• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕರ್ನಾಟಕ ಬಜೆಟ್ ಅಧಿವೇಶನ LIVE: ನಿಲ್ಲದ ಗಲಾಟೆ, ಕಲಾಪ ನಾಳೆಗೆ ಮುಂದೂಡಿಕೆ

|

ಬೆಂಗಳೂರು, ಫೆಬ್ರವರಿ 07: ಬುಧವಾರದಿಂದ ನಡೆಯುತ್ತಿರುವ ಕರ್ನಾಟಕ ಬಜೆಟ್ ಅಧಿವೇಶನ ಇಂದು(ಗುರುವಾರ) ಸಹ ಮುಂದುವರಿಯಲಿದ್ದು,ಬಿಜೆಪಿ ಶಾಸಕರು ಸದನದಲ್ಲಿ ಇಂದೂ ಪ್ರತಿಭಟನೆ ನಡೆಸುವ ಸಾಧ್ಯತೆ ಇದೆ.

ನಿನ್ನೆ ಅಧಿವೇಶನದಲ್ಲಿ ರಾಜ್ಯಪಾಲ ವಜುಭಾಯ್ ವಾಲಾ ಅವರ ಭಾಷಣ ಆರಂಭವಾಗುತ್ತಿದ್ದಂತೆಯೇ ಬಿಜೆಪಿ ಶಾಸಕರು ಸದನದ ಬಾವಿಗಿಳಿದು ಪ್ರತಿಭಟನೆ ನಡೆಸಿದ್ದರು. ಸರ್ಕಾರದ ಬಳಿ ಬಹುಮತವಿಲ್ಲ ಎಂದು ಘೋಷಣೆ ಕೂಗಿದ್ದರು.

ಈ ಬೆಳವಣಿಗೆಯ ನಂತರ ತಮ್ಮ 22 ಪುಟಗಳ ಭಾಷಣವನ್ನು ಮೊಟಕುಗೊಳಿಸಿದ ರಾಜ್ಯಪಾಲರು ಕೇವಲ ಮೊದಲ ಮತ್ತು ಕೊನೆಯ ಪುಟಗಳನ್ನಷ್ಟೇ ಓದಿ ಭಾಷಣ ಮುಗಿಸಿ, ವಾಪಸ್ಸಾಗಿದ್ದರು.

ಕರ್ನಾಟಕ ಬಜೆಟ್ ಅಧಿವೇಶನ: ಸದನ ಕುತೂಹಲ, ಕಾಂಗ್ರೆಸ್ ನ 8 ಶಾಸಕರು ಗೈರು!

ನಿನ್ನೆಯ ಅಧಿವೇಶನಕ್ಕೆ ಕಾಂಗ್ರೆಸ್ ನ 8, ಬಿಜೆಪಿಯ 3 ಮತ್ತು ಜೆಡಿಎಸ್ ನ ಓರ್ವ ಶಾಸಕರು ಗೈರಾಗಿದ್ದರು ಎನ್ನಲಾಗಿತ್ತು.

Karnataka Budget session 2019 will be continued today: LIVE updates

ಕಾಂಗ್ರೆಸ್ ತನ್ನ ಅತೃಪ್ತ ಶಾಸಕರಿಗೆ ಈಗಾಗಲೇ ವ್ಹಿಪ್ ಜಾರಿಗೊಳಿಸಿದ್ದರೂ, ಕೆಲವರು ವ್ಹಿಪ್ ಉಲ್ಲಂಘಿಸಿ ಸದನಕ್ಕೆ ಹಾಜರಾಗಿರಲಿಲ್ಲ.

ಅಪ್ಪ, ಮಗಳು ಬಜೆಟ್ ಅಧಿವೇಶನದಲ್ಲಿ ಗೈರು: ಏನೇನೋ ಸುದ್ದಿ

ಇಂದು ಸಹ ಮುಂದುವರಿಯಲಿರುವ ಅಧಿವೇಶನದ ಕ್ಷಣ ಕ್ಷಣದ ಮಾಹಿತಿಯನ್ನು ಒನ್ ಇಂಡಿಯಾ ಕನ್ನಡ ನೀಡಲಿದೆ.

Newest First Oldest First
12:32 PM, 7 Feb
ಶುಕ್ರವಾರ 12:30 ಕ್ಕೆ ಅಧಿವೇಶನವನ್ನು ಮುಂದೂಡಿದ ರಮೇಶ್ ಕುಮಾರ್
12:31 PM, 7 Feb
ಸಭೆಯನ್ನು ಮುಂದೂಡಿದ ಸ್ಪೀಕರ್ ರಮೇಶ್ ಕುಮಾರ್
12:30 PM, 7 Feb
ಬಿಜೆಪಿ ವಿರುದ್ಧ ಪ್ರತಿಭಟನೆ ಆರಂಭಿಸಿರುವ ಕಾಂಗ್ರೆಸ್-ಜೆಡಿಎಸ್ ದೋಸ್ತಿ ಸರ್ಕಾರದ ಶಾಸಕರು
12:30 PM, 7 Feb
ಮತ್ತೆ ಕಲಾಪ ಆರಂಭ
12:25 PM, 7 Feb
"ಬಜೆಟ್ ಪ್ರತಿಯನ್ನು ಯಾರಿಗೂ ನೀಡದೆ ಇರುವ ಸರ್ಕಾರದ ಕ್ರಮವನ್ನು ನಾವು ಖಂಡಿಸುತ್ತೇವೆ. ನಮ್ಮ ನಡೆಯನ್ನು ನಾವು ನಿರ್ಧರಿಸುತ್ತೇವೆ"- ಬಿ ಎಸ್ ಯಡಿಯೂರಪ್ಪ, ರಾಜ್ಯ ಬಿಜೆಪಿ ಅಧ್ಯಕ್ಷ
12:19 PM, 7 Feb
ಜೆಡಿಎಸ್ ಶಾಸಕ ನಾರಾಯಣಗೌಡ ಸಹ ಮುಂಬೈಗೆ ತೆರಳಿದ್ದಾರೆ. ಇನ್ನಷ್ಟು ದಿನ ಕಾಂಗ್ರೆಸ್ ನಿಂದ ಹೊರಬರುವ ಸಾಧ್ಯತೆ ಇದೆ: ಶ್ರೀರಾಮುಲು ಹೇಳಿಕೆ
12:18 PM, 7 Feb
ಈ ಸರ್ಕಾರ ಸ್ಥಿರವಾಗಿಲ್ಲ ಅನ್ನೋದು ಜನರಿಗೂ ಗೊತ್ತು. ನಾವು ಅವಿಶ್ವಾಸ ನಿರ್ಣಯ ಮಾಡಬೇಕೋ ಬೇಡವೋ ಎಂಬುದನ್ನು ನಾವು ನಿರ್ಧರಿಸುತ್ತೇವೆ. ನಾವೇನು ಜ್ಯೋತಿಷ ನೋಡಿ ಪ್ಲ್ಯಾನ್ ಫಿಕ್ಸ್ ಮಾಡುವವರಲ್ಲ. ಸರ್ಕಾರಕ್ಕೆ ಯಾವುದೇ ಬಹುಮತವಿಲ್ಲ- ಆರ್ ಅಶೋಕ್, ಬಿಜೆಪಿ ಶಾಸಕ
11:49 AM, 7 Feb
ಬಿಜೆಪಿ ಶಾಸಕರ ಗದ್ದಲದ ಹಿನ್ನೆಲೆ: 10 ನಿಮಿಷಗಳ ಕಾಲ ಕಲಾಪವನ್ನು ಮುಂದೂಡಿದ ಸ್ಪೀಕರ್ ರಮೇಶ್ ಕುಮಾರ್.
11:45 AM, 7 Feb
ನಿಲ್ಲದೆ ಇರೋ ಬಾವಿ ಬಿಟ್ಟು ಫ್ಲೋರ್ ಗೆ ಬಂದು ಕೂತು, ಧೈರ್ಯವಿದ್ದರೆ ಅವಿಶ್ವಾಸ ನಿರ್ಣಯ ಮಂಡಿಸಿ'- ಕೃಷ್ಣ ಭೈರೇಗೌಡ, ಸಚಿವ
11:42 AM, 7 Feb
'ಇಲ್ಲ, ಇಲ್ಲ, ಬಹುಮತವಿಲ್ಲ' ಎಂದು ಘೋಷಣೆ ಕೂಗುತ್ತಿರುವ ಬಿಜೆಪಿ ಶಾಸಕರು.
11:41 AM, 7 Feb
ಸದನಕ್ಕೆ ಆಗಮಿಸಿದ ಸ್ಪೀಕರ್ ರಮೇಶ್ ಕುಮಾರ್
11:36 AM, 7 Feb
ಸದನ ಆರಂಭವಾಗುವ ಮುನ್ನವೇ ಸದನದ ಬಾವಿಯಲ್ಲಿ ನಿಂತಿರುವ ಬಿಜೆಪಿ ಶಾಸಕರು
11:33 AM, 7 Feb
ಬಜೆಟ್ ಮಂಡನೆಗೆ ಅವಕಾಶ ನೀಡದೆ ಇರಲು ಬಿಜೆಪಿ ನಿರ್ಧಾರ
11:32 AM, 7 Feb
ಇಂದು ಮತ್ತು ನಾಳೆ, ಎರಡು ದಿನ ಬಿಜೆಪಿ ಶಾಸಕರು ಪ್ರತಿಭಟನೆ ನಡೆಸುವ ಸಾಧ್ಯತೆ
11:27 AM, 7 Feb
ಗೋಕಾಕ್ ಶಾಸಕ ರಮೇಶ್ ಜಾರಕಿಹೊಳಿ ಫೋನ್ ಸ್ವಿಚ್ಡ್ ಆಫ್ ಮಾಡಿದ್ದು, ನಮ್ಮ ಸಂಪರ್ಕಕ್ಕೂ ಸಿಗುತ್ತಿಲ್ಲ- ಎಂಟಿಬಿ ನಾಗರಾಜ್, ಸಚಿವ
11:24 AM, 7 Feb
ರಾಜ್ಯ ರಾಜಕೀಯ ಬೆಳವಣಿಗೆ ಕುರಿತು ಪ್ರತಿಕ್ರಿಯೆ ನೀಡಿದ ಸ್ಪೀಕರ್ ರಮೇಶ್ ಕುಮಾರ್. "ನಾಲ್ಕಲ್ಲ ನಲವತ್ತು ಜನರು ರಾಜೀನಾಮೆ ನೀಡಿದರೂ ಸ್ವೀಕರಿಸುತ್ತೇನೆ"-ರಮೇಶ್ ಕುಮಾರ್ ಹೇಳಿಕೆ
11:13 AM, 7 Feb
ವಿಧಾನಸಭೆಯಲ್ಲಿ ಬಿಜೆಪಿ ಶಾಸಕರ ಸಭೆ ಮುಕ್ತಾಯ. ಈ ದಿನವೂ ಗದ್ದಲ ಎಬ್ಬಿಸಿ, ಅಧಿವೇಶನಕ್ಕೆ ಅಡ್ಡಿಯಾಗಲು ಬಿಜೆಪಿ ನಿರ್ಧರಿಸಿದಂತಿದೆ.
11:12 AM, 7 Feb
ವಿಧಾನಪರಿಷತ್ ಕಲಾಪದ ವೇಳೆ ಬಿಜೆಪಿ ಶಾಸಕರು ಧರಣಿ, ಗದ್ದಲ ಆರಂಭಿಸಿದ ಹಿನ್ನೆಲೆಯಲ್ಲಿ ಕಲಾಪವನ್ನು 12 ಗಂಟೆಗೆ ಮುಂದೂಡಲಾಗಿದೆ.
11:05 AM, 7 Feb
ಮೊದಲೇ ವಿಧಾನಸೌಧಕ್ಕೆ ಆಗಮಿಸಿ ಬಿಜೆಪಿ ಶಾಸಕರೊಡನೆ ಸಭೆ ನಡೆಸುತ್ತಿರುವ ಬಿ ಎಸ್ ಯಡಿಯೂರಪ್ಪ
11:04 AM, 7 Feb
ಮಾಧ್ಯಮಗಳಿಗೆ ಯಾವುದೇ ರೀತಿಯ ಪ್ರತಿಕ್ರಿಯೆ ನೀಡಲು ನಿರಾಕರಿಸಿದ ಎಚ್ ಡಿ ಕುಮಾರಸ್ವಾಮಿ
11:04 AM, 7 Feb
ತಾಜ್ ವೆಸ್ಟೆಂಡ್ ಹೊಟೇಲ್ ನಿಂದ ವಿಧಾನಸೌಧಕ್ಕೆ ಆಗಮಿಸಿದ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ
10:59 AM, 7 Feb
ರಾಜ್ಯದಲ್ಲಿ ಆಪರೇಶನ್ ಕಮಲದ ವದಂತಿ ಹಬ್ಬಿದ್ದು, ಅದು ಕಾಂಗ್ರೆಸ್ ಸಂಸದರಿಗೂ ಭೀತಿ ಮೂಡಿಸಿದಂತಿದೆ.ಅದೇ ಕಾರಣಕ್ಕೆ ದೆಹಲಿಯಲ್ಲಿ ಇಂದು ರಾಜ್ಯದ ಕಾಂಗ್ರೆಸ್ ಸಂಸದರು ದಿಢೀರ್ ಸುದ್ದಿಗೋಷ್ಟಿ ಕರೆದಿದ್ದು, ಕೇಂದ್ರದ ನರೇಂದ್ರ ಮೋದಿ ಸರ್ಕಾರ ಮತ್ತು ರಾಜ್ಯದ ಬಿಜೆಪಿ ನಾಯಕರ ನಡೆಯನ್ನು ಟೀಕಿಸಿದ್ದಾರೆ.
10:27 AM, 7 Feb
ಬಿಜೆಪಿಯು ಕಾಂಗ್ರೆಸ್ ಶಾಸಕರನ್ನು ಗೈರಾಗಿಸಿ ಬಜೆಟ್ ಗೆ ಅನುಮೋದನೆ ದೊರಕದಂತೆ ಮಾಡಿ, ಅವಿಶ್ವಾಸ ಗೊತ್ತುವಳಿ ಮಂಡಿಸಲು ಸಜ್ಜಾಗಿದೆ
10:27 AM, 7 Feb
ಫೆಬ್ರವರಿ 8 ರಂದು ರಾಜ್ಯ ಬಜೆಟ್ ಮಂಡನೆಯಾಗಲಿದ್ದು, ಬಜೆಟ್ ಪೂರ್ವ ಅಧಿವೇಶನದಲ್ಲಿ ಅತೃಪ್ತ ಶಾಸಕರು ಹಾಜರಾಗದೆ, ಬಿಜೆಪಿ ಅವಿಶ್ವಾಸ ಗೊತ್ತುವಳಿ ಮಂಡಿಸಿದರೆ, ಬಜೆಟ್ ಗೆ ಅನುಮೋದನೆ ದೊರಕದೆ ಇರುವ ಸಾಧ್ಯತೆ ಇದೆ.
10:26 AM, 7 Feb
ಫೆಬ್ರವರಿ 6 ರಂದು ಅಧಿವೇಶನ ಆರಂಭದಿಂದ ಅಧಿವೇಶನ ಅಂತ್ಯವಾಗುವವರೆಗೂ ಅಧಿವೇಶನಕ್ಕೆ ಕಡ್ಡಾಯವಾಗಿ ಹಾಜರಾಗಬೇಕು ಎಂದು ಕೆಪಿಸಿಸಿಯ ಮುಖ್ಯ ಸಚೇತಕ ಗಣೇಶ್ ಹುಕ್ಕೇರಿ ಅವರು ಕಾಂಗ್ರೆಸ್‌ನ ಎಲ್ಲ ಶಾಸಕರಿಗೆ ವಿಪ್ ಜಾರಿ ಮಾಡಿದ್ದಾರೆ.
10:24 AM, 7 Feb
ಈವರೆಗೂ ಸಂಪರ್ಕಕ್ಕೆ ಸಿಗದ ಜೆಡಿಎಸ್ ನ ಕೆಆರ್ ಪೇಟೆ ಶಾಸಕ ನಾರಾಯಣಗೌಡ.
10:03 AM, 7 Feb
ಮಾಜಿ ಮುಖ್ಯಮಂತ್ರಿ, ಬಿಜೆಪಿ ರಾಜ್ಯಾಧ್ಯಕ್ಷ ಬಿ ಎಸ್ ಯಡಿಯೂರಪ್ಪ ಅವರ ನಿವಾಸಕ್ಕೆ ಹಲವು ಬಿಜೆಪಿ ನಾಯಕರ ಆಗಮನ.

English summary
Karnataka Budget session 2019 will be continued today: Here are LIVE updates in Kannada,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more