತ್ತಿರುವ ಎಸ್‌ಐಟಿಯ ಅವಧಿ ಒಂದು ವರ್ಷ ವಿಸ್ತರಣೆ.

ಬ್ರಾಹ್ಮಣರಿಗೆ ಕೊಟ್ಟ ಭರವಸೆ ಈಡೇರಿಸಿದ ಎಚ್.ಡಿ.ಕುಮಾರಸ್ವಾಮಿ ಬ್ರಾಹ್ಮಣರಿಗೆ ಕೊಟ್ಟ ಭರವಸೆ ಈಡೇರಿಸಿದ ಎಚ್.ಡಿ.ಕುಮಾರಸ್ವಾಮಿ

ಮಹಿಳೆಯರಿಗೆ ಮೀಸಲಾತಿ ಏರಿಕೆ

ಮಹಿಳೆಯರಿಗೆ ಮೀಸಲಾತಿ ಏರಿಕೆ

* ಪೊಲೀಸ್ ಇಲಾಖೆಯ ಏಳು ಶ್ರೇಣಿಗಳಲ್ಲಿ ನೇಮಕಾತಿಯಲ್ಲಿ ಮಹಿಳೆಯರಿಗೆ 25% ಮೀಸಲಾತಿ ಹೆಚ್ಚು ಮಾಡಲು ಸಂಪುಟ ಒಪ್ಪಿಗೆ ನೀಡಿದೆ.

* ಅಂಗವಿಕಲತೆಯನ್ನು 7 ನ್ಯೂನತೆಗಳ ಮೂಲಕ ಗುರುತಿಸಲಾಗುತ್ತಿದೆ ಆದರೆ ಈಗ 21 ನ್ಯೂನತೆಗಳ ಮೂಲಕ ಗುರುತಿಸಲಾಗುತ್ತದೆ. ಅಲ್ಲದೆ ಅಂಗವಿಕಲರ ಮೀಸಲಾತಿಯಲ್ಲಿ 5% ಹೆಚ್ಚಳ ಮಾಡುವುದಕ್ಕೆ ಸಂಪುಟ ಒಪ್ಪಿಗೆ ನೀಡಿದೆ.

ಕೋಲಾರ ಕಾಂಗ್ರೆಸ್‌ ಅಭ್ಯರ್ಥಿ ಬಗ್ಗೆ ದೇವೇಗೌಡರ ಸಲಹೆ ಏನು? ಕೋಲಾರ ಕಾಂಗ್ರೆಸ್‌ ಅಭ್ಯರ್ಥಿ ಬಗ್ಗೆ ದೇವೇಗೌಡರ ಸಲಹೆ ಏನು?

ಚಾಮರಾಜನಗರದಲ್ಲಿ ಕಾನೂನು ಕಾಲೇಜು ನಿರ್ಮಾಣ

ಚಾಮರಾಜನಗರದಲ್ಲಿ ಕಾನೂನು ಕಾಲೇಜು ನಿರ್ಮಾಣ

* ಬಳ್ಳಾರಿಯಲ್ಲಿ ಕೇಂದ್ರದ ಸಹಯೋಗದೊಂದಿಗೆ ಹಾಸ್ಟೆಲ್ ನಿರ್ಮಿಸಲು 52 ಕೋಟಿ ಹಾಗೂ ಪೀಠೋಪಕರಣ ಖರೀದಿಗೆ 13 ಕೋಟಿ ನೀಡಲು ಒಪ್ಪಿಗೆ.

* ಚಾಮರಾಜನಗರದಲ್ಲಿ 2.20 ಕೋಟಿ ವೆಚ್ಚದಲ್ಲಿ ಸರ್ಕಾರಿ ಕಾನೂನು ಕಾಲೇಜು ನಿರ್ಮಾಣ ಮಾಡಲು ಸಂಪುಟ ಒಪ್ಪಿಗೆ.

ಕೆಎಸ್‌ಆರ್‌ಟಿಸಿ ಹಾಸನ ಪ್ರಾದೇಶಿಕ ಕಚೇರಿಗೆ 40 ಕೋಟಿ

ಕೆಎಸ್‌ಆರ್‌ಟಿಸಿ ಹಾಸನ ಪ್ರಾದೇಶಿಕ ಕಚೇರಿಗೆ 40 ಕೋಟಿ

* ರಾಣೆ ಬೆನ್ನೂರಿನಲ್ಲಿ ಹಾದು ಹೋಗಿರುವ ಜಿಲ್ಲಾ ಮುಖ್ಯರಸ್ತೆ ಸುಧಾರಣೆಗೆ 18 ಕೋಟಿ ವೆಚ್ಚ ಮಾಡಲು ಒಪ್ಪಿಗೆ.

* ಕೆಎಸ್‌ಆರ್‌ಟಿಸಿಗೆ ಸೇರಿದ ಹಾಸನದ ಪ್ರಾದೇಶಿಕ ಕಾರ್ಯಾಗಾರ ಪುನರುಜ್ಜೀವನಕ್ಕೆ 42 ಕೋಟಿ ವೆಚ್ಚ ಮಾಡಲು ಸಂಪುಟ ಒಪ್ಪಿಗೆ

ಪೊಲೀಸ್ ವಸತಿಗೃಹ ನಿರ್ಮಾಣಕ್ಕೆ 17.80 ಕೋಟಿ

ಪೊಲೀಸ್ ವಸತಿಗೃಹ ನಿರ್ಮಾಣಕ್ಕೆ 17.80 ಕೋಟಿ

* ಕೋರಮಂಗಲದ ಕೆಎಸ್‌ಆರ್‌ಪಿ ಕ್ಯಾಂಪಿನಲ್ಲಿ 17.80 ಕೋಟಿ ವೆಚ್ಚದಲ್ಲಿ ಪೊಲೀಸ್ ವಸತಿ ಗೃಹ ನಿರ್ಮಿಸಲು ಒಪ್ಪಿಗೆ.

* ಬೆಂಗಳೂರಿನ ಔಷಧ ವಿಜ್ಞಾನ ಮಹಾ ವಿದ್ಯಾಲಯ ಆವರಣದಲ್ಲಿ ಬಾಲಕಿಯರ ವಿದ್ಯಾರ್ಥಿ ನಿಲಯ ಕಟ್ಟಡ ಸ್ಥಾಪನೆಗೆ 10.47 ಕೋಟಿ ನೀಡಲು ಒಪ್ಪಿಗೆ.

English summary
Cabinet meeting held yesterday in CM Kumaraswamy leadership. Cabinet aproves many importnat projects.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X