ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕುಮಾರಸ್ವಾಮಿ ಮಂಡಿಸಿದ ಕರ್ನಾಟಕ ಬಜೆಟ್ 2019-20 ಮುಖ್ಯಾಂಶ

|
Google Oneindia Kannada News

Recommended Video

ಕುಮಾರಸ್ವಾಮಿ ಬಜೆಟ್ ನಲ್ಲಿ ಯಾರ್ ಯಾರಿಗೆ ಏನ್ ಏನ್ ಸಿಕ್ಕಿತು? (2)

ಹಣಕಾಸು ಸಚಿವರು ಆಗಿರುವ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ 2019-20ನೇ ಸಾಲಿನ ಬಜೆಟ್‌ ಅನ್ನು ಶುಕ್ರವಾರ ಮಧ್ಯಾಹ್ನ ಮಂಡಿಸಿದರು. ಕರ್ನಾಟಕದ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರದ ಎರಡನೇ ಬಜೆಟ್ ಇದಾಗಿದೆ.

ಕರ್ನಾಟಕ ಬಜೆಟ್ ಅಧಿವೇಶನ, ಎಚ್ಡಿಕೆ ಬಜೆಟ್ ಮಂಡನೆ, ಬಿಜೆಪಿ ಪ್ರತಿಭಟನೆ : ಚಿತ್ರಗಳು

ಜುಲೈ 5, 2018ರಂದು ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ವಿಧಾನಸೌಧದಲ್ಲಿ ಬಜೆಟ್ ಮಂಡನೆ ಮಾಡಿದ್ದರು.ಮೊದಲ ಬಜೆಟ್ ನಂತರ ರೈತರ ಸಾಲ ಮನ್ನಾದ ಬಗ್ಗೆ ಘೋಷಣೆ ಮಾಡಲಾಗಿತ್ತು.

ಕಳೆದ ಬಾರಿಯ ಬಜೆಟ್ ಗಾತ್ರ 2,14,488 ಕೋಟಿ ರೂ.ಗಳು.ಈ ಹಿಂದೆ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದಾಗ ಮಂಡಿಸಿದ್ದ ಕೊನೆ ಬಜೆಟ್ (ಫೆಬ್ರವರಿ 16, 2018ರಲ್ಲಿ) ನಲ್ಲಿ ಘೋಷಿಸಿದ್ದ ಜನಪ್ರಿಯ ಕಾರ್ಯಕ್ರಮಗಳನ್ನು ಕುಮಾರಸ್ವಾಮಿ ಅವರು ಮುಂದುವರೆಸಿಕೊಂಡು ಹೋಗುತ್ತಿದ್ದಾರೆ.

ಕುಮಾರಣ್ಣನ ಬಜೆಟ್ ನಲ್ಲಿ ಪ್ರವಾಸಿ ತಾಣಗಳ ಅಭಿವೃದ್ಧಿಗೆ ಒತ್ತು

ಕುಮಾರಸ್ವಾಮಿ ಅವರು ಮಂಡನೆ ಮಾಡದಿ ಬಜೆಟ್‌ನಲ್ಲಿನ ಮುಖ್ಯಾಂಶಗಳು ಇಲ್ಲಿವೆ...ಯಾವ ಕ್ಷೇತ್ರಕ್ಕೆ ಏನು ಸಿಕ್ಕಿದೆ?

ಕೃಷಿ, ತೋಟಗಾರಿಕಾ, ಆರೋಗ್ಯ, ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ, ಪ್ರವಾಸೋದ್ಯಮ, ಸಮಾಜ ಕಲ್ಯಾಣ, ಮಹಿಳಾ ಮತ್ತು ಮಕ್ಕಳ ಕಲ್ಯಾಣ, ನೀರಾವರಿ, ಸಾರಿಗೆ ಸೇರಿದಂತೆ ವಿವಿಧ ಇಲಾಖೆಗಳಿಗೆ ಸಿಕ್ಕಿದ್ದೇನು ಮುಂದೆ ತಿಳಿಯಲಿದೆ.

ಕರ್ನಾಟಕ ವಿಧಾನಸಭೆ ಅಧಿವೇಶನ LIVE : ಬಜೆಟ್ ಮಂಡಿಸುತ್ತಿರುವ ಸಿಎಂಕರ್ನಾಟಕ ವಿಧಾನಸಭೆ ಅಧಿವೇಶನ LIVE : ಬಜೆಟ್ ಮಂಡಿಸುತ್ತಿರುವ ಸಿಎಂ

ಕೃಷಿ

ಕೃಷಿ

* ಇಸ್ರೇಲ್ ಮಾದರಿಯಲ್ಲಿ ಕಿರು ನೀರಾವರಿ ಯೋಜನೆ ವಿಸ್ತರಣೆ.
* ಶೂನ್ಯ ಬಂಡವಾಳ ಕೃಷಿ ಉತ್ತೇಜನಕ್ಕೆ 40 ಕೋಟಿ ರು ಮೀಸಲು.
* ಸಾವಯವ ಕೃಷಿ ಪದ್ಧತಿಗೆ ಹೆಚ್ಚಿನ ಉತ್ತೇಜನ ನೀಡಲಾಗುವುದು.
* ಕೃಷ್ಣಾ ಮೇಲ್ದಂಡೆ ಯೋಜನೆಗೆ 1050 ಕೋಟಿ ರು ಟೆಂಡರ್ ಕರೆಯಲಾಗಿದೆ.
* ಎತ್ತಿನ ಹೊಳೆ, ಭದ್ರಾ ಮೇಲ್ದಂಡೆ ಯೋಜನೆಗಳು ಕಾಮಗಾರಿ ಚುರುಕುಗೊಂಡಿವೆ.
* ಎಲ್ಲ ಜಿಲ್ಲೆಗಳ ಪ್ರಗತಿಪರ ರೈತರ ಜತೆಗೆ ಸಭೆ ನಡೆಸುತ್ತಿದ್ದೇವೆ.
* ರೈತರ ಖಾತೆಗೆ 10 ಸಾವಿರ ರೂ. ನೇರ ವರ್ಗಾವಣೆ
* ರೈತರ ಸಾಲಮನ್ನಾಕ್ಕಾಗಿ 46 ಸಾವಿರ ಕೋಟಿ ರು ಮೀಸಲು
* ಸುಮಾರು 600 ಸಂತೆಗಳನ್ನು ತಲಾ 1 ಕೋಟಿ ವೆಚ್ಚದಲ್ಲಿ ಸ್ಥಾಪನೆ
* ಕಬ್ಬು ಬೆಳೆಗಾರರಿಗೆ ಸಿಗಬೇಕಿರುವ ಬಾಕಿ ಮೊತ್ತ ಸಿಗುವಂತೆ ಮಾಡಲು ಹೊಸ ಕಾಯ್ದೆ.
* ಮಹಿಳಾ ರೈತರಿಗೆ ವಿಶೇಷ ಕೃಷಿ ಪ್ಯಾಕೇಜ್ ಘೊಷಣೆ
* ಗೃಹಲಕ್ಷ್ಮಿ ಬೆಳೆಸಾಲ ಯೋಜನೆ ಜಾರಿ
* ಬೆಳೆ ಕುಸಿದಾಗ ಕಂಗಾಲಾಗುವ ರೈತರ ನೆರವಿಗೆ ಕೇರಳ ಮಾದರಿ ಯೋಜನೆ

ತೋಟಗಾರಿಕಾ

ತೋಟಗಾರಿಕಾ

* ದಾಳಿಂಬೆ, ದ್ರಾಕ್ಷಿ ಬೆಳೆಗಾರರ ಪರಿಸ್ಥಿತಿ ಸುಧಾರಣೆಗೆ 150 ಕೋಟಿ ರು ಮೀಸಲು.
* ಕೋಲಾರದಲ್ಲಿ ಟೋಮ್ಯಾಟೋ, ಮಾವು ಉತ್ಪಾದನಾ ಘಟಕ 20 ರು ಅನುದಾನ.
* 5 ಕೋಟಿ ರು ಜೇನುಕೃಷಿ ಅಭಿವೃದ್ಧಿ
* ರೇಷ್ಮೆ ಬೆಳೆಗಾರರ ಸಂಪರ್ಕ ಯೋಜನೆಗೆ 2 ಕೋಟಿ ರು
* ರೇಷ್ಮೆ ಸಾಧನೆ, ಉತ್ಪಾದನೆಗೆ ಉತ್ತೇಜನಕ್ಕಾಗಿ 10 ಕೋಟಿ ಪ್ರಸ್ತಾವನೆ
* ಚಾಮರಾಜನಗರ
* ಪಶು ಚಿಕಿತ್ಸಾ ವಾಹನ ಎಲ್ಲಾ ಜಿಲ್ಲೆಗಳಿಗೆ 2 ಕೋಟಿ ರು
* ಕುರಿ ತಳಿ ಸಂಶೋಧನೆ ಹಾಗೂ ಅಭಿವೃದ್ಧಿಗಾಗಿ 2 ಕೋಟಿ ರು
* ಮಿಡಿ ಸೌತೆ ಬೆಳೆಗೆ ಉತ್ತೇಜನ ನೀಡಲು 5 ಕೋಟಿ ರು
* ಧಾರವಾಡದಲ್ಲಿ ಮಾವು ಸಂಸ್ಕರಣಾ ಘಟಕ
* ಹಾಲಿನ ಪ್ರೋತ್ಸಾಹ ಧನ 1 ರು ಏರಿಕೆ
* ಹಾಪ್ ಕಾಪ್ ನಲ್ಲಿ ಸಿರಿಧಾನ್ಯ ಉತ್ಪನ್ನ ಮಾರಾಟಕ್ಕೆ 10 ಕೋಟಿ ರು ಮೀಸಲು
* ಕರಾವಳಿ, ಮಲೆನಾಡು ಭತ್ತ ಬೆಳೆಗಾರರಿಗೆ ವಾರ್ಷಿಕ 7500 ರು ಪ್ರೋತ್ಸಾಹ ಧನ. ನೇರವಾಗಿ ರೈತರ ಖಾತೆಗೆ ಹಣ ವರ್ಗಾವಣೆಗೆ ಕ್ರಮ.
* ರಾಜ್ಯದ 5 ಕಡೆ ತರಕಾರಿ ತ್ಯಾಜ್ಯ ಘಟಕ ನಿರ್ವಹಣೆ ಮಾರುಕಟ್ಟೆ

ಮೀನುಗಾರಿಕೆ

ಮೀನುಗಾರಿಕೆ

ಮೀನುಗಾರರ ದೋಣಿಗಳಿಗೆ ಇಸ್ರೇಲ್ ಇಂಜಿನ್ ಅಳವಡಿಕೆಗೆ ಸಹಾಯಧನ. ದೋಣಿಗಳಿಗೆ ಇಸ್ರೇಲ್ ಇಂಜಿನ್ ಅಳವಡಿಕೆಗೆ ಶೇ.50ರಷ್ಟು ಸಹಾಯಧನ

ಶಿಕ್ಷಣ

ಶಿಕ್ಷಣ

* ಶಾಲಾ ಸಂಪರ್ಕ ಯೋಜನೆ ಜಾರಿ
* ಬೋಧನಾ ಕೊಠಡಿಗಾಗಿ 1300 ಕೋಟಿ ರೂ.
* ಕರ್ನಾಟಕ ಪಬ್ಲಿಕ್ ಶಾಲೆಗಳ ನಿರ್ಮಾಣ
* ಸರಕಾರಿ ಶಾಲಾ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್
* 1 ರಿಂದ 10 ನೇ ತರಗತಿ ವರೆಗೆ ಒಂದೇ ಶಾಲೆ
* 4 ವರ್ಷದಲ್ಲಿ 1000 ಸ್ಕೂಲ್ ಘೋಷಣೆ ಸಾಧ್ಯತೆ

ವಸತಿ

ವಸತಿ

* ಮುಖ್ಯಮಂತ್ರಿ ಯೋಜನೆಯಡಿ 40ಲಕ್ಷ ಮನೆ ನಿರ್ಮಾಣ.

ಬೆಂಗಳೂರು

ಬೆಂಗಳೂರು

* ಮುಖ್ಯಮಂತ್ರಿ ನವ ಬೆಂಗಳೂರು' ಯೋಜನೆಗೆ 8000 ಕೋಟಿ ರೂ.
* 102.04 ಕಿ.ಮೀ ಮೆಟ್ರೋ ಯೋಜನೆಗೆ ಕ್ರಮಕೈಗೊಂಡಿದ್ದೇವೆ
* ಬೆಂಗಳೂರನ್ನು ಬ್ರಾಂಡ್​ ಬೆಂಗಳೂರಾಗಿಸುವ ನಿಟ್ಟಿನಲ್ಲಿ 1.2 ಲಕ್ಷ ಕೋಟಿ ರೂಗಳ ಮೂಲ ಸೌಕರ್ಯ ನಿರ್ಮಾಣ
* ಬೆಂಗಳೂರಿನ ನಮ್ಮ ಮೆಟ್ರೊ ಎರಡನೇ ಹಂತದ ಯೋಜನೆಗೆ ಅನುದಾನ

ಆರೋಗ್ಯ

ಆರೋಗ್ಯ

* ಬೆಂಗಳೂರು ನಗರದ ಅಭಿವೃದ್ಧಿಗೆ 8,015 ಕೋಟಿ ಮೀಸಲಿಟ್ಟಿದ್ದೇವೆ
* 1456 ಪ್ರೋಸೀಜರ್​ಗಳಿಗೆ ನಗದು ರಹಿತ ಚಿಕಿತ್ಸೆ ಎಪಿಎಲ್ ಕುಟುಂಬಗಳಿಗೆ ನೆರವು
* ಬೆಳಗಾವಿ - ಖಾನಾಪುರದಲ್ಲಿ ತಾಯಿ ಮಕ್ಕಳ ಆಸ್ಪತ್ರೆ
* ಶಿವಮೊಗ್ಗದಲ್ಲಿ ಮಂಗನ ಕಾಯಿಲೆ ತಡೆಗಟ್ಟಲು ಸಂಶೋಧನಾ ಕೇಂದ್ರ

ಹನಿ ನೀರಾವರಿಗೆ 300 ಕೋಟಿ ರೂ. ಅನುದಾನ ಮೀಸಲಿಡಲಾಗಿದೆ.

ಹನಿ ನೀರಾವರಿಗೆ 300 ಕೋಟಿ ರೂ. ಅನುದಾನ ಮೀಸಲಿಡಲಾಗಿದೆ.

ಹನಿ ನೀರಾವರಿಗೆ 300 ಕೋಟಿ ರೂ. ಅನುದಾನ ಮೀಸಲಿಡಲಾಗಿದೆ.

English summary
Karnataka Chief minister and Finance minister H.D.Kumaraswamy presented Karnataka budget 2019-20 on Feb 08, 2019. This is the 2nd Budget of the Congress-JD(S) alliance government in Karnataka. Here is a highlights of the Karnataka Budget 2019
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X