ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೋವಿಡ್ ಹೊಡೆತಕ್ಕೆ ತತ್ತರಿಸಿರುವ ಶಿಕ್ಷಣ ವ್ಯವಸ್ಥೆಯ ನಿರೀಕ್ಷೆಗಳು..!

|
Google Oneindia Kannada News

ಬೆಂಗಳೂರು ಮಾರ್ಚ್‌ 08: ಕರೋನಾ ಸಂಕಷ್ಟಕ್ಕೆ ತತ್ತರಿಸಿ ಖಾಸಗಿ ಶಿಕ್ಷಕರು ಬೀದಿಗೆ ಇಳಿದು ದೊಡ್ಡ ಮಟ್ಟದ ಹೋರಾಟ ನಡೆಸಿದರು. ರಾಜ್ಯದ ಶೇ. 50 ರಷ್ಟು ಮಕ್ಕಳಿಗೆ ಶಿಕ್ಷಣ ನೀಡುತ್ತಿರುವ ಖಾಸಗಿ ಶಿಕ್ಷಣ ವ್ಯವಸ್ಥೆ , ಉಳಿದ ಶೇ. 50 ರಷ್ಟು ಮಕ್ಕಳಿಗೆ ಶಿಕ್ಷಣ ಧಾರೆ ಎರೆಯುತ್ತಿರುವ ಸರ್ಕಾರಿ ಶಿಕ್ಷಣ ವ್ಯವಸ್ಥೆ ಬದಲಿಸುವ ನಿಟ್ಟಿನಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ 2021 ನೇ ಸಾಲಿನ ಬಜೆಟ್ ನಲ್ಲಿ ಪರಿಹಾರ ಸೂತ್ರ ಕಂಡುಕೊಳ್ಳಲಿದ್ದಾರಾ ಎಂಬ ನಿರೀಕ್ಷೆಗಳು ದಟ್ಟವಾಗಿವೆ.

ಖಾಸಗಿ ಶಾಲಾ ಶಿಕ್ಷಣ ಸಂಸ್ಥೆಗಳು ಕೊರೋನಾ ಹೊಡೆತಕ್ಕೆ ಸಿಲುಕಿ ನಲಗಿ ಹೋಗಿವೆ. ಪರಿಹಾರವಾಗಿ ತುರ್ತಾಗಿ ಒಂದು ಸಾವಿರ ಕೋಟಿ ರೂ. ಆರ್‌ಟಿಇ ಹಣ ಬಿಡುಗಡೆ ಮಾಡಬೇಕು. ಇದರ ಜತೆಗೆ ಎಲ್ಲಾ ಶಿಕ್ಷಕರಿಗೆ ಮತ್ತು ಮಕ್ಕಳಿಗೆ ಕೋವಿಡ್ ವ್ಯಾಕ್ಸಿನ್ ಕೊಡಬೇಕು ಎಂಬ ಬೇಡಿಕೆಯನ್ನು ಖಾಸಗಿ ಶಾಲಾ ಶಿಕ್ಷಕರು ಸಲ್ಲಿಸಿದ್ದರು. ಈ ಬೇಡಿಕೆ ಈಡೇರಸುವ ನಿಟ್ಟಿನಲ್ಲಿ ಯಡಿಯೂರಪ್ಪ ಮಹತ್ವದ ಘೋಷಣೆ ಮಾಡಲಿದ್ದಾರಾ ಎಂದು ಶಿಕ್ಷಕ ವರ್ಗ ಕಾದು ನೋಡುತ್ತಿದೆ.

ರಾಜ್ಯ ಬಜೆಟ್: ಪೆಟ್ರೋಲ್-ಡೀಸೆಲ್ ಬೆಲೆ ಕುರಿತು ಯಡಿಯೂರಪ್ಪ ಮಹತ್ವದ ತೀರ್ಮಾನ!ರಾಜ್ಯ ಬಜೆಟ್: ಪೆಟ್ರೋಲ್-ಡೀಸೆಲ್ ಬೆಲೆ ಕುರಿತು ಯಡಿಯೂರಪ್ಪ ಮಹತ್ವದ ತೀರ್ಮಾನ!

ಕರೋನಾ ಹೊಡೆತದಿಂದ ಖಾಸಗಿ ಶಾಲೆಗಳು ಸಂಕಷ್ಟಕ್ಕೆ ಸಿಲುಕಿವೆ. ನಮ್ಮ ಕಷ್ಟ ಆಲಿಸದ ಕಾರಣ ಹೋರಾಟ ಅನಿವಾರ್ಯ ಆಯಿತು. ಆರ್‌ಟಿಇ ಮೊತ್ತ ಬಿಡುಗಡೆ, ಖಾಸಗಿ ಶಿಕ್ಷಕರಿಗೆ ವ್ಯಾಕ್ಸಿ ನ್ ಕೊಡಬೇಕು ಎಂಬ ಕನಿಷ್ಠ ಬೇಡಿಕೆಗಳನ್ನು ಸರ್ಕಾರಕ್ಕೆ ಸಲ್ಲಿಸಿದ್ದೇವೆ. ಅವನ್ನು ಈಡೇರಿಸುವ ಭರವಸೆ ಹೊಂದಿದ್ದೇವೆ. ಇನ್ನು ರಾಜ್ಯದ ಸರ್ಕಾರಿ ಶಿಕ್ಷಣ ವ್ಯವಸ್ಥೆ ಬದಲಿಸುವ ನಿಟ್ಟಿನಲ್ಲಿ ಸರ್ಕಾರ ಕೇವಲ ಒಂದು ಸಾವಿರ ಕೋಟಿ ಕೊಟ್ಟರೆ ಏನೂ ಆಗದು.

Karnataka Budget 2021 Expectations for Education Sector

ಕಳೆದ ವರ್ಷದ ಬಜೆಟ್ ನಲ್ಲಿ ಕೊಟ್ಟಿದ್ದ ಅನುದಾನದಲ್ಲಿ 900 ಕೋಟಿ ರೂ.ಉಳಿದಿದೆ. ಅದಕ್ಕೆ ನೂರು ಕೋಟಿ ಸೇರಿಸಿ ಒಂದು ಸಾವಿರ ಕೋಟಿ ಹೆಚ್ಚುವರಿ ಅನುದಾನ ಕೊಡುವುದರಲ್ಲಿ ವಿಶೇಷತೆ ಏನೂ ಇರಲ್ಲ. ಸರ್ಕಾರಿ ಶಿಕ್ಷಣ ಸಂಸ್ಥೆಗಳ ಮೂಲ ಸೌಕರ್ಯ ಮತ್ತು ಗುಣಮಟ್ಟ ಹೆಚ್ಚಿಸುವ ನಿಟ್ಟಿನಲ್ಲಿ ಕನಿಷ್ಠ ಹತ್ತು ಸಾವಿರ ಕೋಟಿ ಕೊಟ್ಟರೂ ಕಡಿಮೆಯೇ . ಗ್ರಾಮೀಣ ಭಾಗದಲ್ಲಿ ಓದುತ್ತಿರುವ ಬಡ ಮಕ್ಕಳ ಶಿಕ್ಷಣ ವ್ಯವಸ್ಥೆ ಸುಧಾರಿಸುವ ನಿಟ್ಟಿನಲ್ಲಿ ಚಿಂತನೆ ನಡೆಸಬೇಕಿದೆ ಎಂದು ಅನುದಾನಿತ ಖಾಸಗಿ ಶಾಲಾ ಶಿಕ್ಷಣ ಸಂಸ್ಥೆಗಳ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಶಶಿಕುಮಾರ್ ಅಭಿಪ್ರಾಯ ಪಟ್ಟಿದ್ದಾರೆ.

Karnataka Budget 2021 Expectations for Education Sector

ಸರ್ಕಾರಿ ಶಿಕ್ಷಣ ವ್ಯವಸ್ಥೆ: ರಾಜ್ಯದಲ್ಲಿ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸರ್ಕಾರಿ ಶಿಕ್ಷಣ ವ್ಯವಸ್ಥೆಗೆ 25 ಸಾವಿರ ಕೋಟಿ ರೂಪಾಯಿ ಸರ್ಕಾರ ವ್ಯಯಿಸುತ್ತಿದೆ. ಅದರಲ್ಲಿ ಶೇ. 93 ರಷ್ಟು ಕೇವಲ ಶಿಕ್ಷಕರ ವೇತನಕ್ಕಾಗಿ ವ್ಯಯಿಸುತ್ತಿದೆ. ಉಳಿದ ಶೇ. 7 ರಷ್ಟು ಮೊತ್ತದಲ್ಲಿ ಸರ್ಕಾರಿ ಶಾಲೆಗಳ ಮೂಲ ಸೌಕರ್ಯ ಅಭಿವೃದ್ಧಿ ಪಡಿಸುತ್ತಿದೆ. ಗುಣಮಟ್ಟದ ಶಿಕ್ಷಣಕ್ಕೆ ಮೂಲ ಸೌಕರ್ಯ ಕೂಡ ಅತಿ ಮುಖ್ಯ. ಆದರೆ ಪ್ರತಿ ವರ್ಷವೂ ಸರ್ಕಾರ ಶಿಕ್ಷಣ ವಿಚಾರದಲ್ಲಿ ಇರುವ ವ್ಯವಸ್ಥೆಯನ್ನೇ ಮುಂದುವರೆಸಿಸಿಕೊಂಡು ಹೋಗುತ್ತಿದೆ. ಸುಮಾರು 50 ಲಕ್ಷ ಮಕ್ಕಳಗೆ ಶಿಕ್ಷಣ ನೀಡುತ್ತಿರುವ ಸರ್ಕಾರಿ ಶಾಲೆಗಳ ಮೂಲ ಸೌಕರ್ಯ ಅಭಿವದ್ಧಿ ಜತೆಗೆ ಮೇಲ್ದರ್ಜೆಗೆ ಏರಿಸುವ ನಿಟ್ಟಿನಲ್ಲಿ ಸರ್ಕಾರ ಈ ಬಜೆಟ್ ನಲ್ಲಿ ಪರಿಹಾರ ಸೂತ್ರ ಕಂಡುಕೊಳ್ಳಲಿದೆಯಾ ? ಇಲ್ಲವೇ ಇರುವ ವ್ಯವಸ್ಥೆಯನ್ನು ಮುಂದುವರೆಸಿಕೊಂಡು ಹೋಗಲಿದೆಯಾ ಕಾದು ನೋಡಬೇಕು.

Karnataka Budget 2021 Expectations for Education Sector

Recommended Video

ರಾಜಾಹುಲಿಯ ಬಜೆಟ್ ಗೆ ಕೌಂಟ್ ಡೌನ್ ಶುರು | Oneindia Kannada

ಖಾಸಗಿ ಶಿಕ್ಷಣ ವ್ಯವಸ್ಥೆ: ರಾಜ್ಯದ ನಗರ ಪ್ರದೇಶದ ಶೇ. 83 ರಷ್ಟು ವಿದ್ಯಾರ್ಥಿಗಳು ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಓದುತ್ತಿದ್ದಾರೆ. ಗ್ರಾಮೀಣ ಭಾಗದ ವಿದ್ಯಾರ್ಥಿಗಳು, ನರ್ಸರಿ ಸೇರಿದಂತೆ ಒಟ್ಟಾರೆ ಸುಮಾರು 50 ಲಕ್ಷ ವಿದ್ಯಾರ್ಥಿಗಳು ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಇದು ರಾಜ್ಯದ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಮಕ್ಕಳ ವ್ಯಾಸಂಗದ ವಿವರ. ಕೋವಿಡ್ ನಿಂದ ತತ್ತರಿಸಿರುವ ಖಾಸಗಿ ಶಿಕ್ಷಣ ಸಮುದಾಯ ಈ ಬಾರಿ ಬಜೆಟ್ ನಲ್ಲಿ ಆರ್‌ಟಿಇ ಶುಲ್ಕ ಬಿಡುಗಡೆ ಜತೆಗೆ ಗೌರವ ಧನ ನೀಡುವಂತೆ ಕೋರಿದೆ. ಶಿಕ್ಷಣ ಮೂಲಭೂತ ಹಕ್ಕು. ರಾಜ್ಯದ ಶೇ. 50 ರಷ್ಟು ಮಕ್ಕಳಿಗೆ ಶಿಕ್ಷಣ ನೀಡುತ್ತಿರುವ ಖಾಸಗಿ ಶಿಕ್ಷಣ ಸಂಸ್ಥೆಗಳು. ರಾಜ್ಯದಲ್ಲಿ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವ ನಿಟ್ಟಿನಲ್ಲಿ ಸರ್ಕಾರ ಹೊಸ ನಿರ್ಧಾರಗಳು ತೆಗೆದುಕೊಳ್ಳಲಿದೆಯಾ ಕಾದು ನೋಡಬೇಕು.

English summary
Here are the expectations for education sector in Karnataka Budget 2021. Read on.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X