ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕರ್ನಾಟಕ ಬಜೆಟ್ 2018-19, ಮುಖ್ಯಾಂಶಗಳು

|
Google Oneindia Kannada News

ಬೆಂಗಳೂರು, ಫೆಬ್ರವರಿ 16 : ಹಣಕಾಸು ಸಚಿವ ಮತ್ತು ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸತತ 4 ಗಂಟೆಗಳ ಕಾಲ 2018-19ನೇ ಸಾಲಿನ ಬಜೆಟ್ ಮಂಡನೆ ಮಾಡಿದರು.

2018ರ ವಿಧಾನಸಭೆ ಚುನಾವಣೆ ಮೇಲೆ ಕಣ್ಣಿಟ್ಟಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದು ಬಜೆಟ್ ಮಂಡಿಸಿದರು. 2018-19ನೇ ಸಾಲಿನ ಬಜೆಟ್‌ನಲ್ಲಿ ಹಲವಾರು ಘೋಷಣೆಗಳನ್ನು ಮಾಡಿದರು.

'ರಾಜ್ಯದ ಬೊಕ್ಕಸದಲ್ಲಿರುವ ಹಣ ಜನರ ಬೆವರಿನ ಫಲ. ನಾನು ಅವುಗಳನ್ನು ನೋಡಿಕೊಳ್ಳುವ ಟ್ರಸ್ಟಿ ಮಾತ್ರ' ಎಂದು ಭಾಷಣ ಆರಂಭಿಸಿದ ಸಿದ್ದರಾಮಯ್ಯ ಎಲ್ಲಾ ವರ್ಗಗಳನ್ನು ಸಂತೃಪ್ತಗೊಳಿಸುವ ಘೋಷಣೆಗಳನ್ನು ಮಾಡಿದರು.

ಚುನಾವಣಾ ಪೂರ್ವ ಬಜೆಟ್ ನಲ್ಲಿ ಏನೆಲ್ಲ ಸಿಗಬಹುದು?ಚುನಾವಣಾ ಪೂರ್ವ ಬಜೆಟ್ ನಲ್ಲಿ ಏನೆಲ್ಲ ಸಿಗಬಹುದು?

ಶುಕ್ರವಾರ 11.30ಕ್ಕೆ ವಿಧಾನಸೌಧದಲ್ಲಿ ಬಜೆಟ್ ಅಧಿವೇಶನ ಆರಂಭವಾಯಿತು. ಮಧ್ಯಾಹ್ನ 3.45ಕ್ಕೆ ಬಜೆಟ್ ಭಾಷಣ ಅಂತ್ಯಗೊಂಡಿತು.

Karnataka budget 2018 Siddaramaiah live updates

Newest FirstOldest First
3:41 PM, 16 Feb

11.30ಕ್ಕೆ ಬಜೆಟ್ ಭಾಷಣ ಆರಂಭಿಸಿದ್ದ ಸಿದ್ದರಾಮಯ್ಯ 3.30ಕ್ಕೆ ಅಂತ್ಯಗೊಳಿಸಿದ್ದಾರೆ
3:41 PM, 16 Feb

ಬಜೆಟ್ ಭಾಷಣ ಅಂತ್ಯಗೊಳಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ
3:07 PM, 16 Feb

ನವೋದ್ಯಮಗಳ ಉತ್ತೇಜನಕ್ಕಾಗಿ ಕಲಬುರಗಿಯಲ್ಲಿ ದೇಶಪಾಂಡೆ ಫೌಂಡೇಷನ್ ಸಹಯೋಗದಲ್ಲಿ 5 ಕೋಟಿ ರೂ. ವೆಚ್ಚದಲ್ಲಿ ಇನ್ ಕ್ಯೂಬೇಷನ್ ಸೆಂಟರ್ ಸ್ಥಾಪನೆ
2:58 PM, 16 Feb

ಬೆಂಗಳೂರಿನಲ್ಲಿ 5 ಕೋಟಿ ವೆಚ್ಚದಲ್ಲಿ ಪತ್ರಕರ್ತರ ಭವನ ನಿರ್ಮಾಣ
2:57 PM, 16 Feb

ಪತ್ರಕರ್ತರಿಗೆ ಅಪಘಾತ ಅಥವ ಅಕಾಲಿಕ ಮರಣದ ಸಂದರ್ಭದಲ್ಲಿ 5 ಲಕ್ಷ ರೂ. ವರೆಗಿನ ಸಮೂಹ ಜೀವ ವಿಮೆ ಸೌಲಭ್ಯದ 'ಮಾಧ್ಯಮ ಸಂಜೀವಿನಿ' ಯೋಜನೆ ಜಾರಿ
2:55 PM, 16 Feb

ಬೆಂಗಳೂರಿನ ಪೀಣ್ಯ ಪ್ರದೇಶದಲ್ಲಿ ಕೆಎಸ್ಎಸ್‌ಐಡಿಸಿ ವತಿಯಿಂದ ಮೂಲ ಸೌಕರ್ಯ ಅಭಿವೃದ್ಧಿ
2:52 PM, 16 Feb

ಮಡಿಕೇರಿ-ತಲಕಾವೇರಿ ರಸ್ತೆಯ ಆಯ್ದ ಭಾಗಗಳಲ್ಲಿ 10 ಕೋಟಿ ರೂ. ವೆಚ್ಚದಲ್ಲಿ ಮರು ಡಾಂಬರೀಕರಣ ಹಾಗೂ ಅಭಿವೃದ್ಧಿ
Advertisement
2:49 PM, 16 Feb

ಬೆಂಗಳೂರು ನಗರ ಪ್ರದೇಶಕ್ಕೆ ಜಾರಿಗೆ ತರಲಾದ ಬಹುಮಹಡಿ ಕಟ್ಟಡ ನಿರ್ಮಾಣದ ಯೋಜನೆಯನ್ನು 'ಮುಖ್ಯಮಂತ್ರಿಗಳ ನಗರ ವಸತಿ ಯೋಜನೆ' ಎಂಬ ಹೆಸರಿನಲ್ಲಿ ರಾಜ್ಯದ ಎಲ್ಲಾ ನಗರ ಪ್ರದೇಶಗಳಿಗೂ ವಿಸ್ತರಣೆ
2:48 PM, 16 Feb

ಮುಂದಿನ 5 ವರ್ಷದಲ್ಲಿ ನಗರ ಮತ್ತು ಗ್ರಾಮೀಣ ಪ್ರದೇಶದಲ್ಲಿ 20 ಲಕ್ಷ ಮನೆಗಳ ನಿರ್ಮಾಣದ ಗುರಿ
2:42 PM, 16 Feb

25 ಹೊಸ ಮೊರಾರ್ಜಿ ದೇಸಾಯಿ ವಸತಿ ಶಾಲೆ, 5 ಪದವಿ ಪೂರ್ವ ಮಹಿಳಾ ಕಾಲೇಜು. 2 ಮಾದರಿ ವಸತಿ ಶಾಲೆ, 25 ವಿದ್ಯಾರ್ಥಿ ನಿಲಯ, 10 ಉದ್ಯೋಗಸ್ಥ ಮಹಿಳೆಯರ ವಸತಿ ನಿಲಯ, 4 ಬಿ.ಎಡ್ ಹಾಗೂ ಡಿ.ಎಡ್. ಆಂಗ್ಲ ಮಾಧ್ಯಮ ಬಾಲಕಿಯರ ವಸತಿ ಸಹಿತ ಕಾಲೇಜು ಮತ್ತು ಸಂಪನ್ಮೂಲ ಕೇಂದ್ರ ಆರಂಭ
2:38 PM, 16 Feb

ಹಾಸನ, ಮೈಸೂರು, ಕಾರವಾರ ವೈದ್ಯಕೀಯ ಕಾಲೇಜುಗಳಲ್ಲಿ ತಲಾ 15 ಕೋಟಿ ವೆಚ್ಚದಲ್ಲಿ ಕ್ಯಾನ್ಸರ್ ಚಿಕಿತ್ಸಾ ಘಟಕಗಳ ಸ್ಥಾಪನೆ
2:37 PM, 16 Feb

ಕಲಬುರಗಿಯ ವೈದ್ಯಕೀಯ ಕಾಲೇಜಿನಲ್ಲಿ ಹೈದರಾಬಾದ್ ಕರ್ನಾಟಕ ಪ್ರದೇಶಾಭಿವೃದ್ಧಿ ಅನುದಾನದಲ್ಲಿ ಸುಟ್ಟಗಾಯಗಳ ವಾರ್ಡ್ ಆರಂಭ
Advertisement
2:35 PM, 16 Feb

ಬೆಂಗಳೂರಿನ ಕಿದ್ವಾಯಿ ಕ್ಯಾನ್ಸರ್ ಸಂಸ್ಥೆಯಲ್ಲಿ 15 ಕೋಟಿ ರೂ. ಅಂದಾಜು ವೆಚ್ಚದಲ್ಲಿ ಒಂದು ಪೆಟ್ ಸಿ.ಟಿ. ಸ್ಕ್ಯಾನ್ ಸೌಲಭ್ಯ ಸ್ಥಾಪನೆ
2:33 PM, 16 Feb

135 ಕೋಟಿ ವೆಚ್ಚದಲ್ಲಿ ದಾವಣಗೆರೆ ತಾಲೂಕಿನ ಬೇತೂರು, ಮಾಗನಳ್ಳಿ, ರಾಮ್ ಪುರ, ಮೇಗಲಗೇರಿ ಮತ್ತು ಖಡಜ್ಜಿ ಗ್ರಾಮಗಳ ಕೆರೆಗಳನ್ನು ತುಂಗಭದ್ರಾ ನದಿಯ ನೀರಿನ ಮೂಲಕ ತುಂಬಲಾಗುತ್ತದೆ.
2:31 PM, 16 Feb

250 ಕೋಟಿ ವೆಚ್ಚದಲ್ಲಿ ಜಗಳೂರು ತಾಲೂಕಿನ 46 ಕೆರೆಗಳಿಗೆ ತುಂಗಭದ್ರಾ ನದಿಯಿಂದ ನೀರು ತುಂಬಿಸಲಾಗುತ್ತದೆ
2:30 PM, 16 Feb

ಬೆಳಗಾವಿಯ ರಾಮದುರ್ಗ ತಾಲೂಕಿನ 46 ಕೆರೆಗಳಿಗೆ 540 ಕೋಟಿ ರೂ. ವೆಚ್ಚದಲ್ಲಿ ಘಟಪ್ರಭಾ ನದಿಯಿಂದ ನೀರು ಹರಿಸುವ ಸಾಲಾಪುರ ಏತ ನೀರಾವರಿ ಯೋಜನೆ
2:28 PM, 16 Feb

70 ಕೋಟಿ ರೂ.ಗಳ ವೆಚ್ಚದಲ್ಲಿ ಕುಡಿಯುವ ನೀರಿಗಾಗಿ ಚೆನ್ನರಾಯಪಟ್ಟಣ ತಾಲೂಕಿನ ಅಮಾನಿಕೆರೆಯಿಂದ ತಾಲೂಕಿನ 25 ಕೆರೆಗಳನ್ನು ತುಂಬಿಸುವ ಕಾಮಗಾರಿ
2:25 PM, 16 Feb

ಬೆಂಗಳೂರಿನ ಗಾಂಧಿ ಕೃಷಿ ವಿಜ್ಞಾನ ಕೇಂದ್ರದಲ್ಲಿ (ಜಿಕೆವಿಕೆ)ಯಲ್ಲಿ 1 ಕೋಟಿ ರೂ. ವೆಚ್ಚದಲ್ಲಿ ನಂಜುಂಡಸ್ವಾಮಿ ಸಂಶೋಧನಾ ಪೀಠ ಸ್ಥಾಪನೆ
2:24 PM, 16 Feb

ಅಬಕಾರಿ ಮೂಲಕ 18,750 ಕೋಟಿ, ಸಾರಿಗೆ ಮೂಲಕ 6,600 ಕೋಟಿ, ನೋಂದಣಿ ಮತ್ತು ಮುದ್ರಾಂಕದ ಮೂಲಕ 10,400 ಕೋಟಿ ರಾಜಸ್ವ ಸಂಗ್ರಹಣೆ ಗುರಿ ಹೊಂದಲಾಗಿದೆ.
2:23 PM, 16 Feb

ಮದ್ಯದ 2 ರಿಂದ 18ನೇ ಘೋಷಿತ ಬೆಲೆ ಸ್ಲ್ಯಾಬ್‌ಗಳ ಮೇಲಿನ ಹೆಚ್ಚುವರಿ ಅಬಕಾರಿ ಸುಂಕದ ದರ ಹಾಲಿ ಇರುವ ದರಗಳ ಮೇಲೆ ಶೇ 8ರಷ್ಟು ಹೆಚ್ಚಳ
2:21 PM, 16 Feb

ಚಿತ್ರದುರ್ಗದಲ್ಲಿ 14 ಎಕರೆ ಪ್ರದೇಶದಲ್ಲಿ 35 ಕೋಟಿ ರೂ. ವೆಚ್ಚದಲ್ಲಿ ಟ್ರಕ್ ಟರ್ಮಿನಲ್ ಮತ್ತು ಹೈವೇ ಅಮಿನಿಟೀಸ್ ನಿರ್ಮಾಣ
2:19 PM, 16 Feb

ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಇರುವ ಫ್ಲೈ ಬಸ್ ಸೇವೆಯನ್ನು 7 ನಗರಗಳಿಗೆ ವಿಸ್ತರಣೆ ಮಾಡಲಾಗುತ್ತದೆ.
2:18 PM, 16 Feb

ದೇಶದಲ್ಲಿಯೇ ಮೊದಲ ಬಾರಿಗೆ ನಗರಗಳ ನಡುವೆ ಸಂಚಾರಕ್ಕೆ ರಾಜ್ಯ ರಸ್ತೆ ಸಾರಿಗೆ ನಿಗಮಗಳಿಂದ 10 ಡಬ್ಬಲ್ ಡೆಕ್ಕರ್ ಬಸ್ಸುಗಳ ಕಾರ್ಯಾಚರಣೆ
2:16 PM, 16 Feb

ಬೆಂಗಳೂರು ಸಮೀಪ 400 ಎಕರೆಯಲ್ಲಿ ಮತ್ತು ಹುಬ್ಬಳ್ಳಿಯಲ್ಲಿ 50 ಎಕರೆಯಲ್ಲಿ ಬಹುಮಾದರಿಯ ಲಾಜಿಸ್ಟಿಕ್ ಪಾರ್ಕ್ ಸ್ಥಾಪನೆ
2:15 PM, 16 Feb

ಕೋಲಾರ ಜಿಲ್ಲೆಯಲ್ಲಿ ರೈಲ್ವೆ ಕೋಚ್ ಫ್ಯಾಕ್ಟರಿ ಸ್ಥಾಪನೆಗೆ ರೈಲ್ವೆ ಮಂತ್ರಾಲಯಕ್ಕೆ ಸರ್ಕಾರಿ ಭೂಮಿ ವರ್ಗಾವಣೆ
2:14 PM, 16 Feb

ಬೆಂಗಳೂರಿನ ಎಂ.ಎಸ್.ಬಿಲ್ಡಿಂಗ್ ಬಳಿ 20 ಕೋಟಿ ವೆಚ್ಚದಲ್ಲಿ ಬಹುಮಹಡಿ ವಾಹನ ಪಾರ್ಕಿಂಗ್ ನಿಲ್ದಾಣ ನಿರ್ಮಾಣ
2:13 PM, 16 Feb

ದೆಹಲಿಯ ಕರ್ನಾಟಕ ಭವನ-1ರ ಮುಂಭಾಗವನ್ನು ಕೆಡವಿ ಮುಂದಿನ 2 ವರ್ಷಗಳಲ್ಲಿ 30 ಕೋಟಿ ವೆಚ್ಚದಲ್ಲಿ ಹೊಸ ಭವನ ನಿರ್ಮಾಣ
2:11 PM, 16 Feb

ತಿರುಮಲದಲ್ಲಿ 20 ಕೋಟಿ ರೂ.ಗಳ ವೆಚ್ಚದಲ್ಲಿ ಒಂದು ಸುಸಜ್ಜಿತ ಅತಿಥಿ ಗೃಹ ನಿರ್ಮಾಣ.
2:08 PM, 16 Feb

ಆನ್‌ಲೈನ್ ಹಾಗೂ ಓವರ್ ದಿ ಕೌಂಟರ್ ಮೂಲಕ ಜಾತಿ, ಆದಾಯ ಮತ್ತು ವಾಸದ ಪ್ರಮಾಣ ಪತ್ರಗಳನ್ನು ತಕ್ಷಣವೇ ನೀಡುವ ಪದ್ಧತಿ 'ಈ ಕ್ಷಣ'ವನ್ನು ನಗರ ಪ್ರದೇಶ ಸೇರಿದಂತೆ ರಾಜ್ಯದ ಎಲ್ಲಾ ಕಡೆ ವಿಸ್ತರಣೆ ಮಾಡಲಾಗುತ್ತದೆ.
2:01 PM, 16 Feb

ಮಲೆನಾಡು ಅಭಿವೃದ್ಧಿ ಮಂಡಳಿ 70, ಬಯಲುಸೀಮೆ ಅಭಿವೃದ್ಧಿ ಮಂಡಳಿಗೆ 55 ಮತ್ತು ಕರಾವಳಿ ಪ್ರದೇಶಗಳ ಅಭಿವೃದ್ಧಿ ಮಂಡಳಿಗೆ 25 ಕೋಟಿ ಅನುದಾನ
READ MORE

English summary
Finance and Karnataka Chief Minister Siddaramaiah presented Karnataka Budget 2018-19 on Friday, February 16, 2018.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X