ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಿದ್ದರಾಮಯ್ಯ ಬಜೆಟ್: ಯಾವುದು ಏರಿಕೆ? ಯಾವುದು ಇಳಿಕೆ?

By Mahesh
|
Google Oneindia Kannada News

ಬೆಂಗಳೂರು, ಮಾರ್ಚ್ 18: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶುಕ್ರವಾರ (ಮಾರ್ಚ್ 18) 11ನೇ ಬಾರಿ ಬಜೆಟ್ ಮಂಡಿಸಿದರು. ಮುಖ್ಯಮಂತ್ರಿಯಾಗಿ ನಾಲ್ಕನೇ ಬಾರಿಗೆ ಬಜೆಟ್ ಮಂಡಿಸಿದ ಸಿದ್ದರಾಮಯ್ಯ ಅವರು ಮನರಂಜನಾ ತೆರಿಗೆ ಹೆಚ್ಚಳ ಮಾಡಿದ್ದಾರೆ, ಅಗತ್ಯ ವಸ್ತುಗಳ ಮೇಲಿನ ತೆರಿಗೆ ಇಳಿಕೆ ಮಾಡುವ ಮೂಲಕ ಸಮತೋಲನ ಕಾಯ್ದುಕೊಳ್ಳಲು ಯತ್ನಿಸಿದ್ದಾರೆ.

ನಿರೀಕ್ಷೆಯಂತೆ ಕೃಷಿ ಉತ್ಪನ್ನಗಳ ಮೇಲಿನ ತೆರಿಗೆ ಇಳಿಕೆಯಾಗಿದ್ದು, ಕಾಫಿ, ಟೀ, ರಬ್ಬರ್ ಬೆಳೆಗಳ ಮೇಲಿನ ವರಮಾನ ತೆರಿಗೆ ರದ್ದು ಮಾಡಿರುವುದು ವಿಶೇಷ. ಮದ್ಯ ಮೇಲಿನ ಸುಂಕವನ್ನು ಹೆಚ್ಚಳ ಮಾಡಲಾಗಿದ್ದು, ಬಿಯರ್ ಮೇಲಿನ ಸುಂಕದ ದರದಲ್ಲಿ 5 ರು ನಿಂದ 10 ರುಗೆ ಏರಿಕೆ ಮಾಡಲಾಗಿದ್ದು, ಮದ್ಯ ಮಾರಾಟ ಲೈಸನ್ಸ್ ಶುಲ್ಕದಲ್ಲಿ ಶೇ25ರಷ್ಟು ಏರಿಸಲಾಗಿದೆ. [ಕರ್ನಾಟಕ ಬಜೆಟ್ 2016-17, ಮುಖ್ಯಾಂಶಗಳು]

 what will get costlier & what will get cheaper?

ಏರಿಕೆ
* ಡಿಟಿಎಚ್ ಸೇವೆ ದುಬಾರಿ, ಡಿಟಿಎಚ್ ಮೇಲಿನ ತೆರಿಗೆ ಶೇ.6ರಿಂದ ಶೇ.10ಕ್ಕೆ ಏರಿಕೆ
* ಮನರಂಜನಾ ತೆರಿಗೆ ಶೇ 6ರಷ್ಟು ಏರಿಕೆ.
* ಮೋಟಾರು ವಾಹನ ಮೇಲಿನ ತೆರಿಗೆ ಹೆಚ್ಚಳ.
* ಎಲೆಕ್ಟ್ರಿಕ್ ಕಾರು ಸಂಪೂರ್ಣ ತೆರಿಗೆ ಮುಕ್ತ.
* ವಿಶೇಷ ಪರವಾನಗಿಯ ಲಕ್ಸುರಿ ವಾಹನ ಮೇಲಿನ ತೆರಿಗೆ ಏರಿಕೆ
* ಎಥನಾಲ್ ಹೊರತುಪಡಿಸಿ ಸ್ಪಿರಿಟ್ ರಫ್ತಿನ ಮೇಲೆ ಪ್ರತಿ ಲೀಟರ್‌ಗೆ 2 ರು ನಂತೆ ಹಾಗೂ ಆಮದಿನ ಮೇಲೆ ಪ್ರತಿ ಲೀಟರ್‌ಗೆ 1 ರು ನಂತೆ ಆಡಳಿತಾತ್ಮಕ ಶುಲ್ಕ. [ಸಿದ್ದರಾಮಯ್ಯ ಬಜೆಟ್ಟಿನಲ್ಲಿ ಬೆಂಗಳೂರಿಗೆ ಸಿಕ್ಕಿದ್ದೇನು?]
* ಅಖಿಲ ಭಾರತ ಪ್ರವಾಸಿ ವಾಹನಗಳ ತೆರಿಗೆ ಪ್ರತಿ ಆಸನಕ್ಕೆ 2,750 ರು ನಿಂದ 3,500 ರು.ಗೆ ಏರಿಕೆ
* ಮದ್ಯರಹಿತ ಮೃದು ಪಾನೀಯಗಳ ಮೇಲಿನ ತೆರಿಗೆ ಶೇ.14.5ರಿಂದ ಶೇ.20ಕ್ಕೆ ಏರಿಕೆ
* ಪೆಟ್ರೋಲ್‌ ಮೇಲಿನ ತೆರಿಗೆ ದರ ಶೇಕಡ 26ರಿಂದ 30ಕ್ಕೆ ಹೆಚ್ಚಳ,
* ಡೀಸೆಲ್‌ ಮೇಲಿನ ತೆರಿಗೆ ದರ ಶೇಕಡ 16.65ರಿಂದ ಶೇಕಡ 19ಕ್ಕೆ ಹೆಚ್ಚಳ

* ಬಜೆಟ್ ಪರಿಣಾಮ ಪೆಟ್ರೋಲ್ ಬೆಲೆ ಕರ್ನಾಟಕದಲ್ಲಿ 1.89 ರು ಹಾಗೂ ಡೀಸೆಲ್ ಬೆಲೆ 0.89 ಪ್ರತಿ ಲೀಟರ್ ಗೆ ಹೆಚ್ಚಳ.
* ಬೆಂಗಳೂರಿನ ಇಂದಿನ ದರ ಪೆಟ್ರೋಲ್ ಪ್ರತಿ ಲೀಟರ್ ಗೆ 62.01 ರು. ಡೀಸೆಲ್ 52.01 ರು ನಷ್ಟಿದೆ.
ಬೆಳಗಾವಿ, ಬೀದರ್, ವಿಜಯಪುರದಲ್ಲಿ ಐಟಿ ಪಾರ್ಕ್
* ಮದ್ಯದ ಮೇಲಿನ ಅಬಕಾರಿ ಸುಂಕ 45 ರು ನಿಂದ 50 ರು ಹೆಚ್ಚಳ
* ಬಿಯರ್ ಮೇಲಿನ ಅಬಕಾರಿ ಸುಂಕ 5 ರು ನಿಂದ 10 ರುಗೆ ಹೆಚ್ಚಳ

ಇಳಿಕೆ: [ಕೇಂದ್ರ ಬಜೆಟ್ 2016: ಯಾವುದು ಅಗ್ಗ? ಯಾವುದು ತುಟ್ಟಿ?]
* ಶೇಂಗಾ, ಗುರೆಳ್ಳು, ಬೆಳ್ಳುಳ್ಳಿ, ಅಗಸೆ, ಕೊಬ್ಬರಿ, ಹುರಿಗಡಲೆಯಿಂದ ತಯಾರಿಸಿದ ಚಟ್ನಿಪುಡಿ ಮೇಲಿನ ತೆರಿಗೆ ಶೇ.14.5ರಿಂದ ಶೇ 5.5ಕ್ಕೆ ಇಳಿಕೆ
* ಪ್ರೆಷರ್‌ಕುಕ್ಕರ್, ಕಟ್ಲರ್ ಹೊರತುಪಡಿಸಿ ಇತರೆ ಅಲ್ಯೂಮಿನಿಯಂ ಗೃಹೋಪಯೋಗಿ ಪಾತ್ರೆಗಳಿಗೆ ತೆರಿಗೆ ವಿನಾಯ್ತಿ
* ನಿಕ್ಕಲ್, ಟೈಟಾನಿಯಂ ವಸ್ತುಗಳ ಮೇಲಿನ ತೆರಿಗೆ ಇಳಿಕೆ
* ಸೆಟ್‌ಟಾಪ್ ಬಾಕ್ಸ್ ಮೇಲಿನ ತೆರಿಗೆ ಶೇ.14.5ರಿಂದ ಶೇ.5.5ಕ್ಕೆ ಇಳಿಕೆ.
* ಸೆಟ್ ಅಪ್ ಬಾಕ್ಸ್ ಮಲ್ಟಿ ಮೀಡಿಯ ಸ್ಪೀಕರ್‌, ಹೆಲ್ಮೆಟ್‌ ಮೇಲಿನ ದರ ಇಳಿಕೆ, ತೆರಿಗೆ ಶೇ.14.5ರಿಂದ ಶೇ.5.5ಕ್ಕೆ ಇಳಿಕೆ
* ಹೊಸ ಬೆಳಕು ಯೋಜನೆಗೆ ಇಂಬು ನೀಡಲು ಎಲ್ ಇಡಿ ಮೇಲಿನ ತೆರಿಗೆ ಇಳಿಕೆ
* ವೈದ್ಯಕೀಯ ಉಪಕರಣ ಮೇಲಿನ ತೆರಿಗೆ ಇಳಿಕೆ.
* ಎಲೆಕ್ಟ್ರಿಕ್ ಕಾರು ಸಂಪೂರ್ಣ ತೆರಿಗೆ ಮುಕ್ತ.
* ಕಾಫಿ, ಟೀ, ರಬ್ಬರ್ ಮತ್ತು ಇತರೆ ತೋಟದ ಬೆಳೆಗಳ ಮೇಲಿನ ಕೃಷಿ ವರಮಾನ ತೆರಿಗೆ ರದ್ದು
* ರಬ್ಬರ್‌ಷೀಟ್ ಮಾಡುವ ಹಸ್ತ ಚಾಲಿತ ಯಂತ್ರದ ಮೇಲಿನ ತೆರಿಗೆ ಶೇ.14.5ರಿಂದ ಶೇ.5.5ಕ್ಕೆ ಇಳಿಕೆ
* ಭತ್ತ, ಬೇಳೆಕಾಳು, ರಾಗಿ, ಧಾನ್ಯ ಮೇಲಿನ ತೆರಿಗೆ ವಿನಾಯಿತಿ ಮುಂದುವರಿಕೆ
* ಹತ್ತಿ ಮೇಲಿನ ತೆರಿಗೆ ಶೇ.5ರಿಂದ ಶೇ.2ಕ್ಕೆ ಇಳಿಕೆ.
* ಕಾಗದ, ಕಾಗದದ ಬೋರ್ಡ್‌ನಿಂದ ತಯಾರಿಸಿದ ಕಚೇರಿ ಫೈಲ್ಸ್ ಮೇಲಿನ ತೆರಿಗೆ ಶೇ.14.5ರಿಂದ ಶೇ.5.5ಕ್ಕೆ ಇಳಿಕೆ
* ಒಪ್ಪಂದ ವಾಹನ ಮೇಲಿನ ತೆರಿಗೆ ಇಳಿಕೆ
* ವಿದ್ಯುತ್ ಚಾಲಿತ ವಾಹನ ಮೇಲಿನ ತೆರಿಗೆ ಸಂಪೂರ್ಣ ವಿನಾಯಿತಿ.

English summary
A seasoned Finance Minister Siddaramaiah has tabled Karnataka Budget 2016-17: Post budget, here is the list of what becomes expensive and cheaper.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X