ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕರ್ನಾಟಕ ಬಜೆಟ್ ಅಧಿವೇಶನ: ಸದನ ಕುತೂಹಲ, ಕಾಂಗ್ರೆಸ್ ನ 8 ಶಾಸಕರು ಗೈರು!

|
Google Oneindia Kannada News

ಬೆಂಗಳೂರು, ಫೆಬ್ರವರಿ 06: ಕರ್ನಾಟಕ ಬಜೆಟ್ ಅಧಿವೇಶನ ಇಂದಿನಿಂದ ಆರಂಭವಾಗಲಿದ್ದು, ಅತೃಪ್ತರ ನಡೆ ಏನು ಎಂಬುದು ಕುತೂಹಲ ಕೆರಳಿಸಿದೆ.

ಅತೃಪ್ತರಿಗೆ ಮೂಗುದಾರ, ಶಾಸಕರಿಗೆ ವಿಪ್ ಜಾರಿ ಮಾಡಿದ ಕಾಂಗ್ರೆಸ್‌ ಅತೃಪ್ತರಿಗೆ ಮೂಗುದಾರ, ಶಾಸಕರಿಗೆ ವಿಪ್ ಜಾರಿ ಮಾಡಿದ ಕಾಂಗ್ರೆಸ್‌

ಕಾಂಗ್ರೆಸ್ಸಿನ ಆರು ಮಂದಿ ಅತೃಪ್ತ ಶಾಸಕರು ಬಜೆಟ್ ಅಧಿವೇಶನಕ್ಕೆ ಗೈರಾಗಬಹುದು ಎಂಬ ಎಚ್ಚರಿಕೆಯಿಂದ ಈಗಾಗಲೇ ಕಾಂಗ್ರೆಸ್ ತನ್ನೆಲ್ಲ ಶಾಸಕರಿಗೂ ವ್ಹಿಪ್ ಜಾರಿಗೊಳಿಸಿದೆ.

ಅಧಿವೇಶನಕ್ಕೆ ಆರು 'ಕೈ' ಶಾಸಕರು ಗೈರು? ಬಿಜೆಪಿಯ ಭಾರಿ ರಣತಂತ್ರಅಧಿವೇಶನಕ್ಕೆ ಆರು 'ಕೈ' ಶಾಸಕರು ಗೈರು? ಬಿಜೆಪಿಯ ಭಾರಿ ರಣತಂತ್ರ

ಫೆಬ್ರವರಿ 6 ರಂದು ಅಧಿವೇಶನ ಆರಂಭದಿಂದ ಅಧಿವೇಶನ ಅಂತ್ಯವಾಗುವವರೆಗೂ ಅಧಿವೇಶನಕ್ಕೆ ಕಡ್ಡಾಯವಾಗಿ ಹಾಜರಾಗಬೇಕು ಎಂದು ಕೆಪಿಸಿಸಿಯ ಮುಖ್ಯ ಸಚೇತಕ ಗಣೇಶ್ ಹುಕ್ಕೇರಿ ಅವರು ಕಾಂಗ್ರೆಸ್‌ನ ಎಲ್ಲ ಶಾಸಕರಿಗೆ ವಿಪ್ ಜಾರಿ ಮಾಡಿದ್ದಾರೆ.

Karnataka Budget session 2019 will be begin today: LIVE updates

ಬಿಜೆಪಿಯು ಕಾಂಗ್ರೆಸ್ ಶಾಸಕರನ್ನು ಗೈರಾಗಿಸಿ ಬಜೆಟ್ ಗೆ ಅನುಮೋದನೆ ದೊರಕದಂತೆ ಮಾಡಿ, ಅವಿಶ್ವಾಸ ಗೊತ್ತುವಳಿ ಮಂಡಿಸಲು ಸಜ್ಜಾಗಿದೆ

Newest FirstOldest First
12:35 PM, 6 Feb

ಬಿಜೆಪಿ ಶಾಸಕರಾದ ಅರವಿಂದ ಲಿಂಬಾವಳಿ, ಬಾಲಚಂದ್ರ ಜಾರಕಿಹೊಳಿ, ಅಶ್ವತ್ಥ ನಾರಾಯಣ್(ಮಲ್ಲೇಶ್ವರ) ಅವರು ಸದ್ಯ ಮುಂಬೈನಲ್ಲಿರುವುದರಿಂದ ಸದನಕ್ಕೆ ಹಾಜರಾಗಿಲ್ಲ.
12:34 PM, 6 Feb

ಶಾಸಕರುಗಳಾದ ರಮೇಶ್ ಜಾರಕಿಹೊಳಿ(ಗೋಕಾಕ), ಮಹೇಶ್ ಕುಮಟಳ್ಳಿ(ಅಥಣಿ), ನಾಗೇಂದ್ರ(ಬಳ್ಳಾರಿ ಗ್ರಾಮಾಂತರ), ಉಮೇಶ್ ಜಾಧವ್(ಚಿಂಚೋಳಿ) ಹಾಗೂ ಆನಂದ್ ಸಿಂಗ್ ಅವರ ಮೇಲೆ ಹಲ್ಲೆ ನಡೆಸಿದ ಕಾರಣಕ್ಕೆ ಬಂಧನ ಭೀತಿ ಎದುರಿಸುತ್ತಿರುವ ಜೆ.ಎನ್. ಗಣೇಶ್(ಕಂಪ್ಲಿ), ಡಾ ಸುಧಾಕರ್ (ಚಿಕ್ಕಬಳ್ಳಾಪುರ), ರಾಮಲಿಂಗಾರೆಡ್ಡಿ, ಸೌಮ್ಯಾ ರೆಡ್ಡಿ, ಸದನಕ್ಕೆ ಗೈರು ಹಾಜರಾಗಿದ್ದಾರೆ.
12:31 PM, 6 Feb

ಅಧಿವೇಶನಕ್ಕೆ ಕಾಂಗ್ರೆಸ್ 8, ಬಿಜೆಪಿಯ 3 ಮತ್ತು ಜೆಡಿಎಸ್ ನ ಓರ್ವ ಶಾಸಕರು ಗೈರಾಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ
12:27 PM, 6 Feb

ಶಾಸಕ ರಾಮಲಿಂಗಾರೆಡ್ಡಿ ಮತ್ತು ಪುತ್ರಿ, ಶಾಸಕಿ ಸೌಮ್ಯಾ ರೆಡ್ಡಿ ಸಹ ಅಧಿವೇಶನಕ್ಕೆ ಗೈರು
12:25 PM, 6 Feb

ಬಿಜೆಪಿ ಶಾಸಕ ಅರವಿಂದ ಲಿಂಬಾವಳಿ ಸಹ ಅಧಿವೇಶನಕ್ಕೆ ಗೈರು
12:21 PM, 6 Feb

ನನಗೆ ಇನ್ನೂ 10-12 ದಿನ ವಿಶ್ರಾಂತಿ ಬೇಕು ಎಂದ ಆನಂದ್ ಸಿಂಗ್
12:06 PM, 6 Feb

ಇತ್ತೀಚೆಗಷ್ಟೆ ಕಂಪ್ಲಿ ಕಾಂಗ್ರೆಸ್ ಶಾಸಕ ಗಣೇಶ್ ಅವರಿಂದ ಹಲ್ಲೆಗೊಳಗಾದ ಕಾಂಗ್ರೆಸ್ ಶಾಸಕ ಆನಂದ್ ಸಿಂಗ್ ಅವರು ಸದನಕ್ಕೆ ಹಾಜರಾಗಿದ್ದಾರಾದರೂ, ಮಾಧ್ಯಮಗಳಿಗೆ ಯಾವುದೇ ಪ್ರತಿಕ್ರಿಯೆ ನೀಡಲು ನಿರಾಕರಿಸಿದರು.
Advertisement
12:00 PM, 6 Feb

ನಾಳೆಯೂ ಸದನದ ಬಾವಿಗಿಳಿದು ಗದ್ದಲ ಎಬ್ಬಿಸಲು ಬಿಜೆಪಿ ಯೋಜನೆ ರೂಪಿಸಿದೆ ಎಂಬ ಮಾತು ಕೇಳಿಬರುತ್ತಿದೆ.
11:58 AM, 6 Feb

ಅಗಲಿದ ಸಿದ್ದಗಂಗಾ ಶ್ರೀಗಳಿಗೆ ಭಾವುಕ ಸಂತಾಪ ಸೂಚಿಸಿದ ಮಾಜಿ ಮುಖ್ಯಮಂತ್ರಿ, ಬಿಜೆಪಿ ಶಾಸಕಾಂಗ ಪಕ್ಷದ ನಾಯಕ ಬಿ ಎಸ್ ಯಡಿಯೂರಪ್ಪ
11:47 AM, 6 Feb

ಅಗಲಿದ ಗಣ್ಯರಿಗೆ ಸಂತಾಪ ಸೂಚನೆ ನಿರ್ಣಯಕ್ಕೆ ಧ್ವನಿಗೂಡಿಸಿದ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ
11:44 AM, 6 Feb

ಬಿಸಿ ಪಾಟೀಲ್, ಬಸನಗೌಡ ದದ್ದೌಲ್, ರಮೇಶ್ ಜಾರಕಿಹೊಳಿ, ಬಿ.ನಾಗೇಂದ್ರ, ಗಣೇಶ್, ಪ್ರತಾಪ್ ಗೌಡ ಪಾಟೀಲ್ ಮುಂತಾದ ಶಾಸಕರು ಇನ್ನೂ ಹಾಜರಾತಿ ಪ್ರತಿಯಲ್ಲಿ ಸಹಿ ಹಾಕಿಲ್ಲ.
11:38 AM, 6 Feb

ಇತ್ತಿಚೆಗೆ ಇಹಲೋಕ ತ್ಯಜಿಸಿದ ಸಿದ್ದಗಂಗಾ ಮಠದ ಪೂಜ್ಯಶ್ರೀ ಶಿವಕುಮಾರ ಸ್ವಾಮೀಜಿ, ಮಾಜಿ ಕೇಂದ್ರ ಸಚಿವ ಜಾರ್ಜ್ ಫರ್ನಾಂಡಿಸ್ ಅವರಿಗೆ ಅಧಿವೇಶನದಲ್ಲಿ ಸಂತಾಪ ಸೂಚಿಸಲಾಯಿತು.
Advertisement
11:35 AM, 6 Feb

ಅಧಿವೇಶನದಲ್ಲಿ ವಂದೇ ಮಾತರಂ ಗೀತೆ ಆರಂಭ
11:32 AM, 6 Feb

ಬಿಜೆಪಿಯ ಶಾಸಕರಾದ ಅಶ್ವತ್ಥ ನಾರಾಯಣ ಮತ್ತು ಬಾಲಚಂದ್ರ ಜಾರಕಿಹೊಳಿ ಅವರು ಅಧಿವೇಶನಕ್ಕೆ ಹಾಜರಾಗಿಲ್ಲ.
11:32 AM, 6 Feb

ಬಿಜೆಪಿಯ ಇಬ್ಬರು ಶಾಸಕರು ಗೈರಾಗಿದ್ದು, ಅತೃಪ್ತರನ್ನು ತಮ್ಮ ಸುಪರ್ಧಿಯಲ್ಲಿಟ್ಟುಕೊಳ್ಳುವ ಸಲುವಾಗಿ ಗೈರಾಗಿದ್ದಾರೆ ಎನ್ನಲಾಗಿದೆ.
11:31 AM, 6 Feb

ಶಾಸಕರಾದ ಉಮೇಶ್ ಜಾಧವ್, ಎನ್ ಗಣೇಶ್, ಮಹೇಶ್ ಕುಮಟಳ್ಳಿ ಮತ್ತು ಬಿ ನಾಗೇಂದ್ರ ಅವರು ಅಧಿವೇಶನಕ್ಕೆ ಹಾಜರಾಗಿಲ್ಲ.
11:27 AM, 6 Feb

ಬಜೆಟ್ ಅಧಿವೇಶನಕ್ಕೆ ಕಾಂಗ್ರೆಸ್ ನ ನಾಲ್ವರು ಶಾಸಕರು ಗೈರು.
11:26 AM, 6 Feb

ಸದನದ ಬಾವಿಯಲ್ಲೇ ನಿಂತು ಪ್ರತಿಭಟನೆಯನ್ನು ಮುಂದುವರಿಸಿದ ಬಿಜೆಪಿ ಶಾಸಕರು.
11:24 AM, 6 Feb

ಮೊದಲ ಮತ್ತು ಕೊನೆಯ ಪುಟವನ್ನು ಓದಿ ಭಾಷಣ ಮುಗಿಸಿದ ರಾಜ್ಯಪಾಲರು.
11:23 AM, 6 Feb

ಪ್ರತಿಭಟನೆ ಹೆಚ್ಚುತ್ತಿದ್ದಂತೆಯೇ ಅಧಿವೇಶನದಿಂದ ನಿರ್ಗಮಿಸಿದ ರಾಜ್ಯಪಾಲರು
11:19 AM, 6 Feb

'ರಾಜ್ಯಪಾಲರ ಭಾಷಣಕ್ಕೆ ಬಿಜೆಪಿ ಶಾಸಕರು ಅಡ್ಡಿಪಡಿಸಿದ್ದು, ಇತಿಹಾಸದಲ್ಲೇ ಕಪ್ಪುಚುಕ್ಕೆ'- ಬಸವರಾಜ್ ಹೊರಟ್ಟಿ, ಜೆಡಿಎಸ್ ಮುಖಂಡ
11:18 AM, 6 Feb

ತಮ್ಮ 22 ಪುಟಗಳ ಭಾಷಣದಲ್ಲಿ ಕೇವಲ 2 ಪುಟ ಮಾತ್ರ ಓದಿದ ರಾಜ್ಯಪಾಲರು
11:17 AM, 6 Feb

ತಮ್ಮ ಭಾಷಣ ಸದನದಲ್ಲಿ ಮಂಡನೆಯಾಗಿದೆ ಎಂದು ಭಾವಿಸಬೇಕು ಎಂದು, ಭಾಷಣವನ್ನು ಅರ್ಧದಲ್ಲೇ ಮೊಟಕುಗೊಳಿಸಿದ ರಾಜ್ಯಪಾಲರು
11:15 AM, 6 Feb

ರಾಜ್ಯಪಾಲರ ಭಾಷಣಕ್ಕೆ ಅಡ್ಡಿ ಮಾಡುವ ಬಿಜೆಪಿ ಉದ್ದೇಶ ಯಶಸ್ವೀ.
11:13 AM, 6 Feb

ಭಾಷಣವನ್ನು ಅರ್ಧದಲ್ಲೇ ಮುಗಿಸಿದ ರಾಜ್ಯಪಾಲ ವಜೂಭಾಯ್ ವಾಲಾ
11:12 AM, 6 Feb

ಸರ್ಕಾರಕ್ಕೆ ಬಹುಮತವಿಲ್ಲ ಘೋಷಣೆ ಕೂಗಲು ಆರಂಭಿಸಿರುವ ಬಿಜೆಪಿ ಶಾಸಕರು
11:12 AM, 6 Feb

ಸದನದ ಬಾವಿಗಿಳಿದು ಪ್ರತಿಭಟನೆ ಆರಂಭಿಸಿರುವ ಬಿಜೆಪಿ ಶಾಸಕರು
11:11 AM, 6 Feb

ನೀವು ಗದ್ದಲ ನಿಲ್ಲಿಸದಿದ್ದರೆ ನಾನು ಭಾಷಣ ಮುಗಿಸುತ್ತೇನೆ ಎಂದ ರಾಜ್ಯಪಾಲ ವಜುಭಾಯ್ ವಾಲಾ
11:09 AM, 6 Feb

ರಾಜ್ಯಪಾಲರ ಭಾಷಣ ಆರಂಭ
11:08 AM, 6 Feb

ರಾಜ್ಯಪಾಲರ ಭಾಷಣ ಆರಂಭಕ್ಕೂ ಮುನ್ನವೇ ಗಲಾಟೆ ಆರಂಭಿಸಿದ ವಿರೋಧ ಪಕ್ಷ ಬಿಜೆಪಿ ಶಾಸಕರು
READ MORE

English summary
Karnataka Budget session 2019 will be begin today: LIVE updates,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X