• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
LIVE

62.50% ಮತದಾನ ದಾಖಲು, ಚಿಕ್ಕಬಳ್ಳಾಪುರದಲ್ಲಿ ಹೆಚ್ಚು, ಕೆ.ಆರ್.ಪುರದಲ್ಲಿ ಕಡಿಮೆ

|

ಬೆಂಗಳೂರು, ಡಿಸೆಂಬರ್ 5: ಬಹುನಿರೀಕ್ಷಿತ ಕರ್ನಾಟಕದ 15 ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆಗೆ ಗುರುವಾರ ಬೆಳಗ್ಗೆ 7 ಗಂಟೆಗೆ ಮತದಾನ ಆರಂಭವಾಗಿದೆ. ಬೆಳಗ್ಗೆ 8 ಗಂಟೆಯಿಂದ ಸಂಜೆ 6 ಗಂಟೆವರೆಗೆ ಸದರಿ ಕ್ಷೇತ್ರಗಳಲ್ಲಿ ಮತದಾರರು ಉಮೇದುವಾರರನ್ನು ಆಯ್ಕೆ ಮಾಡುವ ಪ್ರಕ್ರಿಯೆ ನಡೆಸಲಿದ್ದಾರೆ.

ಚಿತ್ರಗಳು: ಹದಿನೈದು ಕ್ಷೇತ್ರಗಳಲ್ಲಿ ಉಪ ಚುನಾವಣೆಯ ಮತದಾನ

15 ಕ್ಷೇತ್ರಗಳ ಪೈಕಿ ರಾಣೆಬೆನ್ನೂರಿನ ಆರ್​. ಶಂಕರ್​ ಹಾಗೂ ಶಿವಾಜಿ ನಗರ ಕ್ಷೇತ್ರದ ರೋಷನ್​ ಬೇಗ್​ ಹೊರತುಪಡಿಸಿ ಉಳಿದ ಎಲ್ಲ 13 ಅನರ್ಹರು ಸ್ಪರ್ಧೆಯಲ್ಲಿದ್ದಾರೆ. ಈ ಕ್ಷೇತ್ರಗಳ ಅಂತಿಮ ಫಲಿತಾಂಶ ಹಾಲಿ ಬಿಜೆಪಿ ಸರಕಾರದ ಅಳಿವು ಉಳಿವಿನ ಮೇಲೆ ಪರಿಣಾಮ ಬೀರಲಿರುವ ಹಿನ್ನೆಲೆಯಲ್ಲಿ ಉಪ ಚುನಾವಣೆ ರಾಷ್ಟ್ರದ ಗಮನ ಸೆಳೆದಿದೆ.

ಯಾವ ಕ್ಷೇತ್ರಗಳಲ್ಲಿ ಮತದಾನ?:

ಹಿರೇಕೆರೂರು, ಯಲ್ಲಾಪುರ, ರಾಣೆಬೆನ್ನೂರು, ವಿಜಯನಗರ, ಚಿಕ್ಕಬಳ್ಳಾಪುರ, ಕೆ.ಆರ್.ಪುರ, ಯಶವಂತಪುರ, ಶಿವಾಜಿನಗರ, ಹೊಸಕೋಟೆ, ಕೆಆರ್‌ ಪೇಟೆ, ಹುಣಸೂರು, ಮಹಾಲಕ್ಷ್ಮೀ ಲೇಔಟ್‌, ಗೋಕಾಕ್, ಕಾಗವಾಡ, ಅಥಣಿ ಕ್ಷೇತ್ರಗಳಿಗೆ ಉಪ ಚುನಾವಣೆ ನಡೆಯಲಿದೆ.

Karnataka By-Election 2019 Voting LIVE Updates

'ಆಪರೇಷನ್ ಕಮಲ' ಎಂಬ ಕುಖ್ಯಾತ ರಾಜಕೀಯ ಅಸ್ತ್ರ ಪ್ರಯೋಗಿಸಿ ನಮ್ಮ ಸರ್ಕಾರ ಉರುಳಿಸಿದ್ದಾರೆ- ಅವರಿಗೆ ಒಂದು ಕ್ಷೇತ್ರವನ್ನೂ ಗೆಲ್ಲಲು ಬಿಡಬಾರದು- ಎನ್ನುವ ಆಕ್ರೋಶದಲ್ಲಿ ಕಾಂಗ್ರೆಸ್ ಇದ್ದರೆ, ಆಡಿಕೊಳ್ಳುವವರ ಮುಂದೆ ಎಡವಬಾರದು ಎನ್ನುವ ಪರಿಸ್ಥಿತಿ ಬಿಜೆಪಿಯದ್ದಾಗಿದೆ. ಇವೆರೆಡು ಪಕ್ಷಗಳ ನಡುವೆ ಜೆಡಿಎಸ್‌ಗೆ ಅಸ್ತಿತ್ವದ ಪ್ರಶ್ನೆ ಮುಂದೆ ನಿಂತಿದೆ.

ಉಪ ಸಮರ: ಅಂತಿಮವಾಗಿ ಕಣದಲ್ಲಿ ಉಳಿದ ಅಭ್ಯರ್ಥಿಗಳ ಪಟ್ಟಿಉಪ ಸಮರ: ಅಂತಿಮವಾಗಿ ಕಣದಲ್ಲಿ ಉಳಿದ ಅಭ್ಯರ್ಥಿಗಳ ಪಟ್ಟಿ

ಬಿಜೆಪಿಯದ್ದು 15ಕ್ಕೆ 15 ಕ್ಷೇತ್ರಗಳ ಗೆಲ್ಲುವ ಭರವಸೆ, ಕಾಂಗ್ರೆಸ್‌ನದ್ದು ಈ ಎಲ್ಲಾ ಕ್ಷೇತ್ರಗಳಲ್ಲಿ ಬಿಜೆಪಿಯನ್ನು ಸೋಲಿಸುವ ನಂಬಿಕೆ. ಅಂತಿಮ ಫಲಿತಾಂಶಕ್ಕಾಗಿ ಡಿ. 9ರವರೆಗೆ ಕಾಯಲೇಬೇಕಿದೆ.

Newest First Oldest First
7:39 PM, 5 Dec
ಮತದಾನದ ಅಂತ್ಯಕ್ಕೆ ಅಥಣಿ ಕ್ಷೇತ್ರದಲ್ಲಿ 75.20%, ಹೊಸಕೋಟೆ 76.19%, ಚಿಕ್ಕಬಳ್ಳಾಪುರ 84.40%, ಹುಣಸೂರು 75%, ಗೋಖಾಕ್ 73%, ಕೆ.ಆರ್.ಪುರಂ 37.5%, ಮಹಾಲಕ್ಷ್ಮಿ ಲೇಔಟ್ 41%, ರಾಣೆಬೆನ್ನೂರು 68%, ಯಲ್ಲಾಪುರ 77.50%, ಕಾಗವಾಡ 70%, ಯಶವಂತಪುರ 49%, ಹಿರೇಕೆರೂರು 79%, ವಿಜಯನಗರ 64.90%, ಕೆ.ಆರ್.ಪೇಟೆ 80%, ಶಿವಾಜಿನಗರ 42% ಮತದಾನ ನಡೆದಿದೆ.
7:34 PM, 5 Dec
ಹದಿನೈದು ಕ್ಷೇತ್ರಗಳಿಂದ ಒಟ್ಟಾರೆ 62.50% ಮತದಾನ ದಾಖಲಾಗಿದ್ದು, ಬಹುತೇಕ ಶಾಂತಿಯುತವಾಗಿ ಮತದಾನ ಮುಕ್ತಾಯವಾಗಿದೆ. ಸೋಮವಾರ ಮತ ಎಣಿಕೆ ನಡೆಯಲಿದೆ.
6:39 PM, 5 Dec
ಖಾಸಗಿ ಸಂಸ್ಥೆಯ ಸಿಬ್ಬಂದಿ ಕಾವ್ಯ ತಮ್ಮ ಮತದಾನದ ಹಕ್ಕು ಚಲಾಯಿಸಲು ಬಯೋಕಾನ್ ಮ್ಯಾನೇಜರ್‌ ಅವಕಾಶ ಕೊಡದ ಹಿನ್ನೆಲೆ ಹೆಬ್ಬಗೋಡಿ ಪೊಲೀಸ್ ಠಾಣೆಗೆ‌ ದೂರು‌ ನೀಡಿ ನಂತರ ಮತಗಟ್ಟೆಗೆ ತೆರಳಿ ಮತದಾನ ಮಾಡಿದರು
6:12 PM, 5 Dec
ಮತದಾನ ಮುಕ್ತಾಯಕ್ಕೆ ಕೆಲವೇ ನಿಮಿಷದ ಮೊದಲು ಬಂದು ಮತಚಲಾವಣೆ ಮಾಡಿದ ಬಿಜೆಪಿ ಸಂಸದ ಬಿ.ಎನ್.ಬಚ್ಚೇಗೌಡ. ಪುತ್ರ ಶರತ್ ಬಚ್ಚೇಗೌಡ ಅವರು ಪಕ್ಷೇತರರಾಗಿ ಹೊಸಕೋಟೆ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಿದ್ದಾರೆ. ಆದರೆ ಬಿ.ಎನ್.ಬಚ್ಚೇಗೌಡ ಅವರು ಶರತ್ ಪರವಾಗಿ ಪ್ರಚಾರ ಮಾಡಿಲ್ಲ. ತಮ್ಮ ಪಕ್ಷ ಬಿಜೆಪಿ ಅಭ್ಯರ್ಥಿಯಾಗಿ ರಾಜಕೀಯ ಎದುರಾಳಿ ಎಂಟಿಬಿ ನಾಗರಾಜು ಸ್ಪರ್ಧಿಸಿದ್ದಾರೆ.
6:10 PM, 5 Dec
ಶಿವಾಜಿನಗರ ಕ್ಷೇತ್ರದಲ್ಲಿ ಜೇವರ್ಗಿ ಶಾಸಕ ಡಾ. ಅಜಯ್ ಸಿಂಗ್ ನೀತಿ ಸಂಹಿತೆ ಉಲ್ಲಂಘಿಸಿ ವಿವಿಧ ಮತಗಟ್ಟೆಗಳಿಗೆ ತೆರಳಿ ಮತದಾರರ ಮೇಲೆ ಪ್ರಭಾವ ಬೀರಲು ಪ್ರಯತ್ನಿಸಿದ್ದಾರೆ. ಈ ಬಗ್ಗೆ ಚುನಾವಣಾ ಆಯೋಗಕ್ಕೆ ಚುನಾವಣಾ ವಿಭಾಗದ ಸಂಚಾಲಕರಾದ ದತ್ತಗುರ ಹೆಗಡೆ, ಕಾನೂನು ವಿಭಾಗದ ಹರ್ಷ ಮುತಾಲಿಕ್, ಸಂಚಾಲಕರಾದ ವಿವೇಕ್ ರೆಡ್ಡಿ ನೇತೃತ್ವದ ಬಿಜೆಪಿ ನಿಯೋಗದಿಂದ ಮುಖ್ಯ ಚುನಾವಣಾಧಿಕಾರಿಗಳಿಗೆ ದೂರು ನೀಡಿದ್ದಾರೆ.
5:43 PM, 5 Dec
ಮತಹಾಕಲು ಹಣ ಕೊಟ್ಟಿಲ್ಲವೆಂದು ರಾಣೆಬೆನ್ನೂರು ನಗರದ 7 ಮತ್ತು 9 ವಾರ್ಡಿನ ಸಾರ್ವಜನಿಕರು ಮತದಾನ ಬಹಿಷ್ಕರಿಸಿದ್ದಾರೆ. ಮತದಾನಕ್ಕೂ ಮುನ್ನಾ ದಿನ ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷದ ನಾಯಕರು ನಗರ ಸೇರಿದಂತೆ ಗ್ರಾಮೀಣ ಭಾಗದಲ್ಲಿ ಹಣ ಹಂಚಿಕೆ ಮಾಡಿದ್ದರು. ಆದರೆ, ನಮ್ಮ ವಾರ್ಡಿನಲ್ಲಿ ಬಿಜೆಪಿ ನಾಯಕರು ಹಾಗೂ ಕಾಂಗ್ರೆಸ್ ಮುಖಂಡರು ಹಣ ಹಂಚಿಕೆ ಮಾಡಿಲ್ಲ ಎಂದು ಕೆಲವು ಮಹಿಳೆಯರು ಹೇಳಿದ್ದಾರೆ.
5:25 PM, 5 Dec
ರಾಣೆಬೆನ್ನೂರು ಕ್ಷೇತ್ರದ ಮೆಡ್ಲೇರಿಯಲ್ಲಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ನಡುವೆ ಮಾರಾಮಾರಿ ಸಂಭವಿಸಿದ್ದು, ಘಟನೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತ ಓರ್ವ ಗಂಭೀರವಾಗಿ ಗಾಯಗೊಂಡಿದ್ದಾನೆ.
4:29 PM, 5 Dec
ಬಾಯಿಗೆ ಬಂದ ಹೇಳಿಕೆ ನೀಡುವ ರೇವಣ್ಣ ಮಾತಿಗೆ ಮಹತ್ವ ಕೊಡಲಾಗದು
ಬಿಜೆಪಿ ಕಾರ್ಯಕರ್ತರ ಮೇಲೆ ಹಲ್ಲೆ ನಡೆಸಿರುವ ಗೂಂಡಾ ಸಂಸ್ಕೃತಿಯ ಜೆಡಿಎಸ್‌ನ ಮುಖಂಡ ಎಚ್.ಡಿ ರೇವಣ್ಣ ಬಾಯಿಗೆ ಬಂದ ಹೇಳಿಕೆ ನೀಡುವವರೆಂದೇ ಪ್ರಸಿದ್ಧಿ ಪಡೆದಿದ್ದಾರೆ. ಅವರ ಹೇಳಿಕೆಗೆ ಮಹತ್ವ ನೀಡುವ ಅಗತ್ಯ ಇಲ್ಲ ಎಂದು ಉಪಮುಖ್ಯಮಂತ್ರಿ ಡಾ.ಸಿ.ಎನ್‌. ಅಶ್ವತ್ಥನಾರಾಯಣ ತಿಳಿಸಿದ್ದಾರೆ.
4:14 PM, 5 Dec
ಫಲಿತಾಂಶಕ್ಕೂ ಮುನ್ನ ಧರ್ಮಸ್ಥಳಕ್ಕೆ ತೆರಳಲಿರುವ ಯಡಿಯೂರಪ್ಪ
ಡಿಸೆಂಬರ್ 9ರಂದು ಹದಿನೈದು ಕ್ಷೇತ್ರಗಳ ಉಪ ಚುನಾವಣಾ ಫಲಿತಾಂಶ ಹೊರಬೀಳಲಿದ್ದು, ಅದಕ್ಕೂ ಮುನ್ನ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಧರ್ಮಸ್ಥಳಕ್ಕೆ ತೆರಳಲಿದ್ದಾರೆ.
3:53 PM, 5 Dec
ಗೋಕಾಕ್‌ನಲ್ಲಿ ಗೆದ್ದು ಕಾಂಗ್ರೆಸ್‌ಗೆ ಉಡುಗೊರೆ ಕೊಡುತ್ತೇವೆ
ಈ ಬಾರಿ ನಮ್ಮದೇ ಗೆಲುವು, ಈ ಕ್ಷೇತ್ರ ಗೆದ್ದು ಕಾಂಗ್ರೆಸಗೆ ಉಡುಗೊರೆ ಕೊಡುತ್ತೇವೆ, ಯಮಕನಮರಡಿಗೆ ಕಳಿಸಿ ಯಾರು ಜಗಳ ಹಚ್ಚಿದ್ರು ಅಂತಾ‌ ಗೊತ್ತು, ಅವರೇ ಹಚ್ಚಿದ್ದು.ನಮ್ಮಲ್ಲ‌ ಕಾರ್ಯಕರ್ತರ ಬೆಂಬಲದಿಂದ ಅವರು ೫ ಬಾರಿ ಗೆದ್ದಿದ್ದು, ಹಾಗಿದ್ದಲ್ಲಿ ಅವರ ಅಳಿಯನ್ನ ಏಕೆ ಪ್ರಚಾರಕ್ಕೆ ಕಳಿಸಿದ್ದು ಇನ್ನು ಮುಂದೆಲ್ಲಾ ಗೊತ್ತಾಗಲಿದೆ.ಲಖನ್ ಜಾರಕಿಹೊಳಿ
3:51 PM, 5 Dec
ಯಡಿಯೂರಪ್ಪ ರಾಜೀನಾಮೆ ಕೊಡುವ ಪ್ರಶ್ನೆಯೇ ಇಲ್ಲ
ಯಡಿಯೂರಪ್ಪ ರಾಜೀನಾಮೆ ಕೊಡುವ ಪ್ರಶ್ನೆಯೇ ಇಲ್ಲ,ಉಳಿದ ಮೂರುವರೇ ವರ್ಷ ಗಟ್ಟಿಯಾಗಿ ಆಡಳಿತ ನಡೆಸುತ್ತಾರೆ, ಇಂಟೆಲಿಜನ್ಸ್ ರಿಪೋರ್ಟ್ ಪ್ರಕಾರ ಹನ್ನೆರಡು ಕ್ಷೇತ್ರಗಳಲ್ಲಿ ನಾವೇ ಗೆಲ್ಲುತ್ತೇವೆ, ಸಿದ್ದರಾಮಯ್ಯ ಹಿರಿಯರು, ಅವರ ಬಗ್ಗೆ ನಾನು ಪ್ರತಿಕ್ರಿಯೆ ನೀಡುವುದಿಲ್ಲ.ಯಾರೂ ವೈಯಕ್ತಿಕ ಟೀಕೆ ಮಾಡಬಾರದು, ಚುನಾವಣೆಗೆ ಸಂಬಂಧಿಸಿದ ವಿಚಾರ ಮಾತ್ರ ಮಾತನಾಡಬೇಕು. ಬಾಲಚಂದ್ರ ಜಾರಕಿಹೊಳಿ
3:49 PM, 5 Dec
ಗೋಕಾಕ್ ಜನ ರಮೇಶ್ ಪರವಿದ್ದಾರೆ
ಎಲ್ಲಾ ಸಮುದಾಯದ ಜನ ರಮೇಶ್ ಜಾರಕಿಹೊಳಿ ಪರವಾಗಿದ್ದಾರೆ, ಬಿಜೆಪಿ ಅಭ್ಯರ್ಥಿಯನ್ನು ಗೆಲ್ಲಿಸಲು ದೇವರ ಸರಿಯಾಗಿ ಪ್ರಾಮಾಣಿಕ ಕೆಲಸ ಮಾಡುತ್ತಿದ್ದೇವೆ,ನಾವು ಶಾಂತ ರೀತಿಯಿಂದ ಚುನಾವಣೆ ಮಾಡುತ್ತಿದ್ದೇವೆ,ಬಿಜೆಪಿ ಕಾರ್ಯಕರ್ತರಿಗೆ, ಕಾಂಗ್ರೆಸ್‌ನವರು ತೊಂದರೆ ಕೊಟ್ಟಿದ್ದಾರೆ.ಸತೀಶ್ ಜಾರಕಿಹೊಳಿ ನಮ್ಮ ಕಾರ್ಯಕರ್ತರ ಮೇಲೆ ಹಲ್ಲೆ ಮಾಡಿದ್ದಾರೆ ಎನ್ನಲಾಗುತ್ತಿದೆ‌-ಬಾಲಚಂದ್ರ ಜಾರಕಿಹೊಳಿ
3:47 PM, 5 Dec
ಗಿರಿಜನ ನಾಗಾಪುರ ಹಾಡಿಯಲ್ಲಿ ನೀರಸ ಮತದಾನ
ಮೈಸೂರು ಜಿಲ್ಲೆಯ ಹುಣಸೂರಿನ ಗಿರಿಜನ ನಾಗಾಪುರ ಹಾಡಿಯಲ್ಲಿ ನೀರಸ ಮತದಾನ, 891 ಮಂದಿ ಪೈಕಿ ಕೇವಲ 75 ಮಂದಿ ಮಾತ್ರ ಮತದಾನ ಮಾಡಿದ್ದಾರೆ.
3:29 PM, 5 Dec
ಮತ ಎಣಿಕೆ ಕೇಂದ್ರಗಳ ನಿಷೇಧಾಜ್ಞೆ
ಡಿಸೆಂಬರ್ 9ರಂದು ಮತ ಎಣಿಕೆ ಇರುವ ಕಾರಣ ಬೆಂಗಳೂರು ಮತ ಎಣಿಕೆ ಕೇಂದ್ರಗಳ ಸುತ್ತ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.
3:14 PM, 5 Dec
ಮಧ್ಯಾಹ್ನ 3 ಗಂಟೆವರೆಗೆ ಕರ್ನಾಟಕದಲ್ಲಿ ಶೇ.40.34ರಷ್ಟು ಮತದಾನ
ಯಲ್ಲಾಪುರದಲ್ಲಿ ಶೇ.57 ರಷ್ಟು ಮತದಾನ ನಡೆದಿದೆ. ಹೊಸಕೋಟೆಯಲ್ಲಿ ಶೇ. 55, ಹುಣಸೂರಿನಲ್ಲಿ ಶೇ.38.2, ಕೆಆರ್‌ಪುರದಲ್ಲಿ ಶೇ.23, ಮಹಾಲಕ್ಷ್ಮೀ ಲೇಔಟ್‌ನಲ್ಲಿ ಶೇ.23, ಯಶವಂತಪುರದಲ್ಲಿ ಶೇ.39, ವಿಜಯನಗರದಲ್ಲಿ ಶೇ.35, ಶಿವಾಜಿನಗರದಲ್ಲಿ ಶೇ.22, ಚಿಕ್ಕಬಳ್ಳಾಪುರದಲ್ಲಿ ಶೇ.39,ಗೋಕಾಕ್‌ನಲ್ಲಿ ಶೇ.54, ಅಥಣಿಯಲ್ಲಿ ಶೇ.41, ರಾಣೆಬೆನ್ನೂರಿನಲ್ಲಿ ಶೇ.36, ಕಾಗವಾಡದಲ್ಲಿ ಶೇ.38,ಹಿರೇಕೆರೂರಿನಲ್ಲಿ ಶೇ.39, ಕೆಆರ್ ಪೇಟೆಯಲ್ಲಿ ಶೇ.40ರಷ್ಟು ಮತದಾನವಾಗಿದೆ.
2:59 PM, 5 Dec
ಕೆಆರ್ ಪೇಟೆ: 106 ವರ್ಷದ ವೃದ್ಧೆಯಿಂದ ಮತದಾನ
ಕೆಆರ್ ಪೇಟೆಯ ಸೊಳ್ಳೇಪುರದಲ್ಲಿ 106 ವರ್ಷದ ಅಜ್ಜಿಯಿಂದ ಮತದಾನ, ಮೊಮ್ಮಕ್ಕಳ ಸಹಾಯದೊಂದಿಗೆ ಬಂದು ಮತ ಚಲಾಯಿಸಿದರು.
2:43 PM, 5 Dec
ರಾಜ್ಯದಲ್ಲಿ ಸಿಎಂ ಹದ್ದೆ ಖಾಲಿ ಇಲ್ಲ
ರಾಜ್ಯದಲ್ಲಿ ಸಿಎಂ ಹುದ್ದೆ ಖಾಲಿ ಇಲ್ಲ, ಮೂರು ವರ್ಷವೂ ಯಡಿಯೂರಪ್ಪ ಅವರೇ ಮುಖ್ಯಮಂತ್ರಿಯಾಗಿರುತ್ತಾರೆ. ಸಿದ್ದರಾಮಯ್ಯ ಕಿಂಗ್ ಮೇಕರ್ ಆಗಬೇಕೆಂಬ ಲೆಕ್ಕಾಚಾರದಲ್ಲಿದ್ದಾರೆ-ಸಚಿವ ಕೆಎಸ್ ಈಶ್ವರಪ್ಪ
2:38 PM, 5 Dec
ನಿರೀಕ್ಷೆಗಿಂತ ದೊಡ್ಡ ಜಯ ಸಿಗಲಿದೆ-ಶಿವರಾಮ್ ಹೆಬ್ಬಾರ್
ನಿರೀಕ್ಷೆಗಿಂತ ದೊಡ್ಡ ಜಯ ಸಿಗಲಿದೆ-ಶಿವರಾಮ್ ಹೆಬ್ಬಾರ್
ನಾನು ಯಲ್ಲಾಪುರದಲ್ಲಿ ಈಗಾಗಲೇ ಗೆದ್ದಿದ್ದೇನೆ, ನಿರೀಕ್ಷೆಗಿಂತ ದೊಡ್ಡ ಪ್ರಮಾಣದ ಜಯಗಳಿಸುತ್ತೇನೆ ಎಂಬ ನಂಬಿಕೆ ಇದೆ. ಜನರ ಬೆಂಬಲ ನನಗಿದೆ- ಶಿವರಾಮ್ ಹೆಬ್ಬಾರ್,ಯಲ್ಲಾಪುರ ಬಿಜೆಪಿ ಅಭ್ಯರ್ಥಿ
2:12 PM, 5 Dec
ಹುಣಸೂರು: ಶಾಸಕರ ಧರಣಿ ಅಂತ್ಯ
ಹುಣಸೂರು ಹೊಸ ರಾಮನಹಳ್ಳಿ, ಶಾಸಕ ಅನಿಲ್ ಚಿಕ್ಕಮಾದು ಧರಣಿ ಅಂತ್ಯ, ಅಡಿಷನಲ್ ಎಸ್‌ಪಿ ಕ್ಷಮೆ ಕೇಳಿದ ಬಳಿಕ ಪೊಲೀಸರ ವಿರುದ್ಧ ನಡೆಸುತ್ತಿದ್ದ ಧರಣಿಯನ್ನು ಹಿಂಪಡೆದಿದ್ದಾರೆ.
2:07 PM, 5 Dec
ನಮಗೊಂದು ಹೈಕಮಾಂಡ್ ಇದೆ
ನಮಗೊಂದು ಹೈಕಮಾಂಡ್ ಇದೆ, ಅದು ನಿರ್ಧಾರ ತೆಗೆದುಕೊಳ್ಳಲಿದೆ, ಈಗಲೇ ಚರ್ಚೆ ಮಾಡುವ ಅಗತ್ಯವಿಲ್ಲ, ಫಲಿತಾಂಶ ಬರಲಿ ಆಮೇಲೆ ಯೋಚನೆ ಮಾಡೋಣ- ಸಿದ್ದರಾಮಯ್ಯ
1:20 PM, 5 Dec
ರಮೇಶ್ ಜಾರಕಿಹೊಳಿ ಗಂಭೀರವಾಗಿ ಮಾತನಾಡುವುದು ಕಲಿಯಲಿ
ಜವಾಬ್ದಾರಿ ಇದ್ದರೆ ರಮೇಶ್ ಜಾರಕಿಹೊಳಿ ಹೀಗೆ ಮಾತನಾಡುತ್ತಿರಲಿಲ್ಲ, ಮೊದಲು ಗಂಭೀರವಾಗಿ ಮಾತನಾಡುವುದು ಕಲಿಯಲಿ, ರಮೇಶ್ ಬಾಯಿಗೆ ಬಂದಂತೆ ಮಾತನಾಡುತ್ತಾರೆ, ರಾಜಕಾರಣದಲ್ಲಿ ಹುಡುಗಾಟ ಬೇಡ ಎಂದು ಸಿದ್ದರಾಮಯ್ಯ ಶೀಘ್ರ ಬಿಜೆಪಿಗೆ ಸೇರುತ್ತಾರೆ ಎನ್ನುವ ಮಾತಿಗೆ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ.
1:10 PM, 5 Dec
ಟೂ ವ್ಹೀಲರ್‌ನಲ್ಲಿ ಬಂದು ಅಜ್ಜಿ ಮತದಾನ
ಟೂ ವ್ಹೀಲರ್ ನಲ್ಲಿ ಮಗನ ಜೊತೆ ಬಂದು 97 ವಯಸ್ಸಿನ ಅಜ್ಜಿ ಮತದಾನ ಮಾಡಿದ್ದಾರೆ, ಎಲ್ಲ ಬರ್ರವ್ವ ಮತದಾನ ಮಾಡ್ರಿ ಮನೆಯಲ್ಲಿ ಮಲಗಬೇಡಿ..ಅಂತಾ ಸಂದೇಶ ಕೊಟ್ಟಿದ್ದಾರೆ.
1:07 PM, 5 Dec
ರಾಣೆಬೆನ್ನೂರು ಬಿಜೆಪಿ ಅಭ್ಯರ್ಥಿ ಮತದಾನ
ರಾಣೆಬೆನ್ನೂರು ಬಿಜೆಪಿ ಅಭ್ಯರ್ಥಿ ಮತದಾನ
ರಾಣೆಬೆನ್ನೂರು ಬಿಜೆಪಿ ಅಭ್ಯರ್ಥಿ ಅರುಣ್ ಕುಮಾರ್ ಪೂಜಾರ್ ಪತ್ನಿ ಜೊತೆಗೆ ಅವರ ಕುಮಾರಪಟ್ಟಣಂ, ಕೂಡಿಯಾಳ ಹೊಸಪೇಟೆಯಲ್ಲಿ ಮತಗಟ್ಟೆ ಸಂಖ್ಯೆ 4ರಲ್ಲಿ ಮತ ಚಲಾಯಿಸಿದರು.
1:06 PM, 5 Dec
ಚಿಕ್ಕಬಳ್ಳಾಪುರದಲ್ಲಿ ವೀರಪ್ಪ ಮೊಯ್ಲಿ ಮತದಾನ
ಚಿಕ್ಕಬಳ್ಳಾಪುರದಲ್ಲಿ ಮಾಜಿ ಮುಖ್ಯಮಂತ್ರಿ ಎಂ ವೀರಪ್ಪ ಮೊಯ್ಲಿ ಮತದಾನ, ಪತ್ನಿ ಮಾಲತಿ ಮೊಯ್ಲಿ ಜೊತೆ ಆಗಮಿಸಿ ಮತ ಚಲಾಯಿಸಿದ್ದಾರೆ.
12:55 PM, 5 Dec
ಮತಗಟ್ಟೆಯಲ್ಲೇ ಸಾವು
ಹಿರೇಕೆರೂರು ಮತಗಟ್ಟೆಯಲ್ಲೇ ಕುಸಿದು ಬಿದ್ದು ವೃದ್ಧೆ ಮೃತಪಟ್ಟಿದ್ದಾರೆ.
12:48 PM, 5 Dec
ಇಲ್ಲಿಯವರೆಗೆ ಕ್ಷೇತ್ರವಾರು ಮತದಾನ
ಅಥಣಿಯಲ್ಲಿ ಶೇ.23.10, ಕಾಗವಾಡದಲ್ಲಿ ಶೇ.21.34, ಗೋಕಾಕ್‌ನಲ್ಲಿ ಶೇ.20.45, ಯಲ್ಲಾಪುರ ಶೇ.23.87, ಹಿರೇಕೆರೂರು ಶೇ.20.03, ರಾಣೆಬೆನ್ನೂರು ಶೇ.19.08, ಕೆಆರ್ ಪುರ ಶೇ.14.44, ಯಶವಂತಪುರ ಶೇ.13.13, ಮಹಾಲಕ್ಷ್ಮೀ ಲೇಔಟ್ ಶೇ.15.71, ಶಿವಾಜಿನಗರ ಶೇ.12.79, ಹೊಸಕೋಟೆ ಶೇ.22.39, ಕೆಆರ್ ಪೇಟೆ ಶೇ.20.01, ಹುಣಸೂರು ಶೇ.19.12 ರಷ್ಟು ಮತದಾನವಾಗಿದೆ.
12:42 PM, 5 Dec
ನಟ ಶ್ರೀಮರಳಿ ಮತದಾನ
ನಟ ಶ್ರೀಮರಳಿ ಮತದಾನ
ನಾನು ಮತದಾನ ಮಾಡಿದ್ದೇನೆ, ಎಲ್ಲರೂ ಮತದಾನ ಮಾಡಿ,ಇದು ಸಾಮಾಜಿಕ ಜವಬ್ದಾರಿ,ಮತದಾನ ಮಾಡಿ ನಮ್ಮ ಲೀಡರ್ ನ ನಾವೇ ಆಯ್ಕೆ ಮಾಡಿಕೊಳ್ಳಬೇಕು ,ಮತದಾನ ಮಾಡಿದ್ರೆ ಧೈರ್ಯ ವಾಗಿ ನಮ್ಮ ಸಮಸ್ಯೆ ಹೇಳಿಕೊಳ್ಳಬಹುದು, ಕೇಳಬಹುದು,ನಾವು ನಮ್ಮ ಕುಟುಂಬ ಬಂದು ಮತದಾನ ಮಾಡಿದ್ದೇವೆ ನೀವು ಮಾಡಿ- ಶ್ರೀಮುರಳಿ
12:39 PM, 5 Dec
ಚಿಕ್ಕಬಳ್ಳಾಪುರದಲ್ಲಿ ಮತದಾನ ಮಾಡಲು ಮತದಾರರಿಗೆ ಬೆಳಕಿನ ಸಮಸ್ಯೆ
ಚಿಕ್ಕಬಳ್ಳಾಪುರದಲ್ಲಿ ಮೋಡಕವಿದ ವಾತಾವರಣ ನಿರ್ಮಾಣವಾಗಿದ್ದು, ಮತದಾರರು ಬೇಗ ಬಂದು ಮತ ಚಲಾಯಿಸಿ ಎಂದು ಮನವಿ ಮಾಡಲಾಗುತ್ತಿದೆ. ಅದರ ಜೊತೆ ಜೊತೆಗೆ ಕತ್ತಲು ಆವರಿಸಿಕೊಮಡಿರುವ ಕಾರಣ ಮತದಾರರಿಗೆ ಇವಿಎಂ ಯಂತ್ರ ಸರಿಯಾಗಿ ಕಾಣುತ್ತಿಲ್ಲ ಎನ್ನುವ ದೂರುಗಳು ಕೇಳಿಬಂದಿದೆ.
12:32 PM, 5 Dec
ಗೋಕಾಕ್‌ನಲ್ಲಿ ಲಕ್ಷ್ಮಣ ಸವದಿ ಬೆಂಬಲಿಗರಿಂದ ನೀತಿ ಸಂಹಿತೆ ಉಲ್ಲಂಘನೆ
ಗೋಕಾಕ್‌ನಲ್ಲಿ ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಬೆಂಬಲಿಗರು ನೀತಿ ಸಂಹಿತೆ ಉಲ್ಲಂಘನೆ ಮಾಡಿದ್ದಾರೆ. ಇವಿಎಂ ಯಂತ್ರದ ಮೇಲೆ ಮಹೇಶ್ ಕುಮಟಳ್ಳಿ ಫೋಟೊ ಮದಲು ಲಕ್ಷ್ಮಣ ಸವದಿ ಅವರ ಫೋಟೊ ಇಟ್ಟು ನೀತಿ ಸಂಹಿತೆ ಉಲ್ಲಂಘಿಸಿದ್ದಾರೆ.
12:28 PM, 5 Dec
ಗೋಕಾಕ್ ಉಪ ಚುನಾವಣೆ
ಯಾರು ಗೆಲ್ಲಬೇಕೆಂದು ಜನರು ನಿರ್ಧರಿಸುತ್ತಾರೆ, ನನ್ನ ಪರ ಕೆಲಸ ಮಾಡಿದ ಎಲ್ಲರಿಗೂ ಧನ್ಯೌಆದಗಳು, ಎಚ್‌ಡಿ ಕುಮಾರಸ್ವಾಮಿ, ಎಚ್‌ಡಿ ದೇವೇಗೌಡರ ಅವರಿಗೆ ಕೃತಜ್ಞತೆಗಳು, ತೀರ್ಪು ಏನೇ ಬಂದರೂ ಸ್ವೀಕರಿಸೋಣ, ಚುನಾವಣೆಯಲ್ಲು ಸೋಲು ಗೆಲುವು ಸಾಮಾನ್ಯ- ಅಶೋಕ್ ಪೂಜಾರಿ, ಗೋಕಾಕ್ ಜೆಡಿಎಸ್ ಅಭ್ಯರ್ಥಿ.
READ MORE

English summary
Karnataka By-Election 2019 Voting Live Updates in Kannada: Get all the live updates of Karnataka Assembly By-polls 2019 for candidates, constituencies, voting for 15 constituencies.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X