• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಮುಂದಿನ 5 ವರ್ಷಗಳಲ್ಲಿ 20 ಲಕ್ಷ ಮನೆ ನಿರ್ಮಾಣ ಗುರಿ

By Manjunatha
|

ಬೆಂಗಳೂರು, ಫೆಬ್ರವರಿ 16: ಕೇಂದ್ರ ಬಜೆಟ್‌ನಲ್ಲಿ ದೇಶದ ಪ್ರತಿಯೊಬ್ಬರಿಗೂ ಮನೆ ನಿರ್ಮಿಸುವ ಬಗ್ಗೆ ಪ್ರಸ್ತಾಪವಾಗಿ ಬಡಜನರಲ್ಲಿ ಆಶಾಭಾವನೆ ಮೂಡಿಸಿರುವ ಬೆನ್ನಲ್ಲೆ ರಾಜ್ಯ ಬಜೆಟ್‌ನಲ್ಲೂ ಕಡ್ಡಾಯ ಸೂರಿನ ಉಲ್ಲೇಖ ಮಾಡಲಾಗಿದೆ.

ಕೇಂದ್ರವು ಪ್ರಧಾನ ಮಂತ್ರಿ ಆವಾಸ್ ಯೋಜನೆ ಅಡಿಯಲ್ಲಿ 2022ರ ಒಳಗಾಗಿ ದೇಶದ ಎಲ್ಲರಿಗೂ ಮನೆ ಕಟ್ಟಿಕೊಡುವ ಭರವಸೆ ನೀಡಿದೆ. ಇದೇ ಭರವಸೆ ಮುಂದುವರಿಕೆ ಎಂಬಂತೆ ರಾಜ್ಯ ಬಜೆಟ್‌ನಲ್ಲೂ ವಸತಿ ಕ್ಷೇತ್ರಕ್ಕೆ ಒತ್ತು ನೀಡಲಾಗಿದ್ದು, ಗ್ರಾಮೀಣ ಮತ್ತು ನಗರ ಭಾಗದಲ್ಲಿ ಐದು ವರ್ಷದಲ್ಲಿ 20 ಲಕ್ಷ ಮನೆ ನಿರ್ಮಿಸುವ ಗುರಿ ನಿಗದಿಪಡಿಸಿಕೊಳ್ಳಲಾಗಿದೆ.

ರಾಜ್ಯ ಬಜೆಟ್: ಬೆಂಗಳೂರಿಗೆ ದೊರೆತಿದ್ದೇನು? ಇಲಾಖೆವಾರು ಮಾಹಿತಿ

ಬೆಂಗಳೂರಲ್ಲಿ ಮಾತ್ರವೇ ಇರುವ ಬಹುಮಹಡಿ ಕಟ್ಟಡ ನಿರ್ಮಾಣ ಯೋಜನೆಯನ್ನು ರಾಜ್ಯದ ಎಲ್ಲಾ ಜಿಲ್ಲೆಗಳಿಗೂ ವಿಸ್ತರಿಸುವ ಯೋಜನೆಯನ್ನು ಸರ್ಕಾರ ಬಜೆಟ್‌ನಲ್ಲಿ ಘೋಷಿಸಿದೆ.

ಗ್ರಾಮೀಣ & ನಗರ ಭಾಗದಲ್ಲಿ ಮನೆ

ಗ್ರಾಮೀಣ & ನಗರ ಭಾಗದಲ್ಲಿ ಮನೆ

ಮುಂದಿನ ಐದು ವರ್ಷದಲ್ಲಿ ಗ್ರಾಮೀಣ ಮತ್ತು ನಗರ ಭಾಗದಲ್ಲಿ 20 ಲಕ್ಷ ಮನೆ ನಿರ್ಮಾಣ ಘೋಷಣೆ ಮಾಡಲಾಗಿದೆ. ಪ್ರಧಾನಿ ಆವಾಸ್ ಯೋಜನೆಯ ಅಡಿಯಲ್ಲಿಯೂ ಲಕ್ಷಾಂತರ ಮನೆಗಳ ನಿರ್ಮಾಣ ಮಾಡುವ ಭರವಸೆ ನೀಡಲಾಗಿದ್ದು, ವಸತಿ ರಹಿತರಿಗೆ ಕಡ್ಡಾಯ ಮನೆ ದೊರಕುವ ಸಾಧ್ಯತೆ ಇದೆ.

ಬಜೆಟ್: ನೀರಾವರಿ ಯೋಜನೆ, ಯಾವ ಊರಿಗೆ ಏನು ಸಿಕ್ಕಿದೆ

ಎಲ್ಲಾ ಜಿಲ್ಲೆಗಳಲ್ಲೂ ಜಾರಿ

ಎಲ್ಲಾ ಜಿಲ್ಲೆಗಳಲ್ಲೂ ಜಾರಿ

ಪ್ರಸ್ತುತ ನಗರ ಪ್ರದೇಶದಲ್ಲಿ ಮಾತ್ರವೇ ಇರುವ ಬಹುಮಹಡಿ ಕಟ್ಟಡ ನಿರ್ಮಾಣ ಯೋಜನೆಯನ್ನು 'ಮುಖ್ಯಮಂತ್ರಿ ನಗರ ವಸತಿ ಯೋಜನೆ' ಹೆಸರಲ್ಲಿ ರಾಜ್ಯದ ಎಲ್ಲಾ ನಗರಗಳಿಗೂ ವಿಸ್ತರಿಸಲಾಗುವುದೆಂದು ಸಿದ್ದರಾಮಯ್ಯ ಅವರು ಬಜೆಟ್‌ನಲ್ಲಿ ಘೋಷಿಸಿದರು.

ಬಜೆಟ್ಟಿನಲ್ಲಿ ಮುಸ್ಲಿಂ ಸಮುದಾಯಕ್ಕೆ ಭರ್ಜರಿ ಬಳುವಳಿ

ಮಹಾನಗರ ಪಾಲಿಕೆಯಲ್ಲಿ 500 ಎಕರೆ

ಮಹಾನಗರ ಪಾಲಿಕೆಯಲ್ಲಿ 500 ಎಕರೆ

ನಗರ ಪ್ರದೇಶದ ವಸತಿ ಯೋಜನೆಗೆ ಬಿಬಿಎಂಪಿ ವ್ಯಾಪ್ತಿಯಲ್ಲಿ 2000 ಎಕರೆ, ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ 500 ಎಕರೆ, ಪುರಸಭೆ ವ್ಯಾಪ್ತಿಯಲ್ಲಿ 250 ಎಕರೆ, ಇತರೆ ಪಟ್ಟಣ ಪ್ರದೇಶದಲ್ಲಿ 100 ಜಮೀನು ಮೀಸಲಿಡಲಾಗುತ್ತದೆ.

ಖಾಸಗಿ ಸಹಭಾಗಿತ್ವ

ಖಾಸಗಿ ಸಹಭಾಗಿತ್ವ

ಟಿಡಿಆರ್ ಮತ್ತು ಹೆಚ್ಚುವರಿ ಎಫ್‌ಎಆರ್‌ ನೀಡುವ ಮೂಲಕ ಖಾಸಗಿ ಸಹಭಾಗಿತ್ವದಲ್ಲಿ ನಗರಪಾಲಿಕೆಗಳ ವ್ಯಾಪ್ತಿಯ ಕೊಳಗೇರಿ ಪ್ರದೇಶಗಳ ಅಭಿವೃದ್ಧಿ ಮಾಡುವುದಾಗಿ ಸಿದ್ದರಾಮಯ್ಯ ಅವರು ಬಜೆಟ್‌ನಲ್ಲಿ ಘೋಷಿಸಿದ್ದಾರೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Karnataka Budget 2018-19 : Finance minister, Chief Minister Siddaramaiah has announce 20 lakh house to be built in rural area in 5 years. He also said house to be bulit in urban also.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more