• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕರ್ನಾಟಕ ಬಜೆಟ್ 2020: ಯಾವುದು ಏರಿಕೆ? ಯಾವುದು ಇಳಿಕೆ

|

ಬೆಂಗಳೂರು, ಮಾರ್ಚ್ 5: ಕರ್ನಾಟಕ ಸರ್ಕಾರಕ್ಕೆ ಆದಾಯಕ್ಕೆ ತಂದು ಕೊಡುವ ಅಬಕಾರಿ ಇಲಾಖೆ ಪ್ರಸ್ತಾವನೆಗೆ ಮಣಿದು ನಿರೀಕ್ಷೆಯಂತೆ ಮದ್ಯದ ಮೇಲಿನ ತೆರಿಗೆ ಹೆಚ್ಚಿಸಲಾಗಿದೆ. ಮಿಕ್ಕಂತೆ ಪೆಟ್ರೋಲ್, ಡೀಸೆಲ್ ಬೆಲೆ ಕೂಡಾ ಏರಿಕೆಯಾಗಿದೆ. ಸರ್ಕಾರದ ಬೊಕ್ಕಸಕ್ಕೆ ಆಗುವ ಹೊರೆ ತಪ್ಪಿಸಲು, ಆದಾಯ ಸಂಗ್ರಹಕ್ಕೆ ಹೆಚ್ಚಿನ ಒತ್ತು ನೀಡುವುದು ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರಿಗೆ ಅನಿವಾರ್ಯವಾಗಿದೆ. ಕಾರಣ, ಕೇಂದ್ರದಿಂದ ರಾಜ್ಯಕ್ಕೆ ಬರಬೇಕಾಗಿರುವ ತೆರಿಗೆ ಅನುದಾನ ಈ ಬಾರಿ ಸಾವಿರಾರು ಕೋಟಿ ರುಗಳಷ್ಟು ಕಡಿಮೆಯಾಗಿದೆ. ಜಿಎಸ್ಟಿ ನಷ್ಟ ಭರಿಸಲು ಹಾಗೂ ರಾಜಸ್ವ ಸಂಗ್ರಹಕ್ಕೆ ಸರ್ಕಾರ ಮುಂದಾಗಿದೆ.

   Karnataka Budget 2020:Which comodity prices went up and down? | BSY | Oneindia Kannada

   Live Updates: ನಾಳೆ ಬೆಳಗ್ಗೆ 10.30ಕ್ಕೆ ಬಜೆಟ್ ಅಧಿವೇಶನ ಮುಂದೂಡಿಕೆ

   ಅಗತ್ಯ ವಸ್ತುಗಳ ಬೆಲೆ ಏರಿಕೆಗೆ ಕಡಿವಾಣ ಹಾಕಿ ಆರ್ಥಿಕ ಸುಸ್ಥಿರತೆಗೆ ಆದ್ಯತೆ ನೀಡಿದ ಕೇಂದ್ರ ಸರ್ಕಾರದ ಬಜೆಟ್, 7ನೇ ಬಾರಿಗೆ ಆಯವ್ಯಯ ಮಂಡಿಸಿದ ಯಡಿಯೂರಪ್ಪ ಅವರು ಬೆಲೆ ಏರಿಕೆಯನ್ನು ಸಮರ್ಥಿಸಿಕೊಂಡರು. ಸುಮಾರು 1 ಗಂಟೆ 46 ನಿಮಿಷಗಳ ಭಾಷಣದ ನಂತರ ಯಾವೆಲ್ಲ ವಸ್ತುಗಳು ಏರಿಕೆಯಾಗಿವೆ? ಯಾವೆಲ್ಲ ಕಡಿಮೆಯಾಗಿದೆ ಅಥವಾ ಹೆಚ್ಚಿನ ತೆರಿಗೆ ಬಿದ್ದಿದೆ ಎಂಬುದರ ವಿವರ ಇಲ್ಲಿದೆ.

   ಯಾವುದು ಏರಿಕೆ?

   * ಮದ್ಯದ ಮೇಲಿನ ಅಬಕಾರಿ ಸುಂಕ ಶೇ 6 ರಷ್ಟು ಹೆಚ್ಚಳ.

   * ಅಬಕಾರಿ ಸುಂಕ 18 ಸ್ಲ್ಯಾಬ್ ಗಳಿಗೆ ಶೇ 15 ರಿಂದ ಶೇ 34ಕ್ಕೆ ಏರಿಕೆ

   * ಮದ್ಯ, ತಂಬಾಕು ಉತ್ಪನ್ನಗಳು, ಸಿಗರೇಟು, ಬೀಡಿ ಬೆಲೆ ಏರಿಕೆ

   * ಡೀಸೆಲ್ ಮೇಲಿನ 32 ರಿಂದ 35 ರಷ್ಟು ಸೆಸ್ ಏರಿಕೆ, ಡೀಸೆಲ್ ಪ್ರತಿ ಲೀಟರ್ ಬೆಲೆ 1.60 ರು ಏರಿಕೆ

   * ಪೆಟ್ರೋಲ್ ಮೇಲಿನ ಅಬಕಾರಿ ಸುಂಕ ಶೇ 32ರಿಂದ 35ಕ್ಕೇರಿಕೆ

   * ಖಾಸಗಿ ಸೇವಾ ವಾಹನ ತೆರಿಗೆ: 12ಕ್ಕಿಂತ ಹೆಚ್ಚು 20 ಕ್ಕಿಂತ ಕಡಿಮೆ ಆಸನವುಳ್ಳ ಪ್ರಯಾಣಿಕರ ಒಪ್ಪಂದ ವಾಹನದ ತ್ರೈಮಾಸಿಕ ಪ್ರತಿ ಆಸನಕ್ಕೆ 900 ರು ನಿಗದಿ.

   * 1988ನೇ ಮೋಟಾರು ವಾಹನ ಕಾದ್ಯೆ ಕಲಂ 88(9) ಅನ್ವಯ ರಹದಾರಿ ಪಡೆದು ಚಾಲನೆಯಲ್ಲಿರುವ ಹೊಸ ಮಾದರಿ ಸ್ಲೀಪರ್ ಕೋಚ್ ವಾಹನಗಳ ನೋಂದಣಿ ಸಮಯದಲ್ಲಿ ತ್ರೈಮಾಸಿಕ ತೆರಿಗೆ ಪ್ರತಿ ಸ್ಲೀಪರ್ ಗೆ 4,000 ರು

   * ವಿದ್ಯುತ್ ದರ ಹೆಚ್ಚಳ ಪ್ರತಿ ಯೂನಿಟ್ ಮೇಲೆ 10ರಿಂದ 20 ಪೈಸೆ ಏರಿಕೆ ಮುಂದುವರಿಕೆ.

   * ವಿದ್ಯುತ್ ಮೇಲಿನ ತೆರಿಗೆ ಶೇ.6ರಿಂದ ಶೇ.9ಕ್ಕೆ ಏರಿಕೆ ಮುಂದುವರಿಕೆ

   ಯಾವುದು ಇಳಿಕೆ?

   * ಮನೆ ಖರೀದಿದಾರರಿಗೆ ಶುಭ ಸುದ್ದಿ, ನೋಂದಣಿ ಶುಲ್ಕ ಕಡಿತ.

   * ಸಿರಿಧಾನ್ಯಗಳಾದ ನವಣೆ, ಸಾಮೆ, ಅರಕ ಹಾಗೂ ಬರಗು ಮೇಲಿನ ಹಿಟ್ಟುಗಳಿಗೆ ತೆರಿಗೆ ವಿನಾಯ್ತಿ, ರೈತರಿಗೆ ಹೆಕ್ಟೇರಿಗೆ 10 ಸಾವಿರ ರು ಅನುದಾನ.

   * ದ್ವಿದಳ ಧಾನ್ಯ, ತೆಂಗಿನ ಕಾಯಿ ಸಿಪ್ಪೆಯ ಮೇಲಿನ ತೆರಿಗೆ ವಿನಾಯಿತಿ ಮುಂದುವರಿಕೆ. ಸಿರಿ ಧಾನ್ಯಗಳ ಪಟ್ಟಿಗೆ ಟೆಫ್, ಚಿಯಾ ಮತ್ತು ಕ್ವಿನೋವಾ ಸಿರಿಧಾನ್ಯಗಳ ಸೇರ್ಪಡೆ.

   * ಒಂದು ಲಕ್ಷ ಮಹಿಳಾ ಕಾರ್ಮಿಕರಿಗೆ ಉಚಿತ ಬಸ್ ಪಾಸ್.

   * ಅಡಿಕೆ ಬೆಳೆಗಾರರಿಗೆ 2 ಲಕ್ಷ ರುವರೆಗಿನ ಸಾಲಕ್ಕೆ ಶೇ 5 ರಷ್ಟು ಬಡ್ಡಿ ವಿನಾಯಿತಿ.

   * ಮಹಿಳಾ ಮೀನುಗಾರರ ಸಬಲೀಕರಣ ಯೋಜನೆಯಡಿ 1000 ಮೀನುಗಾರ ಮಹಿಳೆಯರಿಗೆ ದ್ವಿಚಕ್ರ ವಾಹನಗಳನ್ನು ನೀಡಲು 5 ಕೋಟಿ ರು ಅನುದಾನ.

   * ಕೃಷಿ ಪತ್ತಿನ ಸಹಕಾರ ಸಂಘ ಗಳಿಂದ ನೀಡಿದ ಮಧ್ಯಮಾವಧಿ ಹಾಗೂ ದೀರ್ಘಾವಧಿ ಕೃಷಿ ಸುಸ್ತಿ ಸಾಲಗಳ ಮೇಲಿನ ಬಡ್ಡಿ ಮನ್ನಾ, 92 ಸಾವಿರ ರೈತರಿಗೆ ಪ್ರಯೋಜನ.

   English summary
   Karnataka Budget 2020-21: Finance minister, Chief Minister B.S Yediyurappa has increased excise duty up to 6%. In a bid to mobilise revenue, he took the traditional route of taxing the Excise section and Petroleum.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X
   We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more