ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಾರಿಗೆ ಬಜೆಟ್: ಉಚಿತ ಬಸ್ ಪಾಸ್, ಡಬ್ಬಲ್ ಡೆಕ್ಕರ್ ಬಸ್

By Mahesh
|
Google Oneindia Kannada News

ಬೆಂಗಳೂರು, ಫೆಬ್ರವರಿ 16: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ದಾಖಲೆಯ 13ನೇ ಬಾರಿಗೆ ಬಜೆಟ್ ಮಂಡಿಸಿದ್ದಾರೆ. ಶುಕ್ರವಾರದಂದು ಮಂಡಿಸಿದ ಬಜೆಟ್ ನಲ್ಲಿ ಸಾರಿಗೆ ಇಲಾಖೆಗೆ ತಕ್ಕಮಟ್ಟಿನ ಪ್ರಾಶಸ್ತ್ಯ ಸಿಕ್ಕಿದೆ. ಈ ಪೈಕಿ ಉಚಿತ ಬಸ್ ಪಾಸ್, ಡಬ್ಬಲ್ ಡೆಕರ್ ಬಸ್ ಪ್ರಮುಖವಾಗಿದೆ.

2018-19ನೇ ಸಾಲಿಗೆ ಸಾರಿಗೆ ಇಲಾಖೆಯಲ್ಲಿ 6,600 ಕೋಟಿ ರು ಗಳ ಸಂಗ್ರಹಣೆ ಗುರಿಯನ್ನು ಕರ್ನಾಟಕ ಸರ್ಕಾರ ಹೊಂದಿದೆ.

* ರಾಜ್ಯದ ಎಲ್ಲಾ ವಿದ್ಯಾರ್ಥಿಗಳಿಗೆ 2018-19ನೇ ಸಾಲಿನಿಂದ ಉಚಿತ ಬಸ್ ಪಾಸ್ ವಿತರಣೆ, ಇದರಿಂದ 19.60 ಲಕ್ಷ ವಿದ್ಯಾರ್ಥಿಗಳಿಗೆ ಪ್ರಯೋಜನ.
* ಬೆಂಗಳೂರು ಮತ್ತು ಧಾರವಾಡಗಳಲ್ಲಿನ ಭಾರಿ ವಾಹನ ಚಾಲಕರ ತರಬೇತಿ ಸಂಸ್ಥೆಗಳಲ್ಲಿ ಸಾರಿಗೆ ಇಲಾಖೆಯಿಂದ 100 ಹಾಗೂ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯಿಂದ 1000 ಮಹಿಳಾ ಅಭ್ಯರ್ಥಿಗಳಿಗೆ ಲಘು ಮೋಟಾರು ವಾಹನ ಚಾಲನಾ ತರಬೇತಿ.
* 30 ಬಸ್ ನಿಲ್ದಾಣ, 8 ಬಸ್ ಘಟಕಗಳು ಹಾಗೂ 325 ಬಸ್ ತಂಗುದಾಣಗಳನ್ನು ಮೇಲ್ದರ್ಜೆಗೇರಿಸಲು ಕ್ರಮ.
* ದೇಶದಲ್ಲಿಯೇ ಪ್ರಪ್ರಥಮ ಬಾರಿಗೆ ನಗರಗಳ ನಡುವೆ ಸಂಚಾರಕ್ಕೆ ರಾಜ್ಯ ರಸ್ತೆ ಸಾರಿಗೆ ನಿಗಮಗಳಿಂದ 10 ಡಬ್ಬಲ್ ಡೆಕ್ಕರ್ ಬಸ್ ಗಳ ಕಾರ್ಯಾಚರಣೆ.

ಚಾಲನೆ ಮತ್ತು ಮೆಕ್ಯಾನಿಕ್ ತರಬೇತಿ

ಚಾಲನೆ ಮತ್ತು ಮೆಕ್ಯಾನಿಕ್ ತರಬೇತಿ

* ಕೌಶಲ್ಯ ಅಭಿವೃದ್ಧಿ ಯೋಜನೆಯಡಿಯ ರಾಜ್ಯ ಸಾರಿಗೆ ಸಂಸ್ಥೆಗಳ ವತಿಯಿಂದ 13,000 ಯುವಜನರಿಗೆ ಚಾಲನೆ ಮತ್ತು ಮೆಕ್ಯಾನಿಕ್ ತರಬೇತಿ.
* ಮಹಿಳೆಯರ ಸುರಕ್ಷತೆಗಾಗಿ ನಿರ್ಭಯಾ ಯೋಜನೆಯಡಿ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ 1,000 ಬಸ್ಸುಗಳಲ್ಲಿ ಸಿಸಿಟಿವಿ ಕ್ಯಾಮರಾ ಅಳವಡಿಕೆ.
* ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಇರುವ ಫ್ಲೈ ಬಸ್ ಸೇವೆ 7 ಸ್ಥಳಗಳಿಗೆ ವಿಸ್ತರಣೆ.

ಸರಕು ಸಾಗಾಣಿಕೆ ವಾಹನ ಖರೀದಿ

ಸರಕು ಸಾಗಾಣಿಕೆ ವಾಹನ ಖರೀದಿ

ಬೆಂಗಳೂರು ಮತ್ತು ಧಾರವಾಡಗಳಲ್ಲಿನ ಭಾರಿ ವಾಹನ ಚಾಲಕರ ತರಬೇತಿ ಸಂಸ್ಥೆಗಳಲ್ಲಿ ಎಸ್.ಸಿ.ಎಸ್.ಪಿ/ಟಿ.ಎಸ್.ಪಿ ಯೋಜನೆಯಡಿ ಒಟ್ಟು 200 ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಿಗೆ ಭಾರಿ ವಾಹನ ಚಾಲನಾ ತರಬೇತಿ; ತರಬೇತಿ ನಂತರ ಈ ಅಭ್ಯರ್ಥಿಗಳಿಗೆ ಸರಕು ಸಾಗಾಣಿಕೆ ವಾಹನ ಖರೀದಿಗೆ ಶೇ.4ರ ಬಡ್ಡಿದರದಲ್ಲಿ 15 ಲಕ್ಷ ರೂ.ಗಳ ಸಾಲ ಸೌಲಭ್ಯ ಈ ಯೋಜನೆಯಡಿ ಫಲಾನುಭವಿಗಳಿಗೆ ನೀಡುವ ಬಡ್ಡಿ ಸಹಾಯಧನಕ್ಕಾಗಿ 2.50 ಕೋಟಿ ರೂ. ಅನುದಾನ.

ದೇವರಾಜ ಅರಸ್ ಟ್ರಕ್ ಟರ್ಮಿನಲ್

ದೇವರಾಜ ಅರಸ್ ಟ್ರಕ್ ಟರ್ಮಿನಲ್

* ಡಿ.ದೇವರಾಜ ಅರಸ್ ಟ್ರಕ್ ಟರ್ಮಿನಲ್ ಮುಖಾಂತರ ಸಾರ್ವಜನಿಕ ಖಾಸಗಿ ಸಹಭಾಗಿತ್ವದಲ್ಲಿ ಕೈಗೊಳ್ಳಲಾಗುವ ಕಾಮಗಾರಿಗಳು:
-ಮೈಸೂರಿನ ನಂಜನಗೂಡು ವರ್ತುಲ ರಸ್ತೆಯಲ್ಲಿ 6.5 ಎಕರೆ
ಪ್ರದೇಶದಲ್ಲಿ 45 ಕೋಟಿ ರೂ.ಗಳ ವೆಚ್ಚದಲ್ಲಿ ಎರಡನೆಯ ಹಂತದ ಟ್ರಕ್ ಟರ್ಮಿನಲ್ ನಿರ್ಮಾಣ

ಟರ್ಮಿನಲ್/ಲಾಜಿಸ್ಟಿಕ್ ಪಾರ್ಕ್

ಟರ್ಮಿನಲ್/ಲಾಜಿಸ್ಟಿಕ್ ಪಾರ್ಕ್

ಧಾರವಾಡ ಜಿಲ್ಲೆಯ ಅಂಚಟಗೇರಿ ಗ್ರಾಮದಲ್ಲಿ ಸಂಸ್ಥೆಯು ಹೊಂದಿರುವ 56.13 ಎಕರೆ ಜಮೀನಿನಲ್ಲಿ 110 ಕೋಟಿ ರೂ.ಗಳ ವೆಚ್ಚದಲ್ಲಿ ಟರ್ಮಿನಲ್/ಲಾಜಿಸ್ಟಿಕ್ ಪಾರ್ಕ್ ವೇರ್ ಹೌಸ್ ನಿರ್ಮಾಣ
- ಯಶವಂತಪುರ ಟ್ರಕ್ ಟರ್ಮಿನಲ್‍ನಲ್ಲಿ 40 ಕೋಟಿ ರೂ.ಗಳ ವೆಚ್ಚದಲ್ಲಿ ಬಹುಮಹಡಿ ವಾಹನ ನಿಲ್ದಾಣ ಕಟ್ಟಡ ನಿರ್ಮಾಣ ಮತ್ತು ಮೂಲಭೂತ ಸೌಲಭ್ಯ ಉನ್ನತೀಕರಣ
-ಚಿತ್ರದುರ್ಗದಲ್ಲಿ 14 ಎಕರೆ ಪ್ರದೇಶದಲ್ಲಿ 35 ಕೋಟಿ ರು. ಗಳ ವೆಚ್ಚದಲ್ಲಿ ಟ್ರಕ್ ಟರ್ಮಿನಲ್ ಮತ್ತು ಹೈವೇ ಅಮಿನಿಟೀಸ್ ನಿರ್ಮಾಣ.

English summary
Karnataka Budget 2018-19: What is the Transport sector Share.What is the Transport sector Share. Distribution of Free pass to Students.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X