ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇದು ಖದರ್: ಜೈಲಿಗೆ ಹೋಗುವ ಮುನ್ನವೂ ಸ್ಟಾರ್ ಆಗಿದ್ದ ಡಿಕೆಶಿ, ಉಪಚುನಾವಣೆಯ ವೇಳೆ ಸೂಪರ್ ಸ್ಟಾರ್

|
Google Oneindia Kannada News

Recommended Video

ಸಿದ್ದು ಖರ್ಗೆಗಿಂತ ಡಿಕೆಶಿಗೆ ಫುಲ್ ಡಿಮ್ಯಾಂಡ್ | Oneindia Kannada

ಕರ್ನಾಟಕದ ಪ್ರಭಾವೀ ಮತ್ತು ವರ್ಚಸ್ವೀ ಮುಖಂಡ ಡಿ.ಕೆ.ಶಿವಕುಮಾರ್ ಅವರಿಗೆ ಉಪಚುನಾವಣೆಯ ನಿರ್ಣಾಯಕ ಪ್ರಚಾರದ ವೇಳೆ ಆದಾಯ ತೆರಿಗೆ ಇಲಾಖೆ ನೊಟೀಸ್ ಬಂದಿದೆ. ವಿಚಾರಣೆಗೆ ಬರದೇ ಇದ್ದಲ್ಲಿ, ಏಕಪಕ್ಷೀಯ ನಿರ್ಧಾರ ತೆಗೆದುಕೊಳ್ಲಲಾಗುವುದು ಎನ್ನುವ ಸೂಚನೆಯೂ ಡಿಕೆಶಿಗೆ ಬಂದಿದೆ ಎನ್ನುವ ಸುದ್ದಿಯಿದೆ.

ಮನಿ ಲಾಂಡ್ರಿಂಗ್ ಕೇಸ್ ನಲ್ಲಿ ತಿಹಾರ್ ಜೈಲು ಶಿಕ್ಷೆ ಅನುಭವಿಸಿ ಹೊರಬಂದ, ಡಿಕೆಶಿಗೆ ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಸಿಕ್ಕ ಸ್ವಾಗತ, ಕಾರ್ಯಕರ್ತರ ಅಭಿಮಾನ ಸಾಕಷ್ಟು ಸುದ್ದಿಯಾಗಿತ್ತು.

ಒಂದು ದಿನವಾದ್ರೂ ಪ್ರಚಾರಕ್ಕೆ ಬನ್ನಿ: ಕಾಂಗ್ರೆಸ್ ಅಭ್ಯರ್ಥಿ ಡಿಕೆಶಿಗೆ ದುಂಬಾಲುಒಂದು ದಿನವಾದ್ರೂ ಪ್ರಚಾರಕ್ಕೆ ಬನ್ನಿ: ಕಾಂಗ್ರೆಸ್ ಅಭ್ಯರ್ಥಿ ಡಿಕೆಶಿಗೆ ದುಂಬಾಲು

ಕೇಂದ್ರ ಸರಕಾರ ಉದ್ದೇಶಪೂರ್ವಕವಾಗಿಯೇ ಡಿಕೆಶಿಯನ್ನು ಐಟಿ/ಇಡಿ/ಸಿಬಿಐ ಮೂಲಕ ತಗಲಾಕಲು ಯತ್ನಿಸುತ್ತಿದೆ ಎನ್ನುವುದನ್ನು ಬಲವಾಗಿ ನಂಬಿರುವ ವರ್ಗಗಳಿವೆ. ಅದೇನೇ ಇರಲಿ, ಉಪಚುನಾವಣೆಯಲ್ಲಿ ನಿಧಾನಗತಿಯಲ್ಲಿ ಪ್ರಚಾರದಲ್ಲಿ ತೊಡಗಿಗಿಸಿಕೊಂಡಿದ್ದ ಡಿಕೆಶಿ, ಭಾನುವಾರದ (ಡಿ 1) ಹೊತ್ತಿಗೆ, ಸಂಪೂರ್ಣವಾಗಿ ಪ್ರಚಾರದಲ್ಲಿ ಮುಳುಗಿದ್ದರು.

ರಾಜ್ಯ ರಾಜಕೀಯದಲ್ಲಿ ಬಿರುಗಾಳಿ: ಸಿದ್ದರಾಮಯ್ಯ ಬೆಚ್ಚಿಬೀಳಿಸುವ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರಕಾರ?ರಾಜ್ಯ ರಾಜಕೀಯದಲ್ಲಿ ಬಿರುಗಾಳಿ: ಸಿದ್ದರಾಮಯ್ಯ ಬೆಚ್ಚಿಬೀಳಿಸುವ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರಕಾರ?

ಕ್ಯಾಬಿನೆಟ್ ಮೀಟಿಂಗ್ ವೇಳೆ, ಮುಖ್ಯಮಂತ್ರಿ ಯಡಿಯೂರಪ್ಪನವರು ತಮ್ಮತಮ್ಮ ಕ್ಷೇತ್ರಗಳಿಗೆ ಪ್ರಚಾರಕ್ಕೆ ಬರುವಂತೆ, ಸಚಿವರುಗಳು ಹಠ ಹಿಡಿದಿದ್ದರಂತೆ. ಅದೇ ರೀತಿ, ಕಾಂಗ್ರೆಸ್ಸಿನ ವಿಚಾರಕ್ಕೆ ಬಂದಾಗ, ಅದು ಡಿ.ಕೆ.ಶಿವಕುಮಾರ್.

ಸಮ್ಮಿಶ್ರ ಸರಕಾರಕ್ಕೆ ಕೈಕೊಟ್ಟ ಅನರ್ಹ ಶಾಸಕರು

ಸಮ್ಮಿಶ್ರ ಸರಕಾರಕ್ಕೆ ಕೈಕೊಟ್ಟ ಅನರ್ಹ ಶಾಸಕರು

ತಮ್ಮ ಸತತ ಪ್ರಯತ್ನವನ್ನು ಧಿಕ್ಕರಿಸಿ, ಸಮ್ಮಿಶ್ರ ಸರಕಾರಕ್ಕೆ ಕೈಕೊಟ್ಟ ಕೆಲವೊಂದು ಅನರ್ಹ ಶಾಸಕರ ಕ್ಷೇತ್ರಗಳಿಗೆ ಮಾತ್ರ, ಡಿ.ಕೆ.ಶಿವಕುಮಾರ್ ಪ್ರಚಾರಕ್ಕೆ ಹೋಗಬಹುದು ಎನ್ನುವ ಸುದ್ದಿ ಆರಂಭದಲ್ಲಿ ಚಾಲ್ತಿಯಲ್ಲಿತ್ತು. ಅದೇ ದಿಕ್ಕಿನಲ್ಲಿ ಅವರ ಪ್ರಚಾರವೂ ಸಾಗುತ್ತಿತ್ತು. ಆದರೆ, ಕ್ಷೇತ್ರಕ್ಕೆ ಪ್ರಚಾರಕ್ಕೆ ಬರಲೇಬೇಕು ಎಂದು ಅಭ್ಯರ್ಥಿಗಳು ದಂಬಾಲು ಬಿದ್ದಾಗ, ಡಿಕೆಶಿ, ಬಹುತೇಕ ಎಲ್ಲಾ ಕ್ಷೇತ್ರಗಳಿಗೆ ಪ್ರಚಾರಕ್ಕೆ ಹೋಗಲಾರಂಭಿಸಿದರು.

ಸಿದ್ದರಾಮಯ್ಯ, ಹಿರಿಯ ಮುಖಂಡ ಮಲ್ಲಿಕಾರ್ಜುನ ಖರ್ಗೆ

ಸಿದ್ದರಾಮಯ್ಯ, ಹಿರಿಯ ಮುಖಂಡ ಮಲ್ಲಿಕಾರ್ಜುನ ಖರ್ಗೆ

ಕಾಂಗ್ರೆಸ್ ವಲಯದ ಪ್ರಕಾರ, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಹಿರಿಯ ಮುಖಂಡ ಮಲ್ಲಿಕಾರ್ಜುನ ಖರ್ಗೆಯವರನ್ನೂ ಮೀರಿಸುವಂತೆ, ಡಿಕೆಶಿಗೆ ಪ್ರಚಾರಕ್ಕೆ ಬರುವಂತೆ ಒತ್ತಡವಿತ್ತು. ಎಲ್ಲಾ ಅಭ್ಯರ್ಥಿಗಳು ನೇರವಾಗಿ, ಅಥವಾ, ಡಿಕೆಶಿ ಆಪ್ತರ ಮೂಲಕ ಒತ್ತಡ ಹೇರುತ್ತಿದ್ದರು. ಇದಕ್ಕೆ ಬಲವಾದ ಕಾರಣ, ಡಿಕೆಶಿ ಪ್ರತಿನಿಧಿಸುವ ಸಮುದಾಯ.

ಕೆ.ಆರ್.ಪೇಟೆಯಲ್ಲಿ ಪ್ರಚಾರ

ಕೆ.ಆರ್.ಪೇಟೆಯಲ್ಲಿ ಪ್ರಚಾರ

ಉದಾಹರಣೆಗೆ ಕೆ.ಆರ್.ಪೇಟೆಯ ಕಾಂಗ್ರೆಸ್ ಅಭ್ಯರ್ಥಿ, ನೇರವಾಗಿ ಬೆಂಗಳೂರು ಸದಾಶಿವನಗರದ ಡಿಕೆಶಿಗೆ ಮನೆಗೆ ಬಂದು ಪ್ರಚಾರಕ್ಕೆ ಬರುವಂತೆ ಕಣ್ಣೀರು ಹಾಕಿ ಹೋಗಿದ್ದರು ಎನ್ನುವ ಸುದ್ದಿಯೂ ಇದೆ. ಆರೋಗ್ಯದ ಸಮಸ್ಯೆಯಿದೆ ಎಂದು ಮನವರಿಕೆ ಮಾಡಿದರೂ, ಪ್ರಚಾರಕ್ಕೆ ಬರುವಂತೆ ಡಿಕೆಶಿಗೆ ಒತ್ತಡವಿದೆ. ಉಪಚುನಾವಣೆ ನಡೆಯುತ್ತಿರುವ ಹದಿನೈದು ಕ್ಷೇತ್ರಗಳ ಪೈಕಿ, ಹೆಚ್ಚಿನ ಕ್ಷೇತ್ರಗಳಲ್ಲಿ, ಒಕ್ಕಲಿಗ ಸಮುದಾಯ ನಿರ್ಣಾಯಕ ಪಾತ್ರವನ್ನು ವಹಿಸುತ್ತದೆ.

ಜೈಲಿಗೆ ಹೋಗಿ ಬಂದವರು ಎನ್ನುವ ಅನುಕಂಪ

ಜೈಲಿಗೆ ಹೋಗಿ ಬಂದವರು ಎನ್ನುವ ಅನುಕಂಪ

ಪ್ರಚಾರಕ್ಕೆ ಬರುವಂತೆ ಇರುವ ಒತ್ತಡದ ಹಿಂದೆ ಕಾರಣ ಬೇರೇಯೇ ಇದೆ. ಜೈಲಿಗೆ ಹೋಗಿ ಬಂದವರು ಎನ್ನುವ ಅನುಕಂಪ ಇರುವುದರಿಂದ ಡಿಕೆಶಿ ಕ್ಷೇತ್ರಕ್ಕೆ ಬಂದು ಒಂದು ರೌಂಡ್ ಪ್ರಚಾರ ಮಾಡಿದರೆ ತಮ್ಮ ಪರವಾಗಿ ಹವಾ ಶುರುವಾಗಬಹುದು ಎನ್ನುವ ಲೆಕ್ಕಾಚಾರವನ್ನು ಅಭ್ಯರ್ಥಿಗಳು ಹೊಂದಿದ್ದಾರೆ. ಯಶವಂತಪುರದ ಅಭ್ಯರ್ಥಿಯೂ ಪ್ರಚಾರಕ್ಕೆ ಬರುವಂತೆ ಮನವಿ ಮಾಡಿದ್ದಾರೆ.

ಡಿಕೆಶಿ ಜೈಲಿನಿಂದ ಬಂದ ನಂತರವೂ ಪಕ್ಷದ ಪಾಲಿಗೆ ಸೂಪರ್ ಸ್ಟಾರ್

ಡಿಕೆಶಿ ಜೈಲಿನಿಂದ ಬಂದ ನಂತರವೂ ಪಕ್ಷದ ಪಾಲಿಗೆ ಸೂಪರ್ ಸ್ಟಾರ್

ಒಂದು ವಿಚಾರ ಏನಂದರೆ, ಉಪಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವ ಕಾಂಗ್ರೆಸ್ ಅಭ್ಯರ್ಥಿಗಳಲ್ಲಿ ಬಹುತೇಕರು ಸಿದ್ದರಾಮಯ್ಯ ಬಣಕ್ಕೆ ಸೇರಿದವರು ಎನ್ನುವುದು ಗೊತ್ತಿರುವ ವಿಚಾರ. ಒಂದು ಸಮುದಾಯದ ಬೆಂಬಲ, ಜೈಲಿಗೆ ಹೋಗಿ ಬಂದವರು ಎನ್ನುವ ಅನುಕಂಪ, ವಿರೋಧಿಗಳ ಮೇಲೆ ವಾಕ್ ಪ್ರಹಾರ ನಡೆಸುವ ಚತುರತೆ, ಇವೆಲ್ಲವೂ ಡಿಕೆಶಿಗೆ ಈ ಮಟ್ಟಕ್ಕೆ ಡಿಮಾಂಡ್ ಇರಲು ಕಾರಣವಿರುವ ಅಂಶಗಳು. ಹಾಗಾಗಿ, ಜೈಲಿಗೆ ಹೋಗುವ ಮೊದಲೇ ಕಾಂಗ್ರೆಸ್ಸಿನಲ್ಲಿ ಸ್ಟಾರ್ ಆಗಿದ್ದ ಡಿಕೆಶಿ ಜೈಲಿನಿಂದ ಬಂದ ನಂತರವೂ ಪಕ್ಷದ ಪಾಲಿಗೆ ಸೂಪರ್ ಸ್ಟಾರ್ ಆಗಿದ್ದಾರೆ ಎನ್ನುವುದು ಮೇಲ್ನೋಟಕ್ಕೆ ಕಾಣುವ ಅಂಶಗಳು.

English summary
Karnataka By Elections In 15 Seat: Congress Leader DK Shivakumar In Full Swing And In Full Demand.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X