ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಉಪಚುನಾವಣೆ ಫಲಿತಾಂಶ: ಲೋಕಸಭೆ ಚುನಾವಣೆಗೂ ಮುನ್ನ ಬಿಜೆಪಿಗೆ ಮುಖಭಂಗ!

|
Google Oneindia Kannada News

ಬೆಂಗಳೂರು, ನವೆಂಬರ್ 06: ಕರ್ನಾಟಕದ ಮೂರು ಲೋಕಸಭೆ ಮತ್ತು ಎರಡು ವಿಧಾನಸಭೆ ಕ್ಷೇತ್ರಗಳಿಗೆ ನವೆಂಬರ್ 3 ಶನಿವಾರದಂದು ನಡೆದ ಉಪಚುನಾವಣೆಯ ಫಲಿತಾಂಶ ಇಂದು ಹೊರಬೀಳಲಿದೆ..

ಮಂಡ್ಯ ಲೋಕಸಭೆ ಉಪಚುನಾವಣೆ ಫಲಿತಾಂಶ: LIVEಮಂಡ್ಯ ಲೋಕಸಭೆ ಉಪಚುನಾವಣೆ ಫಲಿತಾಂಶ: LIVE

ಬೆಳಿಗ್ಗೆ 8 ರಿಂದ ಮತ ಎಣಿಕೆ ಆರಂಭವಾಗಲಿದ್ದು, ಮೊದಲಿಗೆ ಅಂಚೆ ಮತಗಳ ಎಣಿಕೆ ನಡೆಯಲಿದೆ.

ರಾಮನಗರ ಉಪ ಚುನಾವಣೆ ಫಲಿತಾಂಶ LIVE : ಅನಿತಾಗೆ ಮುನ್ನಡೆರಾಮನಗರ ಉಪ ಚುನಾವಣೆ ಫಲಿತಾಂಶ LIVE : ಅನಿತಾಗೆ ಮುನ್ನಡೆ

ಮಂಡ್ಯದಲ್ಲಿ ಜೆಡಿಎಸ್ ಪಕ್ಷದಿಂದ ಸಂಸದರಾಗಿ ಆಯ್ಕೆಯಾಗಿದ್ದ ಸಿ ಎಸ್ ಪುಟ್ಟರಾಜು, ಶಿವಮೊಗ್ಗದಲ್ಲಿ ಬಿಜೆಪಿಯಿಂದ ಸಂಸದರಾಗಿ ಆಯ್ಕೆಯಾಗಿದ್ದ ಬಿ ಎಸ್ ಯಡಿಯೂರಪ್ಪ ಮತ್ತು ಬಳ್ಳಾರಿ ಬಿಜೆಪಿ ಸಂಸದ ಶ್ರೀರಾಮುಲು ಅವರು ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಿ ಗೆಲುವು ಸಾಧಿಸಿದ್ದರಿಂದ ತೆರವಾದ ಮೂರು ಕ್ಷೇತ್ರಗಳಿಗೆ ಉಪಚುನಾವಣೆ ನಡೆದಿತ್ತು.

ಶಿವಮೊಗ್ಗ ಉಪ ಚುನಾವಣೆ ಫಲಿತಾಂಶ Live : ಬಿ.ವೈ.ರಾಘವೇಂದ್ರ ಮುನ್ನಡೆ ಶಿವಮೊಗ್ಗ ಉಪ ಚುನಾವಣೆ ಫಲಿತಾಂಶ Live : ಬಿ.ವೈ.ರಾಘವೇಂದ್ರ ಮುನ್ನಡೆ

Karnataka By-elections counting Live updates: results will be out on Nov 6

ದೀಪಾವಳಿ ವಿಶೇಷ ಪುರವಣಿ

ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರು ಚನ್ನಪಟ್ಟಣ ಮತ್ತು ರಾಮನಗರ ವಿಧಾನಸಭಾ ಕ್ಷೇತ್ರಗಳಿಂದ ಸ್ಪರ್ಧಿಸಿ ಎರಡೂ ಕಡೆಗಳಲ್ಲಿ ಗೆಲುವು ಸಾಧಿಸಿದ್ದರು. ನಂತರ ಚನ್ನಪಟ್ಟಣವನ್ನು ತಮ್ಮ ಬಳಿಯೇ ಉಳಿಸಿಕೊಂಡು ರಾಮನಗರ ಕ್ಷೇತ್ರವನ್ನು ಬಿಟ್ಟುಕೊಟ್ಟಿದ್ದರಿಂದ ತೆರವಾದ ಸ್ಥಾನಕ್ಕೆ ಉಪಚುನಾವಣೆ ನಡೆಯಲಿದೆ.

ಬಳ್ಳಾರಿ ಚುನಾವಣೆ LIVE: ವಿಎಸ್ ಉಗ್ರಪ್ಪ ಅವರಿಗೆ ಆರಂಭಿಕ ಮುನ್ನಡೆಬಳ್ಳಾರಿ ಚುನಾವಣೆ LIVE: ವಿಎಸ್ ಉಗ್ರಪ್ಪ ಅವರಿಗೆ ಆರಂಭಿಕ ಮುನ್ನಡೆ

ಬಾಗಲಕೋಟೆ ಜಿಲ್ಲೆಯ ಜಮಖಂಡಿಯ ಕಾಂಗ್ರೆಸ್ ಶಾಸಕರಾಗಿದ್ದ ಸಿದ್ದು ನ್ಯಾಮಗೌಡ ಅವರು ಅಕಾಲಿಕ ಮರಣವನ್ನಪ್ಪಿದ್ದರಿಂದ ತೆರವಾದ ಸ್ಥಾನಕ್ಕೂ ಉಪಚುನಾವಣೆ ನಡೆದಿದೆ.

ಜಮಖಂಡಿ ವಿಧಾನಸಭೆ ಉಪಚುನಾವಣೆ ಮತ ಎಣಿಕೆ ಆರಂಭ ಜಮಖಂಡಿ ವಿಧಾನಸಭೆ ಉಪಚುನಾವಣೆ ಮತ ಎಣಿಕೆ ಆರಂಭ

ಉಪಚುನಾವಣೆ ಫಲಿತಾಂಶಕ್ಕೆ ಸಂಬಂಧಿಸಿದ ಕ್ಷಣಕ್ಷಣದ ಮಾಹಿತಿಯನ್ನು ಒನ್ ಇಂಡಿಯಾ ನೀಡಲಿದೆ.

Newest FirstOldest First
11:09 AM, 6 Nov

ಐದು ಕ್ಷೇತ್ರಗಳಲ್ಲೂ ಅಂತಿಮ ಸುತ್ತಿನ ಮತ ಎಣಿಕೆ ಮುಕ್ತಾಯ. ಅಧಿಕೃತ ಘೋಷಣೆಯೊಂದೇ ಬಾಕಿ
10:46 AM, 6 Nov

ಜಮಖಂಡಿ ವಿಧಾನಸಭಾ ಉಪಚುನಾವಣೆಯಲ್ಲಿ ಜಯಗಳಿಸಿರುವ ಆನಂದ ನ್ಯಾಮಗೌಡ ಅವರಿಗೆ ಅಭಿನಂದನೆಗಳು. ಪಕ್ಷದ ಜಯಕ್ಕಾಗಿ ಶ್ರಮಿಸಿದ ನಾಯಕರು ಹಾಗೂ ಕಾರ್ಯಕರ್ತರಿಗೆ ಧನ್ಯವಾದಗಳು. ನಮ್ಮ ಅಭ್ಯರ್ಥಿಯನ್ನು ಆಶೀರ್ವದಿಸಿದ ಕ್ಷೇತ್ರದ ಮತದಾರರಿಗೆ ಕೃತಜ್ಞತೆಗಳು- ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಟ್ವೀಟ್
10:41 AM, 6 Nov

ಬಳ್ಳಾರಿಯಲ್ಲಿ ನರಕಚತುರ್ದಶಿ ಅರ್ಥಪೂರ್ಣ ಆಚರಣೆ. ಕತ್ತಲೆಯಿಂದ ಬೆಳಕಿನೆಡೆಗೆ ಜನಪಯಣ- ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಟ್ವೀಟ್
10:27 AM, 6 Nov

ಬಿಜೆಪಿಗೆ ಆತ್ಮಾವಲೋಕನ ಮಾಡಿಕೊಳ್ಳುವ ಸಮಯ ಬಂದಿದೆ- ಸುರೇಶ್ ಕುಮಾರ್, ಬಿಜೆಪಿ ನಾಯಕ
10:12 AM, 6 Nov

ಜಮಖಂಡಿಯಲ್ಲಿ ಕಾಂಗ್ರೆಸ್ಸಿನ ಆನಂದ ನ್ಯಾಮಗೌಡಗೆ ಗೆಲುವು: ಅಧಿಕೃತ ಘೋಷಣೆಯೊಂದೇ ಬಾಕಿ
10:11 AM, 6 Nov

ಮಂಡ್ಯದಲ್ಲಿ ಜೆಡಿಎಸ್ ಅಭ್ಯರ್ಥಿ ಶಿವರಾಮೇಗೌಡಗೆ ಗೆಲುವು: ಅಧಿಕೃತ ಘೋಷಣೆಯೊಂದೇ ಬಾಕಿ
10:09 AM, 6 Nov

ಬಳ್ಳಾರಿಯಲ್ಲಿ ಉಗ್ರಪ್ಪ ದಾಖಲೆಯ ಗೆಲುವು, ಅಧಿಕೃತ ಘೋಷಣೆಯೊಂದೇ ಬಾಕಿ
Advertisement
10:07 AM, 6 Nov

ರಾಮನಗರ ಫಲಿತಾಂಶ ಪ್ರಕಟ: ಜೆಡಿಎಸ್ ನ ಅನಿತಾ ಕುಮಾರಸ್ವಾಮಿಗೆ ಭರ್ಜರಿ ಗೆಲುವು, ಅಧಿಕೃತ ಘೋಷಣೆಯೊಂದೇ ಬಾಕಿ
10:05 AM, 6 Nov

ಮಂಡ್ಯದಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಮತಗಳ ಅಂತರದಿಂದ ಗೆಲುವು ಸಾಧಿಸಿದ ಶಿವರಾಮೇಗೌಡ.
10:02 AM, 6 Nov

ನಾನು ತುಂಬಾ ವರ್ಷದಿಂದ ಸಾರ್ವಜನಿಕ ಬದುಕಿನಲ್ಲಿದ್ದೇನೆ, ಚುನಾವಣಾ ರಾಜಕೀಯ ಹೊಸದಿರಬಹುದು. ಆದರೆ, ನನಗೆ ಯಾವ ಟೆನ್ಷನ್​ ಇಲ್ಲ. ನಾನು ನಿನ್ನೆ, ಮೊನ್ನೆ ರಾಜಕಾರಣಕ್ಕೆ ಬಂದಿಲ್ಲ. ಭಾರಿ ಅಂತರದಿಂದ ಗೆಲ್ಲುವ ನಿರೀಕ್ಷೆಯಿದೆ- ವಿ ಎಸ್ ಉಗ್ರಪ್ಪ
10:00 AM, 6 Nov

ಜಮಖಂಡಿಯಲ್ಲಿ ಒಂಬತ್ತನೇ ಸುತ್ತಿನ ಮತ ಎಣಿಕೆ ಮುಕ್ತಾರ: ಕಾಂಗ್ರೆಸ್ಸಿಗೆ 20066 ಮತಗಳ ಮುನ್ನಡೆ.
9:57 AM, 6 Nov

ಬಳ್ಳಾರಿಯಲ್ಲಿ ಹೊಸ ದಾಖಲೆ ಬರೆದ ಉಗ್ರಪ್ಪ. ಸೋನಿಯಾ ಗಾಂಧಿ ದಾಖಲೆಯನ್ನು ಮುರಿದ ಉಗ್ರಪ್ಪ. ಸೋನಿಯಾಗಾಂಧಿ 56100 ಮತಗಳ ಅಂತರದಿಂದ ಸುಷ್ಮಾ ಸ್ವರಾಜ್ ಅವರನ್ನು ಸೋಲಿಸಿದ್ದರು.
Advertisement
9:52 AM, 6 Nov

ಬಳ್ಳಾರಿಯಲ್ಲಿ 1.5 ಲಕ್ಷಕ್ಕೂ ಅಧಿಕ ಮತಗಳ ಮುನ್ನಡೆ ಕಾಯ್ದುಕೊಂಡು ದಾಖಲೆ ಬರೆದ ಕಾಂಗ್ರೆಸ್ ನ ಉಗ್ರಪ್ಪ.
9:50 AM, 6 Nov

ಶಿವಮೊಗ್ಗದಲ್ಲಿ 14833 ಮತಗಳ ಅಂತರದಿಂದ ಮುನ್ನಡೆ ಕಾಯ್ದುಕೊಂಡ ಬಿಜೆಪಿಯ ಬಿ ವೈ ರಾಘವೇಂದ್ರ
9:46 AM, 6 Nov

ಲೋಕಸಭಾ ಮೂರು ಕ್ಷೇತ್ರಗಳಲ್ಲಿ ಮುನ್ನಡೆ: ಜೆಡಿಎಸ್ 1, -ಬಿಜೆಪಿ -1
9:45 AM, 6 Nov

ವಿಧಾನಸಭೆ ಎರಡು ಕ್ಷೇತ್ರಗಳಲ್ಲಿ ಮುನ್ನಡೆ: ಕಾಂಗ್ರೆಸ್-1, ಜೆಡಿಎಸ್- 1
9:38 AM, 6 Nov

ಆರನೇ ಸುತ್ತಿನಲ್ಲೂ ಬಳ್ಳಾರಿಯಲ್ಲಿ ಕಾಂಗ್ರೆಸ್ ನ ಉಗ್ರಪ್ಪ ಮುನ್ನಡೆ ಕಾಯ್ದುಕೊಂಡಿದ್ದು, ಗೆಲುವು ಬಹುತೇಕ ಖಚಿತ ಎನ್ನಿಸಿದೆ.
9:36 AM, 6 Nov

ಶಿವಮೊಗ್ಗದಲ್ಲಿ ಮುನ್ನಡೆ ಕಾಯ್ದುಕೊಂಡ ಬಿಜೆಪಿ. ಬಿ ವೈ ರಾಘವೇಂದ್ರ ಪಡೆದ ಮತಗಳು- 123447, ಮಧು ಬಂಗಾರಪ್ಪ ಪಡೆದ ಮತಗಳು-109465
9:27 AM, 6 Nov

ಬಳ್ಳಾರಿಯಲ್ಲಿ ಉಗ್ರಪ್ಪ 45808 ಮತಗಳ ಅಂತರದಿಂದ ಮುನ್ನಡೆ. ಬಿಜೆಪಿಗೆ ತೀವ್ರ ಮುಖಭಂಗ
9:25 AM, 6 Nov

ಶಿವಮೊಗ್ಗದಲ್ಲಿ ಬಿ ವೈ ರಾಘವೇಂದ್ರಗೆ 100091 ಮತಗಳು, ಮಧುಬಂಗಾರಪ್ಪಗೆ 94107 ಮತಗಳು.
9:24 AM, 6 Nov

ಮಂಡ್ಯದಲ್ಲಿ ಜೆಡಿಎಸ್ ಅಭ್ಯರ್ಥಿಗೆ ಭರ್ಜರಿ ಮುನ್ನಡೆ. ಗೆಲುವು ಖಚಿತ
9:22 AM, 6 Nov

ಜಮಖಂಡಿಯಲ್ಲಿ ಐದನೇ ಸುತ್ತಿನ ಮತಎಣಿಕೆ ಅಂತ್ಯ.28660 ಮತಗಳ ಅಂತರದಿಂದ ಸಿದ್ದು ನ್ಯಾಮಗೌಡ ಮುನ್ನಡೆ
9:19 AM, 6 Nov

ಮೊದಲ ಸುತ್ತಿನಿಂದಲೂ ಬಳ್ಳಾರಿಯಲ್ಲಿ ಉಗ್ರಪ್ಪ ಮುನ್ನಡೆ. ಬಿಜೆಪಿಯ ಜೆ ಶಾಂತಾ ಅವರಿಗೆ ತೀವ್ರ ಮುಖಭಂಗ
9:17 AM, 6 Nov

ಜಮಖಂಡಿಯಲ್ಲಿ 9300 ಮತಗಳ ಅಂತರದಿಂದ ಆನಂದ ನ್ಯಾಮಗೌಡ ಮುನ್ನಡೆ
9:12 AM, 6 Nov

ಮಂಡ್ಯದಲ್ಲಿ ಜೆಡಿಎಸ್ ಗೆ ಭಾರೀ ಮುನ್ನಡೆ. 67870 ಮತಗಳನ್ನು ಪಡೆದ ಶಿವರಾಮೇ ಗೌಡ, 25515 ಮತಗಳನ್ನು ಪಡೆದ ಸಿದ್ದರಾಮಯ್ಯ.
9:09 AM, 6 Nov

ಬಳ್ಳಾರಿಯಲ್ಲಿ ಮೂರನೇ ಸುತ್ತಿನ ಮತಎಣಿಕೆ ವೇಳೆಗೆ ಕಾಂಗ್ರೆಸ್ಸಿನ ಉಗ್ರಪ್ಪ 31138 ಮತಗಳ ಮುನ್ನಡೆ.
9:07 AM, 6 Nov

ಜಮಖಂಡಿಯಲ್ಲಿ ನಾಲ್ಕನೇ ಸುತ್ತಿನ ಮತ ಎಣಿಕೆ ಮುಕ್ತಾಯ. ಕಾಂಗ್ರೆಸ್ಸಿಗೆ 7145 ಮತಗಳ ಅಂತರದಿಂದ ಮುನ್ನಡೆ
9:00 AM, 6 Nov

ರಾಮನಗರದಲ್ಲಿ 6 ನೇ ಸುತ್ತಿನ ಮತ ಎಣಿಕೆ ಆರಂಭ. 37000 ಮತಗಳ ಅಂತರದಿಂದ ಜೆಡಿಎಸ್ ಮುನ್ನಡೆ
8:59 AM, 6 Nov

ಬಳ್ಳಾರಿಯಲ್ಲಿ ಎರಡನೇ ಸುತ್ತಿನಲ್ಲೂ ಮುನ್ನಡೆ ಕಾಯ್ದುಕೊಂಡ ಕಾಂಗ್ರೆಸ್
8:57 AM, 6 Nov

ಶಿವಮೊಗ್ಗದಲ್ಲಿ ಮಧುಬಂಗಾರಪ್ಪ ಮತ್ತು ಬಿ ವೈ ರಾಘವೇಂದ್ರ ನಡುವೆ ಬಿರುಸಿನ ಪೈಪೋಟಿ. ಕೆಲವೇ ಮತಗಳ ಅಂತರದಿಂದ ಬಿವೈ ರಾಘವೇಂದ್ರ ಮುನ್ನಡೆ
READ MORE

English summary
Karnataka By-elections results Live in Kannada: By-elections counting for Shivamogga, Ballari, Mandya Lok Sabha constituencies and Jamakhandi and Ramanagara assembly constituencies will be taking place on November 6, 2018. Here are LIVE updates
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X