ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕುಮಾರಸ್ವಾಮಿ ಬಜೆಟ್‌ನಲ್ಲಿ ಯಾವ ಜಿಲ್ಲೆಗೆ ಎಷ್ಟು ಅನುದಾನ?

|
Google Oneindia Kannada News

Recommended Video

Karnataka Budget 2019 : ಎಚ್ ಡಿ ಕುಮಾರಸ್ವಾಮಿ ಬಜೆಟ್ ನಲ್ಲಿ ಯಾವ ಜಿಲ್ಲೆಗೆ ಎಷ್ಟು ಅನುದಾನ? | Oneindia Kannada

ಬೆಂಗಳೂರು, ಫೆಬ್ರವರಿ 09: ಕುಮಾರಸ್ವಾಮಿ ಅವರು ನಿನ್ನೆ ಮಂಡಿಸಿದ ಬಜೆಟ್‌ನಲ್ಲಿ ರಾಜ್ಯದ ಎಲ್ಲ ಜಿಲ್ಲೆಗಳಿಗೂ ಅನುದಾನ ನೀಡಿದ್ದಾರೆ.

ಕುಮಾರಸ್ವಾಮಿ ಅವರು ಕಳೆದ ಬಾರಿ ಮಂಡಿಸಿದ್ದ ಬಜೆಟ್‌ನಲ್ಲಿ ಉತ್ತರ ಕರ್ನಾಟಕಕ್ಕೆ ಅನ್ಯಾಯ ಮಾಡಿದ್ದಾರೆ ಎಂದು ಅಸಮಾಧಾನ ಎದ್ದಿತ್ತು. ಕರಾವಳಿ ಜಿಲ್ಲೆಗಳೂ ಸಹ ಇದೇ ಅಭಿಪ್ರಾಯ ಹೊರಹಾಕಿದ್ದವು. ಹಾಗಾಗಿ ಈ ಬಜೆಟ್‌ನಲ್ಲಿ ಅವರು ಎಚ್ಚರಿಕೆಯ ಹೆಜ್ಜೆ ಇಟ್ಟಿದ್ದಾರೆ.

ಕುಮಾರಸ್ವಾಮಿ ಅವರು ಬಜೆಟ್‌ನಲ್ಲಿ ಎಲ್ಲ ಜಿಲ್ಲೆಗಳಿಗೂ ಅನುದಾನ ನೀಡಿದ್ದಾರೆ. ಉತ್ತರ ಕರ್ನಾಟಕದ ಜಿಲ್ಲೆಗಳಿಗೆ ವಿಶೇಷ ಆಧ್ಯತೆ ನೀಡಿರುವುದು ಕಂಡು ಬರುತ್ತದೆ. ಹಾಗೂ ತಮ್ಮ ಪ್ರಾಬಲ್ಯದ ಹಾಸನ, ರಾಮನಗರ, ಮಂಡ್ಯಕ್ಕೂ ಸಹಜವಾಗಿಯೇ ಹೆಚ್ಚಿನ ಪ್ರೀತಿ ತೋರಿದ್ದಾರೆ.

ಕುಮಾರಸ್ವಾಮಿ ಅವರು ಯಾವ ಜಿಲ್ಲೆಗೆ ಎಷ್ಟು ಅನುದಾನ ನೀಡಿದ್ದಾರೆ ಎಂಬ ಪೂರ್ಣ ಮಾಹಿತಿ ಇಲ್ಲಿದೆ, ನಿಮ್ಮ ಜಿಲ್ಲೆಗೆ ಎಷ್ಟು ಅನುದಾನ ನೀಡಲಾಗುತ್ತಿದೆ ತಿಳಿದುಕೊಳ್ಳಿ......

ಬೀದರ್-ಕಲಬುರ್ಗಿ ಜಿಲ್ಲೆಗಳಿಗೆ ಎಷ್ಟು?

ಬೀದರ್-ಕಲಬುರ್ಗಿ ಜಿಲ್ಲೆಗಳಿಗೆ ಎಷ್ಟು?

ಬೀದರ್ ಜಿಲ್ಲೆ ಕೆರೆಗಳ ಅಭಿವೃದ್ಧಿಗೆ 100 ಕೋಟಿ, ಮಾಂಜ್ರಾ ನದಿ ನೀರು ಹರಿಸಲು 75 ಕೋಟಿ, ವಿಮಾಣ ನಿಲ್ದಾಣ ಅಭಿವೃದ್ಧಿಗೆ 32 ಕೋಟಿ, ಉಪಕಾರಾಗೃಹ ನಿರ್ಮಿಸಲು 30 ಕೋಟಿ, ಗುರುನಾನಕ್ ಗುರುದ್ವಾರಕ್ಕೆ 10 ಕೋಟಿ.
ಕಲಬುರ್ಗಿ ಜಿಲ್ಲೆದಲ್ಲಿ ಭಾಷಾ ಕೌಶಲ್ಯ ತರಬೇತಿ ಕೇಂದ್ರ ನಿರ್ಮಾಣಕ್ಕೆ 2 ಕೋಟಿ, 300 ಹಾಸಿಗೆಗಳ ಆಸ್ಪತ್ರೆಗೆ 150 ಕೋಟಿ, ಮಹಾನಗರ ಪಾಲಿಕೆಗೆ 150 ಕೋಟಿ, ಮುರಾರ್ಜಿ ದೇಸಾಯಿ ಹೆಣ್ಣು ಮಕ್ಕಳ ವಸತಿ ಶಾಲೆ ಪ್ರಾರಂಭ, ಬಾಲಕಿಯರ ಕ್ರೀಡಾ ವಸತಿ ಶಾಲೆ ನಿರ್ಮಾಣ, ಕೈಗಾರಿಕಾ ಪ್ರದೇಶ ಅಭಿವೃದ್ಧಿ.

ಬಾಗಲಕೋಟೆ-ವಿಜಯಪುರ ಜಿಲ್ಲೆಗಳಿಗೆ ಏನು?

ಬಾಗಲಕೋಟೆ-ವಿಜಯಪುರ ಜಿಲ್ಲೆಗಳಿಗೆ ಏನು?

ಬಾಗಲಕೋಟೆ ಜಿಲ್ಲೆ ಕೇರೂರು ಏತನೀರಾವರಿಗೆ 300 ಕೋಟಿ, ಕೊಲ್ಹಾರ ಮೂಲಸೌಕರ್ಯಕ್ಕೆ 50 ಕೋಟಿ, ಬಾದಾಮಿ ಕರಕುಶಲ ಮಾರುಕಟ್ಟೆ ನಿರ್ಮಿಸಲು 25 ಕೋಟಿ, ಜಿಲ್ಲೆಯ ತೇರದಾಳ ಹೊಸ ತಾಲ್ಲೂಕಾಗಿ ಘೋಷಣೆ, ಸ್ತನ ಕ್ಯಾನ್ಸರ್ ಪತ್ತೆಗೆ ಸ್ತನ ರೇಖನ ಕೇಂದ್ರ ಪ್ರಾರಂಭ.

ವಿಜಯಪುರ ಜಿಲ್ಲೆ ಹೊರ್ತಿ ರೇವಣಸಿದ್ದೇಶ್ವರ ಏತನೀರಾವರಿಗೆ 250 ಕೋಟಿ, ಕಡಣಿ ಗ್ರಾಮದ ಬಳಿ ಭೀಮಾ ನದಿ ಅಣೆಕಟ್ಟೆಗೆ 30 ಕೋಟಿ, ಅಸ್ಥಿ ಚಿಕಿತ್ಸಾ ಸಂಸ್ಥೆ ನಿರ್ಮಾಣಕ್ಕೆ 40 ಕೋಟಿ, ಸ್ತನ ಕ್ಯಾನ್ಸರ್ ಪತ್ತೆಗೆ ಸ್ತನ ರೇಖನ ಘಟಕ ಪ್ರಾರಂಭ, ಮಹಾನಗರ ಪಾಲಿಕೆಗೆ 125 ಕೋಟಿ, ಪ್ರಾವಾಸೋದ್ಯಮ ಕೇಂದ್ರ ಸ್ಥಾಪನೆ.

ರಾಯಚೂರು-ಯಾದಗಿರಿ ಜಿಲ್ಲೆಗೆ ಎಷ್ಟು?

ರಾಯಚೂರು-ಯಾದಗಿರಿ ಜಿಲ್ಲೆಗೆ ಎಷ್ಟು?

ರಾಯಚೂರು ಜಿಲ್ಲೆ ನಂದವಾಡಗಿ ಯೋಜನೆಗೆ 200 ಕೋಟಿ, ಗಣೇಕಲ್ ಜಲಾಶಯಕ್ಕೆ 140 ಕೋಟಿ, ಬಸಪ್ಪಕೆರೆಗೆ ತುಂಗಭದ್ರೆ ಹರಿಸಲು 70 ಕೋಟಿ, ಸಿಂಧನೂರು ವ್ಯಾಪ್ತಿಗೆ ತುಂಗಭದ್ರಾ ಹರಿಸಲು 50 ಕೋಟಿ, ಚಿಕ್ಕಮಂಚಾಲಿ ಬಳಿ ತುಂಗಭದ್ರಾ ಸೇತುವೆ ನಿರ್ಮಾಣಕ್ಕೆ 50 ಕೋಟಿ, ಮಾನ್ವಿ ಅಚ್ಚುಕಟ್ಟು ರಸ್ತೆ ಅಭಿವೃದ್ಧಿಗೆ 50 ಕೋಟಿ, ಬಾಲಕಿಯರಿಗೆ ಕ್ರೀಡಾ ವಸತಿನಿಲಯ, ಮೊದಲ ಹಂತದ ಜಲಧಾರೆ ಯೋಜನೆ ಪ್ರಾರಂಭ.

ಯಾದಿಗಿರಿ ಜಿಲ್ಲೆ ಭೀಮಾ ನದಿಯಿಂದ 20 ಕೆರೆಗೆ ನೀರು ಹರಿಸಲು 150 ಕೋಟಿ, ಕ್ರೀಡಾ ವಸತಿ ನಿಲಯಗಳ ನಿರ್ಮಾಣ.

ಬೆಳಗಾವಿ-ಹಾವೇರಿ ಜಿಲ್ಲೆಗಳಿಗೆ ಎಷ್ಟೆಷ್ಟು?

ಬೆಳಗಾವಿ-ಹಾವೇರಿ ಜಿಲ್ಲೆಗಳಿಗೆ ಎಷ್ಟೆಷ್ಟು?

ಬೆಳಗಾವಿ ಜಿಲ್ಲೆ ಮಹಾನಗರ ಪಾಲಿಕೆಗೆ 125 ಕೋಟಿ, ಕಾಗವಾಡದ 23 ಕೆರೆಗಳಿಗೆ ನೀರು ತುಂಬಿಸಲು 100 ಕೋಟಿ. ಖಾನಾಪುರ ಆರು ಗ್ರಾಮಕ್ಕೆ ಮಲಪ್ರಭಾ ನೀರು ಹರಿಸಲು 40 ಕೋಟಿ, ಬೈಲುಹೊಂಗಲ ನೀರಾವರಿಗೆ 80 ಕೋಟಿ. ಕೃಷ್ಣಾ ನದಿಗೆ ಯಡೂರು ಬಳಿ ಸೇತುವೆ ನಿರ್ಮಾಣಕ್ಕೆ 30 ಕೋಟಿ, ಘಟಪ್ರಭಾ ಅಚ್ಚುಕಟ್ಟು ಮೂಲಸೌಕರ್ಯಕ್ಕೆ 24 ಕೋಟಿ, ಭಾಷಾ ಕೌಶಲ ತರಬೇತಿ ಕೇಂದ್ರಕ್ಕೆ 2 ಕೋಟಿ, ಕಲ್ಲುಮರಡಿ ಏತನೀರಾವರಿ ಯೋಜನೆ ಪ್ರಾರಂಭ.

ಹಾವೇರಿ ಜಿಲ್ಲೆ ರೇಷ್ಮೆ ಕಾರ್ಖಾನೆ ಆಧುನಿಕರಣಕ್ಕೆ 10 ಕೋಟಿ, ಕೃಷಿ ಸಂಸ್ಕರಣಾ ಘಟಕಕ್ಕೆ 160 ಕೋಟಿ, ಮಸೂರ ಕೆರೆ ಅಭಿವೃದ್ಧಿಗೆ 25 ಕೋಟಿ, ಸ್ತನ ರೇಖನ ವ್ಯವಸ್ಥೆ ಪ್ರಾರಂಭ, ಬಾಲಕಿಯರ ಕ್ರೀಡಾ ವಸತಿ ನಿಲಯ ಸ್ಥಾಪನೆ.

ಬಳ್ಳಾರಿ-ಗದಗ ಜಿಲ್ಲೆಗೆ ಎಷ್ಟು ನೀಡಿದ್ದಾರೆ?

ಬಳ್ಳಾರಿ-ಗದಗ ಜಿಲ್ಲೆಗೆ ಎಷ್ಟು ನೀಡಿದ್ದಾರೆ?

ಬಳ್ಳಾರಿ ಜಿಲ್ಲೆ ಕಂಪ್ಲಿ ಏತನೀರಾವರಿಗೆ 75 ಕೋಟಿ, ಗ್ರಾಮಾಂತರ ಭಾಗದ ಕೆರೆ ಅಭಿವೃದ್ಧಿಗೆ 60 ಕೋಟಿ. ಹೊಸಪೇಟೆ 21 ಗ್ರಾಮದ ಕುಡಿಯುವ ನೀರಿಗೆ 75 ಕೋಟಿ, ಎತ್ತಿಕೊಟ್ಟೂರು 11 ಕೆರೆಗಳಿಗೆ ತುಂಗಭದ್ರಾ ನೀರು ತುಂಬಲು 85 ಕೋಟಿ, ಕರ್ನಮಚಾರಿ ತರಬೇತಿ ಕೇಂದ್ರ ಸ್ಥಾಪನೆಗೆ 5 ಕೋಟಿ, ಮಹಾನಗರ ಪಾಲಿಕೆಗೆ 125 ಕೋಟಿ, ಹಂಪಿಯಲ್ಲಿ ವ್ಯಾಖ್ಯಾನ ಕೇಂದ್ರ, ಕ್ರೀಡಾ ವಸತಿ ನಿಲಯ ನಿರ್ಮಾಣ.

ಗದಗ ಜಿಲ್ಲೆ ಕೃಷಿ ಸಂಸ್ಕರಣಾ ಘಟಕಕ್ಕೆ 160 ಕೋಟಿ, ಆಲದಮ್ಮ ಕೆರೆ ತುಂಬಿಸುವ ಯೋಜನೆ 10 ಕೋಟಿ, ಮುರಾರ್ಜಿ ದೇಸಾಯಿ ಮುಸ್ಲಿಂ ಹೆಣ್ಣು ಮಕ್ಕಳ ವಸತಿ ಶಾಲೆ ನಿರ್ಮಾಣ, ಡ್ರೋನ್ ಮೂಲಕ ಜಿಲ್ಲೆ ಸರ್ವೆ.

ಧಾರವಾಡ-ದಾವಣಗೆರೆ ಜಿಲ್ಲೆಗೆ ಎಷ್ಟೆಷ್ಟು?

ಧಾರವಾಡ-ದಾವಣಗೆರೆ ಜಿಲ್ಲೆಗೆ ಎಷ್ಟೆಷ್ಟು?

ಧಾರವಾಡ ಕೃಷಿ ಸಂಸ್ಕರಣಾ ಘಟಕಕ್ಕೆ 160 ಕೋಟಿ, ಮಹಾನಗರ ಪಾಲಿಕೆಗೆ 150 ಕೋಟಿ, ಕುಂದಗೋಳ ವ್ಯಾಪ್ತಿ ಕೆರೆಗೆ ನೀರು ತುಂಬಲು 40 ಕೋಟಿ, ಮಾವು ಸಂಸ್ಕರಣಾ ಘಟಕ ಸ್ಥಾಪನೆಗೆ 20 ಕೋಟಿ, ಹುಬ್ಬಳ್ಳಿಯಲ್ಲಿ ಕ್ಯಾನ್ಸರ್ ಶೋಧನಾ ಸಂಸ್ಥೆಗೆ 4.5 ಕೋಟಿ.

ದಾವಣಗೆರೆ ಜಿಲ್ಲೆ ಮಹಾನಗರ ಪಾಲಿಕೆಗೆ 125 ಕೋಟಿ, ಸ್ತನ ರೇಖನ ಪ್ರಾರಂಭಕ್ಕೆ 10 ಕೋಟಿ, ಮೊರಾರ್ಜಿ ಹೆಣ್ಣುಮಕ್ಕಳ ವಸತಿ ಶಾಲೆ ಪ್ರಾರಂಭ, ಮಲೆಬೆನ್ನೂರು ವೀರಭದ್ರೇಶ್ವರ ಚಾರಿಟೇಬಲ್ ಟ್ರಸ್ಟ್‌ಗೆ 1 ಕೋಟಿ, ಡ್ರೋನ್‌ಮೂಲಕ ರೀ-ಸರ್ವೆ.

ಶಿವಮೊಗ್ಗ-ಉತ್ತರ ಕನ್ನಡ ಜಿಲ್ಲೆಗಳಿಗೆ ಎಷ್ಟು ಪಾಲು?

ಶಿವಮೊಗ್ಗ-ಉತ್ತರ ಕನ್ನಡ ಜಿಲ್ಲೆಗಳಿಗೆ ಎಷ್ಟು ಪಾಲು?

ಶಿವಮೊಗ್ಗ ಜಿಲ್ಲೆ ತುಂಗಾ-ವರದಾ ನದಿಯಿಂದ ಕೆರೆಗೆ ನೀರು ತುಂಬಿಸಲು 250 ಕೋಟಿ, ಮಹಾನಗರ ಪಾಲಿಕೆಗೆ 125 ಕೋಟಿ, ಬಳ್ಳಾಪುರ ಹಾಡೆ, ಇತರ ಕೆರೆಗೆ ತುಂಗಭದ್ರಾ ನೀರು ತುಂಬಿಸಲು 10 ಕೋಟಿ, ಏತನೀರಾವರಿಗೆ 13 ಕೋಟಿ, ಮಂಗನ ಕಾಯಿಲೆ ಸಂಶೋಧನಾ ಘಟಕ ಸ್ಥಾಪನೆಗೆ 5 ಕೋಟಿ, ಭದ್ರಾವತಿ ಕೆರೆಗಳಿಗೆ ನೀರು 20 ಕೋಟಿ.

ಉತ್ತರ ಕನ್ನಡ ಜಿಲ್ಲೆ ಸಿದ್ದಾಪುರ ಏತನೀರಾವರಿಗೆ 50 ಕೋಟಿ, ಮುಂಡಗೋಡು ಕೆರೆಗಳಿಗೆ ಬೇಡ್ತಿ ನೀರು ತಹರಿಸಲು 40 ಕೋಟಿ.

ಉಡುಪಿ-ದಕ್ಷಿಣ ಕನ್ನಡ-ಕೊಪ್ಪಳ

ಉಡುಪಿ-ದಕ್ಷಿಣ ಕನ್ನಡ-ಕೊಪ್ಪಳ

ಉಡುಪಿ ಜಿಲ್ಲೆ ಎಣ್ಣೆಹೊಳೆ ನೀರಾವರಿ ಯೋಜನೆಗೆ 40 ಕೋಟಿ, ಮಲ್ಪೆಯಲ್ಲಿ ಮೀನುಗಾರಿಕಾ ತ್ಯಾಜ್ಯ ನಿರ್ವಹಣಾ ಘಟಕ ಸ್ಥಾಪನೆಗೆ 15 ಕೋಟಿ.

ದಕ್ಷಿಣ ಕನ್ನಡ ಜಿಲ್ಲೆ ಮಹಾನಗರ ಪಾಲಿಕೆಗೆ 125 ಕೋಟಿ, ಸ್ತನ ರೇಖನ ವ್ಯವಸ್ಥೆ ಪ್ರಾರಂಭ, ಬಾಲಕಿಯರ ಕ್ರೀಡಾ ವಸತಿ ವಲಯ ಸ್ಥಾಪನೆ, ಕರಾವಳಿ ಅಭಿವೃದ್ಧಿ ಪ್ರಾಧಿಕಾರಕ್ಕೆ 30 ಕೋಟಿ, ಕಡಲ ತೀರ ಪ್ರವಾಸೋದ್ಯಮ ಅಭಿವೃದ್ಧಿ.

ಕೊಪ್ಪಳ ಜಿಲ್ಲೆ 'ಕಾಂಪಿಟ್ ವಿತ್ ಚೈನಾ ಉದ್ದೇಶಿತ ಕೈಗಾರಿಕಾ ಕ್ಲಸ್ಟರ್ ಸ್ಥಾಪನೆ, ಇ-ಆಡಳಿತ ಕೋಶ ಸ್ಥಾಪನೆ.

ಮೈಸೂರು-ಚಿಕ್ಕಮಗಳೂರು ಜಿಲ್ಲೆಗೆ ಎಷ್ಟೆಷ್ಟು?

ಮೈಸೂರು-ಚಿಕ್ಕಮಗಳೂರು ಜಿಲ್ಲೆಗೆ ಎಷ್ಟೆಷ್ಟು?

ಮೈಸೂರು ಜಿಲ್ಲೆ ನಂಜನಗೂಡು ಕೆರೆಗಳಿಗೆ ಕಬಿನಿ ನೀರು ತುಂಬಲು 80 ಕೋಟಿ, ಹುಣಸೂರು-ಎಚ್‌ಡಿ.ಕೋಟೆ 49 ಕೆರೆಗಳಿಗೆ ಲಕ್ಷ್ಮಣ ತೀರ್ಥ ನೀರು ತುಂಬಲು 50 ಕೋಟಿ, ಟಿ.ನರಸೀಪುರ-ಬೆಟ್ಟದಹಳ್ಳಿ ನೀರಾವರಿಗೆ 50 ಕೋಟಿ. ವಿಶ್ವೇಶ್ವರಯ್ಯ ಜಾಲ ಆಧುನೀಕರಣಕ್ಕೆ 400 ಕೋಟಿ, ಹಾರಿಂಗಿ ನಾಲೆ ಬಲದಂಡೆ ಕಾಮಗಾರಿ 40 ಕೋಟಿ. ಪಿರಿಯಾಪಟ್ಟಣ ಮೂಲಸೌಕರ್ಯಕ್ಕೆ 40 ಕೋಟಿ, ಹಾರಂಗಿ ನದಿಪಾತ್ರ ಪುನಶ್ಚೇತನಕ್ಕೆ 75 ಕೋಟಿ, ಸುಸಜ್ಜಿತ ಭಾಷಾ ಕೌಶಲ್ಯ ತರಬೇತಿ ಕೇಂದ್ರಕ್ಕೆ 2 ಕೋಟಿ , ಹರ್ನಬ್‌ಹಟ್ ಉನ್ನತೀಕರಣಕ್ಕೆ 5 ಕೋಟಿ, ಮಹಾಣಗರ ಪಾಲಿಕೆಗೆ 150 ಕೋಟಿ.

ಚಿಕ್ಕಮಗಳೂರು ಜಿಲ್ಲೆ ಕಡೂರಿನ 19 ಕೆರೆಗೆ ಹೆಬ್ಬೆಹಳ್ಳದ ನೀರು ತುಂಬಿಸಲು 100 ಕೋಟಿ, ಜಿಲ್ಲಾಸ್ಪತ್ರೆ ಆಧುನೀಕರಣಕ್ಕೆ 50 ಕೋಟಿ, ಸ್ತನ ರೇಖನ ಪ್ರಾರಂಭ, ಬಾಲಕಿಯರ ಬಾಲಮಂದಿರ ಹಾಗೂ ಕ್ರೀಡಾ ವಸತಿನಿಲಯ ಸ್ಥಾಪನೆ.

ರಾಮನಗರ-ಚಾಮರಾಜನಗರ-ಚಿತ್ರದುರ್ಗ ಜಿಲ್ಲೆಗೆ ಏನೇನು?

ರಾಮನಗರ-ಚಾಮರಾಜನಗರ-ಚಿತ್ರದುರ್ಗ ಜಿಲ್ಲೆಗೆ ಏನೇನು?

ರಾಮನಗರ ಜಿಲ್ಲೆಯಲ್ಲಿ ಅಂತರರಾಷ್ಟ್ರೀಯ ಮಾವು ಸಂಸ್ಕರಣಾ ಘಟಕ ಸ್ಥಾಪನೆಗೆ 20 ಕೋಟಿ, ರೇಷ್ಮೆ ಕಾರ್ಖಾನೆ ಆಧುನೀಕರಣಕ್ಕೆ 10 ಕೋಟಿ, ಮಂಚನಬೆಲೆ ಪ್ರದೇಶ ನೀರಾವರಿಗೆ 40 ಕೋಟಿ, ಮಂಚನಬೆಲೆ ಜಲಾಶಯ ಅಭಿವೃದ್ಧಿಗೆ 125 ಕೋಟಿ, ಸಿದ್ದಗಂಗಾ ಶ್ರೀಗಳ ಜನ್ಮ ಸ್ಥಳ ವೀರಾಪುರದಲ್ಲಿ ಸಾಂಸ್ಕೃತಿಕ-ಪಾರಂಪರಿಕ ಕೇಂದ್ರ ಸ್ಥಾಪನೆಗೆ 25 ಕೋಟಿ.
ಚಾಮರಾಜನಗರ ಜಿಲ್ಲೆ ರೇಷ್ಮೆ ಕಾರ್ಖಾನೆ ಪುನಶ್ಚೇತನಕ್ಕೆ 5 ಕೋಟಿ, ಬಾಲಕಿಯರ ಕ್ರೀಡಾ ವಸತಿ ನಿಲಯ.

ಚಿತ್ರದುರ್ಗ ಭದ್ರಾ ಮೇಲ್ದಂಡೆ ಯೋಜನೆ ಕೆರೆಗಳ ಅಭಿವೃದ್ಧಿಗೆ 105 ಕೋಟಿ, ವೇದಾವತಿ ನದಿ ಸೇತುವೆಗೆ 25 ಕೋಟಿ, ಬಸವ-ಅಂಬೇಡ್ಕರ್ ಪ್ರತಿಷ್ಠಾನಕ್ಕೆ 1 ಕೋಟಿ. ಸ್ತನ ರೇಖನ ವ್ಯವಸ್ಥೆ ಪ್ರಾರಂಭ.

ಮಂಡ್ಯ-ಕೊಡಗು ಎಷ್ಟೆಷ್ಟು ಅನುದಾನ?

ಮಂಡ್ಯ-ಕೊಡಗು ಎಷ್ಟೆಷ್ಟು ಅನುದಾನ?

ಮಂಡ್ಯ ಜಿಲ್ಲೆ ವಿಶ್ವೇಶ್ವರ ಜಾಲ ಆಧುನೀಕರಣಕ್ಕೆ 400 ಕೋಟಿ, ಹಲಗೂರು ಅಣೆಕಟ್ಟು ಪ್ರದೇಶಕ್ಕೆ ನೀರು ಹರಿಸಲು 200 ಕೋಟಿ, ಶ್ರೀರಂಗಪಟ್ಟಣ 12 ಕೆರೆಗಳಿಗೆ ಅರೆಕರೆ ನೀರು ತರಲು 15 ಕೋಟಿ, ಸೂಳೆಕೆರೆ ಅಭಿವೃದ್ಧಿಗೆ 25 ಕೋಟಿ, ಮೇಲುಕೋಟೆ ಅಭಿವೃದ್ಧಿ ಪ್ರಾಧಿಕಾರ ರಚನೆಗೆ 5 ಕೋಟಿ, ಹೇಮಾವತಿ ಎಡದಂಡೆ ನಾಲೆ ಅಭಿವೃದ್ಧಿಗೆ 50 ಕೋಟಿ, ನಾಗಮಂಗಲ ಶಾಖಾ ನಾಳೆ ಅಭಿವೃದ್ಧಿಗೆ 80 ಕೋಟಿ, ಕಬಿನಿ ಬಲದಂಡೆ ಕಾಲುವೆ ಆಧುನೀಕರಣಕ್ಕೆ 20 ಕೋಟಿ, ಪಾಂಡವಪುರ ತಾಲ್ಲೂಕಿನ ಕೆರೆಗಳ ಅಭಿವೃದ್ಧಿಗೆ 100 ಕೋಟಿ, ಮೈಶುಗರ್ ಕಾರ್ಖಾನೆ ಯಂತ್ರಗಳ ಅಭಿವೃದ್ಧಿಗೆ 100 ಕೋಟಿ, ಕೈಗಾರಿಕೆ ಅಭಿವೃದ್ಧಿಗೆ 50 ಕೋಟಿ.

ಕೊಡಗು ಜಿಲ್ಲೆ ಯಲ್ಲಿ 450 ಹಾಸಿಗೆಗಳ ಆಸ್ಪತ್ರೆ ನಿರ್ಮಾಣಕ್ಕೆ 100 ಕೋಟಿ, ಕೊಡವ ಸಮಾಜ ಹಾಕಿ ಕ್ರೀಡಾಂಗಣ ಅಭಿವೃದ್ಧಿ 5 ಕೋಟಿ, ಪುನರ್ವಸತಿ ಅಭಿವೃದ್ಧಿ ಕಾರ್ಯಕ್ಕೆ 2 ಕೋಟಿ, ತುಳು-ಕೊಂಕಣಿ ಚಲನಚಿತ್ರಗಳಿಗೆ ಪ್ರೋತ್ಸಾಹ, ಡ್ರೋನ್ ಮೂಲಕ ರೀ-ಸರ್ವೆ.

ಹಾಸನ-ತುಮಕೂರು ಜಿಲ್ಲೆಗಳಿಗೆ ಏನೇನು?

ಹಾಸನ-ತುಮಕೂರು ಜಿಲ್ಲೆಗಳಿಗೆ ಏನೇನು?

ಹಾಸನ ಜಿಲ್ಲೆ ಕಾಚೇನಹಳ್ಳಿ ಏತನೀರಾವರಿಯ 3ನೇ ಹಂತಕ್ಕೆ 100 ಕೋಟಿ, ಒಂಟಿ ಗುಡ್ಡ ಏತನೀರಾವರಿ ಕಾಮಗಾರಿಗೆ 54 ಕೋಟಿ, ಅರಕಲಗೂರು 150 ಕೆರೆಗಳಿಗೆ ಹೇಮಾವತಿ ನೀರು ಹರಿಸಲು 120 ಕೋಟಿ, ಬೇಲೂರು ಕೆರೆಗಳಿಗೆ ಯಗಚಿ ನೀರು ಹರಿಸಲು 100 ಕೋಟಿ, ಅರಸಿಕೆರೆ ಕೆರೆಗಳ ಅಭಿವೃದ್ಧಿಗೆ 15 ಕೋಟಿ, ಎತ್ತಿನಹೊಳೆ ವ್ಯಾಪ್ತಿ ರಸ್ತೆ ಅಭಿವೃದ್ಧಿಗೆ 60 ಕೋಟಿ, ಸಕಲೇಶಪುರ ಕುಡಿಯುವ ನೀರಿಗೆ 12 ಕೋಟಿ, ಬಾಲಕಿಯರಿಗೆ ಕ್ರೀಡಾ ವಸತಿ ನಿಲಯ ಸ್ಥಾಪನೆ.
ತುಮಕೂರು ಜಿಲ್ಲೆಯ ಸಣ್ಣ ನೀರಾವರಿಗೆ 50 ಕೋಟಿ, ನಿರ್ವಹಣಾ ಕಾಮಗಾರಿಗೆ 200 ಕೋಟಿ, ಮಹಾನಗರ ಪಾಲಿಕೆಗೆ 125 ಕೋಟಿ, ಎತ್ತಿನಹೊಳೆ-ಕೊರಟಗೆರೆ ಅಭಿವೃದ್ಧಿ ಪ್ಯಾಕೇಜ್‌ಗೆ 50 ಕೋಟಿ, ಶಿರಾ ಅಂತರ್ಜಲ ಅಭಿವೃದ್ಧಿಗೆ 20 ಕೋಟಿ, ಸ್ತನ ರೇಖನ ಪ್ರಾರಂಭ, ನರಸಿಂಹರಾಜು ಹೆಸರಲ್ಲಿ ಸ್ಮಾರಕ ನಿರ್ಮಾಣಕ್ಕೆ 2 ಕೋಟಿ, ಸಿದ್ದಗಂಗಾ ಮಠದ ಪ್ರಾರ್ಥನಾ ಮಂದಿರ ನಿರ್ಮಾಣಕ್ಕೆ 5 ಕೋಟಿ, ಕೆ-ಕೆಟ್ ನಾವಿನ್ಯತಾ ಕೇಂದ್ರ ಸ್ಥಾಪನೆ.

ಚಿಕ್ಕಬಳ್ಳಾಪುರ-ಬೆಂಗಳೂರು ಗ್ರಾಮಾಂತರ-ಕೋಲಾರ

ಚಿಕ್ಕಬಳ್ಳಾಪುರ-ಬೆಂಗಳೂರು ಗ್ರಾಮಾಂತರ-ಕೋಲಾರ

ಚಿಕ್ಕಬಳ್ಳಾಪುರ ಜಿಲ್ಲೆ ಸಣ್ಣ ನೀರಾವರಿಗೆ 100 ಕೋಟಿ, ಘಂಟಲಮಲ್ಲ ಕಣಿವೆ ಬಳಿ ಬ್ಯಾರೆಜ್ ನಿರ್ಮಾಣ 20 ಕೋಟಿ, ಸ್ತನ ರೇಖನ ಸ್ಥಾಪನೆ, ಕ್ರೀಡಾ ವಸತಿ ನಿಲಯ ಸ್ಥಾಪನೆ, ಹೊಸ ತಾಲ್ಲೂಕಾಗಿ ಚೇಳೂರು ಘೋಷಣೆ.

ಕೋಲಾರ ಜಿಲ್ಲೆಯಲ್ಲಿ ಟಮೆಟೋ ಸಂಸ್ಕರಣಾ ಘಟಕ ಸ್ಥಾಪನೆಗೆ 20 ಕೋಟಿ, ಸಣ್ಣ ನೀರಾವರಿಗೆ 75 ಕೋಟಿ, ಸ್ತನ ರೇಖನ ವ್ಯವಸ್ಥೆ ಪ್ರಾರಂಭ, ಜಕಣಾಚಾರಿ ಶಿಲ್ಪ ಕೇಂದ್ರ ಸ್ಥಾಪನೆಗೆ 10 ಕೋಟಿ.

ಬೆಂಗಳೂರು ಗ್ರಾಮಾಂತರ ಜಿಲ್ಲೆ ತಾಲ್ಲೂಕುಗಳ ವ್ಯಾಪ್ತಿಯ ಸಣ್ಣ ನೀರಾವರಿಗೆ 50 ಕೋಟಿ, ದೊಡ್ಡಬಳ್ಳಾಪುರ ಆಸ್ಪತ್ರೆ ಜಿಲ್ಲಾಸ್ಪತ್ರೆಯಾಗಿ ಆಧುನೀಕರಣ ಮಾಡಲು 10 ಕೋಟಿ.

ಬೆಂಗಳೂರು ನಗರ ಜಿಲ್ಲೆ ಎಷ್ಟು ಕೋಟಿ ಅನುದಾನ?

ಬೆಂಗಳೂರು ನಗರ ಜಿಲ್ಲೆ ಎಷ್ಟು ಕೋಟಿ ಅನುದಾನ?

ಬೆಂಗಳೂರು ನಗರ ಜಿಲ್ಲೆ ಯ ವಾಹನ ದಟ್ಟಣೆ ನಿವಾರಣೆಗೆ 17000 ಕೋಟಿ, ವಿಮಾನನಿಲ್ದಾಣಕ್ಕೆ ಹೊರವರ್ತುಲ ರಸ್ತೆ ನಿರ್ಮಾಣಕ್ಕೆ 16,579 ಕೋಟಿ, ಕಾವೇರಿ ನೀರು ಸರಬರಾಜು ಯೋಜನೆಗೆ 500 ಕೋಟಿ, ಪಾಲಿಕೆ ಜನಸ್ನೇಹಿ ಸೌಕರ್ಯ ಅಭಿವೃದ್ಧಿಗೆ 2300 ಕೋಟಿ, ಎಲಿವೇಟೆಡ್ ರಸ್ತೆ ಕಾಮಗಾರಿಗೆ 1000 ಕೋಟಿ, 450 ಹಾಸಿಗೆಗಳ ಮಕ್ಕಳ ಆಸ್ಪತ್ರೆ ತೆರೆಯಲು 100 ಕೋಟಿ, ಮೇಲ್ಸೇತುವೆಗಳಿಗೆ ಹೆಚ್ಚುವರಿ ಲೂಪ್ ನಿರ್ಮಾಣಕ್ಕೆ 195 ಕೋಟಿ, ಕಿದ್ವಾಯಿ ಕ್ಯಾನ್ಸರ್ ಸಂಸ್ಥೆಗೆ 100 ಕೋಟಿ, ಸಂವಿಧಾನ ಮ್ಯೂಸಿಯಂ ಸ್ಥಾಪನೆಗೆ 20 ಕೋಟಿ, ಹಲಸೂರು ಗುರುದ್ವಾರಕ್ಕೆ 25 ಕೋಟಿ, ಗಿರಿಜನ ಉಪಯೋಜನೆಗೆ 300 ಕೋಟಿ, ಕುಂಚಿಟಿಗ-ಒಕ್ಕಲಿಗರ ಸಂಘ ಅಭಿವೃದ್ಧಿಗೆ 2 ಕೋಟಿ, ಪಾದಚಾರಿ ಪಾರ್ಗ ಅಭಿವೃದ್ಧಿಗೆ 50 ಕೋಟಿ, ತ್ಯಾಜ್ಯ ನೀರು ತಡೆಗೆ 76.55 ಕೋಟಿ, ಕಲಾಗ್ರಾಮ ನಿರ್ಮಾಣಕ್ಕೆ 10 ಕೋಟಿ, ಬೆಳ್ಳಂದೂರು-ಅಗರ-ವರ್ತೂರು ಕೆರೆ ಗುಣಮಟ್ಟ ಮಾಪನ ಕೇಂದ್ರ ಸ್ಥಾಪನೆಗೆ 9 ಕೋಟಿ, ವೃಕ್ಷೋಧ್ಯಾನ ಸ್ಥಾಪನೆಗೆ 15 ಕೋಟಿ, ಸುಸಜ್ಜಿತ ಭಾಷಾ ಕೌಶಲ್ಯ ತರಬೇತಿ ಕೇಂದ್ರ ಸ್ಥಾಪನೆಗೆ 2 ಕೋಟಿ.

English summary
All districts gets grants in Karnataka budget 2019. North Karnataka districts gets some extra attention this time. Coastal district also gets some extra attention.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X