ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಜೆಟ್‌ನಲ್ಲಿ ಕನ್ನಡ ಭಾಷೆಗೆ ಸಿದ್ದರಾಮಯ್ಯ ಕೊಟ್ಟಿದ್ದೇನು?

|
Google Oneindia Kannada News

ಬೆಂಗಳೂರು, ಮಾರ್ಚ್ 18 : 2016-17ನೇ ಸಾಲಿನ ಬಜೆಟ್ ಮಂಡನೆ ಮಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 'ವಿಶ್ವ ಕನ್ನಡ ಸಮ್ಮೇಳ' ಆಯೋಜನೆ ಮಾಡುವುದಾಗಿ ಘೋಷಣೆ ಮಾಡಿದ್ದಾರೆ. ಬಜೆಟ್‌ನಲ್ಲಿ ಇದಕ್ಕಾಗಿ 30 ಕೋಟಿ ರೂ. ಹಣ ಮೀಸಲಾಗಿಟ್ಟಿದ್ದಾರೆ.

ಮುಖ್ಯಮಂತ್ರಿಯಾಗಿ 4ನೇ ಬಾರಿಗೆ ಬಜೆಟ್ ಮಂಡನೆ ಮಾಡಿದ ಸಿದ್ದರಾಮಯ್ಯ ಅವರು ಕನ್ನಡ ಮತ್ತು ಸಂಸ್ಕೃತಿಗೆ ನೀಡಿದ ಕೊಡುಗೆ ಏನು? ಎಂಬ ವಿವರಗಳು ಇಲ್ಲಿವೆ. [ಸಿದ್ದರಾಮಯ್ಯ ಬಜೆಟ್: ಯಾವುದು ಏರಿಕೆ? ಯಾವುದು ಇಳಿಕೆ?]

* ಕರ್ನಾಟಕ ಏಕೀಕರಣದ 60ನೇ ವರ್ಷಾಚರಣೆ ಅಂಗವಾಗಿ ವಿಶ್ವ ಕನ್ನಡ ಸಮ್ಮೇಳನ ನಡೆಸಲು ಸಿದ್ದರಾಮಯ್ಯ 30 ಕೋಟಿ ಅನುದಾನ ಮೀಸಲಾಗಿಟ್ಟಿದ್ದಾರೆ. [ಸಿದ್ದರಾಮಯ್ಯ ಬಜೆಟ್: ಕೈಗಾರಿಕೆಗಳಿಗೆ ಸಿಕ್ಕಿದ್ದೇನು?]

kannada

* ಕನ್ನಡದ ಪ್ರಮುಖ ಬರಹಗಳನ್ನು ಸಂರಕ್ಷಿಸಿ, ಗಣಕೀಕರಣಗೊಳಿಸಿ ಆನ್‌ಲೈನ್ ಮೂಲಕ ಪ್ರಸಾರ ಮತ್ತು ಪ್ರಕಟಣೆ ಮಾಡಲು 2.5 ಕೋಟಿ ರೂ. ನೀಡಿದ್ದಾರೆ. [ಆರೋಗ್ಯ ಕ್ಷೇತ್ರಕ್ಕೆ ವಿಶೇಷ ಕೊಡುಗೆ ನೀಡಿದ ಸಿದ್ದರಾಮಯ್ಯ]

* ಕರ್ನಾಟಕ ಥಿಯಾಲಾಜಿಕಲ್ ಕಾಲೇಜಿನ ಮೂಲಕ 'ಕನ್ನಡಕ್ಕೆ ಬಾಸೆಲ್ ಮಿಷನರಿಯ ಕೊಡುಗೆ' ಕುರಿತು ಸಂಶೋಧನೆ ನಡೆಸಲು 2.5 ಕೋಟಿ ರೂ.

* ಮಂಗಳೂರಿನಲ್ಲಿ ಕೊಂಕಣಿ ಸಂಸ್ಕೃತಿ ಕುರಿತ ಅಂತರರಾಷ್ಟ್ರೀಯ ವಸ್ತು ಸಂಗ್ರಹಾಲಯವನ್ನು 2.5 ಕೋಟಿ ರೂ. ವೆಚ್ಚದಲ್ಲಿ ಸ್ಥಾಪನೆ ಮಾಡಲಾಗುತ್ತದೆ.

* ಹಾವೇರಿ ಜಿಲ್ಲೆ, ಸವಣೂರು ತಾಲೂಕಿನ ಸವಣೂರಿನಲ್ಲಿ ನವಾಬರ ಕಾಲದ ಸ್ಮಾರಕ ಕಟ್ಟಡಗಳನ್ನು ಸಂಗ್ರಹಾಲಯಗಳನ್ನಾಗಿ ಪರಿವರ್ತಿಸಲು ಮತ್ತು ಆಧುನೀಕರಣಗೊಳಿಸಲು 1 ಕೋಟಿ ರೂ. ನೀಡಲಾಗುತ್ತದೆ.

* ಯಾದಗಿರಿ ಜಿಲ್ಲೆ, ಶಹಾಪುರ ತಾಲೂಕಿನ ಶಿರವಾಳದಲ್ಲಿರುವ ರಾಷ್ಟ್ರಕೂಟ ಕಾಲದ 47 ಸ್ಮಾರಕ ಸಮುಚ್ಛಯಗಳ ಸಂರಕ್ಷಣೆಗೆ ಕ್ರಮ. 3 ಕೋಟಿ ರೂ ಮೀಸಲು.

* 3 ಕೋಟು ರೂ. ವೆಚ್ಚದಲ್ಲಿ ಬೆಳಗಾವಿ ನಗರದ ಕೋಟೆಯ ಸಂರಕ್ಷಣೆ ಮತ್ತು ಅಭಿವೃದ್ಧಿಗೆ ಕ್ರಮ. ಚಾಮರಾಜನಗರದ ಚಾಮರಾಜೇಶ್ವರ ದೇವಾಲಯದ ಅಭಿವೃದ್ಧಿಗೆ ಕ್ರಮ 1 ಕೋಟಿ ಅನುದಾನ ಮೀಸಲು

* ಕೊಡಗು ಜಿಲ್ಲೆಯ ಅಂದಿನ ಚೀಫ್ ಕಮೀಷನರ್ ಕಚೇರಿಯ ಪ್ರಮುಖ ದಾಖಲೆಗಳ ಗಣಕೀಕರಣಕ್ಕೆ 1 ಕೋಟಿ ಮೀಸಲು. ಕರ್ನಾಟಕ ಜನಪದ ಪರಿಷತ್ತಿಗೆ 2 ಕೋಟಿ ಅನುದಾನ. ಬೆಂಗಳೂರು ನಗರದಲ್ಲಿ ಮಹರ್ಷಿ ವಾಲ್ಮೀಕಿ ಪ್ರತಿಮೆ ಸ್ಥಾಪನೆಗೆ 1 ಕೋಟಿ ರೂ.ಗಳು.

* ಮಡಿವಾಳ ಮಾಚಿದೇವರ ಜನ್ಮಸ್ಥಳವಾದ ದೇವರ ಹಿಪ್ಪರಗಿ ಅಭಿವೃದ್ದಿಗೆ ಪ್ರತಿ ವರ್ಷ 3 ಕೋಟಿ ಅನುದಾನ. ಸರ್ಕಾರದ ವತಿಯಿಂದ ಮಹಾವೀರ ಜಯಂತಿ ಆಚರಣೆಗೆ ಕ್ರಮ. ಗಡಿನಾಡು ಅಭಿವೃದ್ಧಿ ಪ್ರಾಧಿಕಾರಕ್ಕೆ 25 ಕೋಟಿ ಅನುದಾನ.

English summary
Karnataka Chief Minister and Finance Minister Siddaramaiah has tabled Karnataka Budget 2016-17 on Friday, March 18, 2016. Share for Kannada and Culture department in budget.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X