ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಜೆಟ್ ಅಧಿವೇಶನಕ್ಕೆ ಮೂವರು ಬಿಜೆಪಿ ಶಾಸಕರು ಗೈರಾಗಿದ್ದೇಕೆ?

|
Google Oneindia Kannada News

ಬೆಂಗಳೂರು, ಫೆಬ್ರವರಿ 06: ಇಂದಿನಿಂದ ಆರಂಭವಾಗಿರುವ ಬಜೆಟ್ ಅಧಿವೇಶನ ಬಹಳ ಕುತೂಹಲ ಕೆರಳಿಸಿದೆ.

ಅಧಿವೇಶನಕ್ಕೆ ಸುಮಾರು 8 ಕಾಂಗ್ರೆಸ್ , ಓರ್ವ ಜೆಡಿಎಸ್ ಮತ್ತು ಮೂವರು ಬಿಜೆಪಿ ಶಾಸಕರು ಗೈರಾಗಿರುವುದು ರಾಜ್ಯ ರಾಜಕಾರಣದಲ್ಲಿ ಯಾವುದೋ ಮಹತ್ವದ ಘಟನೆಯೊಂದು ಘಟಿಸುವ ಸೂಚನೆ ಎನ್ನಿಸಿದೆ.

ಬಜೆಟ್ ಜಂಟಿ ಅಧಿವೇಶನಕ್ಕೆ ಎಷ್ಟು ಮಂದಿ ಶಾಸಕರು ಗೈರು ಹಾಜರಿ?ಬಜೆಟ್ ಜಂಟಿ ಅಧಿವೇಶನಕ್ಕೆ ಎಷ್ಟು ಮಂದಿ ಶಾಸಕರು ಗೈರು ಹಾಜರಿ?

ಕಾಂಗ್ರೆಸ್ ನ ಅತೃಪ್ತ ಶಾಸಕರು ಗೈರಾಗಿರುವುದೇನೋ ಸರಿ, ಆದರೆ ಬಿಜೆಪಿಯ ಮೂವರು ಶಾಸಕರೂ ಅಧಿವೇಶನಕ್ಕೆ ಹಾಜರಾಗಿಲ್ಲ!

ಬಿಜೆಪಿಯ ಮಲ್ಲೇಶ್ವರಂ ಕ್ಷೇತ್ರದ ಶಾಸಕ ಅಶ್ವತ್ಥ್ ನಾರಾಯಣ್, ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಮತ್ತು ಮಹದೇವಪುರ ಶಾಸಕ ಅರವಿಂದ್ ಲಿಂಬಾವಳಿ ಅವರು ಆಪರೇಶನ್ ಕಮಲದ ನೇತೃತ್ವ ಹೊತ್ತಿದ್ದು, ಕಾಂಗ್ರೆಸ್ ನ ಅತೃಪ್ತ ಶಾಸಕರನ್ನು ತಮ್ಮ ಸುಪರ್ದಿಯಲ್ಲಿಟ್ಟುಕೊಂಡಿರುವ ಕಾರಣ ಅವರು ಸದನಕ್ಕೆ ಹಾಜರಾಗಿಲ್ಲ ಎಂದು ಮೂಲಗಳು ತಿಳಿಸಿವೆ.

Karnataka budget session 2019: Here is Why 3 BJP MLAs are absent

ಈ ಮೂವರು ಶಾಸಕರೂ ಮುಂಬೈಯಲ್ಲಿಯೇ ಇದ್ದಾರೆ ಎನ್ನಲಾಗುತ್ತಿದೆ.

ಕರ್ನಾಟಕ ಬಜೆಟ್ ಅಧಿವೇಶನ LIVE: ಕಾಂಗ್ರೆಸ್ ನಿಂದ 8,ಬಿಜೆಪಿಯಿಂದ 3 ಶಾಸಕರು ಗೈರು ಕರ್ನಾಟಕ ಬಜೆಟ್ ಅಧಿವೇಶನ LIVE: ಕಾಂಗ್ರೆಸ್ ನಿಂದ 8,ಬಿಜೆಪಿಯಿಂದ 3 ಶಾಸಕರು ಗೈರು

ಇದರೊಟ್ಟಿಗೆ ಕಾಂಗ್ರೆಸ್ ಶಾಸಕರಾದ ರಮೇಶ್ ಜಾರಕಿಹೊಳಿ(ಗೋಕಾಕ), ಮಹೇಶ್ ಕುಮಟಳ್ಳಿ(ಅಥಣಿ), ನಾಗೇಂದ್ರ(ಬಳ್ಳಾರಿ ಗ್ರಾಮಾಂತರ), ಉಮೇಶ್ ಜಾಧವ್(ಚಿಂಚೋಳಿ), ಗಣೇಶ್(ಕಂಪ್ಲಿ), ಡಾ ಸುಧಾಕರ್ (ಚಿಕ್ಕಬಳ್ಳಾಪುರ), ರಾಮಲಿಂಗಾರೆಡ್ಡಿ, ಸೌಮ್ಯಾ ರೆಡ್ಡಿ, ಸದನಕ್ಕೆ ಗೈರು ಹಾಜರಾಗಿದ್ದಾರೆ. ಜೆಡಿಎಸ್ ನ ಓರ್ವ ಶಾಸಕರೂ ಗೈರಾಗಿದ್ದಾರೆ.

English summary
Karnataka budget session 2019: 3 MLAs who are taking lead of Operation lotus are absent for the assembly session.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X