ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಉಚಿತ ಡಯಾಲಿಸಿಸ್, ಮಕ್ಕಳಿಗೆ ವಿದ್ಯಾಭ್ಯಾಸ: ಬಡವರಿಗೆ ಸುಗ್ಗಿ ತಂದ BSY

|
Google Oneindia Kannada News

ಬೆಂಗಳೂರು, ಮಾರ್ಚ್ 5: 2020 - 21 ಸಾಲಿನ ರಾಜ್ಯ ಬಜೆಟ್ ಮುಖ್ಯಮಂತ್ರಿ ಹಾಗೂ ಹಣಕಾಸು ಸಚಿವರೂ ಆಗಿರುವ ಬಿ ಎಸ್ ಯಡಿಯೂರಪ್ಪ ಬೆಳಗ್ಗೆ 11 ಗಂಟೆಗೆ ಮಂಡಿಸಿದರು. ಹಸಿರು ಶಾಲು ಹಾಕಿಕೊಂಡು, 1 ಗಂಟೆ 40 ನಿಮಿಷಗಳ ಕಾಲ ಬಜೆಟ್ ಓದಿದ ಯಡಿಯೂರಪ್ಪ ಆರ್ಥಿಕವಾಗಿ ಹಿಂದುಳಿದವರಿಗೆ ಹಲವು ಯೋಜನೆಗಳನ್ನು ಘೋಷಿಸಿದರು.

ಆಟೋ ಚಾಲಕರ ಮಕ್ಕಳ ವಿದ್ಯಾಭ್ಯಾಸಕ್ಕೆ ಹಣ ಸಹಾಯ, ಕಟ್ಟಡ ಕಾರ್ಮಿಕ ಕುಟುಂಬದ ಚಿಕಿತ್ಸೆಗೆ ಸಹಾಯ ಹಸ್ತ, ಗಾರ್ಮೆಂಟ್ ಉದ್ಯಮದಲ್ಲಿ ಕೆಲಸ ಮಾಡುವ ಮಹಿಳೆಯರಿಗೆ ಉಚಿತ ಬಸ್ ಪಾಸ್ ಹೀಗೆ ಹಲವು ಜನಪರ ಕಾರ್ಯಕ್ರಮಗಳನ್ನು ಬಡವರ ಬಂಧು ಯಡಿಯೂರಪ್ಪ ಮಂಡಿಸಿದರು. ಅಂದಹಾಗೆ, ಆ ಕುರಿತ ಸಂಪೂರ್ಣ ವಿವರ ಇಲ್ಲಿದೆ.

ಆಟೋ ಚಾಲಕರ ಮಕ್ಕಳ ವಿದ್ಯಾಭ್ಯಾಸಕ್ಕೆ ಸಹಾಯ

ಆಟೋ ಚಾಲಕರ ಮಕ್ಕಳ ವಿದ್ಯಾಭ್ಯಾಸಕ್ಕೆ ಸಹಾಯ

* ಒಂದು ಲಕ್ಷ ನೋಂದಾಯಿತ ಕಟ್ಟದ ಕಾರ್ಮಿಕರು ಮತ್ತು ಅವರ ಕುಟುಂಬದ ಸದಸ್ಯರುಗಳಿಗೆ 'ಮುಖ್ಯಮಂತ್ರಿಗಳ ಆರೋಗ್ಯ ಸುರಕ್ಷಾ' ಯೋಜನೆಯಡಿಯಲ್ಲಿ ಅನುಮೋದಿತ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯಲು ಅನುವಾಗುವಂತೆ 'ಉಚಿತ ಪ್ರೀಪೇಯ್ಡ್ ಹೆಲ್ತ್ ಕಾರ್ಡ್'ಗಳ ವಿತರಣೆ

ಭಾರಿ ನಿರೀಕ್ಷೆಯಲ್ಲಿದ್ದ 'ಸಮಾಜ ಕಲ್ಯಾಣ'ಕ್ಕೆ ಬಜೆಟ್ ನಲ್ಲಿ ಸಿಕ್ಕಿದ್ದಿಷ್ಟೇ!ಭಾರಿ ನಿರೀಕ್ಷೆಯಲ್ಲಿದ್ದ 'ಸಮಾಜ ಕಲ್ಯಾಣ'ಕ್ಕೆ ಬಜೆಟ್ ನಲ್ಲಿ ಸಿಕ್ಕಿದ್ದಿಷ್ಟೇ!

* ಆಟೋ ಚಾಲಕರ ಮಕ್ಕಳ ವಿದ್ಯಾಭ್ಯಾಸಕ್ಕೆ ಪ್ರತಿ ವರ್ಷ ಪ್ರತಿ ಕುಟುಂಬಕ್ಕೆ 2000 ರೂಪಾಯಿ ನೆರವು. ಇದಕ್ಕೆ 40 ಕೋಟಿ ರೂಪಾಯಿ ಅನುದಾನ.

ಮಹಿಳಾ ಕಾರ್ಮಿಕರಿಗೆ ಉಚಿತ ಬಸ್ ಪಾಸ್

ಮಹಿಳಾ ಕಾರ್ಮಿಕರಿಗೆ ಉಚಿತ ಬಸ್ ಪಾಸ್

* 'ವನಿತಾ ಸಂಗಾತಿ' ಯೋಜನೆಯಡಿ ಗಾರ್ಮೆಂಟ್ ಉದ್ಯಮಗಳಲ್ಲಿ ಕಾರ್ಯನಿರ್ವಹಿಸುವ ಮಹಿಳಾ ಕಾರ್ಮಿಕರಿಗೆ ಉಚಿತ ಬಿಎಂಟಿಸಿ ಮಾಸಿಕ ಬಸ್ ಪಾಸ್ ವಿತರಣೆಗೆ 25 ಕೋಟಿ ರೂಪಾಯಿ ಅನುದಾನ.

* ನಗರ ಪ್ರದೇಶಗಳಲ್ಲಿ ದುಡಿಯುತ್ತಿರುವ ಕಟ್ಟದ ಕಾರ್ಮಿಕರು ಮತ್ತು ಅವರ ಕುಟುಂಬಸ್ಥರಿಗೆ ಆರೋಗ್ಯ ರಕ್ಷಣೆ ನೀಡುವ ದೃಷ್ಟಿಯಿಂದ 10 'ಮೊಬೈಲ್ ಕ್ಲಿನಿಕ್'ಗಳನ್ನು ಪ್ರಾರಂಭಿಸಲಾಗುವುದು.

ಬಡ ರೋಗಿಗಳಿಗೆ ಉಚಿತ ಡಯಾಲಿಸಿಸ್

ಬಡ ರೋಗಿಗಳಿಗೆ ಉಚಿತ ಡಯಾಲಿಸಿಸ್

* ರಾಜ್ಯಾದ್ಯಂತ ಕಟ್ಟದ ಕಾರ್ಮಿಕರ ಆರು ವರ್ಷದೊಳಗಿನ ಮಕ್ಕಳ ಪಾಲನೆ ಪೋಷಣೆ ಮಾಡಲು ಕಟ್ಟಡ ನಿರ್ಮಾಣ ಸ್ಥಳಗಳಲ್ಲಿ 10 ಸಂಚಾರಿ ಶಿಶುಪಾಲನಾ ಕೇಂದ್ರಗಳನ್ನು ಒಳಗೊಂಡಂತೆ ಒಟ್ಟು 110 'ಕಿತ್ತೂರು ರಾಣಿ ಚೆನ್ನಮ್ಮ' ಶಿಶುಪಾಲನಾ ಕೇಂದ್ರಗಳ ಸ್ಥಾಪನೆ.

ರಾಜ್ಯ ಬಜೆಟ್‌ನಲ್ಲಿ ಸರ್ಕಾರಿ ನೌಕರಿಗೆ ಸಿಕ್ಕ ಸೌಲಭ್ಯಗಳುರಾಜ್ಯ ಬಜೆಟ್‌ನಲ್ಲಿ ಸರ್ಕಾರಿ ನೌಕರಿಗೆ ಸಿಕ್ಕ ಸೌಲಭ್ಯಗಳು

* ರಾಜ್ಯದ ಆಯ್ದ ಐದು ಜಿಲ್ಲೆಗಳಲ್ಲಿ ಐದು ಕೋಟಿ ರೂ. ವೆಚ್ಚದಲ್ಲಿ ಬಡ ರೋಗಿಗಳಿಗೆ ಉಚಿತ ಪೆರಿಟೋನಿಯಲ್ ಡಯಾಲಿಸಿಸ್ ಸೇವೆ.

ಹೃದಯ ರೋಗದ ಚಿಕಿತ್ಸೆಗೆ ಸಹಾಯ

ಹೃದಯ ರೋಗದ ಚಿಕಿತ್ಸೆಗೆ ಸಹಾಯ

* ಕೆ.ಸಿ. ಜನರಲ್ ಆಸ್ಪತ್ರೆ ಮತ್ತು ಇತರೆ ಐದು ಆಸ್ಪತ್ರೆಗಳ ತುರ್ತು ವೈದ್ಯಕೀಯ ಚಿಕಿತ್ಸಾ ವಿಭಾಗಗಳನ್ನು ಅಂತರಾಷ್ಟ್ರೀಯ ಮಟ್ಟಕ್ಕೆ ಮೇಲ್ದರ್ಜೆಗೇರಿಸಿ ಉತ್ಕೃಷ್ಟ ಕೇಂದ್ರಗಳನ್ನಾಗಿ (Centre of Excellence) ಅಭಿವೃದ್ಧಿಪಡಿಸಲು ಐದು ಕೋಟಿ ರೂ. ಅನುದಾನ.

ಉಚಿತ ಬಸ್ ಪಾಸ್: ಬಿ.ಎಸ್.ವೈ ಬಜೆಟ್ ನಲ್ಲಿ ಹೆಣ್ಮಕ್ಕಳಿಗೆ ಸಿಹಿ ಸಿಕ್ತು ಗುರು!ಉಚಿತ ಬಸ್ ಪಾಸ್: ಬಿ.ಎಸ್.ವೈ ಬಜೆಟ್ ನಲ್ಲಿ ಹೆಣ್ಮಕ್ಕಳಿಗೆ ಸಿಹಿ ಸಿಕ್ತು ಗುರು!

* ಬೆಂಗಳೂರಿನ ಕೆ.ಸಿ. ಜನರಲ್ ಆಸ್ಪತ್ರೆ ಮತ್ತು ಸಿ.ವಿ. ರಾಮನ್ ಆಸ್ಪತ್ರೆಗಳಲ್ಲಿ ಹೃದಯ ರೋಗದ ಚಿಕಿತ್ಸೆಗಾಗಿ ಸಾರ್ವಜನಿಕ-ಖಾಸಗಿ ಸಹಭಾಗಿತ್ವದೊಂದಿಗೆ ಕ್ಯಾತ್ ಲ್ಯಾಬ್ ಸ್ಥಾಪನೆ.

ಅಂಧ ವಿದ್ಯಾರ್ಥಿಗಳಿಗೆ ಟಾಕಿಂಗ್ ಮೊಬೈಲ್

ಅಂಧ ವಿದ್ಯಾರ್ಥಿಗಳಿಗೆ ಟಾಕಿಂಗ್ ಮೊಬೈಲ್

* ರಾಜ್ಯದ 500 ಅಂಧ ವಿದ್ಯಾರ್ಥಿಗಳಿಗೆ ತಲಾ 25,000 ರೂ.ಗಳ ಮೊತ್ತದ ಟಾಕಿಂಗ್ ಮೊಬೈಲ್, ಬ್ರೈಲ್ ವಾಚ್ ಹಾಗೂ ವಾಕಿಂಗ್ ಸ್ಟಿಕ್‍ಗಳನ್ನೊಳಗೊಂಡ ಕಿಟ್ ವಿತರಣೆ. 1.25 ಕೋಟಿ ರೂ. ಅನುದಾನ.

ಮೊಟ್ಟ ಮೊದಲ ಬಾರಿಗೆ 'ಮಕ್ಕಳ' ಬಜೆಟ್: ಇತಿಹಾಸ ಸೃಷ್ಟಿಸಿದ ಬಿ.ಎಸ್.ವೈ!ಮೊಟ್ಟ ಮೊದಲ ಬಾರಿಗೆ 'ಮಕ್ಕಳ' ಬಜೆಟ್: ಇತಿಹಾಸ ಸೃಷ್ಟಿಸಿದ ಬಿ.ಎಸ್.ವೈ!

* ಅಂಧ ತಾಯಂದಿರಿಗೆ ನೀಡುವ ಮಾಸಿಕ 2000 ರೂ. ಶಿಶುಪಾಲನಾ ಭತ್ಯೆ ಯೋಜನೆ ಮಗುವಿನ ಮೊದಲ ಎರಡು ವರ್ಷಗಳಿಂದ ಐದು ವರ್ಷದ ವರೆಗೆ ವಿಸ್ತರಣೆ.

English summary
Karnataka Budget 2020: Major Announcement by Chief Minister BS Yeddyurappa For Economically Backward Class Welfare
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X