• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಬಜೆಟ್ 2021: ತೆರಿಗೆ ಹಾಕದ ಬಜೆಟ್‌ನಲ್ಲಿ ಯಾವುದು ಇಳಿಕೆ?

|
Google Oneindia Kannada News

ಬೆಂಗಳೂರು, ಮಾರ್ಚ್ 8: ಇದೇ ಮೊದಲ ಬಾರಿಗೆ ತೆರಿಗೆ ವಿಧಿಸದ ಬಜೆಟ್ ಮಂಡನೆ ಮಾಡುವ ಮೂಲಕ ಹಣಕಾಸು ಸಚಿವ, ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರು ಇತಿಹಾಸ ನಿರ್ಮಿಸಿದ್ದಾರೆ. ವಿತ್ತೀಯ ಕೊರತೆ, ಸಾಲದ ಹೊರೆ ನಡುವೆ ಜನಸ್ನೇಹಿ ಬಜೆಟ್ ನೀಡಲಾಗಿದೆ ಎಂದು ಪ್ರತಿಪಾದಿಸಿದ್ದಾರೆ. ತೆರಿಗೆ ಹಾಕದ ಬಜೆಟ್‌ನಲ್ಲಿ ಯಾವ ಪದಾರ್ಥ ಏರಿಕೆ ಎಂಬುದು ಹುಡುಕುವುದು ಕಷ್ಟ, ಯಾವುದೇ ನೇರ ತೆರಿಗೆ ಪ್ರಸ್ತಾವನೆ ಕಂಡು ಬಂದಿಲ್ಲ. ಹಾಗಾಗಿ ಯಾವ ಯಾವ ಕ್ಷೇತರ್ದಲ್ಲಿ ಇಳಿಕೆ? ಎಂಬುದರ ಮಾಹಿತಿ ಇಲ್ಲಿದೆ..

''ಯಾರಿಗೂ ಹೊರೆಯಾಗದ ಜನಸ್ನೇಹಿ ಬಜೆಟ್ ಇದಾಗಿದೆ. ಯಾವುದೇ ತೆರಿಗೆ ಹೆಚ್ಚಳ ಇಲ್ಲ ಮತ್ತು ಹೊಸ ತೆರಿಗೆ ಪ್ರಸ್ತಾಪವೂ ಇಲ್ಲ. ಆಯವ್ಯಯದಲ್ಲಿ ಎಲ್ಲ ವರ್ಗಗಳಿಗೆ, ಎಲ್ಲ ವಲಯಗಳಿಗೆ ಹಾಗೂ ಎಲ್ಲ ಜಿಲ್ಲೆಗಳಿಗೆ ಪ್ರಾಮುಖ್ಯತೆ ನೀಡುವ ಮೂಲಕ ಸಮತೋಲನ ಕಾಯ್ದುಕೊಳ್ಳಲು ಪ್ರಾಮಾಣಿಕ ಪ್ರಯತ್ನ ಮಾಡಿದ್ದೇನೆ'' ಎಂದು ಸಿಎಂ ಯಡಿಯೂರಪ್ಪ ಅವರು ಬಜೆಟ್ ಭಾಷಣದ ಬಳಿಕ ನಡೆದ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ.

ಏರಿಕೆಯಾಗದಿದ್ದರೂ ಬಿಸಿ ಮುಟ್ಟಿಸಲಿದೆ:
ನಿರೀಕ್ಷೆಯಂತೆ ಅಬಕಾರಿ ಸುಂಕ ಏರಿಕೆ ಪ್ರಸ್ತಾವನೆ ಬಂದಿದ್ದರೂ ಯಾವುದೇ ಸುಂಕ ಏರಿಕೆ ಮಾಡದೆ ಮದ್ಯಪ್ರಿಯರಿಗೆ ಸಿಹಿ ಸುದ್ದಿ ನೀಡಿದ್ದಾರೆ. ಆದರೆ, ಈಗಾಗಲೇ ಕೇಂದ್ರ ಬಜೆಟ್‌ನಲ್ಲಿ ಶೇ 100 ರಷ್ಟು ಸೆಸ್ ವಿಧಿಸಲಾಗಿದೆ. ಕಳೆದ ರಾಜ್ಯ ಬಜೆಟ್‌ನಲ್ಲಿ ವಿಧಿಸಲಾಗಿದ್ದ ಶೇ 6ರಷ್ಟು ಸೆಸ್ ಮುಂದುವರೆಸಲಾಗಿದೆ. ಈಗಾಗಲೇ ಬೆಲೆ ಏರಿಕೆಯಾಗಿರುವುದರಿಂದ ಜಾಣ್ಮೆಯ ನಡೆ ಇಟ್ಟ ಯಡಿಯೂರಪ್ಪ ಅವರು ಹೆಚ್ಚುವರಿ ಸೆಸ್, ತೆರಿಗೆ ಹಾಕದೆ ಯಥಾಸ್ಥಿತಿ ಮುಂದುವರೆಯಲಿದೆ ಎಂದಿದ್ದಾರೆ. ಹೆಚ್ಚಿನ ಮಾಹಿತಿಗೆ

ಕುಡುಕರಿಗೆ ಕಹಿ ಸುದ್ದಿ ಇಲ್ಲ, ಇಲಾಖೆಗೆ ಆದಾಯ ಹೆಚ್ಚಳ ಗುರಿಕುಡುಕರಿಗೆ ಕಹಿ ಸುದ್ದಿ ಇಲ್ಲ, ಇಲಾಖೆಗೆ ಆದಾಯ ಹೆಚ್ಚಳ ಗುರಿ

ಇದೇ ರೀತಿ ಪೆಟ್ರೋಲ್ ಹಾಗೂ ಡೀಸೆಲ್ ಮೇಲಿನ ರಾಜ್ಯದ ವ್ಯಾಟ್, ಸೆಸ್ ಇಳಿಕೆ ಮಾಡಿದ್ದರೆ 5 ರು ತನಕ ಪ್ರತಿ ಲೀಟರ್ ಮೇಲೆ ಬೆಲೆ ಇಳಿಕೆಯಾಗುತ್ತಿತ್ತು. ಆದರೆ, ಕೇಂದ್ರದ ವಿರುದ್ಧವಾಗಿ ರಾಜ್ಯದ ಹಿತ ಮಾತ್ರ ಬಯಸುವ ಈ ನಡೆಯನ್ನು ಇಲ್ಲಿ ತನಕ ಯಾವ ಸರ್ಕಾರವೂ ಮಾಡಿಲ್ಲ. ಯಡಿಯೂರಪ್ಪ ಅವರು ಅಷ್ಟೇ, ಹಾಗಾಗಿ ಏರಿಕೆಯಾಗಿರುವ ಇಂಧನ ದರ ಹಾಗೆ ಮುಂದುವರೆಯಲಿದೆ. ಹೆಚ್ಚಿನ ಮಾಹಿತಿಗೆ

ಕರ್ನಾಟಕ ಬಜೆಟ್ 2021: ಪೆಟ್ರೋಲ್, ಡೀಸೆಲ್‌ನಿಂದ ತೆರಿಗೆ ಹೊರೆ ಇಲ್ಲಕರ್ನಾಟಕ ಬಜೆಟ್ 2021: ಪೆಟ್ರೋಲ್, ಡೀಸೆಲ್‌ನಿಂದ ತೆರಿಗೆ ಹೊರೆ ಇಲ್ಲ

**
ಇಳಿಕೆ ಪಟ್ಟಿಯಲ್ಲಿ 45 ಲಕ್ಷ ರೂಪಾಯಿವರೆಗಿನ ಫ್ಲ್ಯಾಟ್ ಖರೀದಿಗೆ ಮುದ್ರಾಂಕ ಶುಲ್ಕ ಇಲ್ಲ. ಶೇ 5 ರಿಂದ 3ಕ್ಕೆ ಇಳಿಕೆ. ಹೀಗಾಗಿ ಸಣ್ಣ ಪುಟ್ಟ ಅಪಾರ್ಟ್ಮೆಂಟ್ ಖರೀದಿದಾರರಿಗೆ ಅನುಕೂಲವಾಗಲಿದೆ. ಆದರೆ, ಕೇಂದ್ರ ಬಜೆಟ್‌ನಲ್ಲಿ ಫ್ಲ್ಯಾಟ್ ಖರೀದಿ ಕುರಿತಂತೆ ವಿಧಿಸಲಾದ ಜಿಎಸ್ಟಿ ಪ್ರಮಾಣದ ಬಗ್ಗೆ ಪ್ರಸ್ತಾವನೆ ಇಲ್ಲ.

English summary
Yediyurappa presents No tax Budget, Here is the Full List of Cheaper and tax variation of Items after Karnataka budget 2021. Take a look
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X