ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download
LIVE

ಕರ್ನಾಟಕದ 15 ವಿಧಾನಸಭಾ ಉಪ ಚುನಾವಣಾ ಫಲಿತಾಂಶದ ಸಮಗ್ರ ಚಿತ್ರಣ

|
Google Oneindia Kannada News

ಬೆಂಗಳೂರು, ಡಿಸೆಂಬರ್ 09: ಬಿ.ಎಸ್ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರದ ಅಳಿವು ಉಳಿವಿನ ಪ್ರಶ್ನೆಗೆ ಸೋಮವಾರ ಉತ್ತರ ಸಿಕ್ಕಿದೆ. ರಾಜ್ಯದಲ್ಲಿ ನಡೆದ 15 ವಿಧಾನಸಭಾ ಕ್ಷೇತ್ರಗಳ ಪೈಕಿ ಬಿಜೆಪಿ 12, ಕಾಂಗ್ರೆಸ್ 2, ಹಾಗೂ ಪಕ್ಷೇತರ ಅಭ್ಯರ್ಥಿ 1 ಸ್ಥಾನದಲ್ಲಿ ಗೆಲುವು ದಾಖಲಿಸಿದ್ದಾರೆ.

15 ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆಯ ಮತ ಎಣಿಕೆ ಕಾರ್ಯ ಡಿಸೆಂಬರ್ 9ರಂದು ನಡೆಯಿತು. ಗುರುವಾರ(ಡಿಸೆಂಬರ್ 05)ರಂದು ಎಲ್ಲಾ ಕ್ಷೇತ್ರಗಳಿಂದ ಶೇ 67.90ರಷ್ಟು ಮತದಾನ ದಾಖಲಾಗಿತ್ತು ಎಂದು ಚುನಾವಣಾ ಆಯೋಗ ಮಾಹಿತಿ ನೀಡಿತ್ತು.

ಉಪ ಸಮರ ಫಲಿತಾಂಶದ ಬಗ್ಗೆ ಅನರ್ಹ ಶಾಸಕರಿಗೇಕೆ ಆತಂಕ?ಉಪ ಸಮರ ಫಲಿತಾಂಶದ ಬಗ್ಗೆ ಅನರ್ಹ ಶಾಸಕರಿಗೇಕೆ ಆತಂಕ?

ಡಿಸೆಂಬರ್ 09ರಂದು ಸೋಮವಾರ ಬೆಳಗ್ಗೆ 8 ಗಂಟೆಗೆ 15 ಕ್ಷೇತ್ರಗಳಲ್ಲಿಯೂ ಮತ ಎಣಿಕೆ ಆರಂಭವಾಯಿತು. ಮಧ್ಯಾಹ್ನ 1 ಗಂಟೆಯ ವೇಳೆಗೆ ಚುನಾವಣಾ ಫಲಿತಾಂಶದ ಸ್ಪಷ್ಟ ಚಿತ್ರಣ ಹೊರ ಬಿದ್ದು, ಬಿ.ಎಸ್.ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಸುರಕ್ಷಿತವಾಯಿತು.

Karnataka By-Election Results 2019 LIVE Updates

ಬೆಳಗ್ಗೆ 6.30ಕ್ಕೆ ಮತ ಎಣಿಕೆ ಸಿಬ್ಬಂದಿ ಕೇಂದ್ರಕ್ಕೆ ಆಗಮಿಸಿದ್ದು, 7.30ಕ್ಕೆ ಸ್ಟ್ರಾಂಗ್ ರೂಂ ತೆರೆಯಲಾಗುತ್ತದೆ.

ಮಾಧ್ಯಮ ಪ್ರತಿನಿಧಿಗಳಿಗೆ ಮೊಬೈಲ್ ಬಳಕೆ ಮಾಡಲು ಅವಕಾಶವಿದ್ದು, ಅವರಿಗೆ ಪ್ರತ್ಯೇಕ ಸ್ಥಳ ನಿಗದಿ ಮಾಡಲಾಗಿದೆ. ಮತ ಎಣಿಕೆಯ ನೇರ ವರದಿ, ಕ್ಷಣಕ್ಷಣದ ಅಪ್ಡೇಟ್ ಗಳ ಜೊತೆಗೆ ರಾಜಕೀಯ ಚಟುವಟಿಕೆಗಳ ಸ್ಪಷ್ಟ ಮಾಹಿತಿಗಾಗಿ ಈ ಪುಟವನ್ನು ಓದಿರಿ.

Read in English

Newest FirstOldest First
5:54 PM, 9 Dec

ರಾಜ್ಯದ ಮತದಾರಬಂಧುಗಳಿಗೆ, ಬಿಜೆಪಿ ಕಾರ್ಯಕರ್ತರಿಗೆ ವಂದನೆ ಅಭಿನಂದನೆ ಎಂದ ಸಿಎಂ ಬಿ.ಎಸ್.ಯಡಿಯೂರಪ್ಪ
5:52 PM, 9 Dec

ಬೆಂಗಳೂರಿನಲ್ಲಿ ಗಾರ್ಬೇಜ್ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಮುಖ್ಯವಾಗ ಗಮನ ಹರಿಸಬೇಕಿದೆ- ಸಿಎಂ ಬಿ.ಎಸ್.ಯಡಿಯೂರಪ್ಪ
5:52 PM, 9 Dec

ಬೆಂಗಳೂರನ್ನು ಮಾಡ್ರನ್ ಸಿಟಿ ಮಾಡಬೇಕಿದೆ. ಪ್ರಾಮಾಣಿಕ ಕಾರ್ಯದಿಂದ ಎಲ್ಲವೂ ಸಾಧ್ಯವಾಗುತ್ತದೆ. ವ್ಯವಸ್ಥಿತ ರೀತಿಯಲ್ಲಿ ಅಭಿವೃದ್ಧಿ ಕಾರ್ಯ ನಡೆಯಬೇಕು -ಸಿಎಂ ಬಿ.ಎಸ್.ಯಡಿಯೂರಪ್ಪ
5:50 PM, 9 Dec

ಸಾಮೂಹಿಕ ನೇತೃತ್ವವೇ ನಮ್ಮ ದೊಡ್ಡ ಗೆಲುವಿಗೆ ಕಾರಣವಾಗಿದ್ದು, ಪಕ್ಷ ಮತ್ತು ಸರ್ಕಾರ ಒಟ್ಟಾಗಿ ಕೆಲಸ ಮಾಡುತ್ತೇವೆ - ಸಿಎಂ ಬಿ.ಎಸ್.ಯಡಿಯೂರಪ್ಪ
5:48 PM, 9 Dec

ಕರ್ನಾಟಕ ಅಭಿವೃದ್ಧಿ ಬಗ್ಗೆ ಸಾಮಾನ್ಯ ಜನರು ಕುಳಿತಲ್ಲಿ, ನಿಂತಲ್ಲಿ ಮಾತನಾಡುವಂತೆ ಮಾಡುವುದೇ ನನ್ನ ಉದ್ದೇಶ - ಸಿಎಂ ಬಿ.ಎಸ್.ಯಡಿಯೂರಪ್ಪ
5:48 PM, 9 Dec

ಕಾಂಗ್ರೆಸ್, ಜೆಡಿಎಸ್ ಬಗ್ಗೆ ಟೀಕಿಸಿದರೆ ನಾವು ಸಾಧನೆ ಮಾಡುವುದೇನಿಲ್ಲ. ಅವರ ರಾಜೀನಾಮೆ ಬಗ್ಗೆ ತಲೆಕೆಡಿಸಿಕೊಳ್ಳುವ ಅಗತ್ಯವಿಲ್ಲ - ಸಿಎಂ ಬಿ.ಎಸ್.ಯಡಿಯೂರಪ್ಪ
5:47 PM, 9 Dec

ರೈತರ ಬಗ್ಗೆ ಹೆಚ್ಚು ಕಾಳಜಿ, ನಿರುದ್ಯೋಗ ಸಮಸ್ಯೆ ಬಗೆಹರಿಸುವತ್ತ ಹೆಚ್ಚು ಗಮನ ಹರಿಸ ಕೆಲಸ ಮಾಡುತ್ತೇವೆ - ಸಿಎಂ ಬಿ.ಎಸ್.ಯಡಿಯೂರಪ್ಪ
Advertisement
5:45 PM, 9 Dec

ಮುಂದಿನ ಮೂರೂವರೆ ವರ್ಷಗಳ ಕಾಲ ರಾಜ್ಯದ ಜನರಿಗಾಗಿ ಕೆಲಸವನ್ನು ಮಾಡುತ್ತೇವೆ
5:45 PM, 9 Dec

ಬಿಜೆಪಿ ನಾಯಕರು, ಕಾರ್ಯಕರ್ತರ ಪರಿಶ್ರಮದ ಪ್ರಭಾವದಿಂದ 12 ಕ್ಷೇತ್ರಗಳಲ್ಲಿ ಗೆಲುವು. 45 ರಿಂದ 50 ಸಾವಿರ ಅಂತರದಿಂದ ಗೆದ್ದಿರುವುದು ಒಂದು ದಾಖಲೆ - ಸಿಎಂ ಬಿ.ಎಸ್.ಯಡಿಯೂರಪ್ಪ
5:44 PM, 9 Dec

ದೇಶದ ಗಮನ ಸೆಳೆದ ಚುನಾವಣೆಯಲ್ಲಿ ನಿರೀಕ್ಷೆಯಂತೆ 12 ಸ್ಥಾನ ಗೆದ್ದು ದಾಖಲೆ ನಿರ್ಮಿಸಿದ್ದೇವೆ- ಸಿಎಂ ಬಿ.ಎಸ್.ಯಡಿಯೂರಪ್ಪ
5:43 PM, 9 Dec

ಬಿಜೆಪಿ ಸುದ್ದಿಗೋಷ್ಠಿಯಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮಾತು
5:42 PM, 9 Dec

ಬಿಜೆಪಿ ಸರ್ಕಾರ ಸುಭದ್ರವಾಗಿರಲಿ ಎಂದು ಜನತಾ ಜನಾರ್ಧನರೇ ತೀರ್ಪು ಕೊಟ್ಟಿದ್ದಾರೆ - ಸಚಿವ ಆರ್.ಅಶೋಕ್
Advertisement
5:42 PM, 9 Dec

ಉಪ ಚುನಾವಣೆಯಲ್ಲಿ ಹೆಚ್.ಡಿ.ರೇವಣ್ಣನವರ ನಿಂಬೆಹಣ್ಣು ಯಾವುದೇ ಕೆಲಸ ಮಾಡಿಲ್ಲ - ಸಚಿವ ಆರ್.ಅಶೋಕ್
5:41 PM, 9 Dec

ಕಾಂಗ್ರೆಸ್ ಪಾಲಿಗೆ ಇದು ಅತ್ಯಂತ ಕೆಟ್ಟ ಫಲಿತಾಂಶ. ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಭವಿಷ್ಯ ಸುಳ್ಳಾಗಿದೆ - ಸಚಿವ ಆರ್.ಅಶೋಕ್
5:40 PM, 9 Dec

ಹೊಸಕೋಟೆಯಲ್ಲಿ ಕೂಡಾ ಬಿಜೆಪಿ ಗೆಲುವು ದಾಖಲಿಸಬೇಕಿತ್ತು, ನಮ್ಮ ಪಕ್ಷದವರೇ ದ್ರೋಹ ಮಾಡಿದ್ದಕ್ಕೆ ಸೋಲು ಕಂಡಿದ್ದೇವೆ - ಸಚಿವ ಆರ್.ಅಶೋಕ್
5:39 PM, 9 Dec

ಉಪ ಚುನಾವಣೆಯಲ್ಲಿ ಬಿಜೆಪಿಗೆ ಬೊಂಬಾಟ್ ರಿಸಲ್ಟ್ ಬಂದಿದೆ ಎಂದ ಸಚಿವ ಆರ್.ಅಶೋಕ್
5:38 PM, 9 Dec

ಕಾಂಗ್ರೆಸ್ ನಲ್ಲಿ ನಾಯಕರ ಮಧ್ಯೆ ಹೊಂದಾಣಿಕೆಯಿಲ್ಲ, ಕಾರ್ಯಕರ್ತರಲ್ಲಿ ಉತ್ಸಾಹ ಇರಲಿಲ್ಲ. ನಮ್ಮ ಪಕ್ಷದಲ್ಲಿ ಈ ರೀತಿಯ ಕೊರತೆ ಇರಲಿಲ್ಲ - ಸಚಿವ ಆರ್.ಅಶೋಕ್
5:37 PM, 9 Dec

ಬಿಜೆಪಿ ಸರ್ಕಾರ ಸೇಫ್ ಆಗುವಂತಾ ಸೇತುವೆಯನ್ನು ರಾಜ್ಯದ ಜನರೇ ನಿರ್ಮಿಸಿದ್ದಾರೆ- ಸಚಿವ ಆರ್.ಅಶೋಕ್
5:35 PM, 9 Dec

ಮುಂದಿನ ದಿನಗಳಲ್ಲಿ ಬಿಜೆಪಿ ಸರ್ಕಾರದಿಂದ ಉತ್ತಮ ಆಡಳಿತ - ಶಾಸಕ ಅರವಿಂದ್ ಲಿಂಬಾವಳಿ
5:32 PM, 9 Dec

ಸ್ಥಿರ ಸರ್ಕಾರಕ್ಕಾಗಿ ರಾಜ್ಯದ ಜನರು ಮತದಾನ ಮಾಡಿದ್ದಾರೆ. ಬಹು ವರ್ಷಗಳ ನಂತರ ಕೇಂದ್ರ ಮತ್ತು ರಾಜ್ಯದಲ್ಲಿ ಒಂದೇ ಸರ್ಕಾರ ಅಸ್ತಿತ್ವಕ್ಕೆ ಬಂದಿದೆ- ಶಾಸಕ ಅರವಿಂದ್ ಲಿಂಬಾವಳಿ ಹೇಳಿಕೆ
5:29 PM, 9 Dec

ಉಪ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಿ ಗೆಲುವು ಸಾಧಿಸಿರುವ ಅಭ್ಯರ್ಥಿಗಳಿಗೆ ಸನ್ಮಾನ
5:28 PM, 9 Dec

ಉಪ ಚುನಾವಣೆಯಲ್ಲಿ ಬಿಜೆಪಿ ಗೆಲುವು ಹಿನ್ನೆಲೆಯಲ್ಲಿ ಕೃತಜ್ಞತಾ ಸಭೆ ನಡೆಸಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ
5:27 PM, 9 Dec

ಬೆಂಗಳೂರಿನ ಬಿಜೆಪಿ ಕಚೇರಿಯಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸುದ್ಧಿಗೋಷ್ಠಿ
5:06 PM, 9 Dec

ಸಂಜೆ 5.30ಕ್ಕೆ ನಿಗದಿಯಾಗಿದ್ದ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ರಾಜೀನಾಮೆ ರದ್ದು
4:52 PM, 9 Dec

ಕೆಪಿಸಿಸಿ ಕಾರ್ಯಾಧ್ಯಕ್ಷರ ಸ್ಥಾನಕ್ಕೆ ಈಶ್ವರ ಖಂಡ್ರೆ ರಾಜೀನಾಮೆ ಘೋಷಣೆ, ಇಂದು ಸಂಜೆ 5.30ಕ್ಕೆ ಸುದ್ದಿಗೋಷ್ಠಿ
4:27 PM, 9 Dec

ಹೈಕಮಾಂಡ್ ನನ್ನ ಮೇಲೆ ನಂಬಿಕೆ ಇಟ್ಟಿತ್ತು

ಹೈಕಮಾಂಡ್ ನನ್ನ ಮೇಲೆ ನಂಬಿಕೆ ಇಟ್ಟಿತ್ತು, ನನಗೆ ವಹಿಸಿದ್ದ ಜವಾಬ್ದಾರಿಯನ್ನು ನಿಭಾಯಿಸಿದ್ದೇನೆ, ಸಿದ್ದರಾಮಯ್ಯ, ಡಿಕೆ ಶಿವಕುಮಾರ್, ಮಲ್ಲಿಕಾರ್ಜುನ ಖರ್ಗೆ ಕೂಡ ಚುನಾವಣೆಯಲ್ಲಿ ಕೆಲಸ ಮಾಡಿದ್ದಾರೆ-ದಿನೇಶ್ ಗುಂಡೂರಾವ್
4:27 PM, 9 Dec

ದಿನೇಶ್‌ ಗುಂಡೂರಾವ್ ರಾಜೀನಾಮೆ

ದಿನೇಶ್‌ ಗುಂಡೂರಾವ್ ರಾಜೀನಾಮೆ
ಉಪ ಚುನಾವಣೆಯ ಸೋಲಿನ ಹೊಣೆ ಹೊತ್ತು ರಾಜೀನಾಮೆ ನೀಡುತ್ತಿದ್ದೇನೆ- ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್
4:22 PM, 9 Dec

ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಸುದ್ದಿಗೋಷ್ಠಿ

ಮತದಾರರ ತೀರ್ಪನ್ನು ಒಪ್ಪಿಕೊಳ್ಳುತ್ತೇವೆ, ಫಲಿತಾಂಶ ನೋಡಿ ನಮ್ಮ ನಿರೀಕ್ಷೆ ಹುಸಿಯಾಗಿದೆ. ನಮ್ಮ ನಾಯಕರೂ ಪ್ರಚಾರ ಮಾಡಿದ್ದರು. ಜನತೆ ಒಳ್ಳೆಯ ತೀರ್ಪು ನೀಡುತ್ತೆ ಎಂಬ ನಿರೀಕ್ಷೆ ಇತ್ತು. ಆದರೆ ಹುಸಿಯಾಗಿದೆ.
3:42 PM, 9 Dec

ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ

ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ
ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ ಕೊಟ್ಟಿದ್ದಾರೆ.
3:24 PM, 9 Dec

ಶರತ್ ಬಚ್ಚೇಗೌಡ ಅಭಿಮಾನಿ ಸಾವು

ಹೊಸಕೋಟೆ: ಸಂಭ್ರಮಾಚರಣೆ ವೇಳೆ ಹೃದಯಾಘಾತದಿಂದ ಅಭಿಮಾನಿ ಸಾವು, ಪಕ್ಷೇತರ ಅಭ್ಯರ್ಥಿ ಶರತ್ ಬಚ್ಚೇಗೌಡ ಅಭಿಮಾನಿ ಸಾವು. ಹೊಸಕೋಟೆ ತಾಲೂಕಿನ ಕಟ್ಟಿಗೇನಹಳ್ಳಿಯಲ್ಲಿ ಘಟನೆ ನಡೆದಿದೆ. ಗ್ರಾಮದ ರಿಯಾಜ್ ಬೇಗ್ ( 50 ) ಮೃತ ಅಭಿಮಾನಿ. ಸಂಭ್ರಮಾಚರಣೆ ವೇಳೆ ಕುಸಿದು ಬಿದ್ದು ಸಾವು.
READ MORE

English summary
Karnataka By-Elections Results 2019 Live Updates in Kannada : Get all the live updates on constituency wise and party wise results. Latest Breaking News, Pictures and Videos only on kannada oneindia.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X