ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಜ್ಯ ಬಜೆಟ್: ಪಶುಸಂಗೋಪನೆಯಲ್ಲಿ ಕುರಿ/ಮೇಕೆಗಳದ್ದೆ ಕಾರುಬಾರು

By Manjunatha
|
Google Oneindia Kannada News

ಬೆಂಗಳೂರು, ಫೆಬ್ರವರಿ 16: ಕರ್ನಾಟಕ ಬಜೆಟ್ 2018-19ರಲ್ಲಿ ಕೃಷಿ ಮತ್ತು ನೀರಾವರಿ ಪರವಾದ ಯೋಜನೆಗಳಿಗೆ ವಿಶೇಷ ಆದ್ಯತೆ ನೀಡಿರುವ ಸಿದ್ದರಾಮಯ್ಯ ಅವರು ರೈತರ ಉಪಕಸುಬಾದ ಪಶುಸಂಗೋಪನೆಗೂ ಆದ್ಯತೆ ನೀಡಿದ್ದಾರೆ.

Live : ಕರ್ನಾಟಕ ಬಜೆಟ್ 2018, ಮುಖ್ಯಾಂಶಗಳುLive : ಕರ್ನಾಟಕ ಬಜೆಟ್ 2018, ಮುಖ್ಯಾಂಶಗಳು

ಆದರೆ ಪಶುಸಂಗೋಪನೆಯಲ್ಲಿ ತಮ್ಮ ಜಾತಿಯ ಪ್ರೀತಿ ಮೆರೆದಿರುವ ಸಿದ್ದರಾಮಯ್ಯ ಅವರು ಕುರಿ ಮತ್ತು ಮೇಕೆ ಸಾಕಾಣೆದಾರರಿಗೆ ಹೆಚ್ಚಿನ ಆದ್ಯತೆ ನೀಡಿದ್ದಾರೆ. ಹಸು, ಎತ್ತು ಸಾಕಾಣೆದಾರರಿಗೆ ಹೆಚ್ಚಿನ ಆದ್ಯತೆ ಈ ಬಾರಿಯ ಬಜೆಟ್‌ನಲ್ಲಿ ನೀಡಲಾಗಿಲ್ಲ.

karnataka budget-2018: Sheep,Goat farming gets more grant

ಪಶುಸಂಗೋಪನೆ
* ಕುರಿ ಮತ್ತು ಮೇಕೆ ಖರೀದಿಗೆಂದು ಸಹಕಾರಿ ಬ್ಯಾಂಕುಗಳಿಂದ ಪಡೆದ 50000 ಒಳಗಿನ ಮಧ್ಯಮಾವದಿ ಸಾಲ ಮನ್ನಾ
* ಕುರಿ ಮತ್ತು ಆಡು ಸಾಕಾಣೆ ಪ್ರೋತ್ಸಾಹಕ್ಕೆ 25000 ಘಟನ ಸ್ಥಾಪನೆ ಮತ್ತು 187 ಕೋಟಿ ಸಾಲಕ್ಕೆ ಸರ್ಕಾರವೇ ಖಾತ್ರಿ
* ಜಾನುವಾರು ಮೇವಿಗಾಗಿ ಮೇವು ಭದ್ರತಾ ನೀತಿ ಜಾರಿ
* ವಲಸೆ ಕುರಿಗಾರರ ಮತ್ತು ಕುರಿಗಳ ರಕ್ಷಣೆಗೆ ಟೆಂಟ್ ನಿರ್ಮಿಸಿಕೊಳ್ಳಲು ಅಗತ್ಯ ಸಾಮಗ್ರಿ ಖರೀದಿಗೆ 4 ಕೋಟಿ ಅನುದಾನ
* ಕುರಿ, ಮೇಕೆ ಚರ್ಮ ಮೌಲ್ಯ ವರ್ಧನೆಗೆ ಚರ್ಮ ಸಂಸ್ಕೃಣಾ ಘಟಕ ಸ್ಥಾಪನೆ
* ಗದಗ, ಕೊಪ್ಪಳ, ರಾಯಚೂರು, ಧಾರವಾಡ, ವಿಜಯಪುರ ಜಿಲ್ಲೆಗಳಲ್ಲಿ ಪಶು ರೋಗ ತಪಾಸಣಾ ಘಟಕ ಸ್ಥಾಪನೆಗೆ 3 ಕೋಟಿ ಅನುದಾನ
* ರಾಜ್ಯದ ಕುರಿ, ಮೇಕೆ ಮಾರುಕಟ್ಟೆ ಅಭಿವೃದ್ಧಿಗೆ 75 ಕೋಟಿ
* 14000 ಹಾಲು ಉತ್ಪಾದಕ ಸಹಕಾರ ಸಂಘಗಳ ಸಿಬ್ಬಂದಿಗಳಿಗೆ ಗುಣಮಟ್ಟದ ಹಾಲು ಶೇಖರಣೆ ಆಧಾರದ ಮೇಲೆ ಪ್ರತಿ ಲೀಟರ್ ಹಾಲಿಗೆ 20 ಪೈಸೆಯಂತೆ 50 ಕೋಟಿ ಅನುದಾನ

ಬಜೆಟ್ : ಸಿದ್ದು ಸರ್ಕಾರಕ್ಕೊಂದಷ್ಟು ಮೆಚ್ಚುಗೆ, ಮತ್ತಷ್ಟು ತರಾಟೆ!ಬಜೆಟ್ : ಸಿದ್ದು ಸರ್ಕಾರಕ್ಕೊಂದಷ್ಟು ಮೆಚ್ಚುಗೆ, ಮತ್ತಷ್ಟು ತರಾಟೆ!

ರೇಷ್ಮೆ
* ರೇಷ್ಮೆ ಮಂಡಳಿ ಸಹಯೋಗದೊಂದಿಗೆ ಬೆಂಗಳೂರು, ಮೈಸೂರು ರೇಷ್ಮೆ ಕಾರಿಡಾರ್ ನಲ್ಲಿ ರೇಷ್ಮೆ ಟೂರಿಸಂ ಅಭಿವೃದ್ಧಿ, ಚನ್ನಪಟ್ಟಣದಲ್ಲಿ ಅಂತರರಾಷ್ಟ್ರೀಯ ಲೈವ್ ಮ್ಯೂಸಿಯಂ ಸ್ಥಾಪನೆ
* ತಲಘಟ್ಟಪುರ ರೇಷ್ಮೆ ಸಂಶೋಧನೆ ಅಭಿವೃದ್ಧಿ ಕೇಂದ್ರದಲ್ಲಿ ರೇಷ್ಮೆ ವಸ್ತುಸಂಗ್ರಹಾಲಯ ಸ್ಥಾಪನೆ
* ಸೋಲಿಗ ಜನಾಂಗಕ್ಕೆ ನೆರವಾಗಲು ಬಿಳಿರಂಗನ ಬೆಟ್ಟದ ಮೇಲೆ ಇಲಾಖೆ ಜಾಗದಲ್ಲಿ ಹಿಪ್ಪುನೇರಳೆ ಮರ ಕೃಷಿ, ರೇಷ್ಮೆ ಸಾಕಲು ಶೆಡ್‌ಗಳ ನಿರ್ಮಾಣ, ದ್ವಿತಳಿ ರೇಷ್ಮೆ ಹುಳು ಸಾಕಾಣಿಕೆಗೆ ಕ್ರಮ.

English summary
Karnataka Budget 2018-19 : Finance minister, Chief Minister Siddaramaiah has given more grants to Sheep and Goat farming in Animal husbandry sector.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X