ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಜ್ಯ ಬಜೆಟ್: ನೀರಾವರಿಗೆ ಹೆಚ್ಚಿನ ಆದ್ಯತೆ, ಕೆರೆ ತುಂಬಿಸಲು ಒತ್ತು

By Manjunatha
|
Google Oneindia Kannada News

ಬೆಂಗಳೂರು, ಫೆಬ್ರವರಿ 16: ಕರ್ನಾಟಕ ಬಜೆಟ್ 2018 ರಲ್ಲಿ ನೀರಾವರಿಗೆ ಭಾರಿ ಒತ್ತು ನೀಡಲಾಗಿದೆ. ಕೃಷಿಯ ನಂತರ ಅತಿ ಹೆಚ್ಚಿನ ಆದ್ಯತೆಯನ್ನು ನೀರಾವರಿಗೆ ನೀಡಲಾಗಿದ್ದು ಹಲವು ಈಗಾಗಲೇ ಚಾಲ್ತಿಯಲ್ಲಿರುವ ಯೋಜೆನೆಗಳಿಗೆ ಅನುದಾನ ಹೆಚ್ಚಳದ ಜೊತೆಗೆ ಹಲವು ಹೊಸ ಯೋಜನೆಗಳನ್ನು ಬಜೆಟ್‌ನಲ್ಲಿ ಸಿದ್ದರಾಮಯ್ಯ ಅವರು ಘೋಷಿಸಿದ್ದಾರೆ.

Live : ಕರ್ನಾಟಕ ಬಜೆಟ್ 2018, ಮುಖ್ಯಾಂಶಗಳುLive : ಕರ್ನಾಟಕ ಬಜೆಟ್ 2018, ಮುಖ್ಯಾಂಶಗಳು

* ಸ್ಥಗಿತಗೊಂಡಿರುವ ಎಲ್ಲಾ ಏತ ನಿರಾವರಿ ಯೋಜನೆಗಳನ್ನು 100 ಕೋಟಿ ಹೆಚ್ಚುವರಿ ಅನುದಾನದ ಮೂಲಕ ಪುನಶ್ಚೇತನಗೊಳಿಸಲಾಗುತ್ತದೆ.

* ಸಣ್ಣ ನೀರಾವರಿ ಯೋಜನೆಗೆ 2014 ಕೋಟಿ ಅನುದಾನ ನೀಡಲಾಗಿದೆ. ಕೆರೆಗಳನ್ನು ಭರ್ತಿ ಮಾಡಲು 2276 ಕೋಟಿ ರೂ. ಹಣ ಮೀಸಲಿಡಲಾಗುತ್ತದೆ.

karnataka budget-2018: Water irrigation gets more grants

* ಎತ್ತಿನಹೊಳೆ ಯೋಜನೆಯಡಿ 527 ಕೆರೆಗಳನ್ನು ತುಂಬಿಸಲಾಗುತ್ತದೆ.

* ರಾಜ್ಯದ 43 ತಾಲ್ಲೂಕುಗಳಲ್ಲಿ ಅಂತರ್ಜಲ ಅಭಿವೃದ್ಧಿಗೆ ಚೆಕ್‌ ಡ್ಯಾಮ್, ರೀಚಾರ್ಜರ್‌ಗಳ ನಿರ್ಮಾಣಕ್ಕೆ 50 ಕೋಟಿ ಮೀಸಲಿಡಲಾಗಿದೆ.

* ಹೊಸಕೋಟೆ ತಾಲ್ಲೂಕಿನ ಕೆರೆಗಳ ಅಭಿವೃದ್ಧಿಗೆ 100 ಕೋಟಿ ಹಣ ನೀಡಲಾಗಿದೆ. ಚಿಕ್ಕಬಳ್ಳಾಪುರ ಜಿಲ್ಲೆಯ ಕೆರೆಗಳನ್ನು ತುಂಬಿಸಲು ಈಗಾಗಲೇ ಕೈಗೊಂಡಿರುವ ಕಾಮಗಾರಿಗೆ ಹೆಚ್ಚಿನ ಬಲ ನೀಡಲಾಗಿದೆ.

* ಪಶ್ಚಿಮ ವಾಹಿನಿ ಯೋಜನೆಯಡಿ ದಕ್ಷಿಣ ಕನ್ನಡದ ಅರೆಕಳ ಎಂಬಲ್ಲಿ ನೇತ್ರಾವತಿ ನದಿಗೆ ಉಪ್ಪು ನೀರು ಸೇರುವುದನ್ನು ತಪ್ಪಿಸಲು ಕಿಂಡಿ ಅಣೆಕ್ಟಟ್ಟನ್ನು 174 ಕೋಟಿ ವೆಚ್ಚದಲ್ಲಿ ನಿರ್ಮಣ ಮಾಡಲಾಗುತ್ತದೆ ಸ್ಥಗಿತಗೊಂಡಿರುವ ಎಲ್ಲಾ ಏತ ನೀರಾವರಿ ಯೋಜನೆಗಳನ್ನು ಪುನಶ್ಚೇತನಗೊಳಿಸಲಾಗುತ್ತದೆ.

* 482 ಕೋಟಿ ವೆಚ್ಚದಡಿ ಬೀದರ್‌ನ ಕಾರಂಜಾ ಯೋಜನೆಯ ನಾಲೆಗಳ ಅಭಿವೃದ್ಧಿ

* 79.80 ಕೋಟಿ ವೆಚ್ಚದಲ್ಲಿ ರಾಣೆಬೆನ್ನೂರು, ಬ್ಯಾಡಗಿ, ಹಿರೆಕೆರೂರು ತಾಲ್ಲೂಕಿನ 17 ಕೆರೆಗಳನ್ನು ಕುಮುದ್ವತಿ ನದಿಯಿಂದ ತುಂಬಿಸುವ ಯೋಜನೆ.

* 117 ಕೋಟಿ ವೆಚ್ಚದಲ್ಲಿ ಮುಲ್ಲಾಮಾರಿ ಕೆಳದಂಡೆ ಯೋಜನೆಯ ಬಲದಂಡೆ ಹಾಗೂ ಕಾಲುವೆ ಅಭಿವೃದ್ಧಿ

* 809.5 ಕೋಟಿ ವೆಚ್ಚದಲ್ಲಿ ಹೇಮಾವತಿ ಎಡದಂಡೆ ನಾಲೆ ಅಭಿವೃದ್ಧಿ

* 238 ಕೋಟಿ ವೆಚ್ಚದಲ್ಲಿ ಬದಾಮಿ ತಾಲ್ಲೂಕಿನ ಬಿಳಗಿ ಕ್ಷೇತ್ರದ 1600 ಎಕರೆ ಪ್ರದೇಶಕ್ಕೆ ನೀರಾವರಿ ಒದಗಿಸಲು ಏತನೀರಾವರಿ ಜಾರಿಗೋಳಿಸಲು ಸರ್ಕಾರ ನಿರ್ಧರಿಸಿದೆ. ಗುಳೆ ತಡೆಯುವ ನಿಟ್ಟಿನಲ್ಲಿ ಈ ಯೋಜನೆ ಕೈಗೆತ್ತಿಕೊಂಡಿದೆ.

* ಬಹು ದಿನಗಳ ಒತ್ತಾಯವಾದ ಕೃಷ್ಣಾ ಮೇಲ್ದಂಡೆ ಯೋಜನೆಯ ಎರಡನೇ ಹಂತದ ಕಾಲುವೆ ಆಧುನೀಕರಣಕ್ಕೆ ಸರ್ಕಾರ ಅಸ್ತು ಅಂದಿದೆ. ಈ ಯೋಜನೆಗೆ 750 ಕೋಟಿ ಮೀಸಲಿಡಲಾಗಿದೆ.

* ಚಿತ್ರದುರ್ಗದ ತಾಲ್ಲೂಕಿನ ಕೆರೆಗಳಿಗೆ 250 ಕೋಟಿ ವೆಚ್ಚದಲ್ಲಿ ನೀರು ತುಂಬಿಸಲು ಸರ್ಕಾರ ನಿರ್ಧರಿಸಿದೆ.

* ಜಗಳೂರಿನ 46 ಕೆರೆಗಳಿಗೆ ತುಂಗಭದ್ರಾ ನದಿಯಿಂದ ನೀರು

* 100 ಕೋಟಿ ವೆಚ್ಚದಲ್ಲಿ ಕೆ.ಆರ್.ಪುರ ಸಂಸ್ಕೃಣಾ ಘಟಕದಿಂದ ಹೊಸಕೋಟೆಯ 30 ಕೆರೆಗಳಿಗೆ ನೀರು.

English summary
Karnataka Budget 2018-19 : Finance minister, Chief Minister Siddaramaiah has given more priority to water irrigation, He announce many water filling projects. gaves more grants to irrigation.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X