• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕುಮಾರಸ್ವಾಮಿ ಬಜೆಟ್ ನಲ್ಲಿ ಪ್ರವಾಸೋದ್ಯಮಕ್ಕೆ ಸಿಕ್ಕಿದ್ದೇನು?

By Mahesh
|

ಬೆಂಗಳೂರು, ಜುಲೈ 06: ಸಿದ್ದರಾಮಯ್ಯ ಸರ್ಕಾರ ಕೈಗೊಂಡ ಪ್ರವಾಸೋದ್ಯಮ ನೀತಿಯನ್ನು ಮುಂದುವರೆಸುವುದರ ಜೊತೆಗೆ, ಅನೇಕ ಅಭಿವೃದ್ಧಿ ಯೋಜನೆಗಳನ್ನು ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ತಮ್ಮ ಚೊಚ್ಚಲ ಬಜೆಟ್ ನಲ್ಲಿ ಪ್ರಸ್ತಾಪಿಸಿದ್ದಾರೆ.

ನಮ್ಮ ಈಗಿನ ಪ್ರವಾಸೋದ್ಯಮವು ಸಂಘಟಿತವಾಗಿ ಒಂದು ಉದ್ಯಮದ ರೂಪದಲ್ಲಿರುವುದಿಲ್ಲ. ಅಲ್ಲದೆ, ಅಗತ್ಯವಿರುವಷ್ಟು ಉದ್ಯೋಗವನ್ನು ನಿರೀಕ್ಷಿತ ಮಟ್ಟದಲ್ಲಿ ಕಲ್ಪಿಸಿರುವುದಿಲ್ಲ. ಪ್ರವಾಸೋದ್ಯಮ ಎಂದರೆ ಉತ್ತಮವಾಗಿ ತರಬೇತಿ ಹೊಂದಿದ, ವಿವಿಧ ಭಾಷೆಯಲ್ಲಿ ಪ್ರವಾಸಿ ಸ್ಥಳದ ಬಗ್ಗೆ ವಿವರವಾದ ಮಾಹಿತಿ ನೀಡುವ ಉತ್ತಮ ಮಾರ್ಗದರ್ಶಿಗಳು ಇರಬೇಕು. ಪ್ರವಾಸಿ ವಾಹನಗಳನ್ನು ನಿರ್ವಹಿಸುವ ವ್ಯವಸ್ಥೆ ಇರಬೇಕು.

ಪ್ರವಾಸಿಗರೊಂದಿಗೆ ಸೌಜನ್ಯದಿಂದ ವರ್ತಿಸುವ ಸಿಬ್ಬಂದಿಗಳಿರಬೇಕು. ಪ್ರವಾಸೋದ್ಯಮವನ್ನು ಲಾಭದಾಯಕವಾಗಿ ನಡೆಸುವ ವ್ಯವಹಾರಿಕ ಜ್ಞಾನ ಇರಬೇಕು. ಸರ್ಕಾರವು ಪ್ರವಾಸಿ ತಾಣಗಳಲ್ಲಿ ರಸ್ತೆ, ಶೌಚಾಲಯ ಇತ್ಯಾದಿ ಮೂಲಸೌಕರ್ಯಗಳನ್ನು ಒದಗಿಸಬಹುದು. ಆದರೆ, ಪ್ರವಾಸಿ ಸ್ಥಳ ಮತ್ತು ಪ್ರವಾಸಿಗರ ಮಧ್ಯೆ ಇರುವ ಮುಖ್ಯ ಕೊಂಡಿಯಾದ ಭಾವನಾತ್ಮಕವಾಗಿ ಬೆಸೆಯುವ ಮಾನವ ಸಂಪನ್ಮೂಲವನ್ನು ಸೃಜಿಸಲಾಗುವುದಿಲ್ಲ.

ಈ ಹಿನ್ನೆಲೆಯಲ್ಲಿ ಮಾನವ ಸಂಪನ್ಮೂಲವನ್ನು ನಿರಂತರವಾಗಿ ತರಬೇತಿಯ ಮುಖಾಂತರ ಉತ್ತೇಜಿಸಲು ಖಾಸಗಿ ಸಹಭಾಗಿತ್ವದಲ್ಲಿ ಒಂದು ಪ್ರವಾಸೋದ್ಯಮ ವಿಶ್ವವಿದ್ಯಾನಿಲಯವನ್ನು ಐತಿಹಾಸಿಕ ಸ್ಥಳವಾದ ಹಂಪಿಯಲ್ಲಿ ಆರಂಭಿಸಲು ಉದ್ದೇಶಿಸಿ 3 ಕೋಟಿ ರು ಒದಗಿಸಲಾಗುವುದು.

ಪ್ರವಾಸೋದ್ಯಮದ ಮೂಲಕ ಉದ್ಯೋಗ ಸೃಷ್ಟಿಗೆ ಆದ್ಯತೆ

ಪ್ರವಾಸೋದ್ಯಮದ ಮೂಲಕ ಉದ್ಯೋಗ ಸೃಷ್ಟಿಗೆ ಆದ್ಯತೆ

* ಪ್ರವಾಸೋದ್ಯಮದ ಮೂಲಕ ಉದ್ಯೋಗ ಸೃಷ್ಟಿಗೆ ಆದ್ಯತೆ.

* ಈ ವರ್ಷ ಬೇಲೂರು, ಹಂಪಿ ಮತ್ತು ವಿಜಯಪುರದಲ್ಲಿ ಪ್ರವಾಸೋದ್ಯಮದ ಸಮಗ್ರ ಅಭಿವೃದ್ಧಿಗೆ ಸಂಕಲ್ಪ. ಈ ನಿಟ್ಟಿನಲ್ಲಿ ಯುವಕ ಯುವತಿಯರಿಗೆ ಕೌಶಲ್ಯ ತರಬೇತಿಗಾಗಿ ಮುಂದೆ ಬರುವ ಖಾಸಗಿ ತರಬೇತಿ ಸಂಸ್ಥೆಗಳಿಗೆ ತಲಾ 60 ಲಕ್ಷ ರೂ.ಗಳ ಷೇರು ಬಂಡವಾಳ ಹೂಡಿಕೆ; ಈ ಮೂರು ಪ್ರವಾಸಿ ಕೇಂದ್ರಗಳಲ್ಲಿ ಪರಿಸರ ಹಾಗೂ ಆಹಾರದ ಶುದ್ಧತೆಯನ್ನು ಕಾಪಾಡಲು ಸರ್ಕಾರಿ ಸ್ಥಳೀಯ ಸಂಸ್ಥೆಗಳಿಗೆ 20 ಕೋಟಿ ರೂ. ಅನುದಾನ.

ಕೆ.ಎಸ್.ಟಿ.ಡಿ.ಸಿ ಸಂಸ್ಥೆಗೆ ಹೋಟೆಲ್ ಸೌಲಭ್

ಕೆ.ಎಸ್.ಟಿ.ಡಿ.ಸಿ ಸಂಸ್ಥೆಗೆ ಹೋಟೆಲ್ ಸೌಲಭ್

ಕೆ.ಎಸ್.ಟಿ.ಡಿ.ಸಿ ಸಂಸ್ಥೆಗೆ ಹೋಟೆಲ್ ಸೌಲಭ್ಯ ಕಲ್ಪಿಸಲು 80 ಕೋಟಿ ರೂ.

ಪ್ರಮುಖ ಹೆದ್ದಾರಿಗಳಲ್ಲಿ ಪ್ರವಾಸಿಗರಿಗಾಗಿ ಮೂರು ಮಾದರಿ ರಸ್ತೆ ಬದಿ ಸೌಲಭ್ಯಗಳ (Model way side Facilities) ನಿರ್ಮಾಣ.

ಗಗನಚುಕ್ಕಿ ಮತ್ತು ಭರಚುಕ್ಕಿ ಜಲಪಾತ ಪ್ರದೇಶ

ಗಗನಚುಕ್ಕಿ ಮತ್ತು ಭರಚುಕ್ಕಿ ಜಲಪಾತ ಪ್ರದೇಶ

* ಜಗತ್ಪ್ರಸಿದ್ಧ ಗಗನಚುಕ್ಕಿ ಮತ್ತು ಭರಚುಕ್ಕಿ ಜಲಪಾತ ಪ್ರದೇಶಗಳಲ್ಲಿ ಪ್ರವಾಸಿಗರಿಗೆ ಅನುಕೂಲವಾಗುವ ಹೆಚ್ಚುವರಿ ಪ್ರವಾಸಿ ಸೌಲಭ್ಯ ಒದಗಿಸಲು 5 ಕೋಟಿ ರೂ. ಅನುದಾನ.

* ರಾಮನಗರದ ಬಳಿ ಆರ್ಟ್ಸ್ ಅಂಡ್ ಕ್ರಾಫ್ಟ್ ವಿಲೇಜ್ ಮತ್ತು ಕಣ್ವ ಜಲಾಶಯದ ಪ್ರದೇಶದಲ್ಲಿ ಚಿಲ್ಡ್ರನ್ಸ್ ವರ್ಲ್ಡ್ ಯೋಜನೆ ಖಾಸಗಿ ಸಹಭಾಗಿತ್ವದೊಂದಿಗೆ ಅಭಿವೃದ್ಧಿ.

500 ಕೊಠಡಿಗಳ ಸೌಲಭ್ಯವಿರುವ 3 ಸ್ಟಾರ್ ಹೋಟೆಲ್‌

500 ಕೊಠಡಿಗಳ ಸೌಲಭ್ಯವಿರುವ 3 ಸ್ಟಾರ್ ಹೋಟೆಲ್‌

500 ಕೊಠಡಿಗಳ ಸೌಲಭ್ಯವಿರುವ 3 ಸ್ಟಾರ್ ಹೋಟೆಲ್‌ಗಳನ್ನು ತೆರೆಯಲು ಮುಂದೆ ಬರುವ ಖಾಸಗಿ ಕಂಪನಿಗಳಿಗೆ 3 ಕೋಟಿ ರೂ.ಗಳ ಷೇರು ಬಂಡವಾಳವನ್ನು ಕೊಡಲಾಗುವುದು. ಸರ್ವಿಸ್ ಅರ್ಪಾಟ್‌ಮೆಂಟ್‌ಗಳನ್ನು ಕಟ್ಟಲು ಮುಂದೆ ಬಂದಲ್ಲಿ, ಆ ಸಂಸ್ಥೆಗಳಿಗೆ ಶೇ.30ರಷ್ಟು ಷೇರು ಬಂಡವಾಳವನ್ನು Term Sheet ಆಧಾರದ ಮೇಲೆ ನೀಡಲಾಗುವುದು. ಇದಲ್ಲದೆ, ಅಮ್ಯೂಸ್‌ಮೆಂಟ್ ಪಾರ್ಕ್, ಜಲಕ್ರೀಡೆ ರೀತಿಯ ಸೌಲಭ್ಯಗಳನ್ನು ಅಭಿವೃದ್ಧಿಪಡಿಸುವ ಖಾಸಗಿ ಕಂಪನಿಗಳಲ್ಲಿ ಶೇ.30ರಷ್ಟು ಷೇರು ಬಂಡವಾಳ ಹೂಡಲಾಗುವುದು

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Karnataka Budget 2018-19 : Finance minister, Chief Minister HD Kumaraswamy in his maiden Budget has announced many reforms and development in Tourism Department.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more