ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕರ್ನಾಟಕ ಬಜೆಟ್: ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ

|
Google Oneindia Kannada News

ಬೆಂಗಳೂರು, ಮಾರ್ಚ್ 5: ಕರ್ನಾಟಕ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ 2020-21ನೇ ಸಾಲಿನ ರಾಜ್ಯ ಬಜೆಟ್ ಮಂಡಿಸಿದ್ದು, ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ಏರಿಕೆ ಕಂಡಿದೆ.

Recommended Video

Karnataka Budget 2020: Petrol and diesel price rise in Karnataka | Petrol | Diesel | Hike

ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ತೆರಿಗೆಯಲ್ಲಿ ಶೇಕಡಾ 3ರಷ್ಟು ಹೆಚ್ಚಳ ಮಾಡಲಾಗಿದೆ. ಅಂದ್ರೆ, ಶೇಕಡಾ 33 ರಿಂದ ಶೇಕಡಾ 35ಕ್ಕೆ ಏರಿಕೆ ಕಂಡಿದೆ. ಡೀಸೆಲ್ ಮೇಲಿನ ತೆರಿಗೆಯಲ್ಲಿ ಶೇಕಡಾ 21 ರಿಂದ 24ಕ್ಕೇ ಏರಿದೆ.

ಏಪ್ರಿಲ್‌ 1ರಿಂದ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಏಪ್ರಿಲ್‌ 1ರಿಂದ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ

ಬಜೆಟ್‌ನಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ತೆರಿಗೆ ಹೆಚ್ಚಾದ ಕಾರಣ ಬೆಲೆಯಲ್ಲೂ ವ್ಯತ್ಯಾಸವಾಗಿದೆ. ಪೆಟ್ರೋಲ್ ದರ ಲೀಟರ್‌ಗೆ 1.60 ಪೈಸೆ ಹೆಚ್ಚಳವಾಗಿದೆ. ಡೀಸೆಲ್ ದರ ಲೀಟರ್‌ಗೆ 1.59 ಪೈಸೆ ಹೆಚ್ಚಳವಾಗಿದೆ.

Petrol Diesel Price Rise In Karnataka Budget

ಈಗಾಗಲೇ ಇಂಡಿಯನ್ ಆಯಿಲ್ ಕಾರ್ಪೋರೇಷನ್ ಬಿಎಸ್-6 ಗುಣಮಟ್ಟದ ಪೆಟ್ರೋಲ್ ಮತ್ತು ಡೀಸೆಲ್ ಪೂರೈಕೆ ಮಾಡಲು ನಿರ್ಧರಿಸಿದ್ದು, ಬೆಲೆ ಏರಿಕೆ ಮಾಡುವುದಾಗಿ ಘೋಷಿಸಿತ್ತು. ಘಟಕಗಳನ್ನು ನವೀಕರಣ ಮಾಡಿರುವ ಹಿನ್ನೆಲೆ ಬೆಲೆ ಏರಿಕೆಯಾಗಲಿದೆ ಎಂದು ತಿಳಿಸಿತ್ತು.

ಕುಡುಕರಿಗೆ ಆಘಾತ, ನಿರೀಕ್ಷೆಯಂತೆ ಬೆಲೆ ಏರಿಕೆ ಮಾಡಿದ ಯಡಿಯೂರಪ್ಪಕುಡುಕರಿಗೆ ಆಘಾತ, ನಿರೀಕ್ಷೆಯಂತೆ ಬೆಲೆ ಏರಿಕೆ ಮಾಡಿದ ಯಡಿಯೂರಪ್ಪ

ಇದೀಗ, ಬಜೆಟ್ ನಲ್ಲಿ ತೆರಿಗೆ ಹೆಚ್ಚಾಗಿರುವ ಕಾರಣ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ಮತ್ತಷ್ಟು ಏರಿಕೆಯಾಗುತ್ತಿದೆ. ಈ ಸುದ್ದಿಯಿಂದ ವಾಹನ ಪ್ರಿಯರು ನಿರಾಸೆಯಾಗಬಹುದು.

English summary
Karnataka Budget 2020: Petrol and diesel price rise in Karnataka.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X