ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಜ್ಯ ಬಜೆಟ್: ಅಹಿಂದ ವರ್ಗಕ್ಕೆ ಸಿದ್ದು ಕೊಡುಗೆಗಳೇನು?

|
Google Oneindia Kannada News

ಬೆಂಗಳೂರು, ಮಾ. 14: ಬಜೆಟ್ ಗೂ ಮುನ್ನ ರಾಜ್ಯದಲ್ಲಿ ಅಹಿಂದ ಮುಖ್ಯಮಂತ್ರಿ ಬೇಕು ಎಂಬ ಬೇಡಿಕೆ ಕೇಳಿಬಂದಿತ್ತು. ನಂತರ ಸಿಎಂ ಸಿದ್ದರಾಮಯ್ಯ ತಾವೂ ಒಬ್ಬ ಅಹಿಂದ ಎಂದು ಹೇಳಿದ್ದರು. ಇದೆಲ್ಲದರ ಪರಿಣಾಮ ಬಜೆಟ್ ನಲ್ಲಿ ಅಹಿಂದ ವರ್ಗಕ್ಕೆ ಕೊಡುಗೆಗಳ ಸುರಿಮಳೆಯೇ ಹರಿದಿದೆ.

ಹಿಂದುಳಿದ ವರ್ಗಗಳ ಸರ್ವತೋಮುಖ ಅಭಿವೃದ್ಧಿಗೆ ಕ್ರಮ ಕೈಗೊಂಡಿರುವ ಸಿದ್ದರಾಮಯ್ಯ ಅನೇಕ ಹೊಸ ಯೋಜನೆಗಳನ್ನು ಘೋ‍ಷಣೆ ಮಾಡಿದ್ದಾರೆ.[ಕರ್ನಾಟಕ ಬಜೆಟ್ 2015-16 : ಮುಖ್ಯಾಂಶಗಳು]

ahinda

* ಖಾಸಗಿ ಅನುದಾನಿತ ವಸತಿನಿಲಯದ/ ಮೆಟ್ರಿಕ್ ನಂತರದ ವಿದ್ಯಾರ್ಥಿಗಳ ಮಾಸಿಕ ಭೋಜನ ವೆಚ್ಚ ತಲಾ 100 ರೂ. ಹೆಚ್ಚಳಕ್ಕೆ ತೀರ್ಮಾನ
* ಹಿಂದುಳಿದ ವರ್ಗಗಳ 1000 ವಿದ್ಯಾರ್ಥಿಗಳಿಗೆ ಪೂರ್ಣಾವಧಿ ಪಿಎಚ್.ಡಿ, (Full Time) ವ್ಯಾಸಂಗ ವೇತನ/ಫೆಲೋಶಿಪ್ ನೀಡಲು 5 ಕೋಟಿ ರೂ. ಮೀಸಲು
* ಹಿಂದುಳಿದ ವರ್ಗಗಳ ಕೋಶದ (OBC Cell) ಬಲವರ್ಧನೆ ಹಾಗೂ ಸಂಶೋಧನಾ ಚಟುವಟಿಕೆಗಳಿಗೆ 50 ಲಕ್ಷ ರೂ. ಅನುದಾನ
* 46 ಅಲೆಮಾರಿ/ಅರೆ ಅಲೆಮಾರಿ ಜನಾಂಗದವರ ಸರ್ವತೋಮುಖ ಅಭಿವೃದ್ಧಿ ಕಾರ್ಯಕ್ರಮಗಳಿಗೆ 50 ಕೋಟಿ ರೂ.
* ಹಿಂದುಳಿದ ವರ್ಗಗಳ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ನಡೆಸಲು 189 ಕೋಟಿ ರೂ.
* ಡಿ.ದೇವರಾಜ ಅರಸು ಸ್ವಯಂ ಉದ್ಯೋಗ ವೈಯಕ್ತಿಕ ಸಾಲ ಯೋಜನೆ' - ಶೇಕಡಾ 15ರ ಸಹಾಯಧನದೊಂದಿಗೆ ಗರಿಷ್ಠ 2 ಲಕ್ಷ ರೂ.ಗಳ ಸಾಲ.
* ಸಾಂಪ್ರದಾಯಿಕ ವೃತ್ತಿದಾರ ಸಮುದಾಯಗಳಿಗೆ ವಾರ್ಷಿಕ ಶೇ.2ರ ಬಡ್ಡಿದರದಲ್ಲಿ ರೂ.2.00 ಲಕ್ಷಗಳ ಸಾಲ ಮತ್ತು ಶೇ.15 ರಷ್ಟು ಸಹಾಯಧನ.
ಕರ್ನಾಟಕ ವಿಶ್ವಕರ್ಮ ಸಮುದಾಯಗಳ ಅಭಿವೃದ್ಧಿ ನಿಗಮ'ಕ್ಕೆ10 ಕೋಟಿ ರೂ.
*ವಿದ್ಯಾಸಿರಿ ಯೋಜನೆ'-75,000 ವಿದ್ಯಾರ್ಥಿಗಳಿಗೆ ವಿಸ್ತರಣೆ 112.5 ಕೋಟಿ ರೂ.
* ಗಂಗಾ ಕಲ್ಯಾಣ ನೀರಾವರಿ ಯೋಜನೆ-ಘಟಕ ವೆಚ್ಚ 2 ಲಕ್ಷದ ವರೆಗೆ ಹೆಚ್ಚಳ.
* ಡೋಲು ಮತ್ತು ನಾದಸ್ವರ ಸಂಗೀತ ಕಲೆಗಳ ಪುನಶ್ಚೇತನ.[ರಾಜ್ಯ ಬಜೆಟ್: ಶಿಕ್ಷಣ ಕ್ಷೇತ್ರಕ್ಕೆ ಭರಪೂರ ಕೊಡುಗೆ]
* ಹಿಂದುಳಿದ ವರ್ಗಗಳ ಕೆನೆಪದರ ಮಿತಿಯಲ್ಲಿ 6 ಲಕ್ಷಗಳಿಗೆ ಹೆಚ್ಚಳ.
* ಮಾಜಿ ಮುಖ್ಯಮಂತ್ರಿ ದಿ:ಡಿ.ದೇವರಾಜು ಅರಸು ಶತಮಾನೋತ್ಸವ ಆಚರಣೆ, ಅರಸು ಪ್ರತಿಭಾ ಪುರಸ್ಕಾರ, ಅರಸು ವಿದೇಶಿ ವ್ಯಾಸಂಗ ವೇತನ ನೀಡಿಕೆಗೆ ಅಸ್ತು
* ಮೆಟ್ರಿಕ್ ನಂತರದ ವಿದ್ಯಾರ್ಥಿ ನಿಲಯಗಳಿಗೆ ಸ್ವಂತ ಕಟ್ಟಡ ನಿರ್ಮಾಣ 45 ಕೋಟಿ ರೂ ನೀಡಿಕೆ
• 2195 ವಿದ್ಯಾರ್ಥಿ ನಿಲಯಗಳಿಗೆ ಮೂಲಭೂತ ಸೌಕರ್ಯಕ್ಕೆ 35 ಕೋಟಿ ರೂ.
• 815 ಬಾಲಕಿಯರ ವಿದ್ಯಾರ್ಥಿ ನಿಲಯಗಳಿಗೆ ಸಿಸಿ ಕ್ಯಾಮರಾ ಅಳವಡಿಕೆಗೆ ಅನುದಾನ

ಅಲ್ಪಸಂಖ್ಯಾತರ ಕೈ ಹಿಡಿದ ಸಿದ್ದರಾಮಯ್ಯ
* ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ವಿದ್ಯಾಸಿರಿ ಯೋಜನೆಯ ವಿಸ್ತರಣೆ
* ತಾಂತ್ರಿಕ ಮತ್ತು ವೈದ್ಯಕೀಯ ವಿದ್ಯಾರ್ಥಿಗಳಿಗೆ ಪುಸ್ತಕ ಮತ್ತು ಕಲಿಕಾ ಸಾಮಗ್ರಿ ಖರೀದಿಗೆ ಸಹಾಯಧನ.
* "ಮುಖ್ಯಮಂತ್ರಿ ಅಲ್ಪಸಂಖ್ಯಾತರ ಯೋಜನೆ' ಜಾರಿ.
* ಎಂ.ಎಸ್.ಡಿ.ಪಿ. ಯೋಜನೆಯಡಿ 30 ವಿದ್ಯಾರ್ಥಿನಿಲಯ/ವಸತಿ ಶಾಲೆ/ ವಸತಿ ಕಾಲೇಜುಗಳ ಪ್ರಾರಂಭ. ಕಾರ್ಯನಿರ್ವಹಿಸುತ್ತಿರುವ ವಿದ್ಯಾರ್ಥಿನಿಲಯಗಳಲ್ಲಿ ಸಂಖ್ಯಾಬಲ ಹೆಚ್ಚಳ.
* ಕಾಮೆಡ್-ಕೆ ಇಂದ ಆಯ್ಕೆಯಾಗುವ ವಿದ್ಯಾರ್ಥಿಗಳಿಗೂ ಅರಿವು ಸಾಲ ಯೋಜನೆಯ ವಿಸ್ತರಣೆ.
* ಮೆಟ್ರಿಕ್ ಪೂರ್ವ/ಮೆಟ್ರಿಕ್ ನಂತರ ಮೊರಾರ್ಜಿ ದೇಸಾಯಿ ವಸತಿ ಶಾಲೆ/ಕಾಲೇಜು ಮತ್ತು ಅಲ್ಪಸಂಖ್ಯಾತ ವಸತಿ ಶಾಲೆಗಳಲ್ಲಿ ಭೋಜನ ವೆಚ್ಚ ತಲಾ 100 ರೂ. ಹೆಚ್ಚಳ.
* ಕಲಿಕಾ ಮತ್ತು ಸಾಮಗ್ರಿ ಯೋಜನೆ'-350 ಉರ್ದು ಶಾಲೆ ಮತ್ತು 65 ವಸತಿ ಶಾಲೆ /ಕಾಲೇಜುಗಳಲ್ಲಿ ಇ-ಲರ್ನಿಂಗ್ ಸೌಲಭ್ಯ.
* ಅಲ್ಪಸಂಖ್ಯಾತರ ಹಾಸ್ಟೆಲ್/ವಸತಿ ಶಾಲೆಗಳಲ್ಲಿ ಸ್ಪೋಕನ್ ಇಂಗ್ಲೀಷ್ ಮತ್ತು ಕಂಪ್ಯೂಟರ್ ತರಬೇತಿ.
* ವಕ್ಫ್ ಆಸ್ತಿಗಳ ಅತಿಕ್ರಮಣ ತೆರವು ಹಾಗೂ ಸಂರಕ್ಷಣೆಗೆ ಟಾಸ್ಕ್ ಫೋರ್ಸ್ ರಚನೆ.
* ಹಜರತ್ ಹಮೀದ್ ಷಾ ಮತ್ತು ಹಜರತ್ ಮೌಹಿದ್ ಷಾ ಖಾದರಿ ವಕ್ಫ್ ಸಂಸ್ಥೆಗೆ 1 ಕೋಟಿ ರೂ.
* ಮೋತಿನಗರ, ಮಲಬಾರ್ ಮುಸ್ಲಿಂ ಅಸೋಸಿಯೇಷನ್, ಬೆಂಗಳೂರು ನಗರ ಜಿಲ್ಲೆ ಇವರ ನೂತನ ಕಟ್ಟಡ ನಿರ್ಮಾಣ- 3 ಕೋಟಿ ರೂ.
* ಶ್ರೀರಂಗಪಟ್ಟಣದ ಗಂಜಾಂನ ಹಜರತ್ ಟಿಪ್ಪು ಸುಲ್ತಾನ್ ಸ್ಮಾರಕದ ಸಮಗ್ರ ಅಭಿವೃದ್ಧಿಗೆ 2 ಕೋಟಿ ರೂ.
* ರಾಜ್ಯದ ಜೈನ ದೇವಾಲಯ (ಬಸದಿ)ಗಳ ಜೀರ್ಣೋದ್ಧಾರಕ್ಕೆ 2 ಕೋಟಿ ರೂ.
* 2001 ರಿಂದ ಇಲ್ಲಿಯವರೆಗೆ ಪೂರ್ಣಗೊಳ್ಳದೇ ಇರುವ ಶಾದಿ ಮಹಲ್ ಮತ್ತು ಸಮುದಾಯ ಭವನಗಳಿಗೆ - 60 ಕೋಟಿ ರೂ. ವಸತಿ
* ನಿವೇಶನ ರಹಿತ ಬಡ ಫಲಾನುಭವಿಗಳಿಗೆ 20,000 ನಿವೇಶನಗಳ ಹಂಚಿಕೆ.
• ವಿವಿಧ ವಸತಿ ಯೋಜನೆಗಳಡಿ 4.58 ಲಕ್ಷ ಹೊಸ ಮನೆ ನಿರ್ಮಾಣ

English summary
Karnataka Chief Minister Siddaramaiah, presented budget for the year 2015-16 on Friday, 13th March. The SC/ST and Minorities got number of new schemes.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X