ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಿಜೆಪಿ ಸದಸ್ಯತ್ವ ಅಭಿಯಾನ : ಕರ್ನಾಟಕ ಬಿಜೆಪಿ ಗುರಿ 50 ಲಕ್ಷ

|
Google Oneindia Kannada News

ಬೆಂಗಳೂರು, ಜೂನ್ 20 : ಲೋಕಸಭಾ ಚುನಾವಣೆ ಬಳಿಕ ಸದಸ್ಯತ್ವ ಅಭಿಯಾನಕ್ಕೆ ಬಿಜೆಪಿ ಚಾಲನೆ ನೀಡಲಿದೆ. ಜುಲೈ 6 ರಿಂದ ಸದಸ್ಯತ್ವ ಅಭಿಯಾನ ಆರಂಭವಾಗಲಿದ್ದು, ಕರ್ನಾಟಕದಲ್ಲಿ 50 ಲಕ್ಷ ಸದಸ್ಯರನ್ನು ಸೇರಿಸುವ ಗುರಿ ಹೊಂದಲಾಗಿದೆ.

ಬಿಜೆಪಿಯ ನೂತನ ಕಾರ್ಯಾಧ್ಯಕ್ಷ ಜೆ.ಪಿ.ನಡ್ಡಾ ಅವರು ರಾಜ್ಯಾಧ್ಯಕ್ಷರ ಜೊತೆ ವಿಡಿಯೋ ಕಾನ್ಫರೆನ್ಸ್ ಮೂಲಕ ಸದಸ್ಯತ್ವ ಅಭಿಯಾನದ ಬಗ್ಗೆ ಚರ್ಚೆ ನಡೆಸಿದ್ದಾರೆ. ಕರ್ನಾಟಕ ಬಿಜೆಪಿ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ವಿಡಿಯೋ ಕಾನ್ಫರೆನ್ಸ್‌ನಲ್ಲಿ ಪಾಲ್ಗೊಂಡಿದ್ದರು.

ಬಿಜೆಪಿಯ ರಾಷ್ಟ್ರೀಯ ಕಾರ್ಯಾಧ್ಯಕ್ಷರಾಗಿ ಜೆಪಿ ನಡ್ಡಾ ನೇಮಕಬಿಜೆಪಿಯ ರಾಷ್ಟ್ರೀಯ ಕಾರ್ಯಾಧ್ಯಕ್ಷರಾಗಿ ಜೆಪಿ ನಡ್ಡಾ ನೇಮಕ

'ಕಳೆದ ವರ್ಷ 80 ಲಕ್ಷ ಸದಸ್ಯರನ್ನು ನೋಂದಾಯಿಸಲಾಗಿತ್ತು. ಈ ವರ್ಷ 50 ಲಕ್ಷ ಸದಸ್ಯರನ್ನು ಸೇರ್ಪಡೆ ಮಾಡುವ ಗುರಿ ಹೊಂದಲಾಗಿದೆ. ಪಕ್ಷದ ಮಾಹಿತಿ ತಂತ್ರಜ್ಞಾನ ವಿಭಾಗ ಸಕ್ರಿಯವಾಗಿದ್ದು, ಈ ಗುರಿಯನ್ನು ತಲುಪುತ್ತೇವೆ' ಎಂದು ಯಡಿಯೂರಪ್ಪ ಹೇಳಿದರು.

ರಾಜ್ಯದ 25 ಬಿಜೆಪಿ ಸಂಸದರಿಗೆ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಷರತ್ತು?ರಾಜ್ಯದ 25 ಬಿಜೆಪಿ ಸಂಸದರಿಗೆ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಷರತ್ತು?

Karnataka BJP to launch membership drive from July 6

ಜುಲೈ 6ರಂದು ಡಾ.ಶ್ಯಾಮ ಪ್ರಸಾದ್ ಮುಖರ್ಜಿ ಅವರ ಜನ್ಮದಿನ. ಅಂದು ಸದಸ್ಯತ್ವ ಅಭಿಯಾನಕ್ಕೆ ಚಾಲನೆ ಸಿಗಲಿದೆ. ಆಗಸ್ಟ್ 11ರಂದು ಅಭಿಯಾನ ಪೂರ್ಣಗೊಳ್ಳಲಿದೆ. ಸದಸ್ಯತ್ವ ಅಭಿಯಾನ ನಡೆಸುವ ಜೊತೆಗೆ ಶಕ್ತಿ ಕೇಂದ್ರದ ಮಟ್ಟದ ತನಕ ಸದಸ್ಯತ್ವ ನೋಂದಣಿ ತಲುಪುವುದನ್ನು ಖಾತ್ರಿ ಪಡಿಸಿಕೊಳ್ಳಬೇಕು.

5 ವರ್ಷದಲ್ಲಿ ರಾಜ್ಯಕ್ಕೆ 2.42 ಲಕ್ಷ ಕೋಟಿ ಅನುದಾನ: ಸದಾನಂದಗೌಡ5 ವರ್ಷದಲ್ಲಿ ರಾಜ್ಯಕ್ಕೆ 2.42 ಲಕ್ಷ ಕೋಟಿ ಅನುದಾನ: ಸದಾನಂದಗೌಡ

ಸದಸ್ಯತ್ವ ಪ್ರಮಾಣ ಕಡಿಮೆಯಾಗಿರುವ ಪ್ರದೇಶದಲ್ಲಿ ವಿಶೇಷ ಒತ್ತು ನೀಡಬೇಕು ಎಂದು ಜೆ.ಪಿ.ನಡ್ಡಾ ಅವರು ಸೂಚನೆ ನೀಡಿದ್ದಾರೆ. ಜೂನ್ 24ರೊಳಗೆ ರಾಜ್ಯಮಟ್ಟದ ಸದಸ್ಯತ್ವ ಅಭಿಯಾನದ ಕಾರ್ಯಾಗಾರ ನಡೆಸಲು ರಾಜ್ಯ ಘಟಕಗಳಿಗೆ ಸೂಚಿಸಲಾಗಿದೆ.

English summary
Bharatiya Janata Party all set to launch membership drive across the country from July 6, 2019. Karnataka party president B.S.Yeddyurappa said that state unit aim to join 50 lakh members.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X