ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕರ್ನಾಟಕ ಬಜೆಟ್ ನಲ್ಲಿ ಮಹಿಳೆ ಮತ್ತು ಮಕ್ಕಳಿಗೇನಿದೆ?

|
Google Oneindia Kannada News

ಬೆಂಗಳೂರು, ಫೆಬ್ರವರಿ 16: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ಮಂಡಿಸಿದ ಅವರ ಈ ಅವಧಿಯ ಕೊನೆಯ ಬಜೆಟ್ ನಲ್ಲಿ ಮಹಿಳಾ ಮತ್ತು ಮಕ್ಕಳ ಇಲಾಖೆಗೆ ಹತ್ತು ಹಲವು ಕೊಡುಗೆಗಳನ್ನು ನೀಡಿದ್ದಾರೆ.

ಇನ್ನು ಕೆಲವೇ ತಿಂಗಳುಗಳಲ್ಲಿ ವಿಧಾನಸಭೆ ಚುನಾವಣೆ ನಡೆಯಲಿರುವುದರಿಂದ ಈ ಬಜೆಟ್ ನ ನಿರ್ಣಯಗಳು ಅನುಷ್ಠಾನಕ್ಕೆ ಬರುವುದಿಲ್ಲವಾದರೂ, ಚುನಾವಣೆಯ ಮೇಲೆ ಈ ಬಜೆಟ್ ಘೋಷಣೆಗಳು ಪರಿಣಾಮ ಬೀರುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ.

ಈ ಬಜೆಟ್ ನಲ್ಲಿ ಮಹಿಳೆ ಮತ್ತು ಮಕ್ಕಳ ಅಭಿವೃದ್ಧಿಗೆ ಹಲವು ಯೋಜನೆಗಳನ್ನು ಘೋಷಿಸಲಾಗಿದ್ದು ಅವುಗಳಲ್ಲಿ ಪ್ರಮುಖವಾದವು ಇಲ್ಲಿವೆ.

Live : ಕರ್ನಾಟಕ ಬಜೆಟ್ 2018, ಮುಖ್ಯಾಂಶಗಳುLive : ಕರ್ನಾಟಕ ಬಜೆಟ್ 2018, ಮುಖ್ಯಾಂಶಗಳು

* ನಗರ ಪ್ರದೇಶಗಳಲ್ಲಿ 17.50 ಕೋಟಿ ರೂ. ವೆಚ್ಚದಲ್ಲಿಹೊಸದಾಗಿ 250 ಅಂಗನವಾಡಿ ಕೇಂದ್ರ ಪ್ರಾರಂಭಿಸಲಾಗಿದ್ದು ಇದರಿಂದ ಲಕ್ಷಾಂತರ ಮಕ್ಕಳಿಗೆ ಉಪಯೋಗವಾಗಲಿದೆ. ಜೊತೆಗೆ ಮಹಿಳೆಯರಿಗೆ ಉದ್ಯೋಗಾವಕಾಶವು ಹೆಚ್ಚಲಿದೆ.

* ಕೂಲಿ ಕಾರ್ಮಿಕರು ಕೆಲಸ ನಿರ್ವಹಿಸುತ್ತಿರುವ ಪ್ರದೇಶಗಳಲ್ಲಿ 100 ಸಂಚಾರಿ ಅಂಗನವಾಡಿ ಕೇಂದ್ರ/ಶಿಶುಪಾಲನಾ ಕೇಂದ್ರಗಳ ಸ್ಥಾಪನೆಗೆ 10ಕೋಟಿ ರೂ. ಅನುದಾನ.

* ಮಕ್ಕಳ ರಕ್ಷಣಾ ಯೋಜನೆಗಳ ಪರಿಣಾಮಕಾರಿ ಅನುಷ್ಠಾನಕ್ಕಾಗಿ ಪ್ರತ್ಯೇಕ ನಿರ್ದೇಶನಾಲಯ ಪ್ರಾರಂಭ. ಇಲಾಖೆಯ 2503 ಮೇಲ್ವಿಚಾರಕಿಯರಿಗೆ ಕರ್ನಾಟಕ ಮಹಿಳಾ ಅಭಿವೃದ್ಧಿ ನಿಗಮದ ಮೂಲಕ ಸ್ಕೂಟರ್ ಖರೀದಿಸಲು 50,000 ರೂ.ಗಳ ಬಡ್ಡಿ ರಹಿತ ಸಾಲ ಸೌಲಭ್ಯ ಹಾಗೂ

Karnataka Budget 2018: What does Siddaramaiah give to Women and children development?

ಮಾಸಿಕ 1000 ರೂ. ಗಳ ಇಂಧನ ವೆಚ್ಚ ಸೌಲಭ್ಯ

* ರಾಜ್ಯದಲ್ಲಿನ ಅಂಗನವಾಡಿ ಮಕ್ಕಳ ಪೌಷ್ಟಿಕತಾ ಮಟ್ಟವನ್ನು ಮಾಪನಮಾಡಲು ನ್ಯೂಟ್ರಿಷನ್ ಸರ್ವೆ ಕಾರ್ಯಕ್ರಮ. ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡಗಳ ಉಪಯೋಜನೆಯಡಿ 1000 ಅಂಗನವಾಡಿ ಕೇಂದ್ರಗಳ ಕಟ್ಟಡಗಳ ಉನ್ನತೀಕರಣಕ್ಕೆ 20 ಕೋಟಿ ರೂ. ಅನುದಾನ.

ಬಜೆಟ್: ನೀರಾವರಿ ಯೋಜನೆ, ಯಾವ ಊರಿಗೆ ಏನು ಸಿಕ್ಕಿದೆಬಜೆಟ್: ನೀರಾವರಿ ಯೋಜನೆ, ಯಾವ ಊರಿಗೆ ಏನು ಸಿಕ್ಕಿದೆ

ಎಚ್.ಐ.ವಿ/ಏಡ್ಸ್ ಬಾಧಿತರಾದ, ಕುಟುಂಬ ಹಾಗೂ ಸಮಾಜದಿಂದ ನಿರ್ಲಕ್ಷಿತರಾದ ಮಹಿಳೆಯರ ಪೋಷಣೆ

* ಉದ್ಯೋಗಿನಿ ಯೋಜನೆಯಡಿಯಲ್ಲಿ ವಿಶೇಷ ವರ್ಗ ಹಾಗೂ ಸಾಮಾನ್ಯ ವರ್ಗದ ಮಹಿಳೆಯರಿಗೆ ಸಾಲದ ಗರಿಷ್ಠ ಮಿತಿ ಒಂದು ಲಕ್ಷ ರೂ. ಗಳಿಂದ 3 ಲಕ್ಷ ರೂ.ಗಳಿಗೆ, ಸಹಾಯಧನದ ಮೊತ್ತ ಸಾಲದ ಮೊತ್ತದ ಶೇ.30ರಷ್ಟಕ್ಕೆ, ಕುಟುಂಬದ ವಾರ್ಷಿಕ ಆದಾಯದ ಮಿತಿ 1.5 ಲಕ್ಷ ರೂ.ಗಳಿಗೆ ಹಾಗೂ ವಯೋಮಿತಿ ಎಲ್ಲಾ ವರ್ಗದವರಿಗೂ 45 ವರ್ಷದಿಂದ 55 ವರ್ಷಕ್ಕೆ ಹೆಚ್ಚಳ.

* ಶೇ.75ಕ್ಕೂ ಹೆಚ್ಚಿನ ಅಂಗವೈಕಲ್ಯತೆ ಹೊಂದಿರುವ ವಿಕಲಚೇತನರ ಮಾಸಾಶನ 200 ರೂ.ಗಳಷ್ಟು ಹೆಚ್ಚಳ; ಶೇ.75ಕ್ಕೂ ಕಡಿಮೆ ಅಂಗವೈಕಲ್ಯ ಹೊಂದಿರುವ ವಿಕಲಚೇತನರ ಮಾಸಾಶನ 100 ರೂ. ಗಳಷ್ಟು ಹೆಚ್ಚಳ.

ಬಜೆಟ್ಟಿನಲ್ಲಿ ಮುಸ್ಲಿಂ ಸಮುದಾಯಕ್ಕೆ ಭರ್ಜರಿ ಬಳುವಳಿಬಜೆಟ್ಟಿನಲ್ಲಿ ಮುಸ್ಲಿಂ ಸಮುದಾಯಕ್ಕೆ ಭರ್ಜರಿ ಬಳುವಳಿ

* ಬುದ್ಧಿಮಾಂದ್ಯ ವಯಸ್ಕರಿಗೆ ಸೂಕ್ತ ವೃತ್ತಿ ತರಬೇತಿ ನೀಡಿ, ಅವರನ್ನು ವೃತ್ತಿ ಚಟುವಟಿಕೆಗಳಲ್ಲಿ ತೊಡಗಿಸಲು ಪ್ರಾಯೋಗಿಕವಾಗಿ ರಾಜ್ಯದ ನಾಲ್ಕು ಕಂದಾಯ ವಿಭಾಗಗಳಲ್ಲಿ ತಲಾ ಒಂದು ವೃತ್ತಿ ತರಬೇತಿ ಕೇಂದ್ರ ಸ್ಥಾಪನೆಗೆ 1.80 ಕೋಟಿ ರೂ. ಅನುದಾನ.

Karnataka Budget 2018: What does Siddaramaiah give to Women and children development?

ಅಂಗವೈಕಲ್ಯ ಹೊಂದಿರುವ ವ್ಯಕ್ತಿಗಳಿಗೆ ಒದಗಿಸಲಾಗುವ ಸೌಲಭ್ಯಗಳು

* ಅಂಗವಿಕಲತೆಯ ಪ್ರಮಾಣಕ್ಕನುಸಾರ ಮಹಿಳೆಯರಿಗೆ ಸೂಕ್ತ ಆದ್ಯತೆ ಹಾಗೂ ಎಲ್ಲಾ ಸಂಬಂಧಪಟ್ಟ ಯೋಜನೆಗಳು ಮತ್ತು ಅಭಿವೃದ್ಧಿ ಕಾರ್ಯಕ್ರಮಗಳಲ್ಲಿ,ಕೃಷಿ ಭೂಮಿ ಹಂಚಿಕೆ ಮತ್ತು ವಸತಿಯಲ್ಲಿ ಶೇ.5ರಷ್ಟು ಮೀಸಲಾತಿ.

* ಅಂಗವಿಕಲತೆಯ ಪ್ರಮಾಣಕ್ಕನುಸಾರವಾಗಿ ಮಹಿಳೆಯರಿಗೆ ಸೂಕ್ತ ಆದ್ಯತೆ ಹಾಗೂ ಬಡತನ ನಿರ್ಮೂಲನೆ ಮತ್ತು ವಿವಿಧ ಅಭಿವೃದ್ಧಿ ಯೋಜನೆಗಳಲ್ಲಿ ಶೇ. 5ರಷ್ಟು ಮೀಸಲಾತಿ ಸೇರಿದಂತೆ ಹಲವು ಯೋಜನೆಗಳನ್ನು ಜಾರಿಗೆ ತರಲಾಗಿದೆ.

English summary
Karnataka Budget 2018: Chief minister Siddaramaiah announces many useful schemes to Women and child Welfare department in his last budget of this term. Will these schemes make an impact on Karnataka Assembly Elections 2018?
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X