• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಉಪಚುನಾವಣೆ ಸೋಲು: ವರಿಷ್ಠರಿಗೆ ಡಿಕೆಶಿ ನೀಡಿದ ವರದಿಯಲ್ಲಿ ಉಲ್ಲೇಖವಾದ ಕುತೂಹಲಕಾರಿ ಅಂಶಗಳು

|

ಶಿರಾ ಮತ್ತು ರಾಜರಾಜೇಶ್ವರಿ ನಗರ ಅಸೆಂಬ್ಲಿ ಉಪಚುನಾವಣೆಯಲ್ಲಿ ಆದ ಸೋಲಿನ ಆಘಾತದಿಂದ ಇನ್ನೂ ಕಾಂಗ್ರೆಸ್ ಮುಖಂಡರು ಇನ್ನೂ ಹೊರ ಬಂದಿಲ್ಲವೇ? ಈ ಪರಾಜಯದ ಆತ್ಮವಿಮರ್ಶೆ ಮಾಡಿಕೊಳ್ಳಲು, ದೀಪಾವಳಿಯ ನಂತರ ಸಭೆ ಕರೆಯಲಾಗಿದೆ.

ಎರಡು ಕ್ಷೇತ್ರದಲ್ಲಿ, ಅದರಲ್ಲೂ ಆರ್.ಆರ್.ನಗರದಲ್ಲಿ ಸೋಲಿನ ಅಂತರ ಕಾಂಗ್ರೆಸ್ ಮುಖಂಡರನ್ನು ಆತಂಕಕ್ಕೀಡುಮಾಡಿದೆ ಎಂದು ಹೇಳಲಾಗುತ್ತಿದೆ. ಜೊತೆಗೆ, ಆರ್.ಆರ್.ನಗರ ಕ್ಷೇತ್ರಕ್ಕೆ ಆಯ್ಕೆ ಮಾಡಿದ ಅಭ್ಯರ್ಥಿಯ ಬಗ್ಗೆಯೂ ಕೆಲವು ಹಿರಿಯ ಕಾಂಗ್ರೆಸ್ ಮುಖಂಡರು ಆಕ್ಷೇಪ ವ್ಯಕ್ತಪಡಿಸಿದ್ದಾರೆ ಎನ್ನುವ ಮಾತಿದೆ.

ಆರ್.ಆರ್ ನಗರ ಸೋಲಿಸಿದ್ದು ಸಿದ್ದರಾಮಯ್ಯ, ಶಿರಾ ಕ್ಷೇತ್ರ ಸೋಲಿಸಿದ್ದು ಡಿಕೆಶಿ: ಕಟೀಲ್

ಬಿಹಾರದಲ್ಲಾದ ತೀವ್ರ ಅವಮಾನಕರ ಸೋಲಿನ ಜೊತೆಗೆ ಐದು ರಾಜ್ಯಗಳಲ್ಲಿನ ಅಸೆಂಬ್ಲಿ ಉಪಚುನಾವಣೆಯಲ್ಲಿ ಪಕ್ಷಕ್ಕಾದ ಹಿನ್ನಡೆಯಿಂದ, ಕಾಂಗ್ರೆಸ್ ಹೈಕಮಾಂಡ್ ಕೂಡಾ ಜರ್ಝರಿತವಾಗಿದ್ದು, ಸೋಲಿನ ಪರಾಮರ್ಶೆಯಲ್ಲಿ ತೊಡಗಿದೆ.

ಖುರ್ಚಿ ಉಳಿಸಿಕೊಳ್ಳಲು ಸಿದ್ದರಾಮಯ್ಯ, ಡಿಕೆಶಿ ಕಚ್ಚಾಟ; ಸೋಮಶೇಖರ್

ಇವೆಲ್ಲದರ ನಡುವೆ, ಕರ್ನಾಟಕದ ಉಪಚುನಾವಣೆಯಲ್ಲಿ ಕಾಂಗ್ರೆಸ್ ಸೋಲಲು ಕಾರಣವಾದ ಅಂಶದ ಬಗ್ಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಹೈಕಮಾಂಡ್ ಗೆ ವರದಿ ನೀಡಿದ್ದು, ಹಲವು ಅಂಶಗಳನ್ನು ಪ್ರಸ್ತಾವಿಸಿದ್ದಾರೆ.

ಇವಿಎಂ ಹ್ಯಾಕ್ ಆಗಿರುವ ಎಲ್ಲಾ ಸಾಧ್ಯತೆಯಿದೆ

ಇವಿಎಂ ಹ್ಯಾಕ್ ಆಗಿರುವ ಎಲ್ಲಾ ಸಾಧ್ಯತೆಯಿದೆ

ಶಿರಾ ಮತ್ತು ಆರ್.ಆರ್.ನಗರದಲ್ಲಿ ಕಾಂಗ್ರೆಸ್ ಗೆಲ್ಲ ಬೇಕಿತ್ತು. ಕ್ಷೇತ್ರದ ಚಿತ್ರಣವೂ ಕಾಂಗ್ರೆಸ್ ಪರವಾಗಿಯೇ ಇತ್ತು. ಇನ್ನು, ಆರ್.ಆರ್.ನಗರದಲ್ಲಿ ಸ್ಥಳೀಯ ಬಿಜೆಪಿ ಮುಖಂಡರು ಮತ್ತು ಕಾರ್ಯಕರ್ತರೇ ನನ್ನಲ್ಲಿ ಬಿಜೆಪಿಗೆ ಬಗ್ಗೆ ಅಸಮಾಧಾನದ ಬಗ್ಗೆ ವ್ಯಕ್ತ ಪಡಿಸಿದ್ದರು. ಆದರೂ, ಬಿಜೆಪಿ ಊಹಿಸಲೂ ಅಸಾಧ್ಯವಾದ ಲೀಡ್ ನಲ್ಲಿ ಜಯಗಳಿಸಿತು. ಇದರ ಹಿಂದೆ, ಇವಿಎಂ ಹ್ಯಾಕ್ ಆಗಿರುವ ಎಲ್ಲಾ ಸಾಧ್ಯತೆಯಿದೆ ಎಂದು ಡಿಕೆಶಿ, ವರದಿಯಲ್ಲಿ ಉಲ್ಲೇಖಿಸಿದ್ದಾರೆ ಎಂದು ಹೇಳಲಾಗುತ್ತಿದೆ.

ರಾಜ್ಯ ಉಸ್ತುವಾರಿ ರಣದೀಪ್ ಸರ್ಜೇವಾಲಾಗೆ ನೀಡಿದ ವರದಿ

ರಾಜ್ಯ ಉಸ್ತುವಾರಿ ರಣದೀಪ್ ಸರ್ಜೇವಾಲಾಗೆ ನೀಡಿದ ವರದಿ

ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಮತ್ತು ರಾಜ್ಯ ಉಸ್ತುವಾರಿ ರಣದೀಪ್ ಸರ್ಜೇವಾಲಾಗೆ ನೀಡಿದ ವರದಿಯಲ್ಲಿ, ಇವಿಎಂ ಬಗ್ಗೆ ದೇಶವ್ಯಾಪಿ ಹೋರಾಟ ನಡೆಯಬೇಕಿದೆ ಎಂದು ಉಲ್ಲೇಖಿಸಿದ್ದಾರೆ. ಎರಡೂ ಕ್ಷೇತ್ರದಲ್ಲಿ ಬಿಜೆಪಿ ಗೆದ್ದಿದ್ದು ನೋಡಿದರೆ, ಇವಿಎಂ ಮೇಲೆ ಸಂಶಯ ಬರುವುದು ಸಹಜ. ಯಾಕೆಂದರೆ, ನಾನು ಮತ್ತು ಸಿದ್ದರಾಮಯ್ಯ ಹಗಲಿರುಳು ಶ್ರಮಿಸಿದ್ದೆವು ಎಂದು ಡಿಕೆಶಿ ತಮ್ಮ ವರದಿಯಲ್ಲಿ ಹೇಳಿದ್ದಾರೆ.

ಬಿಜೆಪಿಯ ರಾಜೇಶ್ ಗೌಡ ಸ್ಪರ್ಧಿಯೇ ಆಗಿರಲಿಲ್ಲ

ಬಿಜೆಪಿಯ ರಾಜೇಶ್ ಗೌಡ ಸ್ಪರ್ಧಿಯೇ ಆಗಿರಲಿಲ್ಲ

ಶಿರಾದಲ್ಲಂತೂ ಬಿಜೆಪಿಗೆ ಬೇಸ್ ಅನ್ನೋದೇ ಇಲ್ಲ, ನಮ್ಮ ಮತ್ತು ಜೆಡಿಎಸ್ ನಡುವೆ ಫೈಟ್ ಇರಬಹುದು ಎಂದು ಗ್ರಹಿಸಿದ್ದೆವು. ಆದರೆ, ಬಿಜೆಪಿ ಚುನಾವಣೆಯನ್ನೇ ಗೆದ್ದಿದೆ ಎಂದರೆ, ಇದರ ಹಿಂದೆ ಇವಿಎಂ ಕೈವಾಡವಿದೆ. ನಮ್ಮ ಅಭ್ಯರ್ಥಿ ಟಿ.ಬಿ.ಜಯಚಂದ್ರ ಎದುರು ಬಿಜೆಪಿಯ ರಾಜೇಶ್ ಗೌಡ ಸ್ಪರ್ಧಿಯೇ ಆಗಿರಲಿಲ್ಲ.

  ದೀಪಾವಳಿ ಸಮಯದಲ್ಲಿ ಮೋದಿ ಮಾಡಿದ್ದಾದರೂ ಏನು? | Oneindia Kannada
  ನಮ್ಮ ಸೋಲಿಗೆ ಜೆಡಿಎಸ್ ಕೂಡಾ ಕಾರಣವಾಗಿದೆ

  ನಮ್ಮ ಸೋಲಿಗೆ ಜೆಡಿಎಸ್ ಕೂಡಾ ಕಾರಣವಾಗಿದೆ

  ನಮ್ಮ ಸೋಲಿಗೆ ಜೆಡಿಎಸ್ ಕೂಡಾ ಕಾರಣವಾಗಿದೆ. ಆ ಪಕ್ಷ ತನ್ನ ಮತವನ್ನು ಭದ್ರ ಪಡಿಸಿಕೊಳ್ಳಲಿಲ್ಲ, ಆ ಮತಗಳು ಚದುರಿ ಹೋದವು. ಈ ಸೋಲು ನಮ್ಮ ನಿದ್ದೆಗೆಡಿಸಿದೆ. ಬ್ಯಾಲೆಟ್ ಪೇಪರ್ ನಲ್ಲಿ ಚುನಾವಣೆ ನಡೆಯದಿದ್ದರೆ, ಕಾಂಗ್ರೆಸ್ಸಿಗೆ ಮಾತ್ರ ಎಲ್ಲಾ ಪಕ್ಷಗಳಿಗೆ ಮುಂದಿನ ದಿನಗಳಲ್ಲಿ ಉಳಿಗಾಲವಿಲ್ಲ ಎಂದು ಡಿಕೆಶಿ ವರದಿಯಲ್ಲಿ ಹೇಳಿದ್ದಾರೆ.

  English summary
  Karnataka By Election Defeat: KPCC President DK Shivakumar Submitted The Report To High Command.
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X