ಕರ್ನಾಟಕ ಬಜೆಟ್ 2016-17, ಮುಖ್ಯಾಂಶಗಳು

Posted By:
Subscribe to Oneindia Kannada

ಬೆಂಗಳೂರು, ಮಾರ್ಚ್ 18 : ಹಣಕಾಸು ಖಾತೆಯನ್ನು ಹೊಂದಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 2016-17ನೇ ಸಾಲಿನ ಬಜೆಟ್ ಮಂಡನೆ ಮಾಡಿದ್ದಾರೆ. ಮುಖ್ಯಮಂತ್ರಿಯಾಗಿ 4ನೇ ಬಾರಿ ಬಜೆಟ್ ಮಂಡನೆ ಮಾಡಿದ ಸಿದ್ದರಾಮಯ್ಯ ಅವರು ಕೃಷಿ ಕ್ಷೇತ್ರಕ್ಕೆ ಹೆಚ್ಚಿನ ಒತ್ತು ನೀಡಿದ್ದಾರೆ. [ಕರ್ನಾಟಕ ಬಜೆಟ್ ಏನಿದೆ?, ಏನಿಲ್ಲ?]

ಶುಕ್ರವಾರ ಬೆಳಗ್ಗೆ 11.30ಕ್ಕೆ ವಿಧಾನಸೌಧದಲ್ಲಿ ಬಜೆಟ್ ಅಧಿವೇಶನ ಆರಂಭವಾಯಿತು. ಮುಖ್ಯಮಂತ್ರಿಯಾಗಿ 4ನೇ ಬಾರಿ ಹಾಗೂ ಒಟ್ಟಾರೆಯಾಗಿ 11ನೇ ಬಾರಿಗೆ ಸಿದ್ದರಾಮಯ್ಯ ಅವರು ಬಜೆಟ್ ಮಂಡನೆ ಮಾಡಿದರು. [ಕರ್ನಾಟಕ ಬಜೆಟ್ 2015-16 : ಮುಖ್ಯಾಂಶಗಳು]

siddaramaiah

11 ಗಂಟೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಜೆಟ್ ಪ್ರತಿ ಇರುವ ಸೂಟ್‌ಕೇಸ್ ಹಿಡಿದು ವಿಧಾನಸೌಧಕ್ಕೆ ಆಗಮಿಸಿದರು. ಮಂತ್ರಿ ಪರಿಷತ್ ಸಭೆಯಲ್ಲಿ ಬಜೆಟ್‌ಗೆ ಒಪ್ಪಿಗೆ ಪಡೆದ ಬಳಿಕ ಅಧಿವೇಶನ ಆರಂಭವಾಯಿತು. [ಕೇಂದ್ರ ಬಜೆಟ್ 2016: ಯಾವುದು ಅಗ್ಗ? ಯಾವುದು ತುಟ್ಟಿ?]

ಸಿದ್ದರಾಮಯ್ಯ ಬಜೆಟ್ ಭಾಷಣದ ಮುಖ್ಯಾಂಶಗಳು

* 'ಸರ್ಕಾರ ಸಾಮಾಜಿಕ ನ್ಯಾಯದ ಜೊತೆಗೆ ನಾಡಿನ ಅಭಿವೃದ್ಧಿಗೆ ಮಿಡಿಯುತ್ತದೆ, ದುಡಿಯುತ್ತದೆ' ಎಂದು ಭಾಷಣ ಆರಂಭಿಸಿದರು. [ಸಿದ್ದರಾಮಯ್ಯ ಬಜೆಟ್ಟಿನಲ್ಲಿ ಬೆಂಗಳೂರಿಗೆ ಸಿಕ್ಕಿದ್ದೇನು?]
* 'ಬಂಡವಾಳ ಹೂಡಿಕೆದಾರರ ಸಮಾವೇಶ ನಡೆಸಿರುವುದು ನಮ್ಮ ಸಾಧನೆ. ಉದ್ಯಮಿಗಳು ನಮ್ಮ ಕಾರ್ಯವನ್ನು ಶ್ಲಾಘಿಸಿದ್ದಾರೆ'
* 'ಬರಪರಿಸ್ಥಿತಿಯಿಂದಾಗಿ ಈ ವರ್ಷ ಆಹಾರ ಉತ್ಪಾದನೆ ಶೇ 4ರಷ್ಟು ಕುಂಠಿತಗೊಳ್ಳುವ ಸಾಧ್ಯತೆ ಇದೆ ಎಂದು ಅಂದಾಜಿಲಾಗಿದೆ'
* ಬಜೆಟ್ ಗಾತ್ರ : 1,63,419 ಕೋಟಿ
* ರಾಜ್ಯದಲ್ಲಿ ಶೀಘ್ರದಲ್ಲೇ ಸುವರ್ಣ ಕೃಷಿ ಯೋಜನೆ ಜಾರಿ, ಯೋಜನೆಯಡಿ 100 ಮಾದರಿ ಗ್ರಾಮಗಳ ಅಭಿವೃದ್ಧಿ
* 25 ಜಿಲ್ಲೆಗಳ 129 ತಾಲೂಕುಗಳಲ್ಲಿ ಕೃಷಿಭಾಗ್ಯ ಯೋಜನೆ ಯಶಸ್ವಿಯಾಗಿದೆ
* ಕೃಷಿ ಇಲಾಖೆಗೆ 4,344 ಕೋಟಿ ರೂ. ಅನುದಾನ
* ಸಹಕಾರ ಇಲಾಖೆಗೆ 1463 ಕೋಟಿ ರೂ. ಅನುದಾನ ಮೀಸಲು
* ಶೇ 3ರಷ್ಟು ಬಡ್ಡಿದರದಲ್ಲಿ ಕೃಷಿ ಸಾಲ ನೀಡುವ ಯೋಜನೆ ಮುಂದುವರೆಸಲಾಗುತ್ತದೆ
* ನೀರಾವರಿ ಇಲಾಖೆಗೆ 14,477 ಕೋಟಿ ಅನುದಾನ ಮೀಸಲು. ಎತ್ತಿನಹೊಳೆ ಯೋಜನೆ ಜಾರಿಗೆ ಸಮನ್ವಯ ಸಮಿತಿ ರಚನೆ
* ಕಾರವಾರ ಬಂದರಿನಲ್ಲಿ ಅಲೆ ತಡೆಗೋಡೆ ನಿರ್ಮಾಣಕ್ಕೆ 128 ಕೋಟಿ ರೂ.ಗಳ ಯೋಜನೆ
* ಹೆಬ್ಬಾಳದ ಪಶುಸಂಗೋಪನೆ ಕೇಂದ್ರದಲ್ಲಿ ಲಸಿಕೆ ಉತ್ಪಾದನೆಗೆ 5 ಕೋಟಿ ರೂ. ಅನುದಾನ
* ರಾಗಿ, ಗೋಧಿ, ಅಕ್ಕಿ ಮತ್ತು ಬೇಳೆ ಕಾಳುಗಳ ಮೇಲಿನ ತೆರಿಗೆ ವಿನಾಯಿತಿ ಮುಂದುವರೆಸಲಾಗುತ್ತದೆ
* ದೇಸಿ ಗೋ ವಂಶದ ವೀರ್ಯ ಬ್ಯಾಂಕ್‌ ಸ್ಥಾಪನೆ ಮಾಡಲಾಗುತ್ತದೆ. ಮೇಕೆ ಮತ್ತು ಕುರಿಗಳಿಗೆ ಕೃತಕ ಗರ್ಭಧಾರಣೆಗಾಗಿ ವೀರ್ಯ ಬ್ಯಾಂಕ್‌ ಸ್ಥಾಪನೆ.
* ವಿಧವೆಯರು ಮತ್ತು ಮಹಿಳೆಯರಿಗೆ ಕುರಿ, ಮೇಕೆ ಸಾಕಾಣಿಕೆಗೆ ಪ್ರೋತ್ಸಾಹಧನ. ಹಾಸನದಲ್ಲಿ ಕೆಎಂಎಫ್‌ನಿಂದ ಪಶು ಆಹಾರ ಕೇಂದ್ರ ಸ್ಥಾಪನೆ
* ಮೀನುಗಾರಿಕಾ ಇಲಾಖೆಗೆ 302 ಕೋಟಿ ರೂ. ಅನುದಾನ ಮೀನುಗಾರಿಕೆ ಅಭಿವೃದ್ಧಿಗೆ ಕ್ರಮ. ಬಂದರುಗಳು ಹೂಳೆತ್ತಲು ಕ್ರಮ. ತಡೆಗೋಡೆ ನಿರ್ಮಾಣ. ಮಂಗಳೂರಿನ ಪಿಲಿಕುಳದಲ್ಲಿ 15 ಕೋಟಿ ರೂ ಓಷನೇನಿಯಂ ನಿರ್ಮಾಣ. ವಸತಿ ರಹಿತ ಮೀನುಗಾರರಿಗೆ ಮನೆ ಮಂಜೂರು
* ಕೃಷಿ ವರಮಾನ ತೆರಿಗೆ ರದ್ದು ಮಾಡಲಾಗುತ್ತದೆ. ವ್ಯಾಪಾರ ಉದ್ದಿಮೆ ನೋಂದಣಿ ಪತ್ರ 3 ದಿನದಲ್ಲಿ ಲಭ್ಯವಾಗಲಿದೆ. ಹತ್ತಿ ಮೇಲಿನ ತೆರಿಗೆ ಇಳಿಕೆ. ಕಾಫಿ, ಟೀ, ರಬ್ಬರ್‌ ಮೇಲಿನ ವರಮಾನ ತೆರಿಗೆ ರದ್ದು ಮಾಡಲಾಗುತ್ತದೆ.
* ಲಕ್ಸೂರಿ ಖಾಸಗಿ ವಾಹನಗಳ ಮೇಲಿನ ತೆರಿಗೆ ಪ್ರತಿ ಸೀಟ್‌ಗೆ 600 ರೂ.ನಿಂದ 900 ರೂಪಾಯಿಗೆ ಹೆಚ್ಚಳ. ಒಪ್ಪಂದದ ಮೇರೆಗಿನ ವಾಹನಗಳಿಗೆ ಪ್ರತಿ ಸೀಟ್‌ಗೆ 1000 ರೂ.ನಿಂದ 1,500 ರೂ.ಗೆ ಹೆಚ್ಚಳ
* ಎತ್ತಿನಹೊಳೆ ಮತ್ತು ಭದ್ರಾ ಮೇಲ್ದಂಡೆ ಯೋಜನೆಗೆ ಪ್ರತ್ಯೇಕ ನಿಗಮ ರಚನೆ ಮಾಡಲಾಗುತ್ತದೆ. ಬಯಲು ಸೀಮೆಯ ಜಿಲ್ಲೆಗಳಿಗಾಗಿ ಶಾಶ್ವತ ನೀರಾವರಿ ಯೋಜನೆಗಾಗಿ ರೂಪಿಸಲು ತಜ್ಞರ ಸಮಿತಿ ರಚನೆ ಮಾಡಲಾಗುತ್ತದೆ.
* ಹೋಬಳಿ ಮಟ್ಟದಲ್ಲಿ 125 ವಸತಿ ಶಾಲೆ ಆರಂಭ. ಹಂಪಿ ವಿವಿಯಲ್ಲಿ ಮಹರ್ಷಿ ವಾಲ್ಮೀಕಿ ಅಧ್ಯಯನ ಪೀಠ ಸ್ಥಾಪನೆ ಮಾಡಲಾಗುತ್ತದೆ.
* ಎಸ್‌.ಸಿ./ಎಸ್‌.ಟಿ.ವಿದ್ಯಾರ್ಥಿಗಳ ಭೋಜನಾ ವೆಚ್ಚ 800 ರಿಂದ 1000ಕ್ಕೆ ಏರಿಕೆ. [ಅಲ್ಪಸಂಖ್ಯಾತ, ಹಿಂದುಳಿದ ವರ್ಗಕ್ಕೆ ಸಿದ್ದು ಭರ್ಜರಿ ಬಳುವಳಿ]
* ಬೆಂಗಳೂರಿನ ಕೆ.ಸಿ.ಜನರಲ್ ಆಸ್ಪತ್ರೆಯಲ್ಲಿ 25 ಹಾಸಿಗೆಗಳ ವಿಶೇಷ ಡಯಾಲಿಸಿಸ್ ಘಟಕ ಸ್ಥಾಪನೆ
* ಕರ್ನಾಟಕ ವಿವಿಯಲ್ಲಿ ಡಾ.ಎಂ.ಎಂ.ಕಲಬುರ್ಗಿ ಸಂಶೋಧನಾ ಕೇಂದ್ರ ಸ್ಥಾಪನೆ
* ಬೆಂಗಳೂರಿನಲ್ಲಿ 51.65 ಕಿ.ಮೀ ಉದ್ದದ ಸಿಗ್ನಲ್ ಫ್ರೀ ಕಾರಿಡಾರ್ ನಿರ್ಮಾಣ, ಮುಖ್ಯಮಂತ್ರಿಗಳ ವಿಶೇಷ ಅನುದಾನದಲ್ಲಿ 112 ರಸ್ತೆಗಳ ಅಭಿವೃದ್ಧಿ
* ವಸತಿ ಇಲಾಖೆಗೆ 3,890 ರೂ. ಅನುದಾನ ನೀಡಲಾಗುತ್ತದೆ
* ಬಿಎಂಟಿಸಿಗೆ 660 ಹೊಸ ಬಸ್ ಖರೀದಿ ಮಾಡಲಾಗುತ್ತದೆ. ಬೆಂಗಳೂರಿನಲ್ಲಿ 3 ಹೊಸ ಬೆಂಗಳೂರು ಒನ್ ಕೇಂದ್ರ ಸ್ಥಾಪನೆ ಮಾಡಲಾಗುತ್ತದೆ.
* ಡಿಪ್ಲೋಮಾ ಮತ್ತು ಪಾಲಿಟೆಕ್ನಿಕ್‌ ಪರೀಕ್ಷೆ ಫ‌ಸ್ಟ್‌ ಕ್ಲಾಸ್‌ನಲ್ಲಿ ಪಾಸಾದವರಿಗೆ 20 ಸಾವಿರ ಪ್ರೋತ್ಸಾಹಧನ. ಸಿಎ ಪರೀಕ್ಷೆ ಪಾಸಾದವರಿಗ 50 ಸಾವಿರದಿಂದ 1 ಲಕ್ಷ ರೂಪಾಯಿ ಪ್ರೋತ್ಸಾಹ ಧನ ನೀಡಲಾಗುತ್ತದೆ.
* ಬೆಂಗಳೂರಿನ ಕೆರೆಗಳ ಅಭಿವೃದ್ಧಿಗೆ 100 ಕೋಟಿ ಅನುದಾನ, ನಗರದಲ್ಲಿ ಘನ ತ್ಯಾಜ್ಯ ನಿರ್ವಹಣೆಗೆ 500 ಕೋಟಿ ರೂ. ಅನುದಾನ ನೀಡಲಾಗುತ್ತದೆ. ಮಳೆ ನೀರು ಚರಂಡಿ ನಿರ್ಮಾಣಕ್ಕೆ 800 ಕೋಟಿ ರೂ. ನೀಡಿಕೆ.
* ಬೆಂಗಳೂರು ಅಭಿವೃದ್ಧಿಗೆ 6044 ಕೋಟಿ ರೂ ಅನುದಾನ. ಕೆಂಪೇಗೌಡ ಲೇಔಟ್‍ನ 10 ಸಾವಿರ ನಿವೇಶನವನ್ನು 2017ರ ಮಾರ್ಚ್ ಒಳಗೆ ಹಂಚಿಕೆ ಮಾಡಲಾಗುತ್ತದೆ. ಬೆಂಗಳೂರು-ಮೈಸೂರು ಆರುಪಥದ ರಸ್ತೆ ನಿರ್ಮಾಣದ ಭೂಸ್ವಾಧೀನಕ್ಕೆ 2,400 ಕೋಟಿ ರೂ.
* ಮುಖ್ಯಮಂತ್ರಿಗಳ ವಿಶೇಷ ಅನುದಾನದಡಿ ಮುಂದಿನ ಎರಡು ವರ್ಷಗಳಲ್ಲಿ ಬಿಬಿಎಂಪಿಗೆ 500 ಕೋಟಿ ಅನುದಾನ
* ತುಮಕೂರು ಜಿಲ್ಲೆಯ ಪಾವಗಡದಲ್ಲಿನ ಸೋಲಾರ್ ಪಾರ್ಕ್‌ನಲ್ಲಿ 2017ರ ಅಂತ್ಯಕ್ಕೆ 600 ಮೆಗಾವಾಟ್ ವಿದ್ಯುತ್ ಉತ್ಪಾದನೆ
* ಗರ್ಭಿಣಿಯರು ಮತ್ತು ಬಾಣಂತಿಯರಿಗೆ ಮೈಕ್ರೋನ್ಯೂಟ್ರಿಯಂಟ್ಸ್ ಒದಗಿಸಲು 42 ಕೋಟಿ ವೆಚ್ಚದಲ್ಲಿ
ಹಿಂದುಳಿದ ತಾಲೂಕುಗಳಲ್ಲಿ 'ಮಾತೃ ಪುಷ್ಠಿವರ್ಧಿನಿ' ಯೋಜನೆ ಜಾರಿಗೆ ತರಲಾಗುತ್ತದೆ
* ಬೆಂಗಳೂರಿನಲ್ಲಿ ಕೆ.ಆರ್.ಮಾರ್ಕೆಟ್, ಜಾನ್ಸನ್ ಮಾರ್ಕೆಟ್ ಮತ್ತು ರಸೆಲ್ ಮಾರ್ಕೆಟ್ ಅಭಿವೃದ್ಧಿ ಪಡಿಸಲಾಗುತ್ತದೆ.
* ಅಂಗಾಂಗ ದಾನವನ್ನು ಪ್ರೋತ್ಸಾಹಿಸಲು ವಿಶೇಷ ಕೋಷ ಸ್ಥಾಪನೆ
* ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆಗೆ 17,373 ಅನುದಾನ. ಬಿಸಿಯೂಟ ತಯಾರಕರ ಗೌರವ ಧನ 300 ರೂ. ಹೆಚ್ಚಳ. ಎಲ್ಲಾ ಸರ್ಕಾರಿ ಶಾಲೆಗಳಲ್ಲಿ ಯೋಗ ಶಿಕ್ಷಣಕ್ಕೆ ಪ್ರೋತ್ಸಾಹ
* ಮೈಸೂರು ನಗರದಲ್ಲಿ 60 ಕೋಟಿ ವೆಚ್ಚದಲ್ಲಿ ಜಿಲ್ಲಾಸ್ಪತ್ರೆ ನಿರ್ಮಾಣ
* ಬೆಂಗಳೂರಿನ ವಿವಿಧ ಪ್ರದೇಶದಲ್ಲಿ ಬಹುಮಹಡಿ ಪಾರ್ಕಿಂಗ್ ಕಟ್ಟಡ ನಿರ್ಮಾಣ. ಯಲಹಂಕದಲ್ಲಿ ಅನಿಲ ಆಧಾರಿತ ವಿದ್ಯುತ್ ಸ್ಥಾವರ ನಿರ್ಮಾಣ
* ಕೆಂಪೇಗೌಡ ಸ್ಮಾರಕ ಅಭಿವೃದ್ಧಿಗೆ 5 ಕೋಟಿ ಯೋಜನೆ
* ಎಚ್‌ಐವಿ ಪೀಡಿತ ಮಹಿಳೆಯರಿಗೆ 40 ಸಾವಿರ ಸಾಲ ಮತ್ತು 10 ಸಾವಿರ ಪ್ರೋತ್ಸಾಹ ಧನವನ್ನು ಧನಶ್ರೀ ಯೋಜನೆಯಡಿ ನೀಡಲಾಗುತ್ತದೆ.
* ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ)ನಿಂದ 3000 ಹೊಸ ಮನೆಗಳ ನಿರ್ಮಾಣ
* ಮಹಿಳಾ ಉದ್ಯಮ ಶೀಲತೆ ಪ್ರೋತ್ಸಾಹಕ್ಕೆ ಕ್ರಮ ಕೈಗೊಳ್ಳಲಾಗುತ್ತದೆ. ಮಂಗಳೂರು, ಬಳ್ಳಾರಿ, ಧಾರವಾಡ, ಮೈಸೂರಿನಲ್ಲಿ ಮಹಿಳಾ ಉದ್ಯಮಗಳ ಪಾರ್ಕ್‍ಗಳ ಸ್ಥಾಪನೆ ಮಾಡಲಾಗುತ್ತದೆ
* ಮಾಹಿತಿ ತಂತ್ರಜ್ಞಾನ ಇಲಾಖೆಗೆ 222 ಕೋಟಿ ರೂ. ಅನುದಾನ. ಬೆಳಗಾವಿ, ಬೀದರ್ ಮತ್ತು ದಾವಣಗೆರೆಯಲ್ಲಿ ಐಟಿ ಪಾರ್ಕ್ ನಿರ್ಮಾಣ
* ತುಮಕೂರು ಜಿಲ್ಲೆಯ ವಸಂತನರಸಾಪುರ ಕೈಗಾರಿಕಾ ಪ್ರದೇಶದಲ್ಲಿ 'ಜಪಾನೀಸ್‌ ಇಂಡಸ್ಟ್ರಿಯಲ್‌ ಟೌನ್‌ಷಿಪ್‌' ಅಭಿವೃದ್ಧಿ ನಿರ್ಮಾಣ
* ಕಾರವಾರ, ಚಾಮರಾಜನಗರ ಮತ್ತು ಮಡಿಕೇರಿಯಲ್ಲಿ ವೈದ್ಯಕೀಯ ಕಾಲೇಜು ಆರಂಭ. ಕಲಬುರಗಿ ವೈದ್ಯಕೀಯ ವಿಜ್ಞಾನ ಸಂಸ್ಥೆಯ ಆವರಣದಲ್ಲಿ 15 ಕೋಟಿ ವೆಚ್ಚದಲ್ಲಿ ಜಯದೇವ ಹೃದ್ರೋಗ ಸಂಸ್ಥೆಯ ಘಟಕ ನಿರ್ಮಾಣ.
* ಮೈಸೂರು ಜಿಲ್ಲೆಯ ಹುಣಸೂರು ಬಳಿ 150 ಎಕರೆ ಅರಣ್ಯ ಪ್ರದೇಶದಲ್ಲಿ 'ದೇವರಾಜ ಅರಸು ಬಿದಿರು ವನ' ಅಭಿವೃದ್ಧಿ ಮಾಡಲಾಗುತ್ತದೆ. ಸಂಶೋಧಕ ಎಂ.ಎಂ.ಕಲಬುರ್ಗಿ ಅವರ ಹೆಸರಿನಲ್ಲಿ ಸಂಶೋಧನಾ ಸಾಹಿತ್ಯ ಪ್ರಶಸ್ತಿ ಸ್ಥಾಪನೆ ಮಾಡಲಾಗುತ್ತದೆ.
* ಪೆಟ್ರೋಲ್‌ ಮೇಲಿನ ತೆರಿಗೆ ದರ 26 ರಿಂದ 30ಕ್ಕೆ, ಡೀಸೆಲ್‌ ಮೇಲಿನ ತೆರಿಗೆ ದರ 16.65ರಿಂದ ಶೇಕಡ 19ಕ್ಕೆ ಏರಿಕೆ
* ಕಾರವಾರ ಮತ್ತು ಬಂಟ್ವಾಳದಲ್ಲಿ ಹೊಸ ಕಾರಾಗೃಹ ನಿರ್ಮಾಣ. ಬೀದರ್‌ನಲ್ಲಿ ಸರ್ಕಾರಿ ಎಂಜಿನಿಯರಿಂಗ್‌ ಕಾಲೇಜು ಸ್ಥಾಪನೆ. ಹಾಸನದ ಅರಕಲಗೂಡಿನಲ್ಲಿ ಪಶುಆಹಾರ ಉತ್ಪಾದನಾ ಘಟಕ ಸ್ಥಾಪನೆ
* ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ 341 ಕೋಟಿ ರೂ. ಅನುದಾನ. ವಿಶ್ವ ಕನ್ನಡ ಸಮ್ಮೇಳನಕ್ಕೆ 30 ಕೋಟಿ ಯೋಜನೆ. ಬೆಳಗಾವಿ ಕೋಟೆ ಸಂರಕ್ಷಣೆಗೆ 3 ಕೋಟಿ, ಬೆಂಗಳೂರಿನಲ್ಲಿ ವಾಲ್ಮೀಕಿ ಮಹರ್ಷಿ ಪುತ್ತಳಿಗೆ 1 ಕೋಟಿ ಅನುದಾನ
* ಯುವಜನ ಮತ್ತು ಕ್ರೀಡಾ ಇಲಾಖೆಗೆ 170 ಕೋಟಿ ರೂ. ಅನುದಾನ. ಕಂಠೀರವ ಕ್ರೀಡಾಂಗಣ ಅಭಿವೃದ್ಧಿಗೆ 3 ಕೋಟಿ ರೂ. ಅನುದಾನ, ಕರಾವಳಿ ಪ್ರದೇಶದಲ್ಲಿ ಜಲಸಾಹಸ ಕ್ರೀಡಾ ಕೇಂದ್ರಕ್ಕೆ 6 ಕೋಟಿ ರೂಪಾಯಿ ಅನುದಾನ.
* ವಾರ್ತಾ ಇಲಾಖೆಗೆ 156 ಕೋಟಿ ರೂ. ಅನುದಾನ ನೀಡಿಕೆ. ಸಂಕಷ್ಟದಲ್ಲಿರುವ ಪತ್ರಕರ್ತರಿಗೆ 8 ಸಾವಿರ ರೂ> ಪ್ರೋತ್ಸಾಹ ಧನ ನೀಡಲಾಗುತ್ತದೆ. ಪ್ರತಿ ಜಿಲ್ಲೆಯಲ್ಲಿ 3 ಕೋಟಿ ವೆಚ್ಚದಲ್ಲಿ ಗಾಂಧಿ ಭವನ ನಿರ್ಮಾಣ ಮಾಡಲಾಗುತ್ತದೆ.
* ಸಾಲುಮರದ ತಿಮ್ಮಕ್ಕ ಹೆಸರಿನಲ್ಲಿ 3 ಸಾವಿರ ಕಿ.ಮೀ. ರಸ್ತೆಯಲ್ಲಿ ಸಸಿ ನಡೆಲಾಗುತ್ತದೆ. 12 ಲಕ್ಷ ವೈಯಕ್ತಿಕ ಶೌಚಾಲಯಗಳನ್ನು ನಿರ್ಮಾಣ ಮಾಡಲಾಗುತ್ತದೆ. ಹೈದರಾಬಾದ್ ಕರ್ನಾಟಕ ಅಭಿವೃದ್ಧಿ ನಿಗಮಕ್ಕೆ 1 ಸಾವಿರ ಕೋಟಿ, ಕರಾವಳಿ ಅಭಿವೃದ್ಧಿ ಪ್ರಾಧಿಕಾರಕ್ಕೆ 15 ಕೋಟಿ ಅನುದಾನ
* ರಾಜ್ಯದ 50 ಗರಡಿ ಮನೆಗಳಿಗೆ 5 ಲಕ್ಷ ರೂ. ಅನುದಾನ. ಅರ್ಜುನ, ದ್ರೋಣಾಚಾರ್ಯ, ರಾಜೀವ್ ಖೇಲ್ ರತ್ನ ಪ್ರಶಸ್ತಿ ಪಡೆದ ಸಾಧಕರಿಗೆ ಕೆಎಸ್ಆರ್‌ಟಿಸಿ ಬಸ್ಸುಗಳಲ್ಲಿ ಉಚಿತವಾಗಿ ಪ್ರಯಾಣಿಸಲು ಅವಕಾಶ
* ಬೆಂಗಳೂರಿನ ಹಾಕಿ ಕ್ರೀಡಾಂಗಣಕ್ಕೆ ಹೊಸ ಸ್ಪರ್ಶ ನೀಡಲಾಗುತ್ತದೆ. ಹೊಸ ಟರ್ಫ್ ಹಾಗೂ ಪ್ಲಡ್ ಲೈಟ್ ಅಳವಡಿಸಲು 3.5 ಕೋಟಿ ನೀಡಲಾಗುತ್ತದೆ. ಗ್ರಾಮೀಣ ಕ್ರೀಡೆ ಕಬಡ್ಡಿಗೆ ಉತ್ತೇಜ ನೀಡಲಾಗುತ್ತದೆ. 3.60 ಕೋಟಿ ವೆಚ್ಚದಲ್ಲಿ ಪ್ರತಿ ಜಿಲ್ಲೆಗೆ ಎರಡು ಕಬಡ್ಡಿ ಮ್ಯಾಟ್ ವಿತರಣೆ

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Karnataka Budget 2016-17 : Chief Minister and Finance Minister Siddaramaiah will preset 2016-17 budget on Friday, March 18, 2016.
Please Wait while comments are loading...