ಸಿದ್ದರಾಮಯ್ಯ ಬಜೆಟ್: 4.82 ಲಕ್ಷ ಉದ್ಯೋಗಸೃಷ್ಟಿ

Subscribe to Oneindia Kannada

ಬೆಂಗಳೂರು, ಮಾರ್ಚ್, 18: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 2016-17ನೇ ಸಾಲಿನ ಬಜೆಟ್ ಮಂಡನೆ ಮಾಡುತ್ತಿದ್ದಾರೆ. ಮುಖ್ಯಮಂತ್ರಿಯಾಗಿ 4ನೇ ಬಾರಿ ಸಿದ್ದರಾಮಯ್ಯ ಅವರು ಬಜೆಟ್ ಮಂಡಿಸುತ್ತಿದ್ದಾರೆ. ಹಾಗಾದರೆ ಸಿಎಂ ಸಿದ್ದರಾಮಯ್ಯ ಕೈಗಾರಿಕಾ ಮತ್ತು ಉದ್ಯೋಗ ಕ್ಷೇತ್ರಕ್ಕೆ ನೀಡಿದ ಕೊಡುಗೆಗಳೇನು? ಎಂಬುದರ ಸಂಪೂರ್ಣ ವಿವರ ಇಲ್ಲಿದೆ.

1,080 ಯೋಜನೆಗಳಲ್ಲಿ 4.82 ಲಕ್ಷ ಉದ್ಯೋಗಸೃಷ್ಟಿ ಮಾಡಲಾಗುತ್ತಿದೆ ಎಂದು ಸಿದ್ದರಾಮಯ್ಯ ತಿಳಿಸಿದ್ದಾರೆ. ಜತೆಗೆ ಬಂಡವಾಳ ಹೂಡಿಕೆಗೆ ಆದ್ಯತೆ ನೀಡಲಾಗುವುದು ಎಂದು ತಿಳಿಸಿದ್ದಾರೆ. [ಸಿದ್ದರಾಮಯ್ಯ ಬಜೆಟ್ಟಿನಲ್ಲಿ ಬೆಂಗಳೂರಿಗೆ ಸಿಕ್ಕಿದ್ದೇನು?]

karnataka


* ಕಳೆದ 2 ವರ್ಷಗಳಲ್ಲಿ 96,435 ಕೋಟಿ ರೂ ಬಂಡವಾಳ ರಾಜ್ಯದಲ್ಲಿ ಹೂಡಲಾಗಿದೆ.

* ಇನ್ವೆಸ್ಟ್‌ ಕರ್ನಾಟಕದಲ್ಲಿ 1.77 ಲಕ್ಷ ಕೋಟಿ ಬಂಡವಾಳ ಹೂಡಿಕೆಯಾಗಿದ್ದು ಸರ್ಕಾರದ ಸಾಧನೆ. [ಸಿದ್ದರಾಮಯ್ಯ ಬಜೆಟ್: ಯಾವುದು ಏರಿಕೆ? ಯಾವುದು ಇಳಿಕೆ?]

* ಕೈಗಾರಿಕೆಗೆ ಸಂಬಂಧಿಸಿ 1,080 ಯೋಜನೆಗಳಲ್ಲಿ 4.82 ಲಕ್ಷ ಉದ್ಯೋಗಸೃಷ್ಟಿ ಮಾಡಲಾಗುತ್ತಿದೆ.

* ಬಜೆಟ್ ನಲ್ಲಿ ಕೈಗಾರಿಕಾ ಮೂಲಸೌಕರ್ಯಕ್ಕಾಗಿ 175 ಕೋಟಿ ರೂ ಅನುದಾನ.

* ಬಂಡವಾಳ ಹೂಡಿಕೆ ಉತ್ಪಾದನಾ ವಲಯ ಸ್ಥಾಪನೆಗೆ ಹೆಚ್ಚಿನ ಆದ್ಯತೆ.

*ಉತ್ತರ ಕನ್ನಡ ಜಿಲ್ಲೆ ಕುಮಟಾದಲ್ಲಿ ಗೋಡಂಬಿ ಸಂಸ್ಕರಣಾ ಘಟಕ ಸ್ಥಾಪನೆ

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Karnataka Budget 2016-17 : Chief Minister and Finance Minister Siddaramaiah preset 2016-17 budget on Friday, March 18, 2016. The state government is expecting 4.5 percent growth in industrial sector.
Please Wait while comments are loading...